CRIMENEWSಉದ್ಯೋಗನಮ್ಮರಾಜ್ಯ

ಸರ್ಕಾರಿ ಕೆಲಸ ಕೊಡಿಸುವುದಾಗಿ ನೂರಾರು ಅಮಾಯಕರ ನಂಬಿಸಿ 25 ಕೋಟಿ ರೂ. ಸ್ವಾಹ: ದಂಪತಿ ಬಂಧನ, ಹಲವರಿಗೆ ಗಾಳ !

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸರ್ಕಾರಿ ಉದ್ಯೋಗದ ಆಸೆ ತೋರಿಸಿ ನೂರಾರು ಜನರಿಗೆ ಕೋಟ್ಯಂತರ ರೂಪಾಯಿ ನಾಮ ಹಾಕಿದ್ದ ಕತರ್‌ನಾಕ್‌ ದಂಪತಿಯನ್ನು ಪೊಲೀಸರು ಬಂಧಿಸಿದ್ದು, ಈ ಜಾಲದಲ್ಲಿರುವ ಹಲವರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇನ್ನು ಈ ದಂಪತಿಯ ಅಸಲಿ ಬಣ್ಣ ಬಯಲಾಗಿದ್ದು, ನ್ಯಾಯಾಲಯದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಅಮಾಯಕರನ್ನು ವಂಚಿಸುತ್ತಿದ್ದರು ಎಂಬುವುದು ಬಹಿರಂಗವಾಗಿದೆ. ಸದ್ಯ ಈ ಜೋಡಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ನಿರುದ್ಯೋಗಿಗಳ ಆಸೆಯನ್ನೇ ಬಂಡವಾಳ ಮಾಡಿಕೊಂಡಿದ್ದ ಜೈಸನ್ ಡಿಸೋಜಾ ಮತ್ತು ಲವೀನಾ ಎಂಬ ಈ ದಂಪತಿ ಈಗ ಸಿಸಿಬಿ ಪೊಲೀಸರ ಅತಿಥಿಯಾಗಿದ್ದಾರೆ. ನ್ಯಾಯಾಲಯದಲ್ಲಿ ಡಿ-ಗ್ರೂಪ್ ನೌಕರಿ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 25 ಕೋಟಿ ರೂ.ಗೂ ಅಧಿಕ ಹಣ ಲೂಟಿ ಮಾಡಿರುವ ಆರೋಪ ಇವರ ಮೇಲಿದೆ.

ನಿರುದ್ಯೋಗಿಗಳು ಮತ್ತು ಖಾಸಗಿ ಕಂಪನಿಗಳಲ್ಲಿ ಕಡಿಮೆ ವೇತನಕ್ಕೆ ದುಡಿಯುತ್ತಿದ್ದ ಅಮಾಯಕರೇ ಇವರ ಮುಖ್ಯ ಟಾರ್ಗೆಟ್ ಎನ್ನಲಾಗಿದೆ. ಇನ್ನು ಒಬ್ಬೊಬ್ಬರಿಂದ ಕೆಲಸದ ಆಧಾರದ ಮೇಲೆ 10 ರಿಂದ 25 ಲಕ್ಷ ರೂ.ವರೆಗೆ ಹಣ ವಸೂಲಿ ಮಾಡುತ್ತಿದ್ದ ಇವರು, 500ಕ್ಕೂ ಹೆಚ್ಚು ಜನರನ್ನು ಈ ಜಾಲಕ್ಕೆ ಸಿಲುಕಿಸಿ ಹಣ ಲಪಟಾಯಿಸಿದ್ದಾರೆ.

ಅಲ್ಲದೆ ಜನರನ್ನು ನಂಬಿಸಲು ನ್ಯಾಯಾಧೀಶರ ಸಹಿಯನ್ನೇ ನಕಲು (Forge) ಮಾಡಿ, ನಕಲಿ ನೇಮಕಾತಿ ಪತ್ರಗಳನ್ನು (Fake Appointment Orders) ಸೃಷ್ಟಿ ಮಾಡುತ್ತಿದ್ದರು ಎಂಬ ಆರೋಪವಿದೆ. ಹಣ ವಸೂಲಿ ಮಾಡಲು ಏಜೆಂಟ್​ಗಳ ಗುಂಪನ್ನೇ ಕಟ್ಟಿಕೊಂಡಿದ್ದ ಇವರು, ಏಜೆಂಟ್​ಗಳು ಕಮಿಷನ್ ಪಡೆದು ಉಳಿದ ಹಣವನ್ನು ಜೈಸನ್ ದಂಪತಿಗೆ ತಲುಪಿಸುತ್ತಿದ್ದರು ಎನ್ನಲಾಗಿದೆ.

ಹೋಟೆಲ್‌ನಲ್ಲಿ ದಾಖಲೆ ಪರಿಶೀಲನೆ ನಾಟಕ!: ಸಂತ್ರಸ್ತರನ್ನು ನಂಬಿಸಲು ಈ ಜೋಡಿ ಭಲೇ ನಾಟಕವಾಡುತ್ತಿತ್ತು. ಖಾಸಗಿ ಹೋಟೆಲ್‌ಗಳಲ್ಲಿ ದಾಖಲೆ ಪರಿಶೀಲನೆ ಎಂದು ಹೇಳಿ ಅಭ್ಯರ್ಥಿಗಳನ್ನು ಕರೆಸಿಕೊಂಡು ಅಲ್ಲಿದ್ದ ಇತರರಿಗೆ ಆಫರ್ ಲೆಟರ್ ಬಂದಿದೆ ಎಂದು ನಕಲಿ ಪತ್ರಗಳನ್ನು ತೋರಿಸಿ ಹಣ ಪೀಕುತ್ತಿದ್ದರು ಎಂಬ ಆರೋಪ ಇದೆ. ಕೆಲಸದ ಬಗ್ಗೆ ಕೇಳಿದರೆ ನಾಳೆ-ನಾಳಿದ್ದು ಎಂದು ಕಥೆ ಹೇಳಿ ನಂತರ ಫೋನ್ ರಿಸೀವ್ ಮಾಡದೆ ತಲೆಮರೆಸಿಕೊಳ್ತಿದ್ದರು ಎನ್ನಲಾಗಿದೆ.

