BMTC ನೌಕರರು ವರ್ಷದಲ್ಲಿ 240 ದಿನಗಳ ಹಾಜರಾತಿ ಹೊಂದಿಲ್ಲದಿದ್ದರೆ ನೌಕರರಿಗೆ ಮಾಹಿತಿ ಕೊಡಲು ಆದೇಶ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರು ಸಂಸ್ಥೆಯ ಸೇವೆಯಲ್ಲಿರುವಾಗ ಗೈರು ಹಾಜರಾದ ಸಂದರ್ಭದಲ್ಲಿ ಆಯಾ ವರ್ಷದ ಕೊನೆಯಲ್ಲಿ ಆ ವರ್ಷದಲ್ಲಿ 240 ದಿನಗಳ ಹಾಜರಾತಿ ಹೊಂದಿಲ್ಲದಿದ್ದರೆ ಮಾಹಿತಿಯನ್ನು ಆಯಾ ವರ್ಷದಲ್ಲಿಯೇ ನೌಕರರಿಗೆ ಹಿಂಬರಹ ನೀಡಬೇಕು ಎಂದು ಉಪಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.
ಈ ಸಂಬಂಧ ಉಪಧನ ಕಾಯ್ದೆ ಕಲಂ 2 (ಎ) ರಂತೆ ಆದೇಶವನ್ನು ಹೊರಡಿಸುವಂತೆ ತಿಳಿಸಿರುವ ಅವರು, ಸಂಸ್ಥೆಯ ನೌಕರರು ನಿವೃತ್ತಿ / ಸ್ವಯಂ ನಿವೃತ್ತಿ / ರಾಜೀನಾಮೆ / ಮರಣ / ವಜಾ ಕಾರಣಗಳಿಂದ ಸಂಸ್ಥೆಯ ಸೇವೆಯಿಂದ ಕಾರ್ಯವಿಮುಕ್ತಿಗೊಂಡ ನಂತರ ಅವರು ಸೇವೆ ಸಲ್ಲಿಸಿದ ಅರ್ಜಿ ಸಕ್ರಿಯ ಸೇವೆಗೆ ಉಪದಾನ ಸುತ್ತೋಲೆಗಳನ್ವಯ ಉಪದಾನ ಲೆಕ್ಕಚಾರ ಮಾಡಿ ಪಾವತಿಸಲಾಗುತ್ತಿದೆ.
ಸಂಸ್ಥೆಯ ಸಿಬ್ಬಂದಿಯು ಒಂದು ವರ್ಷದಲ್ಲಿ ಕನಿಷ್ಠ 240 ದಿನ ಕಾರ್ಯ ನಿರ್ವಹಿಸಿದಲ್ಲಿ (ಗೈರು, ಅಮಾನತು, ಅಸಾಧಾರಣ ರಜೆಯ ಅವಧಿ ಹೊರತುಪಡಿಸಿ) ಸದರಿ ಅವಧಿಯನ್ನು ಸಕ್ರಿಯ ಸೇವೆ ಎಂದು ಪರಿಗಣಿಸಿ ಆ ವರ್ಷಕ್ಕೆ ಸಿಬ್ಬಂದಿಯು ಉಪಧನ ಪಡೆಯಲು ಅರ್ಹರಿರುತ್ತಾರೆ ಎಂದು ಸ್ಪಷ್ಟವಾಗಿ ತಿಳಿಸಿದೆ.
