NEWSನಮ್ಮಜಿಲ್ಲೆನಮ್ಮರಾಜ್ಯ

BMTC ಎಂಡಿ ವಿರುದ್ಧ ನೌಕರರ ಎತ್ತಿಕಟ್ಟುವ ಹುನ್ನಾರಕ್ಕೆ ಸೊಪ್ಪುಹಾಕದ ನೌಕರರು.!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ನೌಕರರು ಮತ್ತು ಅಧಿಕಾರಿಗಳ ಮಧ್ಯೆ ಭಾರಿ ಕಂದಕವನ್ನೇ ಸೃಷ್ಟಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವಲ್ಲಿ ಸಫಲವಾಗಿರುವ ಸಾರಿಗೆ ನೌಕರರ ಸಂಘಟನೆಯೊಂದರ ಮುಖ್ಯಸ್ಥ ಈಗಲೂ ತಮ್ಮದೇ ನಡೆಯಬೇಕು ಎಂಬ ಹುಂಬತನದಿಂದ ನೌಕರರ ವಿರುದ್ಧ ನೌಕರರನ್ನೇ ಎತ್ತಿಕಟ್ಟುವ ಕೆಲಸ ಮಾಡಲು ಹೊರಟಿದ್ದಾನೆ.

ಕಳೆದ 40 ವರ್ಷಗಳಿಂದಲೂ ನೌಕರರು ಮತ್ತು ಅಧಿಕಾರಿಗಳ ನಡುವೆ ಹೊಂದಾಣಿಕೆಯಾಗದಂತೆ ನೋಡಿಕೊಂಡು ಬಂದಿರುವ ಈತ ನೌಕರರನ್ನು ಅಧಿಕಾರಿಗಳ ವಿರುದ್ಧವೇ ತಿರುಗಿ ಬೀಳುವಂತೆ ಮಾಡಿಕೊಂಡು ತಮಗೆ ಇಷ್ಟ ಬಂದ ರೀತಿಯಲ್ಲಿ ಅಧಿಕಾರಿಗಳನ್ನು ಈವರೆಗೂ ನಡೆಸಿಕೊಂಡಿದ್ದಾನೆ. ಆದರೆ, ಬಿಎಂಟಿಸಿ ಎಂಡಿ ಅವರು ಈತನನ್ನು ನಮ್ಮ ನೌಕರರ ಬಗ್ಗೆ ಮಾತನಾಡಲು ನಿನಗೆ ಯಾವ ಅಧಿಕಾರವಿದೆ ಎಂದು ಪ್ರಶ್ನಿಸಿದ್ದಾರೆ.ಅಲ್ಲದೆ ನಿನಗೆ ಮಾಡುವುದಕ್ಕೆ ಕೆಲಸವಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡು ತಮ್ಮ ಕಚೇರಿಯಿಂದ ಹೊರಹಾಕಿದ್ದಾರೆ.

ಎಂಡಿ ತನ್ನ ಮಾತು ಕೇಳಲಿಲ್ಲ ಎಂದು ಸಿಟ್ಟಿಗೆದ್ದ ಆತ ಎಂಡಿ ವಿರುದ್ಧ ನೌಕರರನ್ನು ಎತ್ತಿಕಟ್ಟಲು ನೋಡಿದ ಆದರೆ, ಅದಕ್ಕೆ ನೌಕರರು ಸೊಪ್ಪುಹಾಕಲಿಲ್ಲ. ಆದರೂ ಎಂಡಿ ವಿರುದ್ಧ ಕತ್ತಿ ಮಸೆಯುತ್ತಿದ್ದಾನೆ. ಆದರೆ ಆ ಕತ್ತಿ ತುಕ್ಕು ಹಿಡಿದಿರುವುದರಿಂದ ಮಸೆದಷ್ಟು ಪುಡಿಪುಡಿಯಾಗುತ್ತಿದೆ. ಹೀಗಾಗಿ ಈಗ ತೆಪ್ಪಗಾಗಿದ್ದಾನೆ.

ಇನ್ನು ಈತನ ಕುತಂತ್ರ ಬುದ್ಧಿ ಅರಿಯದ ಕೆಲ ಅಧಿಕಾರಿಗಳು ಮತ್ತು ನೌಕರರು ಒಬ್ಬರಿಗೊಬ್ಬರೂ ವೈರಿಗಳಂತೆ ಈಗಲೂ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಅಧಿಕಾರಿಗಳು ಮತ್ತು ನೌಕರರ ಮಧ್ಯೆ ಸಂಘರ್ಷ ನಡೆಯುತ್ತಲೇ ಇದೆ. ಈ ನಡುವೆ ಎಚ್ಚೆತ್ತ ಕೆಲ ನೌಕರರು ಈತನ ನೀಚ ಬುದ್ದಿಯನ್ನು ಕಂಡು ದೂರ ಸರಿದಿದ್ದಾರೆ. ಈಗಲೂ ಸರಿಯುತ್ತಿದ್ದಾರೆ.

ಮತ್ತೆ ಹಿಂದನಂತೆ ತನ್ನ ಕುತಂತ್ರವನ್ನು ತಿಳಿದುಕೊಂಡಿರುವ ನೌಕರರನ್ನು ಸದೆ ಬಡಿಯಬೇಕು ಎಂದು ತಮ್ಮ ಪರ ಇರುವ ನೌಕರರನ್ನೇ ತನ್ನ ವಿರುದ್ಧ ತಿರುಗಿಬೀಳುವ ನೌಕರರ ಮೇಲೆ ಚೂ ಬಿಟ್ಟು ಮತ್ತೆ ಗಲಭೆ ಎಬ್ಬಿಸಿ ಅಂದುಕೊಂಡ ಕೆಲಸ ಮಾಡಿಕೊಳ್ಳಲು ನೌಕರರಿಗೆ ನೌಕರರಿಂದಲೇ ಪೊಲೀಸ್‌ ಕೇಸ್‌ ದಾಖಲಿಸುವ ಎಚ್ಚರಿಕೆಯನ್ನು ನೀಡುತ್ತಿದ್ದಾನೆ.

ಆದರೆ, ಈತನ ಕುತಂತ್ರಕ್ಕೆ ತಿರುಗೇಟು ನೀಡಲು ತಮ್ಮ ಬತ್ತಳಿಕೆಯಲ್ಲಿ ಒಳ್ಳೊಳ್ಳೆ ಮೊನಚಾದ ಬಾಣಗಳನ್ನು ಇಟ್ಟುಕೊಂಡು ಆ ನೌಕರರು ಕಾಯುತ್ತಿದ್ದಾರೆ. ಇದನ್ನು ಅರಿತಿರುವ ಈ ಅಂಜುಬರುಕ ತಮ್ಮ ಬಳಿ ಇರುವ ನೌಕರರನ್ನು ಎತ್ತಿಕಟ್ಟುವ ಕೆಲಸ ಮಾಡುವ ಜತೆಗೆ ತಟ್ಟುಯ್ಯುವ ಕೆಲಸವನ್ನು ಮರೆಯದೆ ಮಾಡುತ್ತಿದ್ದಾನೆ.

ಇನ್ನು ನಮಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸರ ಬರೆಸಿ ಮತ್ತೊಬ್ಬ ಸಾರಿಗೆ ನೌಕರನಿಂದಲೇ ಪೊಲೀಸ್‌ ಪ್ರಕರಣ ದಾಖಲಿಸಲು ಮುಂದಾಗಿದ್ದ, ಆದರೆ, ತನ್ನ ವಿರುದ್ಧ ನೌಕರರು ಪೊಲೀಸ್‌ ಕೇಸ್‌ ದಾಖಲಿಸಿದರೆ ತಾನು ಮಾಡಿರುವ ಕಳ್ಳಾಟವೆಲ್ಲ ಬಯಲಿಗೆ ಬರುತ್ತದೆ ಎಂದು ಅರಿತು ತನ್ನಪರ ಇರುವ ನೌಕರನಿಗೆ ಯಾವುದೇ ಕೇಸ್‌ ಹಾಕಬೇಡಿ ಎಂದು ಹೇಳಿದ್ದಾನಂತೆ.

ಸಾರಿಗೆ ನೌಕರರ ಸಂಘಟನೆ ಎಂದರೆ ಅದು ನೌಕರರಿಂದಲೇ ರಚಿತವಾಗಬೇಕು. ಜತೆಗೆ ಕಾಲಕಾಲಕ್ಕೆ ಆ ಸಂಘಟನೆಯ ಪದಾಧಿಕಾರಿಗಳು ಸಂಘದ ಚುನಾವಣೆ ಮೂಲಕ ಬದಲಾಗುತ್ತಿರಬೇಕು. ಆದರೆ, ಇಲ್ಲಿ ಕಳೆದ 40 ವರ್ಷದಿಂದಲೂ ಸಂಘದ ಉನ್ನತ ಪದವಿಗಳು ಒಂದೇ ಜಾತಿಯವರಿಗೆ ಸೀಮಿತ ಮಾಡಿಕೊಂಡು ಉಳಿದ ಜಾತಿಯ ಸದಸ್ಯರನ್ನು ದೂರ ಇಡಲಾಗಿದೆ.

ಇದು ಯಾವ ಕಾನೂನಿನಲ್ಲಿದೆ ಎಂಬುವುದು ಇನ್ನು ಗೊತ್ತಾಗಿಲ್ಲ. ಸಂಘದ ಉನ್ನತ ಪದವಿ ಒಂದೇ ಜಾತಿಯವರಿಗೆ ಹೇಗೆ ಸೀಮಿತವಾಗುತ್ತದೆ? ಏನಾದರೂ ಸಂಘದ ಬೈಲಾದಲ್ಲಿ ಈ ರೀತಿ ನಿಯಮವನ್ನು ಅಳವಡಿಸಲಾಗಿದಯೇ? ಇದಕ್ಕೆ ಈ ವ್ಯಕ್ತಿಯೇ ಉತ್ತರ ಕೊಡಬೇಕು. ಇಲ್ಲ ಅನ್ಯ ಜಾತಿಯವರಿಗೂ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಸೇರಿ ಇತರೆ ಹುದ್ದೆಗಳನ್ನು ನೀಡಿದ್ದೇವೆ ಎಂಬುದನ್ನು ನೌಕರರ ಮುಂದೆ ಸಾಬೀತು ಪಡಿಸಬೇಕು. ಇಲ್ಲ ಈಗಲಾದರೂ ಕೊಡಬೇಕು.

ಈ ಬಗ್ಗೆ ಪ್ರಶ್ನಿಸುವ ಸಂಘದ ಸದಸ್ಯರನ್ನು ಬೆದರಿಸುವ, ಅವರ ವಿರುದ್ಧ ನೌಕರರನ್ನೇ ಎತ್ತಿಕಟ್ಟುವ ಕೆಲಸ ಮಾಡಿ ಸಂಘಟನೆಯಿಂದ ಹೊರಹಾಕಲಾಗುವುದು ಎಂದು ದಮ್ಕಿಕೂಡ ಹಾಕಿಸುತ್ತಿದ್ದಾನೆ. ಏಕೆ ಈತ ಆ ಸದಸ್ಯರು ಪ್ರತಿ ತಿಂಗಳು ತನ್ನ ವೇತನಲ್ಲಿ 5 ರೂ. ಕಟ್ಟುತ್ತಿಲ್ಲವೇ? ಇದನ್ನು ಕೊಡುತ್ತಿರುವುದು ಏತಕ್ಕೆ ನೌಕರರಿಗೆ ಸಮಸ್ಯೆ ಆದಾಗ ಸಂಘಟನೆ ನೆರವಿಗೆ ಬಂದು ಸಮಸ್ಯೆ ಪರಿಹರಿಸಲಿ ಅಂತ ಅಲ್ಲವೇ? ಆದರೆ, ಕಳೆದ 40 ವರ್ಷದಿಂದ ಸಮಸ್ಯೆ ಪರಿಹರಿಸುವ ಬದಲಿಗೆ ಇನ್ನಷ್ಟು ಸಮಸ್ಯೆಗೆ ನೌಕರರನ್ನು ದೂಡಿ ಈಗ ಬೇರೆ ಸಂಘಟನೆಗಳ ಮೇಲೆ ಆ ಗೂಬೆ ಕೂರಿಸಲು ಹೊರಟಿದ್ದಾನೆ.

ಇದರ ಬಗ್ಗೆ ನೌಕರರು ತಿಳಿದು ಕೊಂಡು ಮುಂದೆ ತಮಗೆ ಬೇಕಾದ ನಾಯಕನನ್ನು ತಾವೆ ಆಯ್ಕೆ ಮಾಡುವ ಮೂಲಕ ಸಂಘಟನೆಗೆ ಬಲ ನೀಡಬೇಕಿದೆ. ಇಲ್ಲದಿದ್ದರೆ ಇಂಥವರಿಂದ ಸಂಘಟನೆಯ ಬಲವು ಕುಂದುವ ಜತೆಗೆ ನೌಕರರು ಮತ್ತು ಅಧಿಕಾರಿಗಳು ಕೂಡ ಸಮಸ್ಯೆಗೆ ಸಿಲುಕಬೇಕಾಗುತ್ತದೆ. ಈ ಬಗ್ಗೆಎ ನೌಕರರು ಎಷ್ಟರ ಮಟ್ಟಿಗೆ ಎಚ್ಚೆತ್ತುಕೊಳ್ಳುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು