NEWSನಮ್ಮಜಿಲ್ಲೆನಮ್ಮರಾಜ್ಯ

BMTC: ಪಾಸ್‌ ಎಂದ್ಹೇಳಿ ಆಧಾರ್‌ ತೋರಿಸಿದ ಮಹಿಳೆಗೆ ಬೆವರಿಳಿಸಿದ ಪ್ರಯಾಣಿಕರು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಟಿಕೆಟ್ ಪಡೆದ ನಿಲ್ದಾಣ ಬರುವ ಮೊದಲೇ ಬಸ್ ಇಳಿಯಲು ಮುಂದಾಗಿದ್ದ ಯುವತಿಯನ್ನು ಇಳಿಯಬೇಡ ಎಂದಿದಕ್ಕೆ ನಿರ್ವಾಹಕರನ್ನೇ ಯುವತಿ ತರಾಟೆಗೆ ತಗೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕಾಂಗ್ರಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಶಕ್ತಿ ಯೋಜನೆ ಜಾರಿ ಮಾಡಿದ್ದು, ಇದು ಆರಂಭವಾದ ದಿನದಿಂದಲೂ ಕೆಲ ಮಹಿಳಾ ಪ್ರಯಾಣಿಕರು ಹಾಗೂ ಕಂಡಕ್ಟರ್ ನಡುವಿನ ಜಟಾಪಟಿ ತಾರಕಕ್ಕೆ ಏರುತ್ತಲೇ ಇದೆ.

ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಮತ್ತು ಕಂಡಕ್ಟರ್ ನಡುವೆ ವಾಗ್ವಾದ ನಡೆದಿದ್ದು, ಯುವತಿ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕಾಡುಬೀಸನಹಳ್ಳಿಗೆ ಟಿಕೆಟ್ ಪಡೆದಿದ್ದಾರೆ. ಆದರೆ, ಟಿಕೆಟ್ ಪಡೆದ ಸ್ಟಾಪ್‌ಗೂ ಮುನ್ನ ಅಗರ ಬಳಿ ಇಳಿಯಲು ಮುಂದಾಗಿದ್ದಾರೆ.

ಟಿಕೆಟ್ ಪಡೆದ ನಿಲ್ದಾಣ ಬರುವ ಮೊದಲೇ ಬಸ್ ಇಳಿಯಲು ಮುಂದಾಗಿದ್ದ ಯುವತಿ

ಈ ವೇಳೆ ಯುವತಿಯನ್ನು ಕಂಡಕ್ಟರ್ ಪ್ರಶ್ನೆ ಮಾಡಿದ್ದಕ್ಕೆ ಯುವತಿ ವಾಗ್ವಾದಕ್ಕೆ ಮಾಡಿದ್ದಾಳೆ. ಈ ಸಂದರ್ಭ ನಿರ್ವಾಹಕ ಘಟನೆಯ ವಿಡಿಯೋ ಮಾಡಿದ್ದು, ಉಚಿತ ಟಿಕೆಟ್ ಪಡೆದ ಸ್ಥಳಕ್ಕಿಂತ ಹಿಂದೆಯೇ ಪ್ರಯಾಣಿಕರು ಇಳಿದರೆ, ಚೆಕ್ಕಿಂಗ್ ಅಧಿಕಾರಿಗಳು ಬಂದಾಗ ಕಾರಣ ಕೇಳಿ ನಮಗೆ ಮೆಮೋ ಕೊಡುತ್ತಾರೆ ಬಳಿಕ ಅಮಾನತು ಮಾಡುತ್ತಾರೆ ಎಂದು ಹೇಳಿದ್ದಾರೆ. ಆದರೂ ಆಕೆ ಅವರ ಮಾತನ್ನು ಲೆಕ್ಕಿಸದೆ ವಾಗ್ವಾದಕ್ಕೆ ಇಳಿಸಿದ್ದಾಳೆ.

ಮಹಿಳಾ ಪ್ರಯಾಣಿಕರ ಈ ನಡೆಯಿಂದ ನಿರ್ವಾಹಕರು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ವಿಜಯಪಥ ಹತ್ತಾರು ವರದಿಗಳನ್ನು ಮಾಡಿ ನಿಮ್ಮ ನಡೆಯಿಂದ ನಿರ್ವಾಹಕರಿಗೆ ಅಮಾನತಿನ ಶಿಕ್ಷೆಯಾಗುತ್ತಿದೆ ಈ ಬಗ್ಗೆ ಅರಿವು ಮೂಡಿಸಿಕೊಳ್ಳಿ ಎಂದು ತಿಳಿಸುತ್ತಿದ್ದರೂ ಕೆಲ ಮಹಿಳಾ ಪ್ರಯಾಣಿಕರು ಬದಲಾಗಿಲ್ಲ.

