NEWSನಮ್ಮಜಿಲ್ಲೆನಮ್ಮರಾಜ್ಯ

KSRTC- ಅಂಗವಿಕಲ ನೌಕರರ ಪಾಲಿನ ಆಶಾಕಿರಣ, ಲಂಚಕೋರ ಅಧಿಕಾರಿಗಳಿಗೆ ಸಿಂಹ ಸ್ವಪ್ನವಾದ ಡಾ.ನವೀನ್‌ ಭಟ್‌

ಲಂಚಕ್ಕೆ ಕಡಿವಾಣ ಹಾಕಲು ಕೇಂದ್ರ ಕಚೇರಿಗೇ ನೌಕರ ಕರೆಸಿಕೊಳ್ಳುತ್ತಿರುವ ಸಂಸ್ಥೆಯ ಪರಿಸರ ಮತ್ತು ಜಾಗೃತಾ ನಿರ್ದೇಶಕರು

KSRTC ನಿರ್ದೇಶಕ (ಪರಿಸರ) ನವೀನ್‌ ಭಟ್‌.
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಬಹುತೇಕ ಭ್ರಷ್ಟ ಅಧಿಕಾರಿಗಳೆ ಇದ್ದಾರೆ ಎಂದು ನೌಕರರು ಹೇಳುತ್ತಲೇ ಇರುತ್ತಾರೆ. ಆದರೆ ಅಂಥ ಭ್ರಷ್ಟ ಅಧಿಕಾರಿಗಳ ಮಧ್ಯೆ ನೌಕರರ ಸಮಸ್ಯೆ ಆಲಿಸುವಂತಹ ಅಷ್ಟೇ ಅಲ್ಲ ಆ ಸಮಸ್ಯೆ ಪರಿಹರಿಸುವಂತಹ ಅಧಿಕಾರಿಗಳು ಇದ್ದಾರೆ.

ಹೌದು! ಈ ವಿಷಯ ಕೇಳದರೆ ನೌಕರರ ಕಿವಿಗಳು ತೆರೆದುಕೊಳ್ಳುತ್ತವೆ ಎಂಬುವುದರಲ್ಲಿ ಬೇರೆ ಮಾತಿಲ್ಲ. ಅಂಥ ಅಧಿಕಾರಿ ಯಾರು ಎಂಬ ಯೋಚನೆಯೂ ತಲೆಯನ್ನು ಕೆಲವು ಸೆಕೆಂಡ್‌ಗಳು ಕೊರೆಯಲೂ ಬಹುದು.

ಸಾರಿಗೆ ನಿಗಮಗಳಲ್ಲಿ ಮಾತೆತ್ತಿದರೆ ಲಂಚ ಲಂಚ ಎಂಬುವುದರ ಬಗ್ಗೆಯೇ ಮಾತನಾಡುತ್ತಿರುತ್ತಾರೆ ನೌಕರರು. ನನಗೆ ಡ್ಯೂಟಿ ಇಂದು ಸಿಕ್ಕಲ್ಲ ಅದಕ್ಕೆ ಕಾರಣ ನಾನು ಅವನು ಕೇಳಿದಷ್ಟು ಲಂಚ ಕೊಡಲು ಸಾಧ್ಯವಾಗಿಲ್ಲ ಎಂಬುದನ್ನು ಬಹುತೇಕ ನೌಕರರು ತಮ್ಮ ಸಹೋದ್ಯೋಗಿಗಳ ಬಳಿ ಹೇಳಿಕೊಂಡಿರುವುದು ಈಗಲೂ ಹೇಳಿಕೊಳ್ಳುತ್ತಿರುವುದನ್ನು ಅಲ್ಲಲ್ಲಿ ಕೇಳುತ್ತಿರುತ್ತೇವೆ.

