- ಜನವರಿ -2024 ಡಿಎ ಹೆಚ್ಚಳದ ಫೆಬ್ರವರಿ ತಿಂಗಳ ಡಿಎ ಹಿಂಬಾಕಿ ಬರಬೇಕಿದ್ದು ಇದೂ ಸೇರಿದಂತೆ ಸಾರಿಗೆ ನೌಕರರಿಗೆ 2022ರ ಜುಲೈ ತುಟ್ಟಿಭತ್ಯೆಯ ಶೇ.3.75ರಷ್ಟು ಹೆಚ್ಚಳದ 5 ತಿಂಗಳುಗಳು, 2023ರ ಜನವರಿ ತುಟ್ಟಿಭತ್ಯೆ ಶೇ.4ರಷ್ಟು ಹೆಚ್ಚಳದ 7 ತಿಂಗಳುಗಳು ಮತ್ತು 2023ರ ಜುಲೈ ತುಟ್ಟಿಭತ್ಯೆ ಶೇ.3.75ರಷ್ಟು ಹೆಚ್ಚಳದ 4 ತಿಂಗಳುಗಳ ತುಟ್ಟಿಭತ್ಯೆ ಸೇರಿ ಒಟ್ಟು 17 ತಿಂಗಳುಗಳ ಹಿಂಬಾಕಿಯನ್ನು ಬಿಎಂಟಿಸಿ ನೌಕರರಿಗೆ ಬಿಡುಗಡೆ ಮಾಡಬೇಕಿದೆ.
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಜನವರಿ-2022 ರಿಂದ ಮಾರ್ಚ್-2022ರ ಮಾಹೆಯವರೆಗಿನ 3 ತಿಂಗಳ ತುಟ್ಟಿಭತ್ಯೆ ಹಿಂಬಾಕಿ ಮೊತ್ತವನ್ನು ಮಾರ್ಚ್-2024ರ ವೇತನದೊಂದಿಗೆ ಸೇರಿಸಿ ಪಾವತಿಸಲು ಆದೇಶ ನೀಡಲಾಗಿದೆ.
ಇದರ ಜತೆಗೆ 01.01.2024 ರಿಂದ 38.75% ರಿಂದ 42.50% ಗೆ ಹೆಚ್ಚಿಸಲಾಗಿರುವ 3.75% ತುಟ್ಟಿಭತ್ಯೆಯನ್ನು ಸಂಸ್ಥೆಯ ಅಧಿಕಾರಿ/ ಸಿಬ್ಬಂದಿಗಳಿಗೆ ಮಾರ್ಚ್- 2024ನೇ ಮಾಹೆಯ ವೇತನದಿಂದ ಅನುಷ್ಠಾನಗೊಳಿಸಲು ಆದೇಶಿಸಲಾಗಿದ್ದು, ಈ ಹಿಂಬಾಕಿ ತುಟ್ಟಿಭತ್ಯೆಯಲ್ಲಿ ಜನವರಿ-2024ನೇ ಮಾಹೆಯ ಒಂದು ತಿಂಗಳ ತುಟ್ಟಿಭತ್ಯೆ ಹಿಂಬಾಕಿ ಮೊತ್ತವನ್ನು ಸಹ ಮಾರ್ಚ್-2024ನೇ ಮಾಹೆಯ ವೇತನದೊಂದಿಗೆ ಸೇರಿಸಿ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಲು ಸಂಸ್ಥೆಯ ಮುಖ್ಯಲೆಕ್ಕಾಧಿಕಾರಿ ತಿಳಿಸಿದ್ದಾರೆ.
