CrimeNEWSದೇಶ-ವಿದೇಶ

ಅತ್ತಿಗೆಯ ಮೇಲೆಯೇ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿದ ಐವರು ಮೈದುನರು

ವಿಜಯಪಥ ಸಮಗ್ರ ಸುದ್ದಿ

ಲಕ್ನೋ: ತನ್ನ ಐದು ಮಂದಿ ಸಹೋದರರಿಗೇ ದುಡ್ಡುಕೊಟ್ಟು ತನ್ನ ಪತ್ನಿಯನ್ನೇ ಸಾಮೂಹಿಕ ಅತ್ಯಾಚಾರ ಬಳಕಿ ಹತ್ಯೆ ಮಾಡಿಸಿರುವ ಘಟನೆ ಫತೇಪುರ್‌ನಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು ಸದ್ಯ ವಿಚಾರಣೆ ನಡೆಸುತ್ತಿದ್ದಾರೆ.

ರೋಹಿತ್ ಲೋಧಿ, ರಾಮಚಂದ್ರ ಆಲಿಯಾಸ್ ಪುಟ್ಟು, ಶಿವಂ ಅಲಿಯಾಸ್ ಪಂಚಮ್, ಸೋನು ಲೋಧಿ ಎಂಬುವರೆ ಬಂಧಿತ ಆರೋಪಿಗಳಾಗಿದ್ದು, ಐದನೇ ಆರೋಪಿಯಾದ ನೊಂಕು ಲೋಧಿ ಪರಾರಿಯಾಗಿದ್ದಾನೆ. ಹತ್ಯೆಯಾದ ಮಹಿಳೆಯ ಪತಿ ದುಬೈನಲ್ಲಿದ್ದಾನೆ ಎಂದು ತಿಳಿದು ಬಂದಿದೆ.

ಏನಿದು ಪ್ರಕರಣ? ತವರು ಮನೆಗೆ ಹೋಗಿದ್ದ ಆತ್ತಿಗೆಯನ್ನು ಜಾತ್ರೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿ ಆಕೆಯನ್ನು ನಂಬಿಸಿ 5ಮಂದಿ ಮೈದುನರು ತವರು ಮನೆಯಿಂದ ಕರೆದುಕೊಂಡು ಬಂದಿದ್ದಾರೆ. ಬಳಿಕ ಆಕೆಯ ಮೇಲೆ ಐವರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ನಂತರ ಹತ್ಯೆ ಮಾಡಿದ್ದು ಅಲ್ಲದೆ ಆಕೆಯ ಗುರುತು ಸಿಗದಂತೆ ಮಾಡಲು ಮುಖಕ್ಕೆ ಇಟ್ಟಿಗೆಗಳಿಂದ ಹೊಡೆದು ವಿರೂಪಗೊಳಿಸಿದ್ದಾರೆ.

ನಂತರ ಆಕೆಯ ಮೃತದೇಹವನ್ನು ಬೆತ್ತಲೆಯಾಗಿಯೇ ಫತೇಪುರ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರ ನೀರಿನ ಟ್ಯಾಂಕ್‌ನಲ್ಲಿ ಬಿಸಾಡಿ ಹೋಗಿದ್ದಾರೆ. ಆ ಮಾರ್ಗವಾಗಿ ಬಂದ ಗ್ರಾಮಸ್ಥರು ಮೃತದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಸಂತ್ರಸ್ತೆಯ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಜತೆಗೆ ಆ ಸ್ಥಳ ಪರಿಶೀಲನೆ ಮಾಡಿದಾಗ ಆರೋಪಿಗಳು ಕುಡಿದು ಬಿಸಾಡಿದ ಮದ್ಯದ ಬಾಟಲಿ ಮತ್ತು ತಿನಿಸುಗಳು ಸಿಕ್ಕಿವೆ.

ಈ ಆಧಾರದ ಮೇರೆಗೆ ಈ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವ ಬಗ್ಗೆ ಈ ದುರುಳರು ಬಾಯಿಬಿಟ್ಟಿದ್ದಾರೆ. ಇನ್ನಷ್ಟು ವಿಚಾರಣೆ ತೀವ್ರಗೊಳಿಸಿದಾಗ ಸಂತ್ರಸ್ತೆಯ ಪತಿಯೇ ಇದಕ್ಕೆ ಸಾಥ್ ನೀಡಿರುವುದು ಬೆಳಕಿಗೆ ಬಂದಿದೆ.

ತವರು ಮನೆಗೆ ಹೋಗಿದ್ದ ಪತ್ನಿಯನ್ನು ಕೊಲೆ ಮಾಡಿದರೆ ಹಣ ನೀಡುವುದಾಗಿ ಸಂತ್ರಸ್ತೆಯ ಪತಿ, ಅವನ ಐದು ಮಂದಿ ಸಹೋದರಿಗೆ ಹಣದ ಆಸೆ ತೋರಿಸಿದ್ದ. ಹಣದ ಮೋಹಕ್ಕೆ ಒಳಗಾದ ಸಹೋದರರು ಅತ್ತಿಗೆಯನ್ನೇ ಕೊಲೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆಯ ಪತಿ ದುಬೈನಲ್ಲಿದ್ದಾನೆ. ಐದನೇ ಆರೋಪಿಗಾಗಿ ತೀವ್ರ ಶೋಧಕಾರ್ಯದಲ್ಲಿ ತೊಡಗಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನು ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವುದು ಸಾಬೀತಾಗಿದೆ. ಅಲ್ಲದೆ ತಲೆಗೆ ಪೆಟ್ಟು ಬಿದ್ದ ಕಾರಣ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