- ಇದು ಅಧಿಕಾರಿಗಳ ಒಣ ಪ್ರತಿಷ್ಠೆ ಸಂಘಟನೆಗಳ ಬಣ ಬಡಿದಾಟಕ್ಕೆ ಸಾಕ್ಷಿ
- ಸಭೆ ನಿಗದಿಯಾಗಿದ್ದರೂ ಪ್ರವಾಸ ಹೊರಟ ಸಾರಿಗೆ ಸಚಿವರ ನಡೆಯೂ ಅಚ್ಚರಿ ಮೂಡಿಸುತ್ತಿದೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ನಾಳೆ ಅಂದರೆ ಏ.5ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯಬೇಕಿದ್ದ ಸಭೆಯನ್ನು ಸಕಾರಣ ನೀಡದೆ ಮುಂದೂಡಲಾಗಿದೆ.
ಈ ಸಂಬಂಧ ಸಿಎಂ ಗೃಹ ಕಚೇರಿಯಿಂದ ಮಾಹಿತಿ ಹೊರಬಿದ್ದಿದ್ದು, ಸಾರಿಗೆ ಇಲಾಖೆಯ ಅಧಿಕಾರಿಗಳು ಸಾರಿಗೆ ನೌಕರರ ಸಂಘಟನೆಗಳ ಪದಾಧಿಕಾರಿಗಳಿಗೆ ಫೋನ್ ಮೂಲಕ ಅಂದರೆ ಮೌಖಿಕವಾಗಿ ಇಂದು ಸಂಜೆ ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳ ಸಭೆ ಹಾಗೂ ಬೆಳಗ್ಗೆ 11.030ಕ್ಕೆ ಸಾರಿಗೆ ನೌಕರರ ಒಕ್ಕೂಟದ ಪದಾಧಿಕಾರಿಗಳ ಸಭೆಯನ್ನು ಆಯೋಜನೆ ಮಾಡಿ ಸಿಎಂ ಏ.1ರಂದು ಆದೇಶ ಹೊರಡಿಸಿದ್ದರು.
ಆದರೆ ನಡೆಯಬೇಕಿದ್ದ ಸಭೆಯನ್ನುಮುಖ್ಯಮಂತ್ರಿಗಳ ತುರ್ತು ಕಾರ್ಯಕ್ರಮಗಳ ಪ್ರಯುಕ್ತ ಮುಂದೂಡಲಾಗಿದೆ ಎಂದು ಸಿಎಂ ಕಚೇರಿಯಿಂದ ಮಾಹಿತಿ ಬಂದಿದೆ. ಮುಂದೆ ಯಾವಾಗ ಸಭೆ ಮಾಡಲಾಗುತ್ತದೆ ಎಂಬ ದಿನಾಂಕವನ್ನು ಇನ್ನೂ ನಿಗದಿ ಮಾಡಲಾಗಿಲ್ಲ ಎಂದು ಸಿಎಂ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸಾರಿಗೆ ನೌಕರರ ಸಂಘಟನೆಗಳಲ್ಲಿ ಎರಡು ಬಣಗಳು ಇರುವುದರಿಂದ ಒಂದು ಬಣ ಅಗ್ರಿಮೆಂಟ್ ಮೂಲಕ ವೇತನ ಹೆಚ್ಚಳವಾಗಬೇಕು ಎಂದು ಒತ್ತಾಯ ಮಾಡುತ್ತಿದೆ, ಇದು ಬಹುತೇಕ ಅಧಿಕಾರಿಗಳು/ ನೌಕರರಿಗೆ ವಿರುದ್ಧವಾದ ಒತ್ತಾಯವಾಗಿದೆ. ಇನ್ನು ವೇತನ ಆಯೋಗದಂತೆ ನಮಗೂ ವೇತನ ನಿಗದಿ ಮಾಡಿ ಜತೆಗೆ ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಂತೆ ಸರಿ ಸಮಾನ ವೇತನ ಮಾಡಬೇಕು ಎಂದು ಮತ್ತೊಂದು ಬಣ ಆಗ್ರಹ ಮಾಡುತ್ತಿದೆ.