ಸಂಸ್ಥೆಯ ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕಾರ್ಯ ವ್ಯವಸ್ಥಾಪಕರು, ನಿಲ್ದಾಣಾಧಿಕಾರಿಗಳು ಹಿರಿಯ/ ಘಟಕ ವ್ಯವಸ್ಥಾಪಕರಿಗೆ ಈ ವಿಷಯ ತಿಳಿಸಿದ್ದು, ತುಟ್ಟಿಭತ್ಯೆ ಹಿಂಬಾಕಿ ಮೊತ್ತವನ್ನು ಪಾವತಿಸುವ ಸಂಬಂಧ ಸೂಕ್ತಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ತುಟ್ಟಿಭತ್ಯೆ ಹಿಂಬಾಕಿ ಪಾವತಿಯನ್ನು ಮುಂದಿನ ದಿನಗಳಲ್ಲಿ ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಈ ಹಿಂದೆ ಆದೇಶಿಸಿ ಕಾಯ್ದಿರಿಸಲಾಗಿತ್ತು. ಈಗ ಸಮಸ್ತ ಸಿಬ್ಬಂದಿಗಳ ಹಿತದೃಷ್ಟಿಯಿಂದ ಸಂಸ್ಥೆಯ ಅಧಿಕಾರಿ/ಸಿಬ್ಬಂದಿಗಳಿಗೆ ಜನವರಿ-2022 ರಿಂದ ಮಾರ್ಚ್-2022 ರ ಮಾಹೆಯವರೆಗಿನ 03 ತಿಂಗಳು ತುಟ್ಟಿಭತ್ಯೆ ಹಿಂಬಾಕಿ ಮೊತ್ತವನ್ನು ಮಾರ್ಚ್-2024 ನೇ ಮಾಹೆಯ ವೇತನದೊಂದಿಗೆ ಸೇರಿಸಿ ಪಾವತಿಸಲು ಆದೇಶಿಸಲಾಗಿದೆ.
ಮುಂದುವರಿದಂತೆ, 01.01.2024 ರಿಂದ 38.75% ರಿಂದ 42.50% ಗೆ ಹೆಚ್ಚಿಸಲಾಗಿರುವ 3.75% ತುಟ್ಟಿಭತ್ಯೆಯನ್ನು ಕೂಡ ಮಾರ್ಚ್- 2024 ನೇ ಮಾಹೆಯ ವೇತನದಿಂದ ಅನುಷ್ಠಾನಗೊಳಿಸಲು ಆದೇಶಿಸಲಾಗಿದ್ದು, ಇದರ ಹಿಂಬಾಕಿ ತುಟ್ಟಿಭತ್ಯೆಯಲ್ಲಿ ಜನವರಿ-2024 ನೇ ಮಾಹೆಯ 01 ತಿಂಗಳ ತುಟ್ಟಿಭತ್ಯೆ ಹಿಂಬಾಕಿ ಮೊತ್ತವನ್ನು ಸಹ ಮಾರ್ಚ್-2024 ನೇ ಮಾಹೆಯ ವೇತನದೊಂದಿಗೆ ಸೇರಿಸಿ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.
ಆದರೆ, ಫೇಬ್ರವರಿ ತಿಂಗಳ ಡಿಎ ಹಿಂಬಾಕಿ ಕೊಡುವ ಬಗ್ಗೆ ಮಾತನಾಡಿಲ್ಲ. ಇದರ ಜತೆಗೆ ಕಳೆದ 2022ರ ಜುಲೈನಲ್ಲಿ ಆಗಬೇಖಿದ್ದು ಡಿಎ ಹೆಚ್ಚಳ 2022ರ ಅಕ್ಟೋಬರ್ 7ರಂದು ಶೇ.3.75ರಷ್ಟು ಡಿಎ ಹೆಚ್ಚಳ ಮಾಡಿ ಅದು ಜುಲೈ 1ರಿಂದಲೇ ಪೂರ್ವಾನ್ವಯವಾಗುವಂತೆ ಆದೇಶ ಹೊರಡಿಸಿತ್ತು. ಈ ಡಿಎ ಹೆಚ್ಚಳವನ್ನು ಸಾರಿಗೆ ನಿಗಮಗಳು ತಮ್ಮ ನೌಕರರಿಗೆ ಡಿಸೆಂಬರ್-2022ರ ವೇತನದಲ್ಲಿ ಸೇರಿಸಿದ್ದು, ಉಳಿದ 5 ತಿಂಗಳ ಡಿಎ ಹಿಂಬಾಕಿ ಈವರೆಗೂ ನೀಡಿಲ್ಲ.
