- ಈಗಲೇ ನಿರ್ವಾಹಕರ ಹೆದರಿಸಿ ಬಲವಂತದಿಂದ ಶೇ.50ರಿಂದ 60ರಷ್ಟು ಸುಳ್ಳು ಕೇಸ್ ಹಾಕುವ ಅಧಿಕಾರಿಗಳು
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಆದಾಯ ಸೋರಿಕೆ ಆಗುತ್ತಿದ್ದು ಸೋರಿಕೆ ಮಾಡುವ ನಿರ್ವಾಹಕ ಹೆಸರನ್ನು ಕೊಡಿ ಎಂದು ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿಗಳು ಹೊರಡಿಸಿರುವ ಆದೇಶ ಪತ್ರ ಹಿಂಪಡೆಯುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಒತ್ತಾಯಿಸಿದೆ.
ಇದೇ ಏ.17ರಂದು ಸಂಸ್ಥೆಯ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿಗಳು ಈ ಬಗ್ಗೆ ಆದೇಶ ಹೊರಡಿಸಿದ್ದು. ಈ ಆದೇಶ ಪತ್ರದಲ್ಲಿ ನಿರ್ವಾಹಕರಿಂದಲ್ಲೇ ಸಾರಿಗೆ ಆದಾಯ ಸೋರಿಕೆ ಆಗುತ್ತಿದ್ದು, ಈ ಸೋರಿಕೆಯನ್ನು ತಡೆಯಲು ಪ್ರತಿ ತಿಂಗಳು ಘಟಕಗಳಲ್ಲಿ ಸಾರಿಗೆ ಆದಾಯ ಸೋರಿಕೆ ಮಾಡುವ 5 ನಿರ್ವಾಹಕರನ್ನು ಗುರುತಿಸಿ, ಕೇಂದ್ರ ಕಚೇರಿಗೆ ಮಾಹಿತಿ ನೀಡಬೇಕೆಂದು, ಅವರ ಮೇಲೆ ಅನಿರಿಕ್ಷಿತವಾಗಿ ತನಿಖೆ ಮಾಡುವ ಬಗ್ಗೆ ತಿಳಿಸಿದ್ದೀರಿ.
ಸಾರಿಗೆ ಆದಾಯ ಕೇವಲ ನಿರ್ವಾಹಕರಿಂದ ಮಾತ್ರ ಸೋರಿಕೆ ಆಗುತ್ತಿಲ್ಲವೆಂದು ಸಂಸ್ಥೆಯ ಎಲ್ಲ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೂ ತಿಳಿದಿದ್ದು, ನಿಜವಾಗಿ ಸಾರಿಗೆ ಆದಾಯ ಸೋರಿಕೆ ಮಾಡುತ್ತಿರುವ ಕೆಲವು ಸಿಬ್ಬಂದಿಗಳನ್ನು ಘಟಕ, ವಿಭಾಗ ಮತ್ತು ಕೇಂದ್ರ ಕಚೇರಿಗಳಲ್ಲಿ ಇಟ್ಟುಕೊಂಡು, ಅಮಾಯಕ ನಿರ್ವಾಹಕರ ಮೇಲೆ ಗದಪ್ರಹಾರ ಮಾಡುವ ಈ ರೀತಿಯ ಕ್ರಮಗಳು ಎಷ್ಟು ಸರಿ? ಈಗ ಕೇಲವು ತನಿಖಾಧಿಕಾರಿಗಳು ಬರೆಯುತ್ತಿರುವ ಕೇಸುಗಳಲ್ಲಿ 50% ರಿಂದ 60% ರಷ್ಟು ಕೇಸುಗಳು ಬಲವಂತದಿಂದ, ನಿರ್ವಾಹಕರನ್ನು ಹೆದರಿಸಿ ಬರೆಯುತ್ತಿರುವ ಸುಳ್ಳು ಕೇಸುಗಳೆಂದು ತಮಗೆ ತಿಳಿಯದ ವಿಚಾರವಲ್ಲ.