ಈ ಎರಡರ ಕಿತ್ತಾಟದಿಂದಾಗಿ ಈಗಾಗಲೇ ಸಾರಿಗೆ ನೌಕರರು 2020 ಜನವರಿ 1ರಿಂದ ಆಗಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಜತೆಗೆ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳವಾಗಬೇಕಿದೆ. ಅದೂ ಕೂಡ ಈ 15 ತಿಂಗಳುಗಳು ಕಳೆಯುತ್ತ ಬಂದರೂ ಈವರೆಗೂ ಸರ್ಕಾರ ಮಾಡದೆ ಬಣ ಬಡಿದಾಟದ ಲಾಭ ಪಡೆಯುತ್ತಿದೆ.
ಇನ್ನು ಈ ಸಂಘಟನಗಳನ್ನು ನಂಬಿರುವ ನೌಕರರು ಈಗ ಬಸ್ ನಿಲ್ಲಿಸಿ ಹೋರಾಟ ಮಾಡುವುದಕ್ಕೆ ಮುಂದಾಗುತ್ತಿಲ್ಲ. ಕಾರಣ ಮುಷ್ಕರ ಮಾಡಲು ನೌಕರರು ಮುಂದಾದರೆ ಸಾರಿಗೆ ನಿಗಮಗಳ ಅಧಿಕಾರಿಗಳೇ ಅವರ ವಿರುದ್ಧ ದೂರು ದಾಖಲಿಸಿ ವಜಾ, ಅಮಾನತು, ವರ್ಗಾವಣೆ, ಪೊಲೀಸ್ ಪ್ರಕಣರ ದಾಖಲಿಸುವ ಜತೆಗೆ ಸಾವಿರಾರು ರೂಪಾಯಿ ದಂಡವನ್ನು ಹಾಕುತ್ತಾರೆ.
ಅಲ್ಲದೆ ವೇತನ ಹೆಚ್ಚಳದ ಲಾಭವನ್ನು ಪಡೆಯುವ ಅಧಿಕಾರಿಗಳು ಈ ಯಾವುದೆ ಮುಷ್ಕರದಲ್ಲಿ ಭಾಗಿಯಾಗದೆ ನೌಕರರ ವಿರುದ್ಧದ ನಿಲುವು ತಾಳುತ್ತಾರೆ. ಜತೆಗೆ ನೌಕರರಿಗೆ ಸಿಗಬೇಕಿರುವ ಮುಂಬಡ್ತಿಗೂ ಕಡಿವಾಣ ಹಾಕುವ ಮೂಲಕ ನೌಕರರನ್ನು ಅಧಿಕಾರಿಗಳೇ ಮೂರನೆ ಗ್ರಹದಿಂದ ಬಂದ ಪ್ರಾಣಿಗಳ ರೀತಿ ನಡೆಸಿಕೊಳ್ಳುತ್ತಾರೆ. ಹೀಗಾಗಿ ಯಾವುದೇ ಕಾರಣಕ್ಕೂ ನೌಕರರು ಮುಷ್ಕರಕ್ಕೆ ಮುಂದಾಗುವುದಿಲ್ಲ ಎಂದು ಹೇಳುತ್ತಿದ್ದಾರೆ.
