ಲಂಡನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 5 ದಿನದ ಕದನ ವಿರಾಮ ಘೋಷಣೆ ಮಾಡಿದ ಬೆನ್ನಲ್ಲೇ ಒಂದು ಬ್ಯಾರೆಲ್ ಕಚ್ಚಾ ತೈಲದ (159 ಲೀಟರ್) ದರ ಶೇ.11ರಷ್ಟು ಇಳಿಕೆಯಾಗಿತ್ತು. ಆದರೆ, ಯಾವುದೇ ಸಂಧಾನ ಆಗಿಲ್ಲ ಎಂದು ತಿಳಿದ ಬಳಿಕ ಮತ್ತೆ ಏರಿಕೆಯತ್ತ ಸಾಗಿದೆ.

ಇಂದು ಒಂದು ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲ 109.91 ಡಾಲರ್‌ಗೆ (10,220 ರೂ.) ಏರಿಕೆಯಾಗಿತ್ತು. ಆದರೆ ಟ್ರಂಪ್ ಇರಾನ್ ಜತೆಗಿನ ಶಾಂತಿ ಮಾತುಕತೆ ಮತ್ತು ಕದನ ವಿರಾಮ ಕುರಿತ ಸುದ್ದಿ ಪ್ರಕಟಿಸಿದ ನಂತರ ಕಚ್ಚಾ ತೈಲ (Crude Oil) ಬೆಲೆ 93 ಡಾಲರ್‌ಗೆ (8,660 ರೂ.) ಇಳಿಕೆಯಾಗಿತ್ತು.
ಟ್ರಂಪ್ ಘೋಷಣೆ ಪ್ರಕಟವಾದ ನಂತರ ಯಾವುದೇ ಶಾಂತಿ ಮಾತುಕತೆ ಅಮರಿಕದ ಜತೆ ನಡೆದಿಲ್ಲ ಎಂದು ಇರಾನ್ (Iran) ಪ್ರತಿಕ್ರಿಯೆ ನೀಡಿದ ಬಳಿಕ ಮತ್ತೆ ಕಚ್ಚಾ ತೈಲದ ದರ ಏರಿಕೆ ಕಾಣತೊಡಗಿದದು, ಈಗ 96 ಡಾಲರ್‌ನಲ್ಲಿ ವ್ಯವಹಾರ ನಡೆಸುತ್ತಿದೆ.
ಅಮೆರಿಕ ದಾಳಿಗೆ ಪ್ರತಿಯಾಗಿ ಹಾರ್ಮುಜ್ ಜಲಸಂಧಿ (Hormuz Strait) ಇರಾನ್ ಬಂದ್ ಮಾಡಿದೆ. ಅಷ್ಟೇ ಅಲ್ಲದೇ ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳಿಗೆ 18 ಕೋಟಿ ರೂ. ಶುಲ್ಕ ವಿಧಿಸುವ ತೀರ್ಮಾನ ತೆಗೆದುಕೊಂಡಿದೆ.
ಅಮೆರಿಕ, ಇಸ್ರೇಲ್ ಮಿತ್ರ ದೇಶಗಳ ಹಡಗುಗಳು ಈ ಜಲಸಂಧಿ ಬಳಸಲು ಅವಕಾಶ ನೀಡುವುದಿಲ್ಲ. ತನ್ನ ಮಿತ್ರ ದೇಶಗಳ ಹಡಗುಗಳಿಗೆ ಮಾತ್ರ ಅನುಮತಿ ನೀಡುವುದಾಗಿ ಹೇಳಿತ್ತು. ಸದ್ಯ ಈಗ ಭಾರತ, ಚೀನಾ, ಪಾಕಿಸ್ತಾನ, ಟರ್ಕಿ, ಇರಾಕ್ ದೇಶದ ಹಡಗುಗಳಿಗೆ ಮಾತ್ರ ಸಂಚರಿಸಲು ಇರಾನ್ ಅನುಮತಿ ನೀಡಿದೆ.
Related










