NEWSನಮ್ಮಜಿಲ್ಲೆನಮ್ಮರಾಜ್ಯ

BMTC: ವಾರದ ರಜೆ ವಿಷಯ, ನೌಕರರ ಹಕ್ಕಿನ ಬಗ್ಗೆ ಬೆಳಕು ಚೆಲ್ಲಿದ “ವಿಜಯಪಥ” ವರದಿ ಶ್ಲಾಘಿಸಿದ ಸಂಸ್ಥೆಯ ನಿವೃತ್ತ ವಕೀಲರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: “4ದಿನ ಗೈರಾಗಿ ರಜೆದಿನ ಕೆಲಸ ಮಾಡಿದರೆ ಆ ಉದ್ಯೋಗಿ C-FFOಗೆ ಅರ್ಹ: ಆದರೆ BMTCಯಲ್ಲಿ ಕಾರ್ಮಿಕ ಇಲಾಖೆ ನಿಯಮಗಳಿಗೇ ಕಿಮ್ಮತ್ತಿಲ್ಲ” ಎಂಬ ಶೀರ್ಷಿಕೆಯಡಿ ವಿಜಯಪಥದಲ್ಲಿ ಗುರುವಾರ ವರದಿಯೊಂದು ಪ್ರಟಕವಾಗಿದ್ದು, ಈ ಬಗ್ಗೆ ಸಾರಿಗೆ ಸಂಸ್ಥೆಯ ನಿವೃತ್ತ ವಕೀಲರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಮಹಾನಗರ ಸಾರಿಗೆ ನಿಗಮದಲ್ಲಿ ನೌಕರರಿಗೆ ವಾರದ ರಜೆ ಕೊಡುವುದಕ್ಕೂ ಕಾರ್ಮಿಕ ಇಲಾಖೆಯ ನಿಯಮವನ್ನು ಗಾಳಿಗೆ ತೋರಿ ಅಧಿಕಾರಿಗಳು ನಡೆದುಕೊಳ್ಳುತ್ತಿರುವುದ ಬಗ್ಗೆ ಮತ್ತು ವಾರದ ರಜೆ ಪಡೆಯುವುದು ನೌಕರರ ಹಕ್ಕು ಎಂಬುದನ್ನು ಬಹಳ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಜತೆಗೆ ಕಾನೂನಿ ಬಗ್ಗೆಯೂ ಅರಿವು ಮೂಡಿಸಿದೆ ವಿಜಯಪಥ.

ಭಯದಲ್ಲೇ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಧೈರ್ಯತುಂಬುವ ಕೆಲಸದ ಜತೆಗೆ ತಮ್ಮಿಚ್ಚೆ ಬಂದಂತೆ ನಡೆದುಕೊಳ್ಳುವ ಮೂಲಕ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿರುವ ಅಧಿಕಾರಿಗಳಿಗೂ ಈ ನಿಮ್ಮ ವರದಿ ಎಚ್ಚರಿಕೆಯ ಗಂಟೆಯಾಗಿದೆ. ಇದೇ ರೀತಿ ಪ್ರಾಮಾಣಿಕ ಸೇವೆಯನ್ನು ತಮ್ಮಿಂದ ನಾವು ಸದಾ ಬಯಸುತ್ತೇವೆ ಎಂದು ತಿಳಿಸಿದ್ದಾರೆ.

ಇನ್ನು ವಿಶೇಷವಾಗಿ ಸಾರಿಗೆ ನೌಕರರ ಬಗ್ಗೆ ಬಹಳ ಕಾಳಜಿವಹಿಸಿ, ಅಧಿಕಾರಿಗಳು ಮಾಡುತ್ತಿರುವ ತಪ್ಪುಗಳ ಬಗ್ಗೆಯೂ ಯಾವುದೇ ಮುಲಾಜಿಗೂ ಒಳಗಾಗದೆ ಎಳೆಎಳೆಯಾಗಿ ಕೃತ್ಯವನ್ನು ಬಿಚ್ಚಿಡುವ ನಿಮ್ಮ ಬೆಂಬಲಕ್ಕೆ ನೌಕರರು ನಿಲ್ಲಬೇಕು. ಜತೆಗೆ ನಮ್ಮ ವಿಜಯಪಥಕ್ಕೂ ಆರ್ಥಿಕವಾಗಿ ಬೆನ್ನೆಲುಬಾಗಿ ಪ್ರತಿಯೊಬ್ಬ ನೌಕರರೂ ನಿಂತಾಗ ಇನ್ನಷ್ಟು ಬಲ ಬರಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ನಡೆದುಕೊಳ್ಳಬೇಕು ಎಂವುದೇ ನನ್ನ ಕಳಕಳಿ ಎಂದು ತಿಳಿಸಿದ್ದಾರೆ.