ಈ ಅಧಿಕಾರಿಗಳ ನಡೆ ಮತ್ತು ಸಂಘಟನೆಗಳ ಬಡಿದಾಟದಿಂದ ಇಲ್ಲಿ ನೌಕರರಿಗಿಂತ ಹೆಚ್ಚಿನ ಲಾಸ್ ಅಧಿಕಾರಿಗಳಿಗೂ ಆಗುತ್ತಿದ್ದೆದರೂ ಅವರು ನೌಕರರ ಪರ ನಿಲ್ಲದ ಪರಿಣಾಮ ಇಂದು ಸರ್ಕಾರ ಮಾಯಬಜಾರ್ ನಾಟಕವಾಡಿಕೊಂಡು ಕಳೆದ 5 ವರ್ಷಗಳಿಂದಲೂ ಸಮಯಕ್ಕೆ ಸರಿಯಾಗಿ ವೇತನ ಹೆಚ್ಚಳ ಮಾಡದೆ ಮುಂದೂಡಿಕೊಂಡು ಬರುತ್ತಿದೆ.
ಇದು ಸದ್ಯಕ್ಕೆ ಮುಗಿಯುವ ಯಾವುದೇ ಸೂಚನೆ ಕಾಣುತ್ತಿಲ್ಲ. ಕಾರಣ ಇಲ್ಲಿ ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಎಂಬಂತೆ ಒಂದು ಕಡೆ ಅಧಿಕಾರಿಗಳು ಮತ್ತೊಂದು ಕಡೆ ಸಂಬಂಧವಿಲ್ಲದ ಮತ್ತು ಸಂಬಂಧವಿರುವ ಸಂಘಟನೆಗಳ ಬಣ ಬಡಿದಾಡ. ಇನ್ನು ಇದಕ್ಕೆ ಕಡಿವಾಣ ಬೀಳಬೇಕು ಎಂದರೆ ಇಲ್ಲಿ ಅಧಿಕಾರಿಗಳು/ನೌಕರರು ಭೇದಭಾವ ಮರೆತು ತಮ್ಮ ಬೇಡಿಕೆ ಈಡೇರಿಸಿಕೊಳ್ಳುವುಕ್ಕೆ ಮುಂದಾಗಬೇಕು ಇಲ್ಲದಿದ್ದರೆ ತಿರುಪತಿ ತಿಮ್ಮಪ್ಪನ ನಾಮವೇ ಗತಿಯಾಗುತ್ತದೆ ಅಷ್ಟೆ.
Related

You Might Also Like
ಕರ್ತವ್ಯ ಲೋಪವೆಸಗಿದ ಮೂವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ
ಬೆಂಗಳೂರು: ಬಿಬಿಎಂಪಿ ಪಶ್ಚಿಮ ವಲಯ ಮಹಾಲಕ್ಷ್ಮಿಪುರ ವಿಭಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಸಿಬ್ಬಂದಿಯನ್ನು ಕರ್ತವ್ಯ ಲೋಪವೆಸಗಿರುವ ಕಾರಣ ಕರ್ತವ್ಯದಿಂದ ಬಿಡುಗಡೆಗೊಳಿ ಪಶ್ಚಿಮ ವಲಯ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್...
ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಇಲ್ಲ: ಜಿಲ್ಲಾಧಿಕಾರಿ ಬಸವರಾಜು
10,165 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯ ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ 10.165 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯ ಇದ್ದು, ಬೇಡಿಕೆಗಿಂತ ಹೆಚ್ಚಿನ ರಸಗೊಬ್ಬರ ದಾಸ್ತಾನು ಇದೆ ಹಾಗಾಗಿ...
ಆ.5ರಿಂದ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸುವ ನೌಕರರ ವಿರುದ್ಧ ಕ್ರಮ: KSRTC ಎಂಡಿ ಅಕ್ರಮ್ ಪಾಷ ಆದೇಶ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆ.5ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹೂಡಲು ತೀರ್ಮಾನಿಸಿರುವುದರಿಂದ ನೌಕರರು...
ಆ.5ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆ ನಾಳೆ ಖಾಸಗಿ ಬಸ್ ಮಾಲೀಕರ ಸಭೆ ಕರೆದ ಸಾರಿಗೆ ಆಯುಕ್ತರು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ಆ.5ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಾರಿಗೆ ಇಲಾಖೆ ಆಯುಕ್ತರ...