ಈ ಮಧ್ಯ ತಾವು ಈ ರೀತಿಯ ಆದೇಶಗಳನ್ನು ಹೊರಡಿಸುವುದರಿಂದ ಘಟಕ ಮಟ್ಟದಲ್ಲಿ ಕೆಲವು ಅಧಿಕಾರಿಗಳು ಈ ಆದೇಶವನ್ನು ದುರುಪಯೋಗ ಪಡಿಸಿಕೊಂಡು, ಅವರು ಮಾಡುತ್ತಿರುವ ಭ್ರಷ್ಟಾಚಾರ ಕೆಲಸಗಳಿಗೆ ಘಟಕಗಳಲ್ಲಿ ವಿರೋಧ ವ್ಯಕ್ತಪಡಿಸುವ ಹಾಗೂ ಸಂಸ್ಥೆಯ ಕಾನೂನು ಮತ್ತು ನಿಯಮಗಳ ಅನುಸಾರವಾಗಿ ಕರ್ತವ್ಯ ನಿರ್ವಹಿಸುವ ನಿರ್ವಾಹಕರನ್ನು ಗುರಿಯಾಗಿಸಿ, ಘಟಕ ಮಟ್ಟದಿಂದ ಕೇಂದ್ರ ಕಚೇರಿಗೆ ಹೆಸರುಗಳನ್ನು ನೀಡಬಹುದು.
ಉದಾ: ಇತ್ತೀಚೆಗೆ ಒಂದು ಘಟಕದಲ್ಲಿ ಚಾಲನಾ ಸಿಬ್ಬಂದಿ ಮೇಲೆ ವೈಯಕ್ತಿಕ ದ್ವೇಷದ ಕಾರಣ ಅಧಿಕಾರಿಗಳೇ ಬಸ್ಸಿನ ಗೌಪ್ಯ ಸ್ಥಳದಲ್ಲಿ ಹಣವಿಟ್ಟು, ತನಿಖಾಧಿಕಾರಿಗಳಿಗೆ ಆ ಗೌಪ್ಯ ಸ್ಥಳದ ಮಾಹಿತಿ ನೀಡಿ, ಆ ಚಾಲನಾ ಸಿಬ್ಬಂದಿ ಮೇಲೆ ಕೇಸು ಬರೆದು, ಬಸ್ಸಿನ ಸಿ.ಸಿ ಕ್ಯಾಮರ ಪರಿಶೀಲಿಸಿದಾಗ ಸತ್ಯಾಂಶ ಹೊರಬಂದಿತ್ತು.
ಈಗ ಆ ಎಲ್ಲ ಆಧಿಕಾರಿಗಳು ಈ ಪ್ರಕರಣದಲ್ಲಿ ಸಿಕ್ಕಿ ಅವರ ವಿರುದ್ಧ ತನಿಖೆ ನಡೆಯುತ್ತಿದೆ ಹಾಗೂ 2021 ರ ಸಾರಿಗೆ ಮುಷ್ಕರದ ಸಮಯದಲ್ಲಿ ಸಹಾ ಇದೆ ರೀತಿ ಮುಷ್ಕರದಲ್ಲಿ ಭಾಗವಹಿಸದ ಎಷ್ಟೋ ಅಮಾಯಕ ಸಿಬ್ಬಂದಿಗಳನ್ನು ಕೆಲ ಆಧಿಕಾರಿಗಳು ತಮ್ಮ ವೈಯಕ್ತಿಕ ದ್ವೇಷದ ಕಾರಣ ಕೇಂದ್ರ ಕಚೇರಿಗೆ ಅವರ ಹೆಸರುಗಳನ್ನು ನೀಡಿ ಆಮಾನತು, ವರ್ಗಾವಣೆ ಮತ್ತು ವಜಾ ಆಗುವಂತೆ ಮಾಡಿದ್ದರು. ಇದನ್ನೂ ಓದಿ: BMTC- ಆದಾಯ ಸೋರಿಕೆ ಮಾಡುವ ನಿರ್ವಾಹಕರ ಪಟ್ಟಿಕೊಡಿ: ಜಾಗೃತಾಧಿಕಾರಿ
ಸಂಸ್ಥೆಯ ಎಲ್ಲ ಬಸ್ಸುಗಳಲ್ಲಿ ಈಗಾಗಲೇ ಸಿಸಿ ಕ್ಯಾಮರಾ ಅಳವಡಿಸಿದ್ದು, ಚಾಲನಾ ಸಿಬ್ಬಂದಿಗಳ ಪ್ರತಿಯೊಂದು ಚಲನವಲನಗಳನ್ನು ಗಮನಿಸುತ್ತಿದ್ದು, ಇತ್ತೀಚೆಗೆ ಸಂಸ್ಥೆಯಲ್ಲಿ ಬಳಸುತ್ತಿರುವ ಇಟಿಎಂ ಟಿಕೆಟ್ ಯಂತ್ರಗಳು ಜಿಪಿಎಸ್ ತಂತ್ರಾಂಶ ಒಳಗೊಂಡ ಅತ್ಯಾಧುನಿಕ ಯಂತ್ರಗಳಿದ್ದು, ಈ ಎರಡು ತಂತ್ರಾಂಶಗಳನ್ನು ಬಳಸಿಕೊಂಡು ಸಿಸಿ ಕ್ಯಾಮರಾದ ಮೂಲಕ ಬಸ್ಸಿನಲ್ಲಿ ಪ್ರಯಾಣಿಸಿದ ಪ್ರಯಾಣಿಕರು ಮತ್ತು ಇಟಿಎಂ ಟಿಕೆಟ್ ಯಂತ್ರಗಳಲ್ಲಿ ನಿರ್ವಾಹಕರು ವಿತರಣೆ ಮಾಡಿರುವ ಟಿಕೆಟ್‌ಗಳನ್ನು ತಾಳೆ ಮಾಡಿ ಕೂತ ಜಾಗದಿಂದಲೇ ನೈಜವಾಗಿ ಯಾವ ನಿರ್ವಾಹಕರು ಆದಾಯ ಸೋರಿಕೆ ಮಾಡುತ್ತಿದ್ದಾರೆ ಎಂದು ಪರಿಶೀಲಿಸಬಹುದು.
