Please assign a menu to the primary menu location under menu

NEWSಕೃಷಿದೇಶ-ವಿದೇಶ

ನಾಳೆ ಫೆ.1ರಂದು ಕೇಂದ್ರ ಬಜೆಟ್ ಮಂಡನೆ: ರಾಜ್ಯದ ರೈತರ ನಿರೀಕ್ಷೆ, ಒತ್ತಾಯಗಳೇನು?

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಕೇಂದ್ರ ಸರ್ಕಾರ 2025-26 ನೇ ಸಾಲಿನ ಬಜೆಟ್ ಅನ್ನು ನಾಳೆ ಅಂದರೆ ಫೆ.1ರಂದು ಮಂಡನೆ ಮಾಡುತ್ತಿದೆ. ಈ ವೇಳೆ ಬಜೆಟ್‌ನಲ್ಲಿ ರಾಜ್ಯದ ರೈತರ ಒತ್ತಾಯಗಳು ಏನೆಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

ಬಜೆಟ್ ಮಂಡನೆಯಲ್ಲಿ ರೈತರ ಒತ್ತಾಯಗಳು: ಎಲ್ಲ ಕೃಷಿ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ಶಾಸನ ಬದ್ಧ ಖಾತ್ರಿ ಕಾನೂನು ಜಾರಿ ಆಗಬೇಕು. ಆಂಧ್ರಪ್ರದೇಶದಲ್ಲಿ 2023ರಲ್ಲಿ ಈ ಕಾಯ್ದೆ ಜಾರಿ ಮಾಡಲು ಬಿಲ್ ಪಾಸ್ ಮಾಡಿದ್ದಾರೆ ಅದೇ ರೀತಿ ಮಾಡಲಿ.

ಎಲ್ಲ ಬೆಳೆಗಳಿಗೂ ಬೆಳೆ ವಿಮೆ ಜಾರಿಯಾಗಬೇಕು. ರೈತರ ಪ್ರಕೃತಿ ವಿಕೋಪ ಬೆಳೆನಷ್ಟಕ್ಕೆ ವಿಮೆ ಪರಿಹಾರ ಸಿಗುವಂತಾಗಬೇಕು. ಕೃಷಿ ಸಾಲ ನೀತಿ ಬದಲಾಗಬೇಕು. ರೈತರ ಭೂಮಿ ಮೌಲ್ಯಕ್ಕೆ ಶೇ.75 ರಷ್ಟು ಸಾಲ ಸಿಗುವಂತೆ ಆಗಬೇಕು. ಕನಿಷ್ಠ 5 ಲಕ್ಷ ರೂ. ಕೃಷಿ ಆಧಾರ ರಹಿತ ಬಡ್ಡಿರಹಿತ ಸಾಲ ಸಿಗುವಂತಾಗಬೇಕು.

ಕಬ್ಬಿನ ಎಫ್ ಆರ್ ಪಿ ದರ ರೈತನ ಹೊಲದಲ್ಲಿನ ದರ ಎಂದು ಬದಲಾಗಬೇಕು. ಸಕ್ಕರೆ ಕಾರ್ಖಾನೆಗಳು ಸಕ್ಕರೆ ಇಳುವರಿ ಮೋಸ ತಪ್ಪಿಸಲು ವಿಶೇಷ ನೀತಿ ಜಾರಿ ಆಗಬೇಕು. ಕಬ್ಬಿಗೆ ಬೆಂಕಿ ಬಿದ್ದು ಸುಟ್ಟು ಹೋದ ಕಬ್ಬಿಗೆ ಕಾರ್ಖಾನೆಗಳು ಕಬ್ಬಿನ ಹಣದಲ್ಲಿ ಶೇ. 25ರಷ್ಟು ಕಟಾವು ಮಾಡುವುದನ್ನು ತಪ್ಪಿಸಬೇಕು.

ಕೃಷಿ ಉತ್ಪನ್ನಗಳಿಗೆ ಎಪಿಎಂಸಿಯಲ್ಲಿ ಅಡಮಾನ ಸಾಲ ಯೋಜನೆ ಸದೃಢಗೊಳಿಸಬೇಕು 500 ಕೋಟಿ ಆವರ್ತನಿಧಿ ಇಡಬೇಕು. ಕೃಷಿಗೆ ಬಳಸುವ ಕೀಟನಾಶಕ ರಸಗೊಬ್ಬರ, ಹನಿ ನೀರಾವರಿ ಉಪಕರಣಗಳು ಟ್ರ್ಯಾಕ್ಟರ್ ಬಿಡಿಭಾಗಗಳ ಜಿಎಸ್ಟಿ ತೆರಿಗೆ ರದ್ದುಗೊಳಿಸಬೇಕು.

ಕಳಪೆ ಬೀಜ ಗೊಬ್ಬರ ನರ್ಸರಿ ಸಸಿಗಳು ಕೀಟನಾಶಕ ಮಾರಾಟ ಮಾಡುವವರಿಗೆ ಜಾಮೀನು ರಹಿತ ಕಠಿಣ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿ ಮಾಡಬೇಕು. ಮಹಿಳಾ ಸ್ವಸಹಾಯ ಸಂಘಗಳಿಗೆ ಮೈಕ್ರೋ ಫೈನಾನ್ಸ್ ಗಳು ನೀಡುವ ಸಾಲ ವಸೂಲಾತಿ ಕಿರುಕುಳ ನಿಲ್ಲಿಸಲು ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಅಡಿಯಲ್ಲಿ ಕಠಿಣ ಕಾನೂನು ಜಾರಿ ಮಾಡಬೇಕು.