ಆದರೆ, ಈ ಎಲ್ಲದಕ್ಕೂ ಒಂದು ಪೂರ್ಣ ವಿರಾಮವನ್ನು ಸಾಧ್ಯವಾದಷ್ಟು ಇಡುವ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ಸಂಸ್ಥೆಗೆ ನೂತನವಾಗಿ ಬಂದಿರುವ ನಿರ್ದೇಶಕರಾದ (ಪರಿಸರ ಮತ್ತು ಜಾಗೃತಾ) ಡಾ.ನವೀನ್ ಭಟ್ ಅವರು ಕೆಲಸ ಮಾಡುತ್ತಿದ್ದಾರೆ.

ನಿಗಮದ ಬಹುತೇಕ ವಿಭಾಗಗಳ ಮಟ್ಟದಲ್ಲಿ ತಾಂಡವವಾಡುತ್ತಿರುವ ಲಂಚಾವತಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತಮ್ಮ ವ್ಯಾಪ್ತಿಯೊಳಗೆ ಲಂಚಮುಕ್ತ ಮಾಡಲು ಹೊರಟಿದ್ದಾರೆ. ಎಂಬಿಬಿಎಸ್‌ ಬಳಿಕ ಐಎಎಸ್‌ ಅಧಿಕಾರಿಯಾಗಿ ಬಂದಿರುವ ಈ ಡಾ.ನವೀನ್ ಭಟ್ ಅವರು ಸಂಸ್ಥೆಯಲ್ಲಿ ಯಾರಿಗೆ ಸೌಲಭ್ಯ ಸಿಗಬೇಕೋ ಅಂಥವರಿಗೇ ಕೊಡಲು ಮುಂದಾಗುತ್ತಿದ್ದಾರೆ.

ಆ ನಿಟ್ಟಿನಲ್ಲಿ ಅಂದರೆ ನಾವು ದೈಹಿಕವಾಗಿ ಊನಗೊಂಡಿದ್ದು, ಕ್ಲಿಷ್ಟಕರ (Heavy duty) ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಲೈಟ್‌ ಡ್ಯೂಟಿ ಕೊಡಿ ಎಂದು ಡಿಪೋ ವ್ಯವಸ್ಥಾಪಕರಿಗೆ ಅಥವಾ ವಿಭಾಗೀಯ ನಿಯಂತ್ರನಾಧಿಕಾರಿಗಳಿಗೆ ಕೇಳಿದರೂ ಅವರು ಲಂಚಕೊಟ್ಟ ಕೆಲ ಸಮರ್ಥರಿಗೇ ಲೈಟ್‌ ಡ್ಯೂಟಿಯನ್ನು ಕೊಡುತ್ತಿದ್ದರು.

ಈ ವಿಷಯ ತಿಳಿದ ನಿರ್ದೇಶಕ ಡಾ.ನವೀನ್ ಭಟ್ ಅವರು ಖುದ್ದು ಸಮಸ್ಯೆಯಿಂದ ನೌಕರರು ಬಳಲುತ್ತಿರುವುದು ನಿಜವೇ ಎಂದು ತಿಳಿದುಕೊಂಡು ಅವರು ದೈಹಿಕವಾಗಿ ಅನಾರೋಗ್ಯದಿಂದ ಅಥವಾ ಅಂಗವಿಕಲರಾಗಿದ್ದಾರೆಯೇ ಎಂಬುದನ್ನು ತಿಳಿದುಕೊಂಡು ಅಂಥವರಿಗೆ ಲೈಟ್‌ ಡ್ಯೂಟಿ ಕೊಡುತ್ತಿದ್ದಾರೆ.