ಅದೇ ರೀತಿ 2023ರ ಜನವರಿ 1ರಿಂದಲೇ ಪೂರ್ವಾನ್ವಯವಾಗುವಂತೆ ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಈ ತುಟ್ಟಿಭತ್ಯೆ ಹೆಚ್ಚಳವನ್ನು ಆಗಸ್ಟ್ ವೇತನದಲ್ಲಿ ಸಾರಿಗೆ ನೌಕರರಿಗೆ ಸೇರಿಸಲಾಗಿದ್ದು, ಇದರ 7 ತಿಂಗಳ ಹಿಂಬಾಕಿಯನ್ನು ಈವರೆಗೂ ಬಿಡುಗಡೆ ಮಾಡಿಲ್ಲ.
ಇನ್ನು 2023ರ ಜುಲೈನಲ್ಲಿ ರಾಜ್ಯ ಸರ್ಕಾರ ತನ್ನ ನೌಕರರಿಗೆ ಶೇ.3.75ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಅದರಂತೆ ಸಾರಿಗೆ ನೌಕರರಿಗೆ ಕಳೆದ ನವೆಂಬರ್ 2023ರ ವೇತನದಲ್ಲಿ ಸೇರಿಸಿ ಕೊಡುವಂತೆ ಸಾರಿಗೆಯ ನಾಲ್ಕೂ ಸಂಸ್ಥೆಗಳಿಗೂ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದರು. ಈ ನಡುವೆ ಈ ಡಿಎ ಹಿಂಬಾಕಿ ಕೊಡುವುದಕ್ಕೆ ಆಯಾಯ ನಿಗಮಗಳ ಆರ್ಥಿಕ ಪರಿಸ್ಥಿತಿಯ ಮೇಲೆ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿದ್ದರು.
ಇನ್ನು ಮಾರ್ಚ್ನಲ್ಲಿ ರಾಜ್ಯ ಸರ್ಕಾರ ತನ್ನ ನೌಕರರಿಗೆ ಶೇ.3.75ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದು, ಅದರಂತೆ ಸಾರಿಗೆ ನೌಕರರಿಗೆ ಇದೇ ತಿಂಗಳ ವೇತನದಲ್ಲಿ ಡಿಎ ಸೇರಿಸಿ ಕೊಡುವ ಬಗ್ಗೆ ತೀರ್ಮಾನ ತೆಗೆದುಕೊಂಡಿದೆ. ಆದರೆ, ಈ ಡಿಎ ಹಿಂಬಾಕಿಯ ಒಂದು ತಿಂಗಳ ಅಂದರೆ ಜನವರಿ ತಿಂಗಳ ಹಿಂಬಾಕಿ ಮಾತ್ರ ಕೊಡಲು ಆದೇಶ ಹೊರಡಿಸಲಾಗಿದೆ ಅಷ್ಟೆ.
ಹೀಗಾಗಿ ಜನವರಿ -2024 ಡಿಎ ಹೆಚ್ಚಳದ ಫೆಬ್ರವರಿ ತಿಂಗಳ ಡಿಎ ಹಿಂಬಾಕಿ ಬರಬೇಕಿದ್ದು ಇದೂ ಸೇರಿದಂತೆ ಸಾರಿಗೆ ನೌಕರರಿಗೆ 2022ರ ಜುಲೈ ತುಟ್ಟಿಭತ್ಯೆಯ ಶೇ.3.75ರಷ್ಟು ಹೆಚ್ಚಳದ 5 ತಿಂಗಳುಗಳು, 2023ರ ಜನವರಿ ತುಟ್ಟಿಭತ್ಯೆ ಶೇ.4ರಷ್ಟು ಹೆಚ್ಚಳದ 7 ತಿಂಗಳುಗಳು ಮತ್ತು 2023ರ ಜುಲೈ ತುಟ್ಟಿಭತ್ಯೆ ಶೇ.3.75ರಷ್ಟು ಹೆಚ್ಚಳದ 4 ತಿಂಗಳುಗಳ ತುಟ್ಟಿಭತ್ಯೆ ಸೇರಿ ಒಟ್ಟು 17 ತಿಂಗಳುಗಳ ಹಿಂಬಾಕಿಯನ್ನು ಬಿಎಂಟಿಸಿ ನೌಕರರಿಗೆ ಬಿಡುಗಡೆ ಮಾಡಬೇಕಿದೆ.