ಗುರುವಾರ (ಮೇ23-2024) ದ ವರದಿಯಲ್ಲೇನಿದೆ?: ನೌಕರರು ಯಾವಾಗ ವಾರದ ರಜೆಗೆ ಅರ್ಹರು ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕೇಂದ್ರ ಕಚೇರಿಯ ಸಿಬ್ಬಂದಿ ಶಾಖೆಯಿಂದ ಅವೈಜ್ಞಾನಿಕವಾಗಿ 2019ರ ಫೆಬ್ರವರಿ 1ರಂದು ಆದೇಶ ಒಂದನ್ನು ಹೊರಡಿಸಲಾಗಿದೆ.

ಇದು ವಾರದ ರಜೆ ತೆಗೆದುಕೊಳ್ಳುವ ನೌಕರರಿಗೆ ಭಾರಿ ತಲೆನೋವಾಗಿ ಪರಿಣಮಿಸಿದೆ. ವಾರದ ರಜೆ ತೆಗೆದುಕೊಳ್ಳಬೇಕು ಎಂದರೆ 6 ದಿನ ಕಡ್ಡಾಯವಾಗಿ ಡ್ಯೂಟಿ ಮಾಡಿರಬೇಕು ಎಂದು ತಮ್ಮ ಮನಸ್ಸಿಗೆ ಬಂದಂತೆ ಆದೇಶ ಹೊರಡಿಸಿರುವ ಸಿಬ್ಬಂದಿ ಶಾಖೆಯ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರ ನಡೆ ಕಾರ್ಮಿಕ ಇಲಾಖೆಯ ನಿಯಮಗಳಿಗೆ ವಿರುದ್ಧವಾಗಿದೆ.

ಅದೇನು ಆದೇಶ: ಘಟಕಗಳಲ್ಲಿ ವಾರದ ರಜೆ/ ಗಳಿಕೆ ರಜೆ ಹಾಗೂ ಪರಿವರ್ತಿತ ರಜೆಗಳನ್ನು ಮಂಜೂರು ಮಾಡುವ ಬಗ್ಗೆ/ ಅರ್ಹತೆ ಬಗ್ಗೆ ಉಲ್ಲೇಖದಂತೆ ಮಾರ್ಗದರ್ಶನ ನೀಡಿದ್ದು, ಉಲ್ಲೇಖಿತ ಪತ್ರದಲ್ಲಿ ನೀಡಿರುವ ಮಾರ್ಗದರ್ಶನಕ್ಕೆ ಸಂಬಂಧಿಸಿದಂತೆ ಈ ಮುಂದುವರಿದ ಮಾರ್ಗದರ್ಶನದಲ್ಲಿ ಇರುವಂತೆ ರಜೆ ನೀಡಬೇಕು ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಅದೇಶ ಹೊರಡಿಸಿದ್ದಾರೆ.

ಅದರಲ್ಲಿ ಒಂದು ವಾರದಲ್ಲಿ ಎಷ್ಟು ದಿನ ಕರ್ತವ್ಯ ನಿರ್ವಹಿಸಿದರೆ ವಾರದ ರಜೆಗೆ ಅರ್ಹರಿರುತ್ತಾರೆ ಎಂದರೆ ನೌಕರರು ವಾರದಲ್ಲಿ 6 ದಿನಗಳು ಕರ್ತವ್ಯ ನಿರ್ವಹಿಸಿದ್ದಲ್ಲಿ ವಾರದ ರಜೆಗೆ ಅರ್ಹರಿರುತ್ತಾರೆ.

