ಹಿರಿಯೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಹಾಗೂ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಭಾಗವಹಿಸಿರುವ ಎಲ್ಲ ನಮ್ಮ ಸಹೋದ್ಯೋಗಿ ಮಿತ್ರರಿಗೆ ಈ ಮಾರ್ಗದಲ್ಲಿ ಡ್ಯೂಟಿ ಮಾಡುತ್ತಿರುವವರು ಔದಾರ್ಯ ಮೆರೆಯಬೇಕು ಎಂದು ನೌಕರರೊಬ್ಬರು ಮನವಿ ಮಾಡಿದ್ದಾರೆ,

ಎಲ್ಲ ನನ್ನ ಆತ್ಮೀಯ ಸಾರಿಗೆ ಮಿತ್ರರಲ್ಲಿ ವಿನಂತಿ, ಚಿತ್ರದುರ್ಗ – ಬೆಂಗಳೂರು ಮಾರ್ಗ ಮಧ್ಯೆ ಕಾರ್ಯಾಚರಣೆ ಮಾಡುತ್ತಿರುವ ಚಾಲಕ – ನಿರ್ವಾಹಕರಲ್ಲಿ ನನ್ನ ಮನವಿ ಏನಂದರೆ ಕೂಟದ ವತಿಯಿಂದ ಪಾದಯಾತ್ರೆ ಹೊರಟಿದ್ದು ಹೆಚ್ಚಿನ ಜನರ ಗಮನ ಸೆಳೆಯುವುದಗೋಸ್ಕರ ಆ ಮಾರ್ಗದಲ್ಲಿ ಸಂಚರಿಸುವ ಚಾಲಕರಿರುವವರು ತಾವು ಹೊರಡುವ ಬಸ್ ನಿಲ್ದಾಣದಲ್ಲಿ ಇವೊಂದಿಷ್ಟು ಖರೀದಿಸಿ.

ಅವೇನೆಂದರೆ ಒಂದ್ 10 ಪ್ಯಾಕೆಟ್ ಬಿಸ್ಕತ್, ಒಂದ್ ಅರ್ಧ ಲೀಟರ್‌ನ ಬಾಟಲ್ ನೀರು ಮತ್ತೊಂದು ಸ್ವಲ್ಪ ಬಾಳೆಹಣ್ಣು. ಇವೆಲ್ಲವನ್ನು ಜತೆಗೆ ಇಟ್ಕೊಂಡು ಹೋಗಿ ಆ ನಡದುಕೊಂಡು ಹೋಗುತ್ತಿರುವ ನಮ್ಮ ನೌಕರರಿಗೆ ಕೃತಜ್ಞತೆ ಸಲ್ಲಿಸಿ. ಅವುಗಳನ್ನು ಕೊಟ್ಟು ಅವರನ್ನು ಮಾತನಾಡಿಸಿ ಹೋಗುವುದರಿಂದ ಅವರಲ್ಲಿ ಆತ್ಮಸ್ಥೈರ್ಯ ತುಂಬುತ್ತದೆ.
ಅಲ್ಲದೆ ನಮ್ಮ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವ ಜನರ ಗಮನ ಕೂಡ ಸೆಳೆಯುತ್ತದೆ ಇದು ನನ್ನ ಅಭಿಪ್ರಾಯ ಅನಿಸಿಕೆ ನಾನು ಒಬ್ಬ ನೌಕರ. ಹೀಗೆ ಮಾಡಿದರೆ ನಮಗಾಗಿ ಈ ಬೇಸಿಗೆ ಬಿಸಿಲನ್ನು ಲೆಕ್ಕಿಸದೆ ಪಾದಯಾತ್ರೆ ಮಾಡುತ್ತಿರುವವರಿಗೆ ಕೃತಜ್ಞತೆ ಸಲ್ಲಿಸಿದಂತಾಗುತ್ತದೆ ಎಂದು ಮನವಿ ಮಾಡಿದ್ದಾರೆ.
Related










