CrimeNEWSನಮ್ಮರಾಜ್ಯಸಿನಿಪಥ

ಶಿಶ್ನ, ಹಸ್ತಮೈಥುನ ಫೋಟೋ ವಿಡಿಯೋ ಕಳಿಸಿದ್ದ- ರೇಣುಕಾಸ್ವಾಮಿ ವಿರುದ್ಧ FIR ಕೂಡ ದಾಖಲಾಗಿತ್ತು: ನಟಿ ಚಿತ್ರಾಲ್

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಟಿ ಪವಿತ್ರಾ ಗೌಡಗೆ ಪದೇಪದೆ ಅಶ್ಲೀಲ ಫೋಟೋ ಮತ್ತು ವಿಡಿಯೋ ಕಳುಹಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಸುಮಾರು 17 ಮಂದಿಯನ್ನು ಬಂಧಿಸಲಾಗಿದೆ.

ಇದರ ನಡುವೆ ಫೇಕ್‌ ಅಕೌಂಟ್‌ಗಳ ಮೂಲಕ ಮೆಸೇಜ್‌ ಕಳುಹಿಸುತ್ತಿದ್ದ ಎಂದು ಮತ್ತೊಬ್ಬ ಕಿರುತೆರೆ ನಟಿ ಚಿತ್ರಾಲ್ ರಂಗಸ್ವಾಮಿ ವಿಡಿಯೋ ಮಾಡಿದ್ದು, ಹತ್ಯೆಯಾದ ವ್ಯಕ್ತಿ ಕಾಮುಕ ಆತ ಅಶ್ಲೀಲ ಫೋಟೋ ಮತ್ತು ವಿಡಿಯೋ ಕಳುಹಿಸಿ ಸ್ತ್ರೀಯರಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ ಎಂಬುವುದು ಸ್ಪಷ್ಟವಾಗುತ್ತಿದೆ.

ಇನ್ನು ರೇಣುಕಾಸ್ವಾಮಿ ಕುಟುಂಬಕ್ಕೆ ದೇವರು ಆದಷ್ಟು ಶಕ್ತಿ ಕೊಡಲಿ. ಮಾರ್ಚ್‌ ತಿಂಗಳಿನಲ್ಲಿ ರೇಣುಕಾಸ್ವಾಮಿ ಎಂಬ ವ್ಯಕ್ತಿ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಏಕೆಂದರೆ ಮೂರ್ನಾಲ್ಕು ಹೆಣ್ಣು ಮಕ್ಕಳಿಗೆ ಅದೇ ರೀತಿ ಮೆಸೇಜ್ ಮಾಡುತ್ತಿದ್ದಾನೆ ಎಂದು.

ಆತನ ಖಾತೆಯ ಹೆಸರು ಗೌತಮ್ ಎಂದಿತ್ತು. ನನಗೆ ಶಿಶ್ನದ ಫೋಟೋ, ಹಸ್ತಮೈಥುನ ಮಾಡಿಕೊಳ್ಳುವ ಫೋಟೋ ಅಥವಾ ವಿಡಿಯೋ ಬಂದ್ರೆ ತಕ್ಷಣವೇ ಡಿಲೀಟ್ ಮಾಡುತ್ತೀನಿ. ಈ ಅಕೌಂಟ್ ಹೆಸರನ್ನು ನೋಡಿದಾಗ ಎಲ್ಲೋ ನೋಡಿದ್ದೀನಿ ಅಂತ ನೆನಪಾಗಿ ನನ್ನ ಬ್ಲಾಕ್‌ ಲಿಸ್ಟ್‌ ಓಪನ್ ಮಾಡಿ ನೋಡಿದಾಗ ರೇಣುಕಾಸ್ವಾಮಿ ಅಕೌಂಟ್ ಇದೆ ಎಂದು ಚಿತ್ರಾಲ್ ಮಾತನಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಇಷ್ಟು ದಿನ ನಾನು ಯಾಕೆ ಶೇರ್ ಮಾಡಿರಲಿಲ್ಲ ಅಂದ್ರೆ ಇದನ್ನು ನೋಡಿ ನನಗೆ ಶಾಕ್ ಆಗಿತ್ತು ಹಾಗೂ ಇದನ್ನು ಸ್ಟೋರಿಯಲ್ಲಿ ಶೇರ್ ಮಾಡಿ ರಿಪೋರ್ಟ್ ಮಾಡಿ ಎನ್ನಲು ಆಗಲ್ಲ. ಏಕೆಂದರೆ ಇನ್‌ಸ್ಟಾಗ್ರಾಂ ಅನುಮತಿ ನೀಡುವುದಿಲ್ಲ. ಬೆತ್ತಲೆ ಫೋಟೋ ಕಳುಹಿಸುವುದು ಅಥವಾ ಟಾಪಿಕ್ ಡ್ರಾಗ್ ಮಾಡುವವರನ್ನು ನಾನು ಬ್ಲಾಕ್ ಮಾಡುತ್ತೀನಿ.

ಇನ್ನು ನಿಮ್ಮ ಬ್ಲಾಕ್‌ ಲಿಸ್ಟ್‌ನಲ್ಲಿ ಈ ವ್ಯಕ್ತಿ ಇದ್ರೆ ಚೆಕ್ ಮಾಡಿಕೊಳ್ಳಿ. ಮನೆಯಲ್ಲಿ ಅಷ್ಟು ಚೆನ್ನಾಗಿರುವ ಹೆಂಡತಿ ಇದ್ರು ಇವೆಲ್ಲಾ ಯಾಕೆ ಬೇಕ? ಸೋಷಿಯಲ್ ಮೀಡಿಯಾದಲ್ಲಿ ಇವೆಲ್ಲಾ ಕಾಮನ್ ಎಂದು ಅನೇಕರು ಅಂದುಕೊಳ್ಳುತ್ತಾರೆ. ಆದರೆ ಆ ರೀತಿ ಮೆಸೇಜ್‌ಗಳನ್ನು ನೋಡಿದಾಗ ಥು ಅನಿಸುತ್ತದೆ.

ಇಲ್ಲಿ ನಾನು ಯಾರಿಗೂ ಸಪೋರ್ಟ್ ಮಾಡುತ್ತಿಲ್ಲ ಆ ವ್ಯಕ್ತಿಯಿಂದ ಸಮಸ್ಯೆ ಆಗಿದೆ ಅಂದ್ಮೇಲೆ ನಾನು ಬ್ಲಾಕ್ ಮಾಡುತ್ತಿರುವೆ. ಬೇರೆ ಬೇರೆ ಖಾತೆಗಳಿಂದ ಸಾಕಷ್ಟು ಮೆಸೇಜ್ ಬರುತ್ತಿದೆ ಅದನ್ನು ಗಮನಿಸುತ್ತಿರುವೆ ಅದು ಕೂಡ ಬ್ಲಾಕ್ ಮಾಡುವೆ. ನಾವು ಏನೇ ಮಾತನಾಡಿದರೂ ನನ್ನನ್ನು ಜಡ್ಜ್‌ ಮಾಡುತ್ತಾರೆ. ಆದರೆ ಇದನ್ನು ತಿಳಿಸಲೇ ಬೇಕಿತ್ತು ಹೀಗಾಗಿ ಜನರಿಗೆ ತಿಳಿಸುತ್ತಿರುವೆ ಎಂದು ಚಿತ್ರಾಲ್ ಹೇಳಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