NEWSದೇಶ-ವಿದೇಶರಾಜಕೀಯ

ವಿದೇಶಿ ಗಣ್ಯರೆದುರು ಅಚ್ಚೆ ದಿನ್‌ ಮುಚ್ಚಿಡಲು ₹4200 ಕೋಟಿ ಖರ್ಚು ಮಾಡಿದ ಕೇಂದ್ರ: ಕಾಂಗ್ರೆಸ್‌ ವ್ಯಂಗ್ಯ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಜಿ20 ಸಮಾವೇಶಕ್ಕೆ ಬರುತ್ತಿರುವ ವಿದೇಶಿ ಗಣ್ಯರಿಗೆ ಮೋದಿ‘ಜಿ’ ಅವರ ಅಭಿವೃದ್ಧಿಯ ಅಚ್ಚೆ ದಿನಗಳನ್ನು ಮುಚ್ಚಿಡಲು ಪರದೆ ಹಾಕಲಾಗಿದೆ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌ ಬಡವರನ್ನು, ಬಡತನವನ್ನು ನೋಡದಿದ್ದರೆ ಆಯ್ತು ಬಡತನ ನಿರ್ಮೂಲನೆ ಮಾಡಿದಂತಾಗುತ್ತದೆ ಎಂಬುದು ‘ಬಡ ತಾಯಿಯ ಮಗನ’ (ನರೇಂದ್ರ ಮೋದಿ) ನಂಬಿಕೆಯಾಗಿದೆ ಎಂದು ಅಚ್ಚರಿಯನ್ನು ವ್ಯಕ್ತಪಡಿಸಿದೆ ಕಾಂಗ್ರೆಸ್‌.

ಇನ್ನು ದೆಹಲಿಯ ಸ್ಲಮ್‌ಗಳಿಗೆ ಪರದೆ ಹಾಕಿರುವ ಕೇಂದ್ರ ಸರ್ಕಾರ ಜಿ20 ಸಮಾವೇಶಕ್ಕಾಗಿ ದೆಹಲಿಯ ಸುಂದರೀಕರಣಕ್ಕೆ ಮಾಡಿದ ಖರ್ಚು ಬರೋಬ್ಬರಿ ₹4,200 ಕೋಟಿ ಎಂದು ವಿವರಿಸಿದೆ.

ಜಿ20 ಸಮಾವೇಶಕ್ಕಾಗಿ ಬಜೆಟ್ಟಿನಲ್ಲಿ ಮೀಸಲಿಟ್ಟ ಮೊತ್ತ ₹990 ಕೋಟಿ. ಅತಿಥಿ ಸತ್ಕಾರಕ್ಕಾಗಿ ಮಾಡಿದ ಖರ್ಚು ₹2,700 ಕೋಟಿ. ಹೀಗೆ ದೆಹಲಿಯ ಸುಂದರೀಕರಣಕ್ಕೆ ₹4,200 ಕೋಟಿ ಖರ್ಚು ಮಾಡಿದೆ. ಈ ಎಲ್ಲಾ ಖರ್ಚಿನಲ್ಲಿ ಬಡವರನ್ನು ಮುಚ್ಚಿಡುವ ಬದಲು ಬಡತನವನ್ನೇ ನಿರ್ಮೂಲನೆ ಮಾಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿದೆ.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