2) ವಾರದಲ್ಲಿ 4 ದಿನಗಳು ಕರ್ತವ್ಯ ನಿರ್ವಹಿಸಿ 2 ಅಥವಾ 3 ದಿನಗಳ ಅಧಿಕೃತ ರಜೆಯನ್ನು ಪಡೆದಲ್ಲಿ ವಾರದ ರಜೆಗೆ ಅರ್ಹರಿರುತ್ತಾರೆ. 3) ವಾರದಲ್ಲಿ 4 ದಿನ ಕರ್ತವ್ಯ ನಿರ್ವಹಿಸಿ ನಂತರದ 2 ದಿನಗಳಲ್ಲಿ ಗೈರುಹಾಜರಾದಲ್ಲಿ ವಾರದ ರಜೆಗೆ ಅರ್ಹರಿರುವುದಿಲ್ಲ.

4) ವಾರದಲ್ಲಿ 5 ದಿನ ಕರ್ತವ್ಯ ನಿರ್ವಹಿಸಿ ನಂತರ 1 ದಿನ ಗೈರು ಹಾಜರಾದಲ್ಲಿ ವಾರದ ರಜೆಗೆ ಅರ್ಹರಿರುವುದಿಲ್ಲ. 5) ವಾರದಲ್ಲಿ 3 ದಿನ ಕರ್ತವ್ಯ ನಿರ್ವಹಿಸಿ 2 ದಿನಗಳ ಅಧಿಕೃತ ರಜೆ ಪಡೆದು 1 ದಿನ ಗೈರುಹಾಜರಾದಲ್ಲಿ ಅರ್ಹರಿರುವುದಿಲ್ಲ.

6)ವಾರದಲ್ಲಿ 3ದಿನ ಕರ್ತವ್ಯ ನಿರ್ವಹಿಸಿ 2ದಿನಗಳ ಅಧಿಕೃತ ರಜೆ ಪಡೆದು 1ದಿನ ಗೈರಯಹಾಜರಾದಲ್ಲಿ ವಾರದ ರಜೆಗೆ ಅರ್ಹರಿರುವುದಿಲ್ಲ. 7) ವಾರದಲ್ಲಿ ಒಂದು ದಿನ ಗೈರುಹಾಜರಾದಲ್ಲಿ ವಾರದ ರಜೆಗೆ ಅರ್ಹರಿರುವುದಿಲ್ಲ ಎಂದು ನಿಗಮ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರೆ ಆದೇಶ ಹೊರಡಿಸಿದ್ದಾರೆ.

ಈ ರೀತಿಯ ಆದೇಶ ಹೊರಡಿಸಿದ್ದರಿಂದ ನಿಗಮದ ನೌಕರರಾದ ವಿದ್ಯ ಉಮೇಶ್‌ ಎಂಬುವರು ಆರ್‌ಟಿಐಯಡಿ ಲಿಖಿತವಾಗಿ ನಿಮಗೆ ಕಾರ್ಮಿಕ ಇಲಾಖೆಯಿಂದ ಬಂದಿರುವ ಆದೇಶ ಪ್ರತಿಯನ್ನು ಕೊಡಬೇಕು ಎಂದು ಕೇಳಿದ್ದರು. ಅದಕ್ಕೆ ನಿಗಮದ ಆರ್‌ಟಿಐ ಅಧಿಕಾರಿಗಳು ಇಲ್ಲ ನಮಗೆ ಈ ರೀತಿಯ ಆದೇಶ ಕಾರ್ಮಿಕ ಇಲಾಖೆಯಿಂದ ಬಂದಿಲ್ಲ ಎಂದು ಉತ್ತರ ನೀಡಿದ್ದಾರೆ.

