ಬೆಂಗಳೂರು: ಕುಣಿಗಲ್ ನೀರಿನ ಸಮಸ್ಯೆ ಪರಿಹರಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕ್ಯಾಬಿನೆಟ್ನಲ್ಲಿ ನಮಗೆ ಸಹಾಯ ಮಾಡೋದಾಗಿ ಹೇಳಿದ್ದಾರೆ. ಅದಕ್ಕೆ ರಾಜೇಂದ್ರ ರಾಜಣ್ಣ ಯಾಕೆ ಮಾತಾಡ್ತಾರೆ. ನಾನು ಫೋನ್ ಮಾಡಿ ಬೆದರಿಕೆ ಹಾಕ್ತೀನಿ ಅಂತಾರೆ, ಒಬ್ಬ ಮಂತ್ರಿ ಮಗನಿಗೆ ಬೆದರಿಕೆ ಹಾಕೋಕೆ ಆಗುತ್ತಾ ನಾನು ಸಾಮಾನ್ಯ ರೈತನ ಮಗ ಅಂತ ಕುಣಿಗಲ್ ಶಾಸಕ ರಂಗನಾಥ್ ಸಚಿವ ರಾಜಣ್ಣ ಪುತ್ರನ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಹೇಮಾವತಿ ನಾಲೆ ವಿಚಾರದಲ್ಲಿ ಕುಣಿಗಲ್ ಶಾಸಕ ರಂಗನಾಥ್ ಬೆದರಿಕೆ ಹಾಕ್ತಿದ್ದಾರೆ ಎಂಬ ರಾಜಣ್ಣ ಪುತ್ರ ರಾಜೇಂದ್ರ ಹೇಳಿಕೆ ಕುರಿತು ಸುದ್ದಿಗೋಷ್ಠಿ ನಡೆಸಿದ ಅವರು, ಫೋನ್ನಲ್ಲಿ ಮಾತಾಡಿದ್ರೆ ಅದು ಬೆದರಿಕೆ ಹೇಗೆ ಆಗಬೇಕು ಎಂದು ಪ್ರಶ್ನಿಸಿದ್ದಾರೆ.
ನಮ್ಮ ಸರ್ಕಾರ ಬಂದಿದೆ. ಜನರ ಪರ ನಾವು ಕೆಲಸ ಮಾಡೋಣ. ಶಿರಸಾವಹಿಸಿ ಕೆಲಸ ಮಾಡೋಣ. ಸಹಕಾರ ಸಂಘದಲ್ಲಿ ಬಿಜೆಪಿ- ಜೆಡಿಎಸ್ ಸದಸ್ಯರೇ ಅನೇಕ ವರ್ಷಗಳಿಂದ ಇದ್ದಾರೆ. ನಾನು ಕಾಂಗ್ರೆಸ್ ಬೆಂಬಲಿಗರನ್ನು ತರೋಕೆ ಪ್ರಯತ್ನ ಮಾಡುತ್ತಿದ್ದೇನೆ. ಹೀಗಾಗಿ ಸಹಕಾರಿ ಸಂಘದಿಂದ ಸಾಲ ಕೊಡಿ ಅಂತ ಸದನದಲ್ಲಿ ಕೇಳಿದ್ದೇನೆ. ರಾಜಣ್ಣ ಜತೆ ನನಗೆ ವೈಮಸ್ಸಿಲ್ಲ. ಅವರ ಜತೆ ಸಲುಗೆಯಿಂದ ಬಂದಿದ್ದೇನೆ. ಯಾಕೆ ನನ್ನ ಮೇಲೆ ಭಿನ್ನಾಭಿಪ್ರಾಯ ಮಾಡುತ್ತಿದ್ದಾರೆ ಅಂತ ಗೊತ್ತಿಲ್ಲ ಎಂದರು.
ನಾನು ಯಾವ ಮಂತ್ರಿ ಮಗ ಅಲ್ಲ. ಬೆದರಿಕೆ ಹಾಕೋ ಗುಣ ಇಲ್ಲ. ಶಿವಕುಮಾರ್ ಅವರು ಶಾಸಕನಾಗಿ ಹೇಗೆ ನಡೆದುಕೊಳ್ಳಬೇಕು ಅಂತ ಹೇಳಿ ಕೊಟ್ಟಿದ್ದಾರೆ. ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇನೆ. ನಾನು ಯಾರಿಗೂ ಬೆದರಿಕೆ ಹಾಕಿಲ್ಲ ಎಂದು ಹೇಳಿದರು.