ಹೀಗಾಗಿ ಕೆಎಸ್‌ಆರ್‌ಟಿಸಿಯ ರಾಜ್ಯದ ಎಲ್ಲ ವಿಭಾಗಗಳಿಂದ ಪಾರ್ಶ್ವವಾಯಿ, ಅಪಘಾತದಿಂದ, ಅಂಗಾಂಗ ಸಮಸ್ಯೆ ಸೇರಿದಂತೆ ಇತರೆ ದೈಹಿಕ ಸಮಸ್ಯೆಯಿಂದ ಬಳಲುತ್ತಿದ್ದರೆ ಅವರಿಗೆ ತಾವೇ ಲೈಟ್‌ ಡ್ಯೂಟಿ ಕೊಡುತ್ತಿದ್ದಾರೆ. ಅದಕ್ಕಾಗಿಯೇ ಕಳೆದ ವಾರದಿಂದ ಲೈಟ್‌ಡ್ಯೂಟಿ ಬೇಕೆಂದು ಅರ್ಜಿ ಸಲ್ಲಿಸಿರುವವರನ್ನು ನೌಕರರನ್ನು ಸಂಸ್ಥೆಯ ಬೆಂಗಳೂರಿನ ಶಾಂತಿನಗರದ ಕೇಂದ್ರ ಕಚೇರಿಗೆ ಕರೆಸಿಕೊಂಡು ವೈದ್ಯಕೀಯ ಪ್ರಮಾಣ ಪತ್ರವನ್ನು ಪರೀಕ್ಷಿಸಿ ಜತೆಗೆ ತಾವೇ ವೈದ್ಯರಾಗಿರುವುದರಿಂದ ಆ ನೌಕರ ದೈಹಿಕವಾಗಿ ಅನಾರೋಗ್ಯ ಪೀಡಿತರಾಗಿದ್ದಾರೆಯೇ ಎಂದು ಖಚಿತ ಪಡಿಸಿಕೊಂಡು ಲೈಟ್‌ ಡ್ಯೂಟಿ ಕೊಡುವ ವ್ಯವಸ್ಥೆ ಮಾಡುತ್ತಿದ್ದಾರೆ.

ಹೀಗಾಗಿ ಲಂಚಕೊಟ್ಟು ಲೈಟ್‌ ಡ್ಯೂಟಿ ಪಡೆದುಕೊಂಡ ನೌಕರರಿಗೆ ಈಗ ಢವಢವ ಶುರುವಾಗಿದೆ. ಅಲ್ಲದೆ ಅಂಥವರನ್ನು ಕೇಂದ್ರ ಕಚೇರಿಗೆ ಕರೆಸಿಕೊಂಡು ಮೌಖಿಕವಾಗಿ ಎಚ್ಚರಿಕೆ ನೀಡುವ ಮೂಲಕ ಮುಂದೆ ಈ ರೀತಿ ತಪ್ಪೆಸಬೇಡಿ, ಒಂದು ವೇಳೆ ಈ ರೀತಿ ನಡೆದುಕೊಂಡರೆ ಮುಂದೆ ವಜಾಗೊಂಡು ಮನೆಗೆ ಹೋಗಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಕೊಡುತ್ತಿದ್ದಾರೆ.

ಒಟ್ಟಾರೆ ಸಂಸ್ಥೆಯ ನಿರ್ದೇಶಕ ಡಾ.ನವೀನ್ ಭಟ್ ಅವರ ಈ ನಡೆಯಿಂದ ನಿಜವಾಗಲು ದೈಹಿಕ ಊನತೆಯಿಂದ ಬಳಲುತ್ತಿರುವ ನೌಕರರು ಖುಷಿಪಡುತ್ತಿದ್ದಾರೆ. ನಾವು ದೈಹಿಕವಾಗಿ ಊನಗೊಂಡಿದ್ದರೂ ನಮಗೆ ಲೈಟ್‌ ಡ್ಯೂಟಿ ಕೊಡಿ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನು ಕೇಳಿದರೆ ಅವರು ಲಂಚಕ್ಕೆ ಆಸೆಪಟ್ಟು ಚೆನ್ನಾಗಿ ಇರುವವರಿಗೆ ಲೈಟ್‌ ಡ್ಯೂಟಿ ಕೊಡುತ್ತಿದ್ದರು. ಈಗ ನವೀನ್‌ ಸರ್‌ ಬಂದಮೇಲೆ ನಮಗೆ ಲೈಟ್‌ಡ್ಯೂಟಿ ಕೊಟ್ಟಿದ್ದಾರೆ ಸರ್‌ ಎಂದು ನೌಕರರೊಬ್ಬರು ವಿಜಯಪಥಕ್ಕೆ ತಿಳಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಇಂಥ ಅಧಿಕಾರಿಗಳು ನಮಗೆ ಬೇಕು. ಇವರಂಥವರು ಇದ್ದರೆ ನಾವು ಮಾನಸಿಕ ಮತ್ತು ದೈಹಿಕವಾಗಿ ಯಾವುದೇ ಸಮಸ್ಯೆಯಿಂದ ಬಳಲದೆ ಸಂಸ್ಥೆಗೆ ಅತ್ಯೋತ್ಸಾಹದಿಂದ ಸೇವೆ ಸಲ್ಲಿಸುತ್ತೇವೆ ಎಂದು ಖುಷಿಯಿಂದಲೇ ಹೇಳಿದ್ದಾರೆ.

