CrimeNEWSದೇಶ-ವಿದೇಶ

ಕೇಸು ವಾಪಸ್‌ ಪಡೆದುಕೊಂಡರೂ ಭ್ರಷ್ಟ ಸರ್ಕಾರಿ ನೌಕರರಿಗೆ ಶಿಕ್ಷೆ ಆಗಲೇ ಬೇಕು: ಸುಪ್ರೀಂಕೋರ್ಟ್

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಸರ್ಕಾರಿ ನೌಕರರ ಭ್ರಷ್ಟಾಚಾರವು ಸರ್ಕಾರ ಮತ್ತು ಸಮಾಜದ ವಿರುದ್ಧದ ದ್ರೋಹ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದು ಸುಪ್ರೀಂಕೋರ್ಟ್ ಭ್ರಷ್ಟಾಚಾರಿಗಳಿಗೆ ಎಚ್ಚರಿಕೆ ನೀಡಿದೆ.

ಸರ್ಕಾರಿ ನೌಕರರ ಭ್ರಷ್ಟಾಚಾರವು ಸರ್ಕಾರ ಮತ್ತು ಸಮಾಜದ ವಿರುದ್ಧ ನಡೆಸುವ ಅಪರಾಧ. ಇಂಥ ಪ್ರಕರಣಗಳಲ್ಲಿ ಲಂಚ ಕೊಟ್ಟವರು ಕೇಸು ವಾಪಸ್‌ ಪಡೆದುಕೊಂಡರೂ ಅಥವಾ ಒಪ್ಪಂದ ಮಾಡಿಕೊಂಡ ತಕ್ಷಣಕ್ಕೆ ಪ್ರಕರಣವನ್ನು ವಜಾ ಮಾಡಲು ಆಗದು ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

ಅಧಿಕಾರ ದುರುಪಯೋಗ ಮತ್ತು ಭ್ರಷ್ಟ ವಿಧಾನಗಳನ್ನು ಅನುಸರಿಸುವ ಪ್ರಕರಣಗಳನ್ನು ‘ವಿಶೇಷ ಆದ್ಯತೆಯ ಪ್ರಕರಣ’ ಎಂದು ಪರಿಗಣಿಸಲು ಸಾಧ್ಯವಿಲ್ಲ. ಲಂಚ ಪಡೆದ ಹಣವನ್ನು ಮರಳಿಸಿದ ತಕ್ಷಣಕ್ಕೆ, ಲಂಚ ಕೊಟ್ಟವರು ದೂರು ಹಿಂಪಡೆದರೆ ಅಪರಾಧಿಗೆ ಶಿಕ್ಷೆ ಆದಂತೆ ಆಗುವುದಿಲ್ಲ ಎಂದು ಕೋರ್ಟ್‌ ಚಾಟಿ ಬೀಸಿದೆ.

ಆರೋಪಿ ಮತ್ತು ಆಪಾದಿತರು ಒಪ್ಪಂದ ಮಾಡಿಕೊಂಡರು ಎಂದಾಕ್ಷಣ ಪ್ರಕರಣವನ್ನು ರದ್ದುಪಡಿಸಿದ ಮದ್ರಾಸ್ ಹೈಕೋರ್ಟ್ ನ ತೀರ್ಪನ್ನು ವಜಾ ಮಾಡಿದ ನಂತರ, ಕ್ರಿಮಿನಲ್ ಪ್ರಕರಣಗಳನ್ನು ಹೀಗೆಲ್ಲಾ ಇತ್ಯರ್ಥಪಡಿಸಿಕೊಳ್ಳಲು ಆಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಕಟುವಾಗಿ ಹೇಳಿದೆ.

ಈ ಮೂಲಕ ಲಂಚ ಪಡೆಯುವುದು ಕ್ರಿಮಿನಲ್ ಅಪರಾಧ ಎಂದು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಸರಕಾರಿ ನೌಕರರಾಗಿದ್ದುಕೊಂಡು ಭ್ರಷ್ಟಾಚಾರ ನಡೆಸುವುದು ಮಹಾ ಅಪರಾಧ ಎಂದು ಒತ್ತಿ ಹೇಳಿದೆ.ಇನ್ನು ಭ್ರಷ್ಟಾಚಾರಿಗೆ ತಕ್ಕ ಶಿಕ್ಷೆ ಆಗಬೇಕು ಇಲ್ಲದಿದ್ದರೆ ವ್ಯವಸ್ಥೆ ಹಳ್ಳ ಹಿಡಿಯಲಿದೆ ಎಂದು ಅಭಿಪ್ರಾಯಪಟ್ಟಿದೆ.

Leave a Reply

error: Content is protected !!
LATEST
ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ನೆರೆ ಭೀತಿಯಿಂದ ಬೆಂಗಳೂರಿಗರ ರಕ್ಷಿಸಿ: ಡಿಸಿಎಂಗೆ ಎಎಪಿ ರಾಜ್ಯಾಧ್ಯಕ್ಷ ಆಗ್ರಹ ಮಧ್ಯಮ ವರ್ಗದ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ BBMP-ಡೆಂಗ್ಯೂ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ : ಸುರಳ್ಕರ್ ವಿಕಾಸ್ ಕಿಶೋರ್ ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ 18 ರಿಂದ 45 ವರ್ಷದವರಿಂದ ಅರ್ಜಿ ಆಹ್ವಾನ ಪ್ರತಿಷ್ಠಿತ ಶಾಲೆಗಳಿಗೆ ಸೇರ ಬಯಸುವ ಮಕ್ಕಳಿಂದ ಅರ್ಜಿ ಆಹ್ವಾನ: ಷರತ್ತು ಅನ್ವಯ ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ KSRTC: ₹8.76 ಲಕ್ಷ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶ... BMTC ಚಾಲಕರಿಗೆ ಕೂಡಲೇ ವೇತನ ಪಾವತಿಸಿ: ಎಎಪಿಯ ಜಗದೀಶ್ ವಿ. ಸದಂ ಆಗ್ರಹ ಬಸವನಹಳ್ಳಿ: ನಿವೃತ್ತ ಸಹಾಯಕ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಿಕ್ಕಮಾಯಿಗೌಡರ ಪತ್ನಿ ಸಿದ್ದಮ್ಮ ನಿಧನ KSRTC ನೌಕರರ 2024ರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಬಿಡುಗಡೆಗೆ ಜೂನ್‌ 6ರಬಳಿಕ ನಿರ್ಧಾರ: ರಾಮಲಿಂಗಾರೆಡ್ಡಿ