ಅಲ್ಲದೆ ಇದರಿಂದ ತನಿಖೆ ಮಾಡಲು ತಾವುಗಳು ಸಂಸ್ಥೆ ವತಿಯಿಂದ ವಾರ್ಷಿಕವಾಗಿ ಖರ್ಚು ಮಾಡುತ್ತಿರುವ ಕೋಟ್ಯಂತರ ರೂಪಾಯಿಗಳನ್ನು ಉಳಿಸಬಹುದು. ಜತೆಗೆ ಎನ್ಐಎನ್ಸಿ ಪದ್ಧತಿ ಜಾರಿಗೆ ತರುವುದರಿಂದ ಪ್ರತಿಯೊಬ್ಬ ಪ್ರಯಾಣಿಕರಿಗೂ ತಾವೂ ಟಿಕೆಟ್ ಪಡೆದಿಲ್ಲವೆಂದರೆ ತಾವೇ ದಂಡ ಕಟ್ಟಬೇಕೆಂದು ಅರಿತಾಗ ನಿರ್ವಾಹಕರು ಟಿಕೆಟ್ ನೀಡಲಿಲ್ಲವೆಂದರೆ ಪ್ರಯಾಣಿಕರೆ ಟಿಕೆಟ್ ಕೇಳಿ ಪಡೆಯುತ್ತಾರೆ.
ಶಕ್ತಿ ಯೋಜನೆ ಜಾರಿಯಿಂದ ನಿರ್ವಾಹಕರು ಕರ್ತವ್ಯ ನಿರ್ವಹಿಸುವುದೇ ಕಷ್ಟವಾಗಿರುವ ಈ ಸಂದರ್ಭದಲ್ಲಿ ಈ ರೀತಿಯ ಆದೇಶಗಳಿಂದ ತನಿಖಾಧಿಕಾರಿಗಳು ನಿರ್ವಾಹಕರನ್ನು ಸುಖಸುಮ್ಮನೆ ಶೋಷಣೆ ಮಾಡುವುದರಿಂದ ನಿರ್ವಾಹಕರು ಕರ್ತವ್ಯ ನಿರ್ವಹಿಸುವುದು ಕಷ್ಟವಾಗುವ ಜೊತೆಗೆ ಅವರ ಮಾನಸಿಕ ಹಾಗೂ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುವ ಸಂಭವವಿದೆ. ಹೀಗಾಗಿ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕೆಂದು ಕೂಟದ ರಾಜ್ಯಾಧ್ಯಕ್ಷ ಆರ್. ಚಂದ್ರಶೇಖರ್ ಆಗ್ರಹಿಸಿದ್ದಾರೆ.
Related

You Might Also Like
ಪ್ರಣವ್ ಮೊಹಾಂತಿ ಅವರ ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ಸರ್ಕಾರ ತೀರ್ಮಾನಿಸಿಲ್ಲ: ಗೃಹ ಸಚಿವ ಡಾ. ಜಿ.ಪರಮೇಶ್ವರ ಸ್ಪಷ್ಟನೆ
ಬೆಂಗಳೂರು: ಕೇಂದ್ರ ಸರ್ಕಾರದ ಡೆಪ್ಯೂಟೇಷನ್ ಪಟ್ಟಿಯಲ್ಲಿ ಎಸ್ಐಟಿ ಮುಖ್ಯಸ್ಥರಾಗಿರುವ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ಅವರ ಹೆಸರಿದ್ದು, ಅವರನ್ನು ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ರಾಜ್ಯ ಸರ್ಕಾರ...
