NEWSನಮ್ಮಜಿಲ್ಲೆನಮ್ಮರಾಜ್ಯ

BMTC: ನೌಕರರ ರಜೆ ನಿರ್ವಹಣಾ ವ್ಯವಸ್ಥೆ (LMS) ಬದಲಾವಣೆ ಮಾಡಿ ಎಂಡಿ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೌಕರರಿಗೆ ಇರುವ ರಜೆ ನಿರ್ವಹಣಾ ವ್ಯವಸ್ಥೆ (LMS)ನಲ್ಲಿನ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಿ ವ್ಯವಸ್ಥಾಪಕ ನಿರ್ದೇಶಕರು ಗುರುವಾರ (ಮೇ 30) ಆದೇಶ ಹೊರಡಿಸಿದ್ದಾರೆ.

ಪ್ರಸ್ತುತ ಇರುವ ನಿಯಮ: 1) ಚಾಲನಾ ಸಿಬ್ಬಂದಿಗಳು ರಜೆ ನಿರ್ವಹಣಾ ವ್ಯವಸ್ಥೆಯಲ್ಲಿ ಮುಂಗಡವಾಗಿ ರಜೆ ಅರ್ಜಿ ಸಲ್ಲಿಸಿದಲ್ಲಿ ಘಟಕ ವ್ಯವಸ್ಥಾಪಕರು ರಜೆ ಅರ್ಜಿ ವಿಲೇವಾರಿ ಮಾಡಲು ಯಾವುದೇ ಕಾಲಮಿತಿ ಇಲ್ಲ.

ಬದಲಾಯಿಸಿರುವ ನಿಯಮ: ಅ) ಚಾಲನಾ ಸಿಬ್ಬಂದಿಗಳು ರಜೆ ನಿರ್ವಹಣಾ ವ್ಯವಸ್ಥೆಯಲ್ಲಿ ಮುಂಡವಾಗಿ ರಜೆ ಸಲ್ಲಿಸಿದಲ್ಲಿ, ಘಟಕ ವ್ಯವಸ್ಥಾಪಕರು ರಜೆ ಕೋರಿದ ದಿನಾಂಕದ ನಿರ್ದಿಷ್ಟ ಕಾಲಮಿತಿಯೊಳಗೆ ರಜೆ ಅರ್ಜಿಯನ್ನು ವಿಲೇವಾರಿ ಮಾಡಬೇಕು. ಒಂದು ವೇಳೆ ಘಟಕ ವ್ಯವಸ್ಥಾಪಕರು ರಜೆ ಅರ್ಜಿಯನ್ನು ವಿಲೇವಾರಿ ಮಾಡದೇ ಇದ್ದ ಪಕ್ಷದಲ್ಲಿ ತಂತ್ರಾಂಶದಲ್ಲಿ ಸ್ವಯಂ ಚಾಲಿತವಾಗಿ ಶೇ.2ಕ್ಕೆ ಮಿತಿಗೊಳಿಸಿ (Auto sanction up to 2%) ಆಗುವಂತೆ ಕ್ರಮವಹಿಸಬೇಕು.

ಉದಾ: ಚಾಲನಾ ಸಿಬ್ಬಂದಿಗಳು ಮುಂಗಡವಾಗಿ 10-06-2024ಕ್ಕೆ ರಜೆ ಸಲ್ಲಿಸಿದಲ್ಲಿ, ಘಟಕ ವ್ಯವಸ್ಥಾಪಕರು 09-06-2024ರ ರಾತ್ರಿ 10 ಗಂಟೆಯೊಳಗೆ ರಜೆ ಅರ್ಜಿಯನ್ನು ವಿಲೇವಾರಿ ಮಾಡುವುದು/ ರಜೆ ವಿಲೇವಾರಿ ಮಾಡದೇ ಇದ್ದಲ್ಲಿ ರಜೆ ಅರ್ಜಿಗಳನ್ನು ಸ್ವಯಂ ಚಾಲಿತವಾಗಿ ಆಗುವಂತೆ ಕ್ರಮವಹಿಸಬೇಕು.

