ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಪ್ರತಿ ತಿಂಗಳು ಕೆಲವು ಅಧಿಕಾರಿ/ಸಿಬ್ಬಂದಿಗಳು ಎಚ್‌ಆರ್‌ಎಂಎಸ್ ತಂತ್ರಾಂಶದ ಮೂಲಕ ರಜೆ ಅರ್ಜಿ ಸಲ್ಲಿಸದೆ ತಿಂಗಳ ಕೊನೆಯಲ್ಲಿ Backend updation ಮಾಡಲಾಗುತ್ತಿದೆ. ಹೀಗಾಗಿ ಇದನ್ನು ಬಿಡಬೇಕು ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.
ಈ ಸಂಬಂಧ ಸೂಕ್ತಾಧಿಕಾರಿಗಳು 03.02.2025ರಂದು ಆದೇಶ ಹೊರಡಿರುವ ಹಿನ್ನೆಲೆಯಲ್ಲಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಎಲ್ಲ ಹಿರಿಯ/ ವಿಭಾಗೀಯ ನಿಯಂತ್ರಣಾಧಿಕಾರಿಗಳು/ ಪ್ರಾಂಶುಪಾಲರು, ಕಾರ್ಯ ವ್ಯವಸ್ಥಾಪಕರು/ ಮುದ್ರಣ ನಿಯಂತ್ರಣಾಧಿಕಾರಿಗಳಿಗೆ ಈ ಆದೇಶ ಹೊರಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ. ಕೇಂದ್ರ ಕಚೇರಿ ಹಾಗೂ ವಿಭಾಗಗಳಲ್ಲಿ ಎಚ್‌ಆರ್‌ಎಂಎಸ್ ತಂತ್ರಾಂಶದ ಮೂಲಕ ಅಧಿಕಾರಿ/ ನೌಕರರ ಜನವರಿ-25ರ ಮಾಹೆಯ ಹಾಜರಾತಿಯನ್ನು ಸೂಕ್ತಾಧಿಕಾರಿಗಳು ಗಮನಿಸಿದ್ದಾರೆ.
ಪ್ರತಿ ತಿಂಗಳು ಕೆಲವು ಅಧಿಕಾರಿ/ಸಿಬ್ಬಂದಿಗಳು ಎಚ್‌ಆರ್‌ಎಂಎಸ್ ತಂತ್ರಾಂಶದ ಮೂಲಕ ರಜೆ ಅರ್ಜಿಯನ್ನು ಸಲ್ಲಿಸದೆ ತಿಂಗಳ ಕೊನೆಯಲ್ಲಿ Backend updation ಮಾಡಲಾಗುತ್ತಿದೆ ಹಾಗೂ ವಿಭಾಗ/ಘಟಕಗಳಲ್ಲಿ ನೌಕರರ ಹಾಜರಾತಿಯಲ್ಲಿ A ಮತ್ತು L ಎಂದು ನಮೂದಿಸಿ ತದನಂತರ ಅದನ್ನು ರಜೆ ಎಂದು ಬದಲಾಯಿಸುತ್ತಿರುವುದು ಕಂಡುಬಂದಿದೆ.
ಹೀಗಾಗಿ ತುರ್ತು ಮತ್ತು ಅತಿ ಜರೂರು ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಪ್ರಕರಣಗಳಲ್ಲಿ A ಮತ್ತು L ಎಂದು ಹಾಜರಾತಿಯಲ್ಲಿ ನಮೂದಿಸಿರುವುದನ್ನು Backend updation ನಲ್ಲಿ ರಜೆ ಎಂದು ಮಾಡಬಾರದು ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.
ಇನ್ನು Android ಮೊಬೈಲ್ ಹೊಂದಿಲ್ಲದವರು ಹಾಗೂ ಅನ್ಯ ಕರ್ತವ್ಯ ನಿಯೋಜನೆ ಮೇಲೆ ಕಚೇರಿಯಿಂದ ಹೊರಗೆ ಉಳಿಯುವ ಸಂದರ್ಭ ಹೊರತುಪಡಿಸಿ, ಇನ್ನುಳಿದ ಸಮಯದಲ್ಲಿ Web check-in ಮಾಡತಕ್ಕದ್ದಲ್ಲ. ಕಡ್ಡಾಯವಾಗಿ ಕಚೇರಿಗೆ ಬಂದ ನಂತರವೇ “ಸಾರಿಗೆ ಮಿತ್ರ” ಮೊಬೈಲ್ APP ಮುಖಾಂತರ ಹಾಜರಾತಿ ನಮೂದಿಸಬೇಕು ಎಂದು ತಿಳಿಸಿದ್ದಾರೆ.
Web check-in ವ್ಯವಸ್ಥೆ ದುರುಪಯೋಗ ಮಾಡಿಕೊಂಡಿರುವುದು ಗಮನಕ್ಕೆ ಬಂದಲ್ಲಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದೆಂದು ಈ ಮೂಲಕ ತಿಳಿಸಲು ಸೂಕ್ತಾಧಿಕಾರಿಗಳಿಂದ ನಿರ್ದೇಶಿತನಾಗಿದ್ದೇನೆ ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶದಲ್ಲಿ ಎಚ್ಚರಿಕೆ ನೀಡಿದ್ದಾರೆ.