ಈ ಕೃತ್ಯ ಎಸೆಗುವುದರಲ್ಲಿ ಇವರಿಗೆ ಇದು ಹೊಸದೇನಲ್ಲ. ಈ ಹಿಂದೆ ಕೂಡ ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚಿಸಿ 2024ರಲ್ಲಿ ಜೈಲು ಸೇರಿದ್ದ ಇತಿಹಾಸ ಕೂಡ ಇದೆ. ಜೈಲಿನಿಂದ ಹೊರಬಂದ ಮೇಲೆ ಬುದ್ಧಿ ಕಲಿಯದ ಈ ಜೋಡಿ ಮತ್ತೆ ಅದೇ ಚಾಳಿಯ ಹಾದಿಯನ್ನೇ ಮುಂದುವರೆಸಿದೆ.

ಸದ್ಯ ಮೋಸ ಹೋಗಿರೋದು ಗೊತ್ತಾಗಿ ಸಂತ್ರಸ್ಥರು ನೀಡಿದ ದೂರಿನ ಮೇರೆಗೆ ಬಸವೇಶ್ವರನಗರ ಠಾಣೆ ಮತ್ತು ಸಿಸಿಬಿ ಪೊಲೀಸರು ದಂಪತಿಯನ್ನು ವಶಕ್ಕೆ ಪಡೆದು, ಇವರ ಬ್ಯಾಂಕ್ ಖಾತೆಗಳು ಮತ್ತು ಇವರಿಗೆ ಸಾಥ್ ನೀಡಿದ ಇತರ ವ್ಯಕ್ತಿಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Megha
the authorMegha

Leave a Reply

error: Content is protected !!
Latest news
ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತರಿಗೆ 6 ಕೋಟಿ ರೂ. ಭಾರಿ ನಗದು ಬಹುಮಾನ: ಕ್ರೀಡಾಪಟುಗಳ ಬದುಕಿಗೆ ಭರವಸೆ ನೀಡಿದ ಸಿಎಂ BMTC: ಮಹಿಳಾ ಕಂಡಕ್ಟರ್‌ಗಳಿಗೆ ಶೇ.33ರಷ್ಟು ಮುಂಬಡ್ತಿ ಮೀಸಲಾತಿ ಅಸಾಧ್ಯ- ಸಂಸ್ಥೆ ನಿಯಮದಲ್ಲೂ ಇಲ್ಲ ಅವಕಾಶ ಎಂದ ಸಿಪಿಎ... ಶಕ್ತಿಯೋಜನೆಗಾಗಿ ರಾಜಸ್ಥಾನದ ಆಧಾರ್‌ ಕಾರ್ಡ್‌ಗೆ ಬೆಂಗಳೂರು ನಿವಾಸಿ ಎಂಬ ನಕಲಿ ಕಾರ್ಡ್‌ ಸೃಷ್ಟಿಸಿಕೊಂಡು ಮಹಿಳೆ ಓಡಾಟ! BMTC ಘಟಕ 29: ಡಿಪೋ ಆವರಣದಲ್ಲಿ ಎಲೆಕ್ಟ್ರಿಕ್ ಬಸ್ ಡಿಕ್ಕಿ- ಚಾಲಕನಿಗೆ ತೀವ್ರ ಗಾಯ ತಿ.ನರಸೀಪುರ: ಯುವಕನ ಕಿರುಕುಳದಿಂದ ಮದುವೆ ನಿಶ್ಚಯವಾಗಿದ್ದ ಯುವತಿ ಜತೆಗೆ ಅಪ್ಪಅಮ್ಮ ಆತ್ಮಹತ್ಯೆ ತಿ.ನರಸೀಪುರ: ವಿದ್ಯುತ್‌ ಖಾಸಗೀಕರಣ ವಿರೋಧಿಸಿ ರೈತರ ಪ್ರತಿಭಟನೆ ತಹಸೀಲ್ದಾರ್‌ಗೆ ಮನವಿ ಚಾಲನೆಯಲ್ಲಿದ್ದ ಬಸ್‌ನ ಸ್ಟೇರಿಂಗ್‌ ಹಿಡಿದ ಕುಡುಕ- ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಬಸ್‌ ಡಿಕ್ಕಿ, 11 ಮಂದಿಗೆ ಗಂಭೀರ... KSRTC: ಶೇ.44 ರಷ್ಟು ಬಸ್‌ ಪ್ರಯಾಣ ದರ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಗೃಹಜ್ಯೋತಿಯಿಂದ ಸರ್ಕಾರಿ ನೌಕರರ ಹೊರಗಿಡಲು ಸರ್ಕಾರದ ಚಿಂತನೆ ಸರ್ಕಾರಿ ನೌಕರಿ ಮಹಿಳೆಯರಿಗೆ ಇನ್ನು ಮುಂದೆ ಸಿಗಲ್ವ ಶಕ್ತಿ ಯೋಜನೆಯ ಉಚಿತ ಪ್ರಯಾಣ?