ರಸ್ತೆ ಗುಂಡಿಗೆ ಮಗು ಬಲಿ: ರಸ್ತೆ ಸರಿಯಿಲ್ಲ ಅಂತಾ ಪ್ರತಿಭಟಿಸಿದವರ ವಿರುದ್ಧವೇ FIR ಅಮಾಯಕರ ವಿರುದ್ಧ ಸರ್ಕಾರದ ದರ್ಪ

ಬೆಂಗಳೂರು: ರಾಜ್ಯ ರಾಜಧಾನಿಯ ಮಹದೇವಪುರದಲ್ಲಿ ರಸ್ತೆ ಗುಂಡಿಗೆ ಮಗು ಬಲಿಯಾಗಿದ್ದಕ್ಕೆ ರಸ್ತೆ ಸರಿಯಿಲ್ಲ ಅಂತಾ ಪ್ರತಿಭಟಿಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅಮಾಯಕರ ವಿರುದ್ಧ ಸರ್ಕಾರ ದರ್ಪತೋರುತ್ತಿದೆ.

ಮಹದೇವಪುರದಲ್ಲಿ ಅವೈಜ್ಞಾನಿಕ ಕಾಮಗಾರಿಗೆ ಎರಡು ವರ್ಷದ ತ್ರಿಶೂಲ್ ಎಂಬ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.16ರಂದು ಹಳೇಹಳ್ಳಿ ರಸ್ತೆ ತಡೆದು ನೂರಾರು ಜನರು ಪ್ರತಿಭಟನೆ ನಡೆಸಿದ್ದರು. ಆದರೀಗ ರಸ್ತೆ ತಡೆದು ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದಡಿ ಮಗುವಿನ ಸಂಬಂಧಿಕರು ಸೇರಿ 10ಕ್ಕೂ ಹೆಚ್ಚು ಮಂದಿ ಮೇಲೆ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿದೆ.
ರಾಜ್ಯ ಸರ್ಕಾರದ ಈ ಧೋರಣೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಕಂದನ ಕಳೆದುಕೊಂಡ ಸಂಬಂಧಿಕರು ರಸ್ತೆ ಸರಿ ಮಾಡುವಂತೆ ಕೇಳಿಕೊಂಡಿದ್ದು ತಪ್ಪಾ, ನ್ಯಾಯ ಕೊಡಿ ಅಂತ ಕೇಳಿದ್ದೇ ತಪ್ಪಾ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ಪೊಲೀಸರಿಗೆ ಈ ರೀತಿ ಹೇಗೆ ಎಫ್‌ಐಆರ್ ಹಾಕುಲು ಮನಸ್ಸು ಬಂತು ಇವರ ಮನೆಯಲ್ಲಿ ಈ ರೀತಿಯ ಘಟನೆಯಿಂದ ಪ್ರಾಣಹಾನಿಯಾಗಿದ್ದರೂ ಇದೇ ರೀತಿ ಮಾಡುತ್ತಿದ್ದರಾ ಎಂದು ಜನರು ಪೊಲೀಸರ ನಡೆಗೂ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಸರ್ಕಾರ ಮಾಡಿರುವ ತಪ್ಪಿಗೆ ಸಂಬಂಧಪಟ್ಟ ಸಚಿವರು ಹಾಗೂ ಸಿಎಂ ಒಳಗೊಂಡಂತೆ ಅಧಿಕಾರಿಗಳ ವಿರುದ್ಧ ಪ್ರಕರಣದಾಖಲಿಸಬೇಕಿತ್ತು. ಕಾರಣ ಖಾಸಗಿ ವ್ಯಕ್ತಿಯ ಸ್ವತ್ತಿನಲ್ಲಿ ಈ ರೀತಿ ಆದರೆ ಯಾರನ್ನು ಹೊಣೆ ಮಾಡುತ್ತಿದ್ದರು ಹೇಳಿ? ಅದೇ ರೀತಿ ಸರ್ಕಾರ ನಡೆಸುತ್ತಿರುವವರನ್ನು ಇದೆಲ್ಲಿ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ.
Related









