ದೇಶ-ವಿದೇಶನಮ್ಮರಾಜ್ಯಸಿನಿಪಥ

ಬಾಲಿವುಡ್‌ ಬೆಡಗಿ ಪ್ರಯಾಂಕಾ ಚೋಪ್ರಾ ಹೊಕ್ಕಳಲ್ಲಿದೆ ₹2.70 ಕೋಟಿ ಮೌಲ್ಯದ ಡೈಮಂಡ್ ಪಿನ್

ವಿಜಯಪಥ ಸಮಗ್ರ ಸುದ್ದಿ

ಮುಂಬೈ: ಬಾಲಿವುಡ್‌ ಬೆಡಗಿ ಪ್ರಯಾಂಕಾ ಚೋಪ್ರಾ ತನ್ನ ಹೊಕ್ಕಳಿನಲ್ಲಿ 2ಕೋಟಿ 70 ಲಕ್ಷ ರೂಪಾಯಿ ಮೌಲ್ಯದ ವಜ್ರದ ರಿಂಗ್‌ ಧರಿಸಿಕೊಂಡು ಸ್ಟೈಲೀಶ್ ಲುಕ್‌ನಲ್ಲಿ ಫ್ಯಾನ್ಸ್ ಗಮನ ಸೆಳೆದಿದ್ದಾರೆ.

ಮಹೇಶ್ ಬಾಬು ನಟನೆಯ ಸಿನಿಮಾಕ್ಕಾಗಿ  ಪ್ರಿಯಾಂಕಾ ಚೋಪ್ರಾ ಭಾರತಕ್ಕೆ ಬಂದಿದ್ದಾರೆ. ಮುಂಬೈ ವಿಮಾನ ನಿಲ್ದಾಣದಿಂದ ಹೊರ ಬರುತ್ತಿದ್ದ ಅವರ ಹೊಕ್ಕಳನ್ನು ಗಮನಿಸಿದ ಸಿನಿ ಪತ್ರಕರ್ತರಿಗೆ ಅದರಲ್ಲಿ ಧರಿಸಿದ ಡೈಮಂಡ್ ರಿಂಗ್ ಗಮನ ಸೆಳೆದಿದೆ. ಈ ವೇಳೆ ಒಬ್ಬರು ಅದರ ಮೌಲ್ಯ ತಿಳಿದುಕೊಳ್ಳುವ ಪ್ರಯತ್ನ ಮಾಡಿದಾಗ ಅವರು  2.7 ಕೋಟಿ ರೂ. ಮೌಲ್ಯದ ರಿಂಗ್‌ ಧರಿಸಿದ್ದಾರೆ ಎಂಬುವುದು ಗೊತ್ತಾಗಿದೆ. ಸದ್ಯ ಈ ವಿಚಾರ ಬಾಲಿವುಡ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಏರ್‌ಪೋರ್ಟ್‌ನಿಂದ ಹೊರಬರುವಾಗ ಪ್ರಿಯಾಂಕಾ ಚೋಪ್ರಾ ಬ್ಲ್ಯಾಕ್ ಕೋ-ಆರ್ಡ್ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸ್ಟೈಲೀಶ್ ಲುಕ್ ಫ್ಯಾನ್ಸ್ ಗಮನ ಸೆಳೆದಿದೆ. ಅದರಲ್ಲೂ ಪ್ರಿಯಾಂಕಾ ಹೊಕ್ಕಳಿಗೆ ಧರಿಸಿದ ಬೆಲ್ಲಿ ಬಟನ್ ಡೈಮಂಡ್ ಪಿನ್, ಅದರ ಬೆಲೆ ಕೇಳಿ ಗಾಬರಿಯಾಗಿದ್ದಾರೆ. ಇದರ ಬೆಲೆ ಬರೋಬ್ಬರಿ 2.7 ಕೋಟಿ ರೂ.ಗಳ ಎಂದು ಕೇಳಿಯೇ ಅಭಿಮಾನಿಗಳು ದಂಗಾಗಿದ್ದಾರೆ.

ಇನ್ನೂ ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾದಲ್ಲಿ ಲೀಡ್ ಹೀರೋಯಿನ್ ಆಗಿ ನಟಿಸುತ್ತಿದ್ದು, ಹಿಂದೆಂದೂ ನಟಿಸಿರದ ವಿಭಿನ್ನ ಪಾತ್ರದಲ್ಲಿ ಪ್ರಿಯಾಂಕಾ ಮಿಂಚಲಿದ್ದಾರೆ ಎಂದು ಸಿನಿ ಬಳಗ ಹೇಳಿಕೊಂಡಿದೆ.

ಈಗಾಗಲೇ ಹೈದರಾಬಾದ್, ಒಡಿಶಾ, ವಿಶಾಖಪಟ್ಟಣಂ ಸೇರಿದಂತೆ ಹಲವೆಡೆ ಚಿತ್ರೀಕರಣದಲ್ಲಿ ನಟಿ ಭಾಗಿಯಾಗಿದ್ದಾರೆ. ಚಿತ್ರೀಕರಣ ಭರದಿಂದ ನಡೆಯುತ್ತಿದೆ.‌ ಸಿನಿಮಾದ ಹೆಚ್ಚಿನ ಅಪ್‌ಡೇಟ್‌ ಕೊಡುವುದಕ್ಕೆ ರಾಜಮೌಳಿ ಮತ್ತು ಮಹೇಶ್ ಬಾಬು ತಂಡ ಸಜ್ಜಾಗುತ್ತಿದ್ದು ಅತೀ ಶೀಘ್ರದಲ್ಲೇ ಅದೂ ಕೂಡ ಹೊರಬೀಳಲಿದೆ.

ವಿಜಯಪಥ - vijayapatha
Deva
the authorDeva

Leave a Reply

error: Content is protected !!