ಬೆಂಗಳೂರು: ವ್ಯಕ್ತಿಯೊಬ್ಬನ ಕೊಲೆ ಆರೋಪದಡಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ 10ಮಂದಿಯನ್ನು ಆರ್.ಆರ್.ನಗರ ಮನೆಯಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿ ಡಿಸಿಪಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬಾತನೆ ಕೊಲೆಯಾಗಿದ್ದು, ಎರಡು ತಿಂಗಳ ಬಳಿಕ ಈ ಹತ್ಯೆ ಆರೋಪದ ಮೇರೆಗೆ ದರ್ಶನನ್ನು ಬಂಧಿಸಿದ್ದಾರೆ ಎನ್ನಲಾಗುತ್ತಿದೆ.
ಘಟನೆಗೆ ಕಾರಣ ಏನು? ಮಹಿಳೆಯೊಬ್ಬರಿಗೆ ಅಶ್ಲೀಲ ಮೆಸೆಜ್ ಮಾಡುತ್ತಿದ್ದ ಜತೆಗೆ ಮದುವೆಯಾಗುವಂತೆ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಮಹಿಳೆ ದರ್ಶನ್ ಅವರಿಗೆ ವಿಷಯ ತಿಳಿದಿದ್ದರು. ಈ ವೇಳೆ ಆತನನ್ನು ಕರೆಸಿ ಬುದ್ಧಿವಾದ ಹೇಳುವ ವೇಳೆ ಹಲ್ಲೆ ಮಾಡಿದ್ದರಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.
ಬೆದರಿಸುವ ಬರದಲ್ಲಿ ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ಒದ್ದಿದ್ದು, ಈ ವೇಳೆ ಗಂಭೀರಗಾಯವಾಗಿ ಗಾಯಗೊಂಡು ಆತ ಸ್ಥಳದಲ್ಲೇ ಒದ್ದಾಡಿ ಜೀವ ಬಿಟ್ಟಿದ್ದ, ಈ ಘಟನೆ 2 ತಿಂಗಳ ಹಿಂದೆಯೇ ನಡೆದಿದ್ದು, ಈಗ ಮೃತನ ಸ್ನೇಹಿತರ ವಿಚಾರಣೆಯಿಂದ ಬಹಿರಂಗವಾಗಿದೆ ಎನ್ನಲಾಗುತ್ತಿದೆ.
ಮತ್ತೊಂದೆಡೆ ದರ್ಶನ್ ಆಪ್ತರಾಗಿರುವ ಪವಿತ್ರಾ ಗೌಡ ಅವರಿಗೆ ಕಿರುಕುಳ ನೀಡಿದ್ದರಿಂದ ಬೆದರಿಸಲು ಹೋಗಿ ಈ ರೀತಿಯ ಅವಘಡ ನಡೆದಿದೆ ಎಂದು ಹೇಳಲಾಗುತ್ತಿದೆ. ಹೌದು! ದರ್ಶನ್ ಜೊತೆ ಇರುವ ಫೋಟೋಗಳನ್ನು ಪವಿತ್ರಾ ಗೌಡ ಹಂಚಿಕೊಂಡಿದ್ದರು.
ಈ ವೇಳೆ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬುವವರು ಅಶ್ಲೀಲ ಮೇಸೆಜ್ ಮಾಡಿದ್ದ, ಇದರಿಂದ ಕಾಮಾಕ್ಷಿಪಾಳ್ಯದಲ್ಲಿ ರೇಣುಕಾಸ್ವಾಮಿಯ ಕೊಲೆ ಮಾಡಲಾಗಿತ್ತು ಎನ್ನಲಾಗುತ್ತಿದೆ.
ಇನ್ನು ಈ ದರ್ಶನ್ ಸೂಚನೆ ಮೇರೆಗೆ ಕೊಲೆ ಮಾಡಿದ್ದಾಗಿ ನಾಲ್ವರು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಘಟನೆ ವೇಳೆ ಸ್ಥಳದಲ್ಲಿ ದರ್ಶನ್ ಕೂಡ ಇದ್ದರು ಎನ್ನಲಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ದರ್ಶನ್ ಸೇರಿ 10 ಜನರನ್ನು ಬಂಧಿಸಲಾಗಿದೆ.