ಇನ್ನು ಕುಣಿಗಲ್ಗೆ ಕೊರಟಗೆರೆಯಿಂದ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ, ಮಧುಗಿರಿಗೆ ಕೊಡುತ್ತಿಲ್ಲ ಅಂತ ರಾಜೇಂದ್ರ ಅರೋಪ ಮಾಡಿದ್ದಾರೆ. ನನ್ನನ್ನ ಜನ ಎರಡು ಬಾರಿ ಗೆಲ್ಲಿಸಿದ್ದಾರೆ ಅವರಿಗೆ ನೀರು ಕೊಡಬೇಕು. ಕುಣಿಗಲ್ಗೆ ಶೇ.90 ನೀರು ಹರಿದಿಲ್ಲ. ಕುಣಿಗಲ್ಗೆ ಹಾಸನದಿಂದ ನೀರು ಬೇಕು, ನೀರು ತರಲು ನಾನು ಹೋರಾಟ ಮಾಡುತ್ತೇನೆ ಎಂದರು.
ಜನರಿಗೆ ನಮ್ಮ ಸರ್ಕಾರದ ಬಗ್ಗೆ ನಿರೀಕ್ಷೆ ಇದೆ, ಅದನ್ನು ಮಾಡಬೇಕು. ಬೀದಿಯಲ್ಲಿ ಮಾತಾಡೋದಕ್ಕಿಂತ ಪಕ್ಷದ ವೇದಿಕೆಯಲ್ಲಿ ಮಾತಾಡಬೇಕು. ಮದುಗಿರಿಯವರಿಗೆ ನೀರು ತರೋಕೆ ನಾನು ಪ್ರಯತ್ನ ಮಾಡುತ್ತೇನೆ ನಾನೇ ನಿಂತು ಮಧುಗಿರಿ ರೈತರಿಗೆ ನೀರು ಕೊಡ್ತೀನಿ. ಕುಣಿಗಲ್ ರೈತರಿಗೆ ಅನ್ಯಾಯ ಮಾಡಬೇಡಿ ಎಂದು ಹೇಳಿದರು.
Related

You Might Also Like
ಸಾರಿಗೆ ನೌಕರರು ಮುಷ್ಕರ ಹೂಡುವುದಾಗಿ ಕೊಟ್ಟ ಮುಷ್ಕರದ ನೋಟಿಸ್ ಸಂಬಂಧ ನಿರ್ದೇಶನ ಕೋರಿ ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದ ಎಂಡಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಆ.5ರಿಂದ...
ಸಾರಿಗೆ ನೌಕರರ ಮುಷ್ಕರದ ಬಗ್ಗೆ ನನ್ನ ಅಭಿಪ್ರಾಯ-ಅನಿಸಿಕೆಗಳು
ಸಾರಿಗೆ ಮುಷ್ಕರ ಎಂಬುದು ಎಲ್ಲಾ ಅಧಿಕಾರಿಗಳು ಮತ್ತು ನೌಕರ ಸಿಬ್ಬಂದಿಗಳ ವೇತನಕ್ಕೆ ಸಂಬಂಧಪಟ್ಟಿರುವುದಾಗಿರುತ್ತದೆ.ಎಲ್ಲರೂ ಒಗ್ಗಟ್ಟಿನಿಂದ ಒಟ್ಟಾಗಿ ಮುಷ್ಕರ ಮಾಡಬೇಕಾಗಿದೆ. ಆದರೆ ನಮ್ಮ ನಿಗಮದಲ್ಲಿ ಅಧಿಕಾರಿಗಳು ಮತ್ತು ಆಡಳಿತ...
ಡಿ.31ರವರೆಗೆ ಸಾರಿಗೆ ನೌಕರರು ಮುಷ್ಕರ ಮಾಡದಂತೆ ಎಸ್ಮಾಜಾರಿ ಮಾಡಿದ ಸರ್ಕಾರ- ಎಸ್ಮಾ ಜಾರಿ ಮಾಡಿದರೆ ಮುಷ್ಕರಕ್ಕೆ ಅವಕಾಶವಿಲ್ಲವೇ? ತಜ್ಞರ ಹೇಳಿಕೆ ಏನು?
