ಕಾನ್ಪುರ: 18 ತಿಂಗಹಳ ಹಿಂದೆಯೇ ಮೃತಪಟ್ಟ ಪತಿ ಕೋಮಾದಲ್ಲಿ ಇದ್ದಾನೆ ಎಂದು ಭಾವಿಸಿ ಪತ್ನಿ ಶವವನ್ನು ಮನೆಯಲ್ಲಿಯೇ ಇರಿಸಿಕೊಂಡಿದ್ದ ವಿಸ್ಮಯಕಾರಿ ಘಟನೆಯೊಂದು ಮಧ್ಯಪ್ರದೇಶದ ಕಣ್ಣೂರಿನಲ್ಲಿ ವರದಿಯಾಗಿದೆ.
ಗ್ರಾಮದ ಆದಾಯ ತೆರಿಗೆ ಇಲಾಖೆ ನೌಕರನೆ ನಿಧನರಾಗಿದ್ದವರು. ಆದರೆ, ಮೃತರ ಕುಟುಂಬ ವರ್ಗದವರು, ಸುಮಾರು 18 ತಿಂಗಳ ಕಾಲ ಶವವನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದಾರೆ. ಈ ವೇಳೆ ಪತಿಯ ಶವ ಕೊಳೆಯಬಾರದು ಎಂದು ಆತನ ಪತ್ನಿ ಪ್ರತಿದಿನ ಶವದ ಮೇಲೆ ಗಂಗಾಜಲ ಎರಚುತ್ತ ಇಂದಲ್ಲ, ನಾಳೆ ನನ್ನ ಪತಿ ಮೇಲೇಳುತ್ತಾನೆ ಎಂದು ಭಾವಿಸಿಕೊಂಡು ಈ ರೀತಿ ನಡೆದುಕೊಳ್ಳುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
2021ರ ಏಪ್ರಿಲ್ 22 ರಂದು ಹಠಾತ್ ಹೃದಯ ಸ್ಥಂಬನದಿಂದ ಆದಾಯ ತೆರಿಗೆ ಇಲಾಖೆಯ ನೌಕರ ವಿಮಲೇಶ್ ದೀಕ್ಷಿತ್ ನಿಧನರಾಗಿದ್ದರು. ಆದರೆ ಅವರ ಕುಟುಂಬ ವರ್ಗದವರು ಆತನ ಅಂತ್ಯಕ್ರಿಯೆ ಮಾಡದೆ ಆತ ಇನ್ನು ಕೋಮಾದಲ್ಲಿದ್ದಾನೆ ಎಂದು ನಂಬಿಕೊಂಡು 18 ತಿಂಗಳಿನಿಂದ ಶವವನ್ನು ತಮ್ಮ ಮನೆಯಲ್ಲೇ ಇರಿಸಿಕೊಂಡಿದ್ದರು ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಅಲೋಕ್ ರಂಜನ್ ತಿಳಿಸಿದ್ದಾರೆ.
ಪೊಲೀಸರು ಮತ್ತು ಮ್ಯಾಜಿಸ್ಟ್ರೇಟ್ ಜತೆಗೆ ಆರೋಗ್ಯ ಅಧಿಕಾರಿಗಳ ತಂಡ ರಾವತ್‍ಪುರ ಪ್ರದೇಶದ ದೀಕ್ಷಿತ್ ಅವರ ಮನೆಗೆ ಬಂದು ತಪಾಸಣೆ ನಡೆಸಲು ಮುಂದಾದಾಗ ಮನೆಯವರು ದೀಕ್ಷಿತ್ ಕೋಮಾದಲ್ಲಿದ್ದಾರೆ ಎಂದು ನಂಬಿಸಲು ಯತ್ನಿಸಿದರು.
ಸಾಕಷ್ಟು ಮನವೊಲಿಕೆಯ ನಂತರ, ಕುಟುಂಬ ಸದಸ್ಯರು ದೇಹವನ್ನು ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ಕೊಂಡೊಯಲು ಅವಕಾಶ ನೀಡಿದರು. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಆತ 18 ತಿಂಗಳ ಹಿಂದೆಯೇ ಮೃತಪಟ್ಟಿರುವುದು ದೃಢಪಟ್ಟಿದೆ.
ಮನೆಯವರು ಆಗಾಗ್ಗೆ ಆಕ್ಸಿಜನ್ ಸಿಲಿಂಡರ್‌ಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಿರುವುದು ಕಂಡ ಸ್ಥಳೀಯರು ನೀಡಿದ ದೂರಿನ ಮೇರೆಗೆ ಪೊಲೀಸರು ವೈದ್ಯರ ತಂಡದೊಂದಿಗೆ ಅವರ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ.
ಇನ್ನು 18 ತಿಂಗಳಿನಿಂದ ಸತ್ತ ವ್ಯಕ್ತಿಯ ಶವ ಕೊಳೆಯದಂತೆ ನೋಡಿಕೊಂಡಿರುವುದು ಕೂಡ ಅಚ್ಚರಿಗೆ ಕಾರಣವಾಗಿದೆ. ಇದು ವೈದ್ಯರಿಗೂ ಒಂದು ಸೋಗಿಗದಂತೆ ಕಾಣುತ್ತಿದ್ದು, ಹೇಗೆ ಇಷ್ಟು ತಿಂಗಳುಗಳ ಕಾಲ ಶವವನ್ನು ಕೊಳೆಯದಂತೆ ಇಟ್ಟುಕೊಂಡರು ಎಂಬ ಬಗ್ಗೆ ಅವರಿಂದಲೇ ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.