ಅತ್ತ ದರಿ ಇತ್ತ ಪುಲಿ ಎತ್ತ ಹೋಗಲಿ ಎಂಬ ಸ್ಥಿತಿಯಲ್ಲಿ ಸಾರಿಗೆ ನೌಕರರು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಮುಷ್ಕರಕ್ಕೆ ಹೋಗಲು ಬಹುತೇಕ ನೌಕರರು ಸಿದ್ಧರಿದ್ದಾರೆ. ಆದರೆ, ನಾವು ಡ್ಯೂಟಿ...
KSRTC: ಮುಷ್ಕರಕ್ಕೆ ಹೋದರೆ ಹುಷಾರ್ – ಸಾರಿಗೆ ನೌಕರರಿಗೆ ಅಧಿಕಾರಿಗಳ ಎಚ್ಚರಿಕೆ!
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಮುಷ್ಕರಕ್ಕೆ ಹೋಗದಂತೆ ಈಗಾಗಲೇ ಅಧಿಕಾರಿಗಳು ನೌಕರರಿಗೆ ಎಚ್ಚರಿಕೆ ಕೊಡುತ್ತಿದ್ದಾರೆ. ನಾಲ್ಕೂ...
ಆ.5ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಅಂಗವಾಗಿ ಒಂದು ದಿನದ ಸಾಮೂಹಿಕ ಉಪವಾಸ ಸತ್ಯಾಗ್ರಹ ಆರಂಭ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಬರಬೇಕಾಗದ 38 ತಿಂಗಳ ಹಿಂಬಾಕಿಯನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ 2024ರ ಜನವರಿ 1ರಿಂದ...
EPS Pensioners Protest: ಅಧಿವೇಶನ ಮುಗಿಯುವುದರೊಳಗೆ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ: ನಂಜುಂಡೇಗೌಡ ಎಚ್ಚರಿಕೆ
ಬೆಂಗಳೂರು: ಇದೇ ಜುಲೈ 21ರಿಂದ ಪಾರ್ಲಿಮೆಂಟ್ ಅಧಿವೇಶನ ಪ್ರಾರಂಭವಾಗಿದ್ದು, ಈ ಅಧಿವೇಶನ ಮುಗಿಯುವುದರೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದೆ ಹೊದಲ್ಲಿ ನಾವು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಬಿಎಂಟಿಸಿ...
ಸಮಾನ ವೇತನಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಧರಣಿ ಸತ್ಯಾಗ್ರಹ ಮಾಡುತ್ತಿದ್ದ ಸಾರಿಗೆ ನೌಕರರ ಮುಖಂಡರ ಬಂಧನ
ಸಾರಿಗೆ ನೌಕರರ ಹೋರಾಟ ಹತ್ತಿಕ್ಕಿದ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೊಟ್ಟ ಭರವಸೆ ಈಡೇರಿಸುವ ಬದಲಿಗೆ ದೌರ್ಜನ್ಯ ಎಸಗಿದ ಕಾಂಗ್ರೆಸ್ ಸರ್ಕಾರ ಬೆಂಗಳೂರು: ಸಮಾನ ವೇತನ,...
ರೈತರು ಮರ ಕಟಾವು ಮಾಡುವ ನಿಯಮ ಸರಳಗೊಳಿಸಿ: ಅತ್ತಹಳ್ಳಿ ದೇವರಾಜ್ ಒತ್ತಾಯ
ಮೈಸೂರು: ರೈತರು ತಮ್ಮ ಜಮೀನಿನಲ್ಲಿ ಇರುವ ಮರ ಕಟಾವು ಮಾಡಿ ಸಾಗಾಣಿಕೆ ಮಾಡಿಕೊಳ್ಳುವ ನಿಯಮ ಸರಳೀಕರಣ ಗೊಳಿಸಿಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಕ್ರಮ ಕೈಗೊಳ್ಳಬೇಕು...
ವಿಜಯಪುರ: ಕಲುಷಿತ ನೀರು ಕುಡಿದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥ: ಗ್ರಾಮದಲ್ಲೇ ಬೀಡುಬಿಟ್ಟ ವೈದ್ಯರ ತಂಡ
ವಿಜಯಪುರ: ಕಲುಷಿತ ನೀರು ಕುಡಿದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಬ್ಯಾಲಿಹಾಳದಲ್ಲಿ ನಡೆದಿದೆ. ಗ್ರಾಮಕ್ಕೆ ಗ್ರಾಮ ಪಚಾಯಿತಿಯಿಂದ ಸರಬರಾಜು ಮಾಡಿರುವ ನೀರು...
KSRTC ನಾಲ್ಕೂ ನಿಗಮಗಳ ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ-ಧರಣಿ ಸತ್ಯಾಗ್ರಹ ಆರಂಭ
ಬೆಂಗಳೂರು: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟ ಇಂದಿನಿಂದ (ಜು.29)...