ಅದರಂತೆ ಪ್ರತಿ ವರ್ಷ 240 ದಿನಗಳಗಿಂತ ಕಡಿಮೆ ಕಾರ್ಯ ನಿರ್ವಹಿಸಿದಲ್ಲಿ ಆ ವರ್ಷಕ್ಕೆ ಸೇವಾಭಂಗ ಎಂದು ಪರಿಗಣಿಸಿ ಉಪಧನ ಪಡೆಯಲು ಅರ್ಹರಿರುವುದಿಲ್ಲ. ಈ ಬಗ್ಗೆ ನೌಕರರಿಗೆ ತಿಳಿವಳಿಕೆ ಪತ್ರವನ್ನು ಜಾರಿ ಮಾಡಿ ಸ್ವೀಕೃತಿ ಪಡೆಯಲು ಸೂಕ್ತ ನಿರ್ದೇಶನ ಹಾಗೂ ನಮೂನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿ ನಿರ್ದೇಶನ ಕೊಡಲಾಗಿದೆ.
ಆದರೆ, ಸುತ್ತೋಲೆ ಸಂಖ್ಯೆ 1489 25.04.2013 ಮತ್ತು ಸುತ್ತೋಲೆ ಸಂಖ್ಯೆ 1559: 09.09.2015 ರಲ್ಲಿ ನೀಡಿರುವ ನಿರ್ದೇಶನಗಳನ್ವಯ ಪರೀಕ್ಷಣಾರ್ಥಿ ದಿನಾಂಕದಿಂದ ಪ್ರತಿ ವರ್ಷ 240 ದಿನಗಳಗಿಂತ ಕಡಿಮೆ ಕಾರ್ಯ ನಿರ್ವಹಿಸಿದ ನೌಕರರಿಗೆ ತಿಳಿವಳಿಕೆ ಪತ್ರವನ್ನು ಜಾರಿ ಮಾಡಿ ಸ್ವೀಕೃತಿ ಪಡೆದು ಸೇವಾ ಕಡತದಲ್ಲಿ ದಾಖಲಿಸಿ ಸರಿಯಾಗಿ ಪರಿಪಾಲನೆಯಾಗುತ್ತಿಲ್ಲದ ಕಾರಣದಿಂದ ಸೇವೆಯಿಂದ ನಿವೃತ್ತಿ / ನಿಧನ / ಸ್ವಯಂ ಪ್ರೇರಣಾ ನಿವೃತ್ತಿ ಹೊಂದಿರುವ ನೌಕರರು / ಅವಲಂಬಿತರು ಉಪಧನ ನಿಯಂತ್ರಣಾಧಿಕಾರಿ ಅವರಲ್ಲಿ ಸೇವಾಭಂಗದ ಅವಧಿಗೆ ಉಪಧನ ಪಾವತಿಸುವಂತೆ ಕೋರಿ ದಾವೆ ಹೂಡುತ್ತಿದ್ದು, ಇದರಿಂದ ಸರಿಯಾದ ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು
ಸಾಧ್ಯವಾಗದ ಕಾರಣದಿಂದ ಸಂಸ್ಥೆಯ ವಿರುದ್ಧ ವ್ಯತಿರಕ್ತವಾಗಿ ಆದೇಶಗಳನ್ನು ಹೊರಡಿಸುತ್ತಿದ್ದು, ಇದರಿಂದ ಸಂಸ್ಥೆಗೆ ಆರ್ಥಿಕವಾಗಿ ನಷ್ಟವಾಗುತ್ತಿರುತ್ತದೆ ಎಂದು ಮುಖ್ಯ ಕಾನೂನು ಅಧಿಕಾರಿ ತಿಳಿಸಿದ್ದಾರೆ.
ಆದುದರಿಂದ ಸೂಕ್ತ ನಿರ್ದೇಶನ ಹಾಗೂ ನಮೂನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿ ತಿಳಿಸಿರುವ ಅಂಶಗಳನ್ನು ಗಮನದಲ್ಲಿರಿಸಿ, ಈ ಕೂಡಲೇ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಕಡತಗಳನ್ನು ಪರಿಶೀಲಿಸಿ, ಪರೀಕ್ಷಣಾರ್ಥಿ ದಿನಾಂಕದಿಂದ ಪ್ರತಿ ವರ್ಷ 240 ದಿನಗಳಗಿಂತ ಕಡಿಮೆ ಕಾರ್ಯ ನಿರ್ವಹಿಸಿದ ನೌಕರರಿಗೆ ತಿಳಿವಳಿಕೆ ಪತ್ರವನ್ನು ಜಾರಿ ಮಾಡಿ ಸ್ವೀಕೃತಿ ಪಡೆದು ಸೇವಾ ಕಡತಗಳಲ್ಲಿ ದಾಖಲಿಸಿ, 31.03.2025ರ ತೆಗೆದುಕೊಂಡ ಕ್ರಮದ ಬಗ್ಗೆ ದೃಢೀಕರಣ ಪತ್ರ ಸಲ್ಲಿಸಲು ಹಾಗೂ ಮುಂದಿನ ಸೇವಾ ವರ್ಷಗಳಲ್ಲಿಯೂ ಸಹ ಸುತ್ತೋಲೆಗಳನ್ವಯ ಕ್ರಮವಹಿಸಲು ಸೂಚಿಸಿದೆ.
ಮುಂದುವರಿದು, ಯಾವುದೇ ರೀತಿಯ ಕರ್ತವ್ಯ ಲೋಪಕ್ಕೆ ಅಸ್ಪದ ನೀಡದೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದೆ ಮತ್ತು ನ್ಯಾಯಾಲಯದಿಂದ ಸಂಸ್ಥೆಯ ವಿರುದ್ಧ ಆದೇಶಗಳನ್ನು ಹೊರಡಿಸಿದ್ದಲ್ಲಿ ಅಂತಹ ಸಂಬಂಧಪಟ್ಟ ಸಿಬ್ಬಂದಿ ಮೇಲ್ವಿಚಾರಕರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಹಾಗೂ ಈ ವಿಷಯದಲ್ಲಿ ತೆಗೆದುಕೊಂಡ ಕ್ರಮದ ಬಗ್ಗೆ ಪ್ರತಿ ಮಾಹೆ ಅನುಸರಣಾ ವರದಿ ಸಲ್ಲಿಸಲು ಸಹ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
Related

You Might Also Like
ಪ್ರಣವ್ ಮೊಹಾಂತಿ ಅವರ ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ಸರ್ಕಾರ ತೀರ್ಮಾನಿಸಿಲ್ಲ: ಗೃಹ ಸಚಿವ ಡಾ. ಜಿ.ಪರಮೇಶ್ವರ ಸ್ಪಷ್ಟನೆ
ಬೆಂಗಳೂರು: ಕೇಂದ್ರ ಸರ್ಕಾರದ ಡೆಪ್ಯೂಟೇಷನ್ ಪಟ್ಟಿಯಲ್ಲಿ ಎಸ್ಐಟಿ ಮುಖ್ಯಸ್ಥರಾಗಿರುವ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ಅವರ ಹೆಸರಿದ್ದು, ಅವರನ್ನು ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ರಾಜ್ಯ ಸರ್ಕಾರ...
ಅತ್ತ ದರಿ ಇತ್ತ ಪುಲಿ ಎತ್ತ ಹೋಗಲಿ ಎಂಬ ಸ್ಥಿತಿಯಲ್ಲಿ ಸಾರಿಗೆ ನೌಕರರು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಮುಷ್ಕರಕ್ಕೆ ಹೋಗಲು ಬಹುತೇಕ ನೌಕರರು ಸಿದ್ಧರಿದ್ದಾರೆ. ಆದರೆ, ನಾವು ಡ್ಯೂಟಿ...
KSRTC: ಮುಷ್ಕರಕ್ಕೆ ಹೋದರೆ ಹುಷಾರ್ – ಸಾರಿಗೆ ನೌಕರರಿಗೆ ಅಧಿಕಾರಿಗಳ ಎಚ್ಚರಿಕೆ!
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಮುಷ್ಕರಕ್ಕೆ ಹೋಗದಂತೆ ಈಗಾಗಲೇ ಅಧಿಕಾರಿಗಳು ನೌಕರರಿಗೆ ಎಚ್ಚರಿಕೆ ಕೊಡುತ್ತಿದ್ದಾರೆ. ನಾಲ್ಕೂ...
ಆ.5ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಅಂಗವಾಗಿ ಒಂದು ದಿನದ ಸಾಮೂಹಿಕ ಉಪವಾಸ ಸತ್ಯಾಗ್ರಹ ಆರಂಭ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಬರಬೇಕಾಗದ 38 ತಿಂಗಳ ಹಿಂಬಾಕಿಯನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ 2024ರ ಜನವರಿ 1ರಿಂದ...
EPS Pensioners Protest: ಅಧಿವೇಶನ ಮುಗಿಯುವುದರೊಳಗೆ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ: ನಂಜುಂಡೇಗೌಡ ಎಚ್ಚರಿಕೆ
ಬೆಂಗಳೂರು: ಇದೇ ಜುಲೈ 21ರಿಂದ ಪಾರ್ಲಿಮೆಂಟ್ ಅಧಿವೇಶನ ಪ್ರಾರಂಭವಾಗಿದ್ದು, ಈ ಅಧಿವೇಶನ ಮುಗಿಯುವುದರೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದೆ ಹೊದಲ್ಲಿ ನಾವು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಬಿಎಂಟಿಸಿ...
ಸಮಾನ ವೇತನಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಧರಣಿ ಸತ್ಯಾಗ್ರಹ ಮಾಡುತ್ತಿದ್ದ ಸಾರಿಗೆ ನೌಕರರ ಮುಖಂಡರ ಬಂಧನ
ಸಾರಿಗೆ ನೌಕರರ ಹೋರಾಟ ಹತ್ತಿಕ್ಕಿದ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೊಟ್ಟ ಭರವಸೆ ಈಡೇರಿಸುವ ಬದಲಿಗೆ ದೌರ್ಜನ್ಯ ಎಸಗಿದ ಕಾಂಗ್ರೆಸ್ ಸರ್ಕಾರ ಬೆಂಗಳೂರು: ಸಮಾನ ವೇತನ,...
ರೈತರು ಮರ ಕಟಾವು ಮಾಡುವ ನಿಯಮ ಸರಳಗೊಳಿಸಿ: ಅತ್ತಹಳ್ಳಿ ದೇವರಾಜ್ ಒತ್ತಾಯ
ಮೈಸೂರು: ರೈತರು ತಮ್ಮ ಜಮೀನಿನಲ್ಲಿ ಇರುವ ಮರ ಕಟಾವು ಮಾಡಿ ಸಾಗಾಣಿಕೆ ಮಾಡಿಕೊಳ್ಳುವ ನಿಯಮ ಸರಳೀಕರಣ ಗೊಳಿಸಿಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಕ್ರಮ ಕೈಗೊಳ್ಳಬೇಕು...
ವಿಜಯಪುರ: ಕಲುಷಿತ ನೀರು ಕುಡಿದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥ: ಗ್ರಾಮದಲ್ಲೇ ಬೀಡುಬಿಟ್ಟ ವೈದ್ಯರ ತಂಡ
ವಿಜಯಪುರ: ಕಲುಷಿತ ನೀರು ಕುಡಿದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಬ್ಯಾಲಿಹಾಳದಲ್ಲಿ ನಡೆದಿದೆ. ಗ್ರಾಮಕ್ಕೆ ಗ್ರಾಮ ಪಚಾಯಿತಿಯಿಂದ ಸರಬರಾಜು ಮಾಡಿರುವ ನೀರು...
KSRTC ನಾಲ್ಕೂ ನಿಗಮಗಳ ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ-ಧರಣಿ ಸತ್ಯಾಗ್ರಹ ಆರಂಭ
ಬೆಂಗಳೂರು: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟ ಇಂದಿನಿಂದ (ಜು.29)...