ಮೊಂಡುತನ ಬಿಟ್ಟು ಸಾರಿಗೆ ನೌಕರರಿಗೆ ಕೊಡಬೇಕಿರುವುದ ಕೊಡಿ: ಅಧಿಕಾರವಿದೆ ಎಂಬ ದರ್ಪ ಬಿಡಿ ಸಿದ್ದುಜೀ- ಇದು ಶಾಶ್ವತವಲ್ಲ!
ಸಿಎಂ ಸಿದ್ದರಾಮಯ್ಯ ಸಾಹೇಬರೆ ನೀವು ಈಗ ವಕೀಲರಲ್ಲ ಸರ್ಕಾರದ ಸಂಬಳ ಪಡೆಯುವವರಲ್ಲಿ ನೀವು ಒಬ್ಬರು ಈಗ ನಿಮಗೆ ವಕೀಲ ವೃತ್ತಿ ಮಾಡುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬುದನ್ನು ಮರೆತಿರ...
ಆ.5ರಿಂದ ಸಾರಿಗೆ ನೌಕರರು ಹಮ್ಮಿಕೊಂಡಿರುವ ಮುಷ್ಕರಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡಲಿದೆ: ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ನ್ಯಾಯಯುತ ಬೇಡಿಕೆಯ ಹೋರಾಟಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ...
KSRTC ನಾಲ್ಕೂ ನಿಗಮಗಳ ನೌಕರರ ವೇತನ ಪರಿಷ್ಕರಣೆ 2027ರ ನಂತರ ಮಾಡಲು ಮಾತ್ರ ಸಾಧ್ಯ: ಪ್ರತಿಪಾದಿಸುತ್ತಿರುವ ಸಾರಿಗೆ ಇಲಾಖೆ
ಬೆಂಗಳೂರು: ನಾಲ್ಕೂ ಸಾರಿಗೆ ನಿಗಮಗಳ ಅಧಿಕಾರಿಗಳು/ನೌಕರರ ವೇತನ ಪರಿಷ್ಕರಣೆ 2023ರ ಮಾರ್ಚ್ನಲ್ಲಿ ಶೇ.15ರಷ್ಟು ಹೆಚ್ಚಳ ಮಾಡಿರುವುದರಿಂದ ಮುಂದಿನ ಪರಿಷ್ಕರಣೆಯನ್ನು 2027ರ ನಂತರ ಮಾಡಲು ಮಾತ್ರ ಸಾಧ್ಯ ಎಂದು...
ಪ್ರಣವ್ ಮೊಹಾಂತಿ ಅವರ ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ಸರ್ಕಾರ ತೀರ್ಮಾನಿಸಿಲ್ಲ: ಗೃಹ ಸಚಿವ ಡಾ. ಜಿ.ಪರಮೇಶ್ವರ ಸ್ಪಷ್ಟನೆ
ಬೆಂಗಳೂರು: ಕೇಂದ್ರ ಸರ್ಕಾರದ ಡೆಪ್ಯೂಟೇಷನ್ ಪಟ್ಟಿಯಲ್ಲಿ ಎಸ್ಐಟಿ ಮುಖ್ಯಸ್ಥರಾಗಿರುವ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ಅವರ ಹೆಸರಿದ್ದು, ಅವರನ್ನು ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ರಾಜ್ಯ ಸರ್ಕಾರ...
ಅತ್ತ ದರಿ ಇತ್ತ ಪುಲಿ ಎತ್ತ ಹೋಗಲಿ ಎಂಬ ಸ್ಥಿತಿಯಲ್ಲಿ ಸಾರಿಗೆ ನೌಕರರು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಮುಷ್ಕರಕ್ಕೆ ಹೋಗಲು ಬಹುತೇಕ ನೌಕರರು ಸಿದ್ಧರಿದ್ದಾರೆ. ಆದರೆ, ನಾವು ಡ್ಯೂಟಿ...