2025 ಡಿಸೆಂಬರ್ 31ರವರೆಗೆ ವಿದ್ಯುತ್ ಚಾಲಿತ ಬಸ್‌ಗಳ ಗುತ್ತಿಗೆದಾರ ಕಂಪನಿಗಳಿಗೆ 657.14 ಕೋಟಿ ರೂ. ಪಾವತಿಸಿದ BMTC ಸಂಸ್ಥೆ
ಸಾಂದರ್ಭಿಕ ಚಿತ್ರ.ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ವಿದ್ಯುತ್ ಚಾಲಿತ ವಾಹನಗಳ ಆಚರಣೆಗೊಳಿಸಿದ ದಿನಾಂಕದಿಂದ 31.12.2025ರವರೆಗೆ ಘಟಕವಾರು ವಿದ್ಯುತ್ ಚಾಲಿತ ವಾಹನಗಳು ಆಚರಣೆ ಮಾಡಿದ ಕಂಪನಿಯವರಿಗೆ ನಿಗಮದಿಂದ 657,14,09,293 ರೂಪಾಯಿಗಳನ್ನು ಕಂಪನಿಯವರಿಗೆ ಪಾವತಿಸಲಾಗಿದೆ.

ಬಿಎಂಟಿಸಿ ಸಾರ್ವಜನಿಕ ಮಾಹಿತಿ ಅಧಿಕಾರಿ/ ಲೆಕ್ಕಾಧಿಕಾರಿ ಶ್ರೀನಿವಾಸ್ ಎಂಬುವರು ಆರ್‌ಟಿಐಯಡಿ ಕೇಳಿದ ಮಾಹಿತಿಯಲ್ಲಿ ಬಹಿರಂಗಪಡಿಸಿದ್ದಾರೆ.
ಶ್ರೀನಿವಾಸ್ ಅವರು ಮಾಹಿತಿ ಹಕ್ಕು ಕಾಯ್ದೆ 2005 ರ ಅಡಿಯಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಓಡಾಟದಿಂದ ಆಗುತ್ತಿರುವ ಲಾಭನಷ್ಟದ ದೃಢೀಕೃತ ಮಾಹಿತಿ ನೀಡುವಂತೆ ಕೇಳಿದ್ದರು.
ಅದರಂತೆ ಸಂಸ್ಥೆಯ ಬಿಎಂಟಿಸಿ ಸಾರ್ವಜನಿಕ ಮಾಹಿತಿ ಅಧಿಕಾರಿ ವಿದ್ಯುತ್ ಚಾಲಿತ ವಾಹನಗಳ 31.12.2025ರವರೆಗೆ ಆಚರಣೆಗೊಳಿಸಿದ ಒಟ್ಟು ಮೊತ್ತ 657,14.09.293 ರೂ.ಗಳನ್ನು ಕಂಪನಿಯವರಿಗೆ ಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಒಂದು ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮಾತ್ರ ಮಾಹಿತಿ ಹಕ್ಕು ಕಾಯ್ದೆಯಡಿ ಒಂದು ಅರ್ಜಿಯಲ್ಲಿ ಕೋರಬಹುದಾಗಿದ್ದು, ಘಟಕಗಳು ಗಳಿಸಿದ ಲಾಭನಷ್ಟದ ಮಾಹಿತಿಗಾಗಿ ಪ್ರತ್ಯೇಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿರುವ ಅಧಿಕಾರಿ ಲಾಭ- ನಷ್ಟದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಒಟ್ಟಾರೆ ಕಳೆದ ಫೆ.20ರಂದು ಬಿಎಂಟಿಸಿ 31.12.2025ರವರೆಗೆ ಒಟ್ಟು ಮೊತ್ತ 657,14.09.293 ರೂ.ಗಳನ್ನು ಕಂಪನಿಯವರಿಗೆ ಪಾವತಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ, ಆ ಬಸ್‌ಗಳಿಂದ ಆಗಿರುವ ಆದಾಯ ನಷ್ಟದ ಬಗ್ಗೆ ಯಾವುದೇ ಮಾಹಿತಿ ನೀಡದ ಕಾರಣ ಶ್ರೀನಿವಾಸ್ ಅವರು ಮತ್ತೊಂದು ಅರ್ಜಿ ಹಾಕ್ಕಿದ್ದು ಈ ಮಾಹಿತಿಯೂ ಅತೀ ಶೀಘ್ರದಲ್ಲೇ ಬರಲಿದೆ.

Related