ರಾಜ್ಯದ ಸರ್ಕಾರಿ ನೌಕರರು, ಖಾಸಗಿ ಕಂಪನಿಯ ನೌಕರರು ಮತ್ತು ಸರ್ಕಾರದ ಅಧೀನದಲ್ಲಿರುವ ನಿಗಮ ಮಂಡಳಿಗಳ ನೌಕರರಿಗೆ ಈ ರೀತಿಯ ರಜೆ ಮುಂಜೂರು ಮಾಡುವುದಕ್ಕೆ ಕಾರ್ಮಿಕ ಇಲಾಖೆಯಲ್ಲಿ ಒಂದೊಂದು ನಿಯಮವಿಲ್ಲ. ಆದರೆ ಬಿಎಂಟಿಸಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ತಮಗೆ ಅನಿಸಿದಂತೆ ಇಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡು ಈ ರೀತಿ ನೌಕರರು ಯಾವಾಗ ಅರ್ಹರು ಮತ್ತು ಅರ್ಹರಲ್ಲ ಎಂಬುದನ್ನು ತಮ್ಮ ಮೂಗಿನ ನೇರಕ್ಕೆ ಮಾತ್ರ ಆದೇಶ ಹೊರಡಿಸಿದ್ದಾರೆ.

ಇದು ಕಾರ್ಮಿಕ ಇಲಾಖೆಯಿಂದ ಬಂದಿರುವ ಆದೇಶವಲ್ಲವಾದ್ದರಿಂದ ಈ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಜರುಗಿಸುವುದಕ್ಕೆ ಕಾನೂನಿನಡಿ ಅವಕಾಶವಿದೆ. ಅಲ್ಲದೆ ಯಾವುದೇ ನಿಗಮ ಮಂಡಳಿಗಳು, ಸರ್ಕಾರದ ಇಲಾಖೆಗಳು ಮತ್ತು ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಯಾಗಿದ್ದರು ಅವರು ಒಂದು ದಿನ ಗೈರುಹಾಜರಾದ ದಿನದ ಹಿಂದಿನ ಮತ್ತು ಮುಂದಿನ ದಿನ ವಾರದ ರಜೆ ಇದ್ದರೆ ಆ ವಾರದ ರಜೆ ಪಡೆಯಲು ಅವರಿಗೆ ಹಕ್ಕಿದೆ.

ಆದರೆ ತುರ್ತು ಪರಿಸ್ಥಿತಿಯಲ್ಲಿ ಹೇಳದೆ ಕೇಳದೆ ಗೈರುಹಾಜರಾದರೆ ಅಥವಾ ಅಧಿಕಾರಿಗಳು ಬೇಕು ಬೇಕಂತಲೇ ಮುಂದಾಗಿ ಅವರ ಗಮನಕ್ಕೆ ತಂದರೂ ರಜೆ ಮಂಜೂರು ಮಾಡದೆ ಹೋದರೆ ಅ ಒಂದು ದಿನ ಮಾತ್ರ ಗೈರುಹಾಜರಿ ಎಂದು ತೋರಿಸಬೇಕು. ಅದನ್ನು ಬಿಟ್ಟು ಈ ರೀತಿ ವಾರದ ರಜೆಯನ್ನು ಗೈರುಹಾಜರಿ ಎಂದು ತೋರಿಸುವುದಕ್ಕೆ ಬರುವುದಿಲ್ಲ.

ಇನ್ನು ವಾರದಲ್ಲಿ 4ದಿನ ಗೈರುಹಾಜರಾಗಿ ಬಳಿಕ ವಾರದ ರಜೆಯಲ್ಲೂ ಕೆಲಸ ಮಾಡಿದರೆ ಅಂತ ಉದ್ಯೋಗಿ ಆ ವಾರದ ರಜೆಯಲ್ಲಿ ಕೆಲಸ ಮಾಡಿರುವುದಕ್ಕೆ ಬೇರೊಂದು ದಿನ C/F ತೆಗೆದುಕೊಳ್ಳುವುದಕ್ಕೆ ಅರ್ಹರಿರುತ್ತಾರೆ. ಆದರೆ ಬಿಎಂಟಿಸಿಯಲ್ಲಿ ಕಾರ್ಮಿಕ ಇಲಾಖೆಯ ನಿಯಮಗಳಿಗೆ ವಿರುದ್ಧವಾಗಿ ಈರೀತಿ ವಾರದ ರಜೆ ಪಡೆಯುವ ಅದೇಶವನ್ನು ಹೊರಡಿಸಿರುವುದು ಇದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ವಕೀಲರು ತಿಳಿಸಿದ್ದಾರೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು