CRIMEನಮ್ಮಜಿಲ್ಲೆನಮ್ಮರಾಜ್ಯ

KKRTC: ಕಲಬುರಗಿ 2ರ ವಿಭಾಗೀಯ ನಿಯಂತ್ರಣಾಧಿಕಾರಿ ಲಂಚಾವತಾರಕ್ಕೆ ಬೇಸತ್ತು ಸ್ವಯಂ ನಿವೃತ್ತಿ ಪಡೆದ ಸಿಬ್ಬಂದಿ

ವಿಜಯಪಥ ಸಮಗ್ರ ಸುದ್ದಿ
  • VRS ಪಡೆದರೂ ನೆಮ್ಮದಿಕಳೆದುಕೊಂಡು ಇನ್ನೂ ಡಿಸಿ ಕಿರುಕುಳದಲ್ಲೇ ಹೆಣಗಾಟ
  • ಸಂಸ್ಥೆಯಿಂದ ಬರಬೇಕಾದ ಸೌಲಭ್ಯ ಕೊಡದೆ ಕಾಟ ಕೊಡುತ್ತಿರುವ ಡಿಸಿ ಸಿದ್ದಪ್ಪ ಗಂಗಾಧರ್‌

ಕಲಬುರಗಿ: ಕಲ್ಯಾಣ ಕರ್ನಾಕಟ ರಸ್ತೆ ಸಾರಿಗೆ ನಿಗಮದ ಕಲಬುರಗಿ 2ರ ವಿಭಾಗೀಯ ನಿಯಂತ್ರಣಾಧಿಕಾರಿಯ ಹಣ ದಾಹಕ್ಕೆ ನೌಕರನೊಬ್ಬ ಮನನೊಂದು ಮಾನಸಿಕ ಖಿನ್ನತೆಗೆ ಒಳಗಾಗಿ ಆಸ್ಪತ್ರೆ ಸೇರಿರುವ ಘಟನೆ ಬೆಳಕಿಗೆ ಬಂದಿದೆ.

ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದಪ್ಪ ಗಂಗಾಧರ್‌ನ ಹಣ ದಾಹಕ್ಕೆ ವಿಭಾಗದ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ರಹಿಮಾನ್‌ ಮಸ್ಕಿ ಎಂಬುವರು ಬಲಿಯಾಗಿದ್ದಾರೆ.

ಇತ್ತ ಈ ಡಿಸಿಯ ಕಿರುಕುಳ, ಹಿಂಸೆಯನ್ನು ಸಹಿಸಲಾಗದೆ ರಹಿಮಾನ್‌ ಮಸ್ಕಿ 15 ಜನವರಿ 2025ಕ್ಕೆ ಅನ್ವಯವಾಗುವಂತೆ ಸ್ವಯಂ ನಿವೃತ್ತಿ (VRS) ಪಡೆದುಕೊಂಡಿದ್ದಾರೆ. ಸ್ವಯಂ ನಿವೃತ್ತಿ ಪಡೆದು 2 ತಿಂಗಳ ಮೇಲಾದರೂ ಅವರಿಗೆ ನಿವೃತ್ತಿ ನಂತರ ಸಿಗಬೇಕಿರುವ ಪಿಎಫ್‌, ಗ್ರಾಚ್ಯುಟಿ, ಇಎಲ್‌ ಹಣ ಸೇರಿದಂತೆ ವಿವಿಧ ಸೌಲಭ್ಯಗಳ ಹಣವನ್ನು ಮಂಜೂರು ಮಾಡದೆ ಕಾಡುತ್ತಿದ್ದಾನೆ ಈ ಭ್ರಷ್ಟ ಅಧಿಕಾರಿ ಸಿದ್ದಪ್ಪ.

ಇದಕ್ಕೂ ಮುನ್ನಾ ಅಂದರೆ ರಹಿಮಾನ್‌ ಮಸ್ಕಿ ಅವರು ಸ್ವಯಂ ನಿವೃತ್ತ ಪಡೆಯುವುಕ್ಕೂ ಮುನ್ನಾ ಹಿರಿಯ ಸಹಾಯಕರಾಗಿ ಬಡ್ತಿ ಹೊಂದಬೇಕಿತ್ತು. ಆ ಬಡ್ತಿ ನೀಡುತ್ತೇನೆ, ಅದಕ್ಕಾಗಿ 2.25 ಲಕ್ಷ ರೂಪಾಯಿ ನೀನು ಕೊಡಬೇಕು ಎಂದು ಹೇಳಿ ಆ ಹಣವನ್ನೂ ಪಡೆದುಕೊಂಡಿದ್ದಾನೆ ಈ ಭ್ರಷ್ಟ.

ಭ್ರಷ್ಟ ಸಿದ್ದಪ್ಪನ ಜತೆಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ಅವರ ಪಿಎ ಪ್ರಭು ಕೂಡ ಕೈ ಜೋಡಿಸಿದ್ದಾನೆ. ಪ್ರಭು ಕೂಡ ಡಿಸಿಗೆ ಹಣ ಕೊಡು ನಿನಗೆ ಬಡ್ತಿ ಕೊಡುತ್ತಾರೆ ಈ ಬಗ್ಗೆ ನಾನು ಕೂಡ ಮಾತನಾಡುತ್ತೇನೆ ಎಂದು ರಹಿಮಾನ್‌ಗೆ ಹೇಳಿ ಲಂಚ ಕೊಡುವುದಕ್ಕೆ ಪ್ರಚೋದನೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಮೊದಲೇ ಲಂಚ ಪಡೆಯುವುದೇ ಅಪರಾಧ ಆ ಲಂಚ ಪಡೆದ ಮೇಲಾದರೂ ಆತನಿಗೆ ಬಡ್ತಿ ಕೊಡಬೇಕಿತ್ತು. ಆದರೆ, ಆ ಕೆಲಸ ಕೂಡ ಮಾಡದೆ ಮತ್ತೆ ಕಿರುಕುಳ ನೀಡಿದ್ದಾನೆ ಡಿಸಿ ಸಿದ್ದಪ್ಪ. ಜತೆಗೆ ರಹಿಮಾನ್‌ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದಾಗ ಅವರಿಗೆ ಬರಬೇಕಿದ್ದ 1ತಿಂಗಳ ವೇತನವನ್ನು ಕೊಡದೆ ಗೈರುಹಾಜರಿ ತೋರಿಸಿ ಇವನ ಅಪ್ಪನ ಮನೆಯಿಂದ ಕೊಡುವ ರೀತಿಯಲ್ಲಿ ಕಿರುಕುಳ ನೀಡಿದ್ದಾನೆ.

ಇಷ್ಟೆಲ್ಲ ಆದ ಮೇಲೆ ನನಗೆ ಇವರ ಸಹವಾಸವೇ ಬೆಡ ಎಂದು ಸ್ವಯಂ ನಿವೃತ್ತಿಯನ್ನು 15ನೇ ಜನವರಿ 2025ರಿಂದ ಅನ್ವಯವಾಗುವಂತೆ ಪಡೆದುಕೊಂಡಿದ್ದರೂ ರಹಿಮಾನ್‌ಗೆ ನಿವೃತ್ತಿ ನಂತರ ಬರಬೇಕಿರುವ ಸೌಲಭ್ಯಗಳನ್ನು ಕೊಡದೆ ಈವರೆಗೂ ಕಾಡಿಸಿಕೊಂಡೆ ಬಂದಿದ್ದಾನೆ ಡಿಸಿ ಸಿದ್ದಪ್ಪ ಗಂಗಾಧರ್‌.

ಈ ಭ್ರಷ್ಟನಿಗೆ ಈತನ ಪಿಎ ರವಿ ಕುಲಕರಣಿ, ಎಂಡಿ ಪಿಎ ಪ್ರಭು ಸಾಥ್‌ ನೀಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದರೆ ಒಂದು ಆಶ್ಚರ್ಯ ಎಂದರೆ ಇಷ್ಟೆಲ್ಲ ಭ್ರಷ್ಟಾಚಾರ, ನೌಕರರಿಗೆ ಕಿರುಕುಳ ಕೊಡುತ್ತಿರುವುದು ಈ ಎಂಡಿ ರಾಚಪ್ಪ ಅವರಿಗೆ ಗೊತ್ತಾಗುತ್ತಿಲ್ಲವೆ. ಒಂದು ವೇಳೆ ಗೊತ್ತಿದ್ದರು ಜಾಣ ಮೌನ ವಹಿಸಿದ್ದಾರೆಯೇ ಎಂಡಿ ಎಂಬ ಅನುಮಾನ ಮೂಡುತ್ತಿದೆ.

ಇಂಥ ಭ್ರಷ್ಟರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಲ್ಲಿ ಇರುವಾಗ ಅಂದರೆ ಇಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿರುವಾಗ ಕಾಪಾಡುವವರು ಯಾರು ಎಂಬುವುದೇ ಒಂದು ದೊಡ್ಡ ಪ್ರಶ್ನೆಯಾಗಿದೆ. ಇಂಥ ಅಧಿಕಾರಿಗಳ ವಿರುದ್ಧ ಸಂಬಂಧಪಟ್ಟ ಎಂಡಿ, ಸಾರಿಗೆ  ಸಚಿವ ರಾಮಲಿಂಗಾರೆಡ್ಡಿ ಅವರು ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಗಮನ ಹರಿಸಿ ಭ್ರಷ್ಟರಿಗೆ ಕಾನೂನಿನ ಪ್ರಕಾರ ತಕ್ಕ ಶಿಕ್ಷೆಗೆ ಗುರಿಪಡಿಸಬೇಕಿದೆ.

Deva
the authorDeva

Leave a Reply

error: Content is protected !!
Latest news
ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತರಿಗೆ 6 ಕೋಟಿ ರೂ. ಭಾರಿ ನಗದು ಬಹುಮಾನ: ಕ್ರೀಡಾಪಟುಗಳ ಬದುಕಿಗೆ ಭರವಸೆ ನೀಡಿದ ಸಿಎಂ BMTC: ಮಹಿಳಾ ಕಂಡಕ್ಟರ್‌ಗಳಿಗೆ ಶೇ.33ರಷ್ಟು ಮುಂಬಡ್ತಿ ಮೀಸಲಾತಿ ಅಸಾಧ್ಯ- ಸಂಸ್ಥೆ ನಿಯಮದಲ್ಲೂ ಇಲ್ಲ ಅವಕಾಶ ಎಂದ ಸಿಪಿಎ... ಶಕ್ತಿಯೋಜನೆಗಾಗಿ ರಾಜಸ್ಥಾನದ ಆಧಾರ್‌ ಕಾರ್ಡ್‌ಗೆ ಬೆಂಗಳೂರು ನಿವಾಸಿ ಎಂಬ ನಕಲಿ ಕಾರ್ಡ್‌ ಸೃಷ್ಟಿಸಿಕೊಂಡು ಮಹಿಳೆ ಓಡಾಟ! BMTC ಘಟಕ 29: ಡಿಪೋ ಆವರಣದಲ್ಲಿ ಎಲೆಕ್ಟ್ರಿಕ್ ಬಸ್ ಡಿಕ್ಕಿ- ಚಾಲಕನಿಗೆ ತೀವ್ರ ಗಾಯ ತಿ.ನರಸೀಪುರ: ಯುವಕನ ಕಿರುಕುಳದಿಂದ ಮದುವೆ ನಿಶ್ಚಯವಾಗಿದ್ದ ಯುವತಿ ಜತೆಗೆ ಅಪ್ಪಅಮ್ಮ ಆತ್ಮಹತ್ಯೆ ತಿ.ನರಸೀಪುರ: ವಿದ್ಯುತ್‌ ಖಾಸಗೀಕರಣ ವಿರೋಧಿಸಿ ರೈತರ ಪ್ರತಿಭಟನೆ ತಹಸೀಲ್ದಾರ್‌ಗೆ ಮನವಿ ಚಾಲನೆಯಲ್ಲಿದ್ದ ಬಸ್‌ನ ಸ್ಟೇರಿಂಗ್‌ ಹಿಡಿದ ಕುಡುಕ- ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಬಸ್‌ ಡಿಕ್ಕಿ, 11 ಮಂದಿಗೆ ಗಂಭೀರ... KSRTC: ಶೇ.44 ರಷ್ಟು ಬಸ್‌ ಪ್ರಯಾಣ ದರ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಗೃಹಜ್ಯೋತಿಯಿಂದ ಸರ್ಕಾರಿ ನೌಕರರ ಹೊರಗಿಡಲು ಸರ್ಕಾರದ ಚಿಂತನೆ ಸರ್ಕಾರಿ ನೌಕರಿ ಮಹಿಳೆಯರಿಗೆ ಇನ್ನು ಮುಂದೆ ಸಿಗಲ್ವ ಶಕ್ತಿ ಯೋಜನೆಯ ಉಚಿತ ಪ್ರಯಾಣ?