ಬೆಂಗಳೂರು: ತಮ್ಮ ಬೇಡಿಕೆ ಈಡೇರಿಕೆಗಾಗಿ ಸರ್ಕಾರದ ಬಾಗಿಲು ಬಡಿದು ಸುಸ್ತಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಸಿಬ್ಬಂದಿ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಜುಲೈ 29ರಿಂದ...
KSRTC ನೌಕರರ ವೇತನ ಹೆಚ್ಚಳ ಸಂಬಂಧ ಉಪವಾಸ ಸತ್ಯಾಗ್ರಹ ಮಾಡುವ ಕುರಿತು ಜು.18ರಂದು ಸುದ್ದಿಗೋಷ್ಠಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ನೌಕರರ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜು.29ರಿಂದ ಒಕ್ಕೂಟದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವ...
ಜು.29ರೊಳಗೆ KSRTC ನೌಕರರ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಸದಿದ್ದರೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ: ಎಂಡಿಗೆ ಒಕ್ಕೂಟ ಮನವಿ
ಬೆಂಗಳೂರು: ಇಲ್ಲಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ಸಂಘಟನೆಗಳ ಒಕ್ಕೂಟದ ವತಿಯಿಂದ ಇದೇ ಜುಲೈ...
ಬೀಡನಹಳ್ಳಿ: ಸಂಭ್ರಮದ ಚಾಮುಂಡೇಶ್ವರಿ ವರ್ಧಂತಿ – ಭಕ್ತರಿಗೆ ಅನ್ನಸಂತರ್ಪಣೆ
ಮೈಸೂರು: ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾದ ಚಾಮುಂಡಿಬೆಟ್ಟದಲ್ಲಿ ಇಂದು (ಜು.17) ಚಾಮುಂಡೇಶ್ವರಿ ವರ್ಧಂತಿ ಹಿನ್ನೆಲೆಯಲ್ಲಿ ಜಿಲ್ಲೆಯ ತಿ.ನರಸೀಪುರ ತಾಲೂಕಿನ ಬೀಡನಹಳ್ಳಿ ಗ್ರಾಮದ ಚಾಮುಂಡೇಶ್ವರಿ ದೇವಸ್ಥಾನದಲ್ಲೂ ಪೂಜಾ ಕೈಂಕರ್ಯಗಳು...
ಕೊಪ್ಪಳ: ಭಾರೀ ಮಳೆಗೆ ಕುಸಿದ ಮನೆ ಒಂದೂವರೆ ವರ್ಷದ ಮಗು ಸಾವು, 6 ಮಂದಿಗೆ ಗಾಯ
ಕೊಪ್ಪಳ: ಭಾರೀ ಮಳೆಗೆ ಮನೆ ಕುಸಿದು ಒಂದೂವರೆ ವರ್ಷದ ಮಗುವೊಂದು ಮೃಪಟ್ಟಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ. ಮನೆ...
ದ.ಕ.ದಲ್ಲಿ ವರುಣನ ಅಬ್ಬರ- ಮಣ್ಣಗುಂಡಿ ಬಳಿ ಗುಡ್ಡಕುಸಿತ: BM ಹೆದ್ದಾರಿ ಬಂದ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರಿದ ಹಿನ್ನೆಲೆ ಕಡಬ ತಾಲೂಕಿನ ಮಣ್ಣಗುಂಡಿ ಬಳಿ ಭೂಕುಸಿತ ಉಂಟಾಗಿದ್ದು, ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಆದರೂ ಧರ್ಮಸ್ಥಳ,...
ಅತ್ತಹಳ್ಳಿಯ ಎ.ಸಿ.ಲಿಂಗೇಗೌಡರ ಪುತ್ರ ರಾಘವ ಲಿಂಗೇಗೌಡ ನಿಧನ
ಮೈಸೂರು: ನಗರದ ತಿ.ನರಸೀಪುರ ರಸ್ತೆಯ ಜಿ.ಎಲ್.ಗಾರ್ಡನ್ ನಿವಾಸಿ ಲಂಡನ್ನಲ್ಲಿ ಕೆಲಸದಲ್ಲಿದ್ದ ರಾಘವ ಲಿಂಗೇಗೌಡ (49) ಬುಧವಾರ ಸಂಜೆ ನಿಧನರಾದರು. ಮೂಲತಃ ತಿ.ನರಸೀಪುರ ತಾಲೂಕು ಬನ್ನೂರು ಹೋಬಳಿಯ ಅತ್ತಹಳ್ಳಿ...