ಕೆಎಸ್‌ಆರ್‌ಟಿಸಿಗೆ ವ್ಯವಸ್ಥಾಪಕ ನಿರ್ದೇಶಕರಾಗಿ ವಿ.ಅನ್ಬುಕುಮಾರ್‌, ಬಿಎಂಟಿಸಿಗೆ ವ್ಯವಸ್ಥಾಪಕ ನಿರ್ದೇಶಕರಾಗಿ ಜಿ.ಸತ್ಯವತಿ, ಎನ್‌ಡಬ್ಲ್ಯುಕೆಆರ್‌ಟಿಸಿಗೆ ವ್ಯವಸ್ಥಾಪಕ ನಿರ್ದೇಶಕರಾಗಿ ಭರತ್‌, ಕೆಕೆಆರ್‌ಟಿಗೆ ವ್ಯವಸ್ಥಾಪಕ ನಿರ್ದೇಶಕರಾಗಿ ರಾಚಪ್ಪ ಅವರು ಬಂದ ಮೇಲೆ ಡಿಪೋ ಮತ್ತು ವಿಭಾಗೀಯಮಟ್ಟದಲ್ಲಿ ಆಗುತ್ತಿದ್ದ ಕಿರುಕುಳಗಳು ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬಂದಿವೆ ಎಂದು ನೌಕರರು ಹೇಳುತ್ತಿದ್ದಾರೆ.

Leave a Reply

error: Content is protected !!
LATEST
ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ನೆರೆ ಭೀತಿಯಿಂದ ಬೆಂಗಳೂರಿಗರ ರಕ್ಷಿಸಿ: ಡಿಸಿಎಂಗೆ ಎಎಪಿ ರಾಜ್ಯಾಧ್ಯಕ್ಷ ಆಗ್ರಹ ಮಧ್ಯಮ ವರ್ಗದ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ BBMP-ಡೆಂಗ್ಯೂ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ : ಸುರಳ್ಕರ್ ವಿಕಾಸ್ ಕಿಶೋರ್ ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ 18 ರಿಂದ 45 ವರ್ಷದವರಿಂದ ಅರ್ಜಿ ಆಹ್ವಾನ ಪ್ರತಿಷ್ಠಿತ ಶಾಲೆಗಳಿಗೆ ಸೇರ ಬಯಸುವ ಮಕ್ಕಳಿಂದ ಅರ್ಜಿ ಆಹ್ವಾನ: ಷರತ್ತು ಅನ್ವಯ ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ KSRTC: ₹8.76 ಲಕ್ಷ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶ... BMTC ಚಾಲಕರಿಗೆ ಕೂಡಲೇ ವೇತನ ಪಾವತಿಸಿ: ಎಎಪಿಯ ಜಗದೀಶ್ ವಿ. ಸದಂ ಆಗ್ರಹ ಬಸವನಹಳ್ಳಿ: ನಿವೃತ್ತ ಸಹಾಯಕ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಿಕ್ಕಮಾಯಿಗೌಡರ ಪತ್ನಿ ಸಿದ್ದಮ್ಮ ನಿಧನ KSRTC ನೌಕರರ 2024ರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಬಿಡುಗಡೆಗೆ ಜೂನ್‌ 6ರಬಳಿಕ ನಿರ್ಧಾರ: ರಾಮಲಿಂಗಾರೆಡ್ಡಿ