ದೇಶದಲ್ಲಿ ಆನ್ಲೈನ್ ಗೇಮ್‌, ಜೂಜಾಟ ನಿಷೇಧ ಮಾಡಬೇಕು. ಪ್ರಾಣ ಕಳೆದುಕೊಳ್ಳುತ್ತಿರುವ ಯುವಕರ ಭವಿಷ್ಯ ಕಾಪಾಡಬೇಕು. ರಾಜ್ಯದಲ್ಲಿರುವ ಜಲಾಶಯ, ಕೆರೆ, ಕಟ್ಟೆಗಳ ಹೂಳು ತೆಗೆಸುವ ಕಾರ್ಯಕ್ಕೆ ವಿಶೇಷ ಯೋಜನೆ ಜಾರಿ ಬರಬೇಕು. ರೈತರ ಬಿತ್ತನೆ ಬೀಜ ಗೊಬ್ಬರ ಖರೀದಿಗೆ ನೀಡುತ್ತಿರುವ ಕಿಸಾನ್ ಸಮ್ಮಾನ್ ಯೋಜನೆ ಹಣ 20,000 ಕ್ಕೆ ಏರಿಕೆ ಮಾಡಬೇಕು.

ಈ ಎಲ್ಲ ಒತ್ತಾಯಗಳ ಬಗ್ಗೆ ಸರ್ಕಾರ ಬಜೆಟ್ ಮಂಡನೆಯಲ್ಲಿ ಕ್ರಮಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗಿದ್ದು, ಬಜೆಟ್ ನಿರೀಕ್ಷೆಯಲ್ಲಿ ನಾವು ಕಾದು ನೋಡುತ್ತಿದ್ದೇವೆ ಎಂದು ಕುರುಬೂರು ಶಾಂತಕುಮಾರ್‌ ತಿಳಿಸಿದ್ದಾರೆ.

Leave a Reply

error: Content is protected !!
LATEST
KPSC ಕನ್ನಡ ಪ್ರಶ್ನೆ ಪತ್ರಿಕೇಲಿ ಸಾಲು ಸಾಲು ತಪ್ಪಿಗೆ 5 ಕೃಪಾಂಕ: ಅಭ್ಯರ್ಥಿಗಳ ಆಕ್ರೋಶ ಬೆಳ್ಳಂಬೆಳಗ್ಗೆಯೇ ಭ್ರಷ್ಟರಿಗೆ ಲೋಕಾಯುಕ್ತ ಅಧಿಕಾರಿಗಳ ಶಾಕ್‌: ಮನೆ, ಕಚೇರಿಗಳ ಮೇಲೆ ದಾಳಿ ನಾಳೆ ಫೆ.1ರಂದು ಕೇಂದ್ರ ಬಜೆಟ್ ಮಂಡನೆ: ರಾಜ್ಯದ ರೈತರ ನಿರೀಕ್ಷೆ, ಒತ್ತಾಯಗಳೇನು? ಮೈಕ್ರೋ ಫೈನಾನ್ಸ್ ಪ್ರಕರಣದಿಂದ ಸಾವು - ಸರ್ಕಾರಿ ಕಾರ್ಯಕ್ರಮಗಳ ವೈಫಲ್ಯಕ್ಕೆ ಸಾಕ್ಷಿ ಎಂದ ಎಚ್‌ಡಿಕೆ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯಕ್ಕೆ ಕಠಿಣ ನಿಯಮ ರೂಪಿಸಿ: ಸಚಿವ ಶಿವರಾಜ್ ತಂಗಡಗಿ ಪಡಿತರ ಚೀಟಿಯಲ್ಲಿ ಕುಟುಂಬದವರ ಹೆಸರು ಸೇರ್ಪಡೆಗೆ ಅವಕಾಶ ನೀಡಿದ ಆಹಾರ ಇಲಾಖೆ ನಿವೃತ್ತ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ: 7ನೇ ವೇತನ ಆಯೋಗದ ಪಿಂಚಣಿ ಮಂಜೂರು ಮಾಡಿ ಆದೇಶ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿಯೇ ಸಾರಿಗೆ ನೌಕರರಿಗೆ ಸಮಾನ ವೇತನ ಎಂದು ಹೇಳಿದ್ದೇವೆ: ಸಾರಿಗೆ ಸಚಿವ ರಾಮಲಿಂಗಾರೆ... ಚಲಿಸುತ್ತಿದ್ದ ಬಸ್‌ ಹತ್ತಲು ಹೋಗಿ ಮುಗ್ಗರಿಸಿ ಬಿದ್ದು ಪ್ರಾಣ ಕಳೆದುಕೊಂಡ ಯುವತಿ ಸಾರಿಗೆ ನೌಕರರಿಂದ ಮನವಿ ಪತ್ರ ಸಲ್ಲಿಸುವ ಚಳವಳಿ ಆರಂಭ: ಸಿಎಂ, ಸಾರಿಗೆ ಮಂತ್ರಿ, ನಾಲ್ಕೂ ನಿಗಮಗಳ ಎಂಡಿಗಳಿಗೆ ಸಲ್ಲಿಕೆ