NEWSಉದ್ಯೋಗನಮ್ಮರಾಜ್ಯಶಿಕ್ಷಣ-

ಡಾ.ಅಶ್ವಿನಿ ಅವರ ಪಾಠಕೇಳಿ 101ನೇರ‍್ಯಾಂಕ್‌ ಪಡೆದ ಕನ್ನಡತಿ ಸೌಭಾಗ್ಯ ಬೀಳಗಿಮಠ

ವಿಜಯಪಥ ಸಮಗ್ರ ಸುದ್ದಿ

ಧಾರವಾಡ: ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶ (UPSC Results 2023) ಇಂದು ಪ್ರಕಟವಾಗಿdfdu, ದಾವಣಗೆರೆ ನಿವಾಸಿ ಸೌಭಾಗ್ಯ ಬೀಳಗಿಮಠ ಅವರು ತಮ್ಮ ಎರಡನೇ ಪ್ರಯತ್ನದಲ್ಲೇ 101ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ.

ದಾವಣಗೆರೆ ಮೂಲದ ಸೌಭಾಗ್ಯ ಬೀಳಗಿಮಠ ಅವರು ಬಿಎಸ್ಸಿ ಅಗ್ರಿಕಲ್ಚರ್ ಎರಡನೇ ವರ್ಷದಲ್ಲಿದ್ದಾಗಲೇ ಕೋಚಿಂಗ್ ಆರಂಭಿಸಿದ್ದರಂತೆ. ಕೃಷಿ ವಿವಿಯ ಡಾ.ಅಶ್ವಿನಿ ಸಹಾಯಕ ಪ್ರಾಧ್ಯಾಪಕಿಯವರ ಜತೆ ಕೋಚಿಂಗ್ ಆರಂಭಿಸಿದ್ದರು. ಯುಪಿಎಸ್‌ಸಿ ಕುರಿತು ಡಾ.ಅಶ್ವಿನಿ ಅವರು ಸೌಭಾಗ್ಯಗೆ ತರಬೇತಿ ನೀಡುತ್ತಿದ್ದರಂತೆ.

2015 ರಲ್ಲಿ ಡಾ.ಅಶ್ವಿನಿ ಯುಪಿಎಸ್‌ಸಿ ಪಾಸ್ ಮಾಡಿಕೊಂಡಿದ್ದರು. ಡಾ.ಅಶ್ವಿನಿ ಎಂ. ಧಾರವಾಡದ ನಾರಾಯಣಪುರದ ನಿವಾಸಿ. 3 ವರ್ಷದಿಂದ ಸೌಭಾಗ್ಯ ಡಾ.ಅಶ್ವಿನಿ ಅವರ ಮನೆಯಲ್ಲೇ ಉಳಿದುಕೊಂಡು ತರಬೇತಿ ಪಡೆದುಕೊಳ್ಳುತ್ತಿದ್ದರಂತೆ. ಸೌಭಾಗ್ಯ ಅವರು ಯುಪಿಎಸ್‌ಸಿ ಪರೀಕ್ಷೆಗಾಗಿ ಬೇರೆ ಎಲ್ಲೂ ತರಬೇತಿ ಪಡೆಯದೇ ಕೇವಲ ಉಪನ್ಯಾಸಕಿ ನೀಡಿದ ಕೋಚಿಂಗ್ ಮೇಲೆಯೇ ರ‍್ಯಾಂಕ್‌​ ಪಡೆದುಕೊಂಡಿದ್ದಾರೆ.

ಇನ್ನು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಸೌಭಾಗ್ಯ ಬೀಳಗಿಮಠ, ಈ ಬಾರಿಯ UPSC ಪರೀಕ್ಷೆಯಲ್ಲಿ 101ನೇ ರ‍್ಯಾಂಕಿಂಗ್​ ಪಡೆದುಕೊಂಡಿದ್ದೇನೆ. ನನ್ನ ಕುಟುಂಬಸ್ಥರು, ಶಿಕ್ಷಕರು ಹಾಗೂ ಸ್ನೇಹಿತರು ಫುಲ್​ ಖುಷ್​ ಆಗಿದ್ದಾರೆ.

ಇನ್ನು ನಾನು ಯಾವುದೇ ಕೋಚಿಂಗ್​ಗೆ ಹೋಗಿಲ್ಲ. ನಮ್ಮ ಮೇಡಂ ಮನೆಯಲ್ಲೇ ಇದ್ದುಕೊಂಡು ನಾನು UPSC ಪಾಸ್ ಮಾಡಿಕೊಂಡಿದ್ದೇನೆ. ನಾನು ಪಾಸ್​ ಆದ ವಿಚಾರ ಕೇಳಿ ನಮ್ಮ ಮೇಡಂ ಖುಷಿಯಾಗಿದ್ದಾರೆ. ಡಾ.ಅಶ್ವಿನಿ ಅವರು ನನಗೆ ತರಬೇತಿ ನೀಡಿದ್ದರಿಂದ ಎರಡನೇ ಪ್ರಯತ್ನದಲ್ಲೇ ರ‍್ಯಾಂಕ್​ ಪಡೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

Leave a Reply

error: Content is protected !!
LATEST
ನಾಮಪತ್ರ ಹಿಂಪಡೆದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಬಿಜೆಪಿಗೆ ಜೈ ಎಂದ ಪ್ರಜ್ವಲ್ ರೇವಣ್ಣ ವಿರುದ್ಧ ಪಕ್ಷದಿಂದ ನಿರ್ದಾಕ್ಷಿಣ್ಯ ಕ್ರಮ : ಎಚ್‌ಡಿಕೆ ಪ್ರಜ್ವಲ್ ರೇವಣ್ಣನ ಪಕ್ಷದಿಂದ ಅಮಾನತು ಮಾಡಿ: ಎಚ್‌ಡಿಡಿಗೆ ಶಾಸಕ ಶರಣಗೌಡ ಕಂದಕೂರ ಒತ್ತಾಯ ಉಪ್ಪು ತಿಂದವರು ನೀರು ಕುಡಿಯಲೇ ಬೇಕು, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ: ಮಾಜಿ ಸಿಎಂ ಎಚ್‌ಡಿಕೆ ಖ್ಯಾತ ಭೋಜಪುರಿ ನಟಿ ಅಮೃತಾ ಪಾಂಡೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು ಲೈಂಗಿಕ ಪ್ರಕರಣ: ಶಾಸಕ ಎಚ್‌.ಡಿ.ರೇವಣ್ಣ ಪುತ್ರ ಪ್ರಜ್ವಲ್ ವಿರುದ್ಧ ಎಸ್‌ಐಟಿ ತನಿಖೆ ಚಾಮರಾಜನಗರ ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಇನ್ನಿಲ್ಲ ಕಾಲೇಜು ಸಹಪಾಠಿಗಳ ಮೇಲೆ ಹಲ್ಲೆ ಪ್ರಕರಣ: ಏ.28ರಂದು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ KKRTC: ಎಲ್ಲ ಸಿಬ್ಬಂದಿಗಳು ಸಮವಸ್ತ್ರ ಧರಿಸುವುದು ಕಡ್ಡಾಯ - ವಿಜಯಪುರ ಡಿಸಿ ಸ್ಪಷ್ಟನೆ ಕರ್ತವ್ಯ ನಿರತ ಸರ್ಕಾರಿ ಬಸ್‌ ನಿರ್ವಾಹಕರ ಮೇಲೆ ಹಲ್ಲೆ: ಮೂವರ ವಿರುದ್ಧ ದೂರು ದಾಖಲು