ಚನ್ನೈ: ದಕ್ಷಿಣ ಭಾರತದ ಚಲನಚಿತ್ರಗಳ ಹೆಸರಾಂತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅಮ್ಮ ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಸುಳ್ಳು, ಅಮ್ಮ ಆರೋಗ್ಯವಾಗಿದ್ದಾರೆ ಎಂದು ಮುರಳಿ ಕೃಷ್ಣ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳು ಹರಡುತ್ತಿದ್ದು ಅದಕ್ಕೆ ಅಭಿಮಾನಿಗಳು ಕಿವಿಗೊಡಬಾರದು ಎಂದು ಜಾನಕಿ ಅವರ ಮಗ ಮುರಳಿ ಕೃಷ್ಣ ಮನವಿ ಮಾಡಿದ್ದಾರೆ.
ಅಮ್ಮ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಜತೆಗೆ ತುಂಬಾ ಚೆನ್ನಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
1957 ರಲ್ಲಿ ‘ಕೊಂಜುಮ್ ಸಲಂಗೈ’ ಚಿತ್ರದ “ಸಿಂಗರವೆಲೆನ್ ದೇವಾ” ಹಾಡಿನೊಂದಿಗೆ ತಮಿಳಿನ ಅತ್ಯಂತ ಪ್ರೀತಿಯ ಹಿನ್ನೆಲೆ ಗಾಯಕರಲ್ಲಿ ಒಬ್ಬರಾದ ಜಾನಕಿ ಅಮ್ಮ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅಂದಿನಿಂದ ನಿರಂತರವಾಗಿ ಅರವತ್ತು ವರ್ಷಗಳ ಕಾಲ ಸಂಗೀತ ಲೋಕದಲ್ಲಿ ಛಾಪು ಮೂಡಿಸಿ 2017 ರಲ್ಲಿ ನಿವೃತ್ತರಾಗಿದ್ದಾರೆ. ಅದರೆ ಸಿನಿಮಾಗಳಿಗೆ ಹಾಡುವುದನ್ನು ನಿಲ್ಲಿಸಿ ಯುವ ಪ್ರತಿಭೆಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಈ 60 ವರ್ಷದ ಅವರ ಸಂಗೀತ ಪಣದಲ್ಲಿ ಜಾನಕಿ ಅಮ್ಮ 17 ಭಾರತೀಯ ಭಾಷೆಗಳಲ್ಲಿ 48,000 ಸಾವಿರ ಹಾಡುಗಳನ್ನು ಹಾಡಿದ್ದಾರೆ ಎಂದು ಹೇಳುವುದೇ ಯುವ ಗಾಯಕರಿಗೆ ದೊಡ್ಡ ಸ್ಫೂರ್ತಿಯಾಗಿದೆ.
Inna noorarukaala baduki amma