ಆ) ರಜೆ ನಿರ್ವಹಣಾ ವ್ಯವಸ್ಥೆಯಲ್ಲಿ ತುರ್ತು ಸಂದರ್ಭಗಳಲ್ಲಿ ಅದೇ ದಿನದಂದೇ ರಜೆ ಅರ್ಜಿ ಸಲ್ಲಿಸಿದಲ್ಲಿ, ಘಟಕ ವ್ಯವಸ್ಥಾಪಕರು ರಜೆ ಕೋರಿದ ಒಂದು ದಿನದ ಕಾಲಮಿತಿಯೊಳಗೆ ರಜೆ ಅರ್ಜಿಯನ್ನು ವಿಲೇವಾರಿ ಮಾಡುವುದು. ರಜೆ ಅರ್ಜಿ ವಿಲೇವಾರಿ ಮಾಡದೇ ಇದ್ದ ಪಕ್ಷದಲ್ಲಿ ತಂತ್ರಾಂಶದಲ್ಲಿ ಸ್ವಯಂ ಚಾಲಿತವಾಗಿ ರಜೆ ಮಂಜೂರು ಆಗುವಂತೆ ಕ್ರಮ ವಹಿಸುವುದು.

ಪ್ರಸ್ತುತ ಇರುವ ನಿಯಮ: 2) ರಜೆ ನಿರ್ವಹಣಾ ವ್ಯವಸ್ಥೆಯಲ್ಲಿ ರಜೆ ತಿರಸ್ಕಾರಗೊಂಡ ದಿನಕ್ಕೆ ಮತ್ತೊಮ್ಮೆ ಅದೇ ದಿನಕ್ಕೆ ರಜೆ ಅರ್ಜಿ ಸಲ್ಲಿಸಲು ಅವಕಾಶ ಇತ್ತು.

ಬದಲಾಯಿಸಿರುವ ನಿಯಮ: ರಜೆ ನಿರ್ವಹಣಾ ವ್ಯವಸ್ಥೆಯಲ್ಲಿ ರಜೆ ತಿರಸ್ಕಾರಗೊಂಡ ದಿನಕ್ಕೆ ಮತ್ತೊಮ್ಮೆ ಅದೇ ದಿನಕ್ಕೆ ರಜೆ ಅರ್ಜಿ ಸಲ್ಲಿಸಲು ಈಗ ಅವಕಾಶ ಇರುವುದಿಲ್ಲ.

ಪ್ರಸ್ತುತ ಇರುವ ನಿಯಮ: ಅವಶ್ಯಕತೆ ಹಾಗೂ ತುರ್ತು ಪರಿಸ್ಥಿತಿಯನ್ನು ಪರಿಗಣಿಸಿ, 1 ರಿಂದ 7 ದಿನಗಳವರೆಗೆ ಘಟಕ ವ್ಯವಸ್ಥಾಪಕರು ನೌರರಿಗೆ ರಜೆ ಮಂಜೂರು ಮಾಡುವುದು ಹಾಗೂ ಘಟಕ ವ್ಯವಸ್ಥಾಪಕರ ಶಿಫಾರಸ್ಸಿನ ಮೇರೆಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳು 8 ದಿನಗಳು/ ಅದಕ್ಕಿಂತ ಹೆಚ್ಚಿನ ರಜೆಗಳನ್ನು ಗರಿಷ್ಠ 30 ದಿನಗಳವರೆಗೆ ಮಂಜೂರು ಮಾಡುವುದಕ್ಕೆ ಅವಕಾಶವಿತ್ತು.

ಬದಲಾಯಿಸಿರುವ ನಿಯಮ: ಈ ಬದಲಾದ ನಿಯಮದಲ್ಲಿ ಶೇ.2% ರಷ್ಟು ರಜೆ: 1 ರಿಂದ 4ದಿನಗಳವರೆಗೆ 48 ಗಂಟೆಯೊಳಗಾಗಿ (ಇವತ್ತು ಅಥವಾ ನಾಳೆಯಿಂದ), (ಕ್ಯಾಲೆಂಡರ್ ಮಾಹೆಯಲ್ಲಿ ಒಬ್ಬರಿಗೆ ಒಂದು ಸಲ ಮಾತ್ರ) ಘಟಕ ವ್ಯವಸ್ಥಾಪಕರು ರಜೆ ಮಂಜೂರು ಮಾಡಲು ಅವಕಾಶ ನೀಡಲಾಗಿದೆ.