ಇತ್ತ ಪ್ರಯಾಣಿಕರು ನಿಗದಿತ ಸ್ಥಳಕ್ಕೆ ಟಿಕೆಟ್ ಪಡೆದು ಸ್ಟಾಪ್ ಬರುವ ಮುನ್ನವೇ ಬಸ್ಸಿನಿಂದ ಇಳಿಯುತ್ತಿರುವ ಘಟನೆಗಳು ಹೆಚ್ಚಿದ್ದು, ಮಹಿಳಾ ಪ್ರಯಾಣಿಕರ ಈ ನಡೆಗೆ ನಿರ್ವಾಹಕರು ಸುಸ್ತಾಗಿದ್ದಾರೆ. ಅಲ್ಲದೇ ಇವರ ಇಂಥ ನಡೆಯಿಂದ ನಿರ್ವಾಹಕರು ಇಕ್ಕಟ್ಟಿಗೆ ಸಿಲುಕುವಂತಾಗಿದೆ.

ಇನ್ನೊಂದೆಡೆ ಕೆಲ ಮಹಿಳಾ ಪ್ರಯಾಣಿಕರು ಟಿಕೆಟ್‌ ಪಡೆಯದೆಯೇ ಪಾಸ್‌ ಇದೆ ಎಂದು ಹೇಳುತ್ತಿರುವುದು ಕೂಡ ನಿರ್ವಾಹಕರು ನಿಷ್ಠೆಯಿಂದ ಕರ್ತವ್ಯ ಮಾಡುವುದಕ್ಕೆ ಸಮಸ್ಯೆ ಆಗುತ್ತಿದೆ. ಇದಕ್ಕೆ ಮತ್ತೊಂದು ತಾಜಾ ನಿದರ್ಶನವೆಂದರೆ ಇದೇ ಡಿ.8ರಂದು ಚಿಕ್ಕಲ್ಲಸಂದ್ರ- ಮೆಜೆಸ್ಟಿಕ್‌ ನಡುವೆ ಕಾರ್ಯಾಚರಿಸುವ ಬಸ್‌ ಹತ್ತಿದ ಮಹಿಳೆಯೊಬ್ಬರು ನಿರ್ವಾಹಕರು ಟಿಕೆಟ್‌ ತೆದುಕೊಳ್ಳಿ ಎಂದಿದ್ದಕ್ಕೆ ಪಾಸ್‌ ಎಂದು ಹೇಳಿದ್ದಾರೆ.

ಇವರು ಹೊರ ರಾಜ್ಯದವರಿರಬಹುದೆಂದು ನಿರ್ವಾಹಕರು ಪಾಸ್‌ ತೋರಿಸಲು ಹೇಳಿದ್ದಾರೆ. ಈ ವೇಳೆ ಆಧಾರ್‌ ಕಾರ್ಡ್‌ ತೋರಿಸಿ ಇದೆ ಪಾಸ್‌ ಎಂದು ಉಡಾಫೆಯ ಉತ್ತರಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಸರ್ಕಾರ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಟ್ಟರು ನೀವು (ನಿರ್ವಾಹಕರು) ನಮಗೆ ಸುಖಾಸುಮ್ಮನೆ ಹಿಂಸೆ ಕೊಡುತ್ತೀರಿ ಎಂದು ವಾಗ್ವಾದಕ್ಕೆ ಇಳಿದಿದ್ದಾರೆ. ಇದನ್ನು ಗಂನಿಸಿದ ಸಹ ಪ್ರಯಾಣಿಕರೇ ಆಕೆಯ ನಡೆಯನ್ನು ಖಂಡಿಸಿ ಪೊಲೀಸ್‌ ಠಾಣೆಗೆ ಬಸ್‌ ತೆಗೆದುಕೊಂಡು ನಡೆಯಿರಿ ಇವರಿಗೆ ಬುದ್ಧಿ ಕಲಿಸೋಣ ಎಂದು ತಿರುಗಿ ಬಿದ್ದಮೇಲೆ ಮೌನವಾಗಿದ್ದಾರೆ.

ಈ ರೀತಿಯ ಹಲವಾರು ಘಟನೆಗಳು ಈ ಉಚಿತ ಪ್ರಯಾಣದ ಬಳಿಕ ನಡೆಯುತ್ತಿದ್ದು, ಇತ್ತ ತಪ್ಪು ಮಾಡಿದ ಪ್ರಯಾಣಿಕರಿಗೆ ಶಿಕ್ಷೆ ಕೊಡುವುದು ಬಿಟ್ಟು ನಿರ್ವಾಹಕರಿಗೆ ಶಿಕ್ಷೆ ಕೊಡುತ್ತಿದ್ದಾರೆ ಸಾರಿಗೆ ನಿಗಮಗಳ ಅಧಿಕಾರಿಗಳು. ಇದು ಬದಲಾಗಬೇಕಿದೆ. ಜತೆಗೆ ಜನರು ನಿಗಮದಲ್ಲಿ ಇರುವ ಕಾನೂನಿನ ಬಗ್ಗೆ ತಿಳಿದುಕೊಳ್ಳುವುದು ಅತ್ಯಂತ ಅವಶ್ಯವಾಗಿದೆ.

Leave a Reply

error: Content is protected !!
LATEST
KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ ದೀಪಾವಳಿ ಹಬ್ಬ ಹಿನ್ನೆಲೆ KKRTC ನೌಕರರಿಗೆ ಅ.29ರಂದೇ ವೇತನ ಕೊಡಲು ಎಂಡಿ ರಾಚಪ್ಪ ನಿರ್ದೇಶನ