ಮುಂದುವರಿದು ಶೇ.1% ರಷ್ಟು ರಜೆ: ರಜೆಯನ್ನು ಇವತ್ತಿನಿಂದ 5 ದಿನಗಳು / ಅದಕ್ಕಿಂತ ಹೆಚ್ಚಿನ ರಜೆಗಳನ್ನು ಗರಿಷ್ಠ 30 ದಿನಗಳವರೆಗೆ ಘಟಕ ವ್ಯವಸ್ಥಾಪಕರ ಶಿಫಾರಸಿನ ಮೇರೆಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮಂಜೂರು ಮಾಡಬೇಕು ಎಂದು ಬದಲಾವಣೆ ಮಾಡಲಾಗಿದೆ. ಅಂದರೆ 1-7ದಿನ ರಜೆ ಮಂಜೂರು ಮಾಡುವುದಕ್ಕೆ ಘಟಕ ವ್ಯವಸ್ಥಾಪಕರಿಗೆ ಇದ್ದ ಅಧಿಕಾರವನ್ನು 1ರಿಂ 4 ದಿನಗಳವರೆಗೆ ರಜೆ ಮಂಜೂರು ಮಾಡುವುದಕ್ಕಷ್ಟೇ ಸೀಮಿತಗೊಳಿಸಲಾಗಿದೆ.

ಇನ್ನು ಹಿಂದಿನ 30 ದಿನಗಳಲ್ಲಿ ರಜೆಯನ್ನು ರದ್ದು ಮಾಡಬೇಕಿದ್ದಲ್ಲ. ಘಟಕ ವ್ಯವಸ್ಥಾಪಕರಿಂದ ರದ್ದು ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಅಂದರೆ ಉದಾ: 15-05-2024 ದಿನಾಂಕ್ಕೆ ರಜೆ ಮಂಜೂರಾಗಿದ್ದು, ಅನಿವಾರ್ಯ ಕಾರಣಕ್ಕಾಗಿ ಮೇಲಧಿಕಾರಿಗಳ ಅನುಮತಿ ಪಡೆದು ನೌಕರ ರಜೆ ರದ್ದು ಮಾಡಿಕೊಂಡು ಡ್ಯೂಟಿಗೆ ಮರಳಿ ಕಾರ್ಯ ನಿರ್ವಹಿಸಿದ್ದಲ್ಲಿ ಅಂತಹ ರಜೆಯನ್ನು 16- 05-2024 ರಿಂದ 15-06-2024 (30 ದಿನಗಳೊಳಗಾಗಿ)ರೊಳಗಾಗಿ ಘಟಕ ವ್ಯವಸ್ಥಾಪಕರು ರಜೆ ಮಂಜೂರಾತಿಯನ್ನು ರದ್ದುಪಡಿಸಬಹುದು.

ಇನ್ನು ವಿಭಾಗೀಯ ನಿಯಂತ್ರಣಾಧಿಕಾರಿಗಳು ಮ್ಯಾನುಯಲ್ ಆಗಿ ಅನುಮೋದನೆಗೊಂಡಿರುವ ರಜೆಯನ್ನು ಕಡ್ಡಾಯವಾಗಿ ರಜೆ ನಿರ್ವಹಣಾ ತಂತ್ರಾಂಶದಲ್ಲಿ ನಮೂದಿಸಲು ಕ್ರಮ ಕೈಗೊಳ್ಳಬೇಕು ಎಂದು ವ್ಯವಸ್ಥಾಪಕರು ಆದೇಶ ಮಾಡಿದ್ದಾರೆ.

ಈ ಎಲ್ಲ ಅಂಶಗಳನ್ನು ಹೊರತುಪಡಿಸಿ 01&02ರ ನಿರ್ದೇಶನಗಳಲ್ಲಿ ಇನ್ಯಾವುದೇ ಬದಲಾವಣೆ ಇರುವುದಿಲ್ಲ. ಈ ಆದೇಶವು ತಕ್ಷಣದಿಂದ ಜಾರಿಗೆ ಬರುತ್ತದೆ. ಸಂಬಂಧಪಟ್ಟವರೆಲ್ಲರು ಈ ನಿರ್ದೇಶನದನ್ವಯ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಸ್ಥೆಯ ಎಲ್ಲ ಅಧಿಕಾರಿಳಿಗೂ ಆದೇಶ ಮಾಡಿದ್ದಾರೆ.

ಬದಲಾಗಿರುವ ರಜೆ ಆದೇಶದ ಪ್ರತಿ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ: LMS revised order.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