NEWSನಮ್ಮರಾಜ್ಯನಿಮ್ಮ ಪತ್ರಸಿನಿಪಥ

BMTC ಜಯನಗರ 4ನೇ ಡಿಪೋಗೆ ಭೇಟಿ ನೀಡಿದ ಮಾಜಿ ಕಂಡಕ್ಟರ್‌, ಸೂಪರ್ ಸ್ಟಾರ್ ರಜನಿಕಾಂತ್ : ಸಂಸ್ಥೆಯ ನೌಕರರು ಖುಷ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಜೈಲರ್ ಸಿನಿಮಾದ ಸಕ್ಸಸ್ ಬೆನ್ನಲ್ಲೇ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ತಲೈವಾ ಭೇಟಿ ನೀಡಿದ್ದು, ಮೊದಲು ಜೀವನಕ್ಕೆ ಆಧಾರವಾಗಿದ್ದ ಬಿಎಂಟಿಸಿ ನೆನಸಿಕೊಂಡು ಜಯನಗರದ ಟಿ.ಬ್ಲಾಕ್‌ನಲ್ಲಿರುವ ಬಿಎಂಟಿಸಿ 4ನೇ ಘಟಕಕ್ಕೆ ಭೇಟಿ ನೀಡಿ ನೌಕರರೊಂದಿಗೆ ಕಾಲ ಕಳೆದಿದ್ದಾರೆ.

ಇಂದು ಜಯನಗರದದ ಡಿಪೋಗೆ ರಜನಿಕಾಂತ್‌ ದಿಢೀರ್‌ ಭೇಟಿ ನೀಡಿದ್ದರಿಂದ ನೌಕರರು ಅಚ್ಚರಿಗೊಂಡು ಕೆಲ ಕ್ಷಣ ಮೂಕ ವಿಸ್ಮಿತರಾದರು. ಬಳಿಕ ತಮ್ಮ ಕೈಯನ್ನು ತಾವು ಗಿಂಡಿಕೊಂಡು ಇದು ಕನಸಲ್ಲ ಎಂದು ತಲೈವಾ ಬಳಿ ಬಂದು ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು.

ಇತ್ತ ಚಿತ್ರರಂಗಕ್ಕೆ ಬರುವ ಮುನ್ನ ಕಾರ್ಯ ನಿರ್ವಹಿಸಿದ್ದ ಜಯನಗರ ಡಿಪೋಗೆ ತಲೈವಾ ಕೂಡ ಸರ್ಪ್ರೈಸ್ ವಿಸಿಟ್ ನೀಡಬೇಕು ಎಂದು ತಮ್ಮ ಗಳೆಯ ನಿವೃತ್ತ ಚಾಲಕ ರಾಜಶೇಖರ್‌ ಬಹದ್ದೂರ್‌ ಅವರ ಬಳಿ ಹೇಳಿಕೊಂಡು ಅದೇ ರೀತಿ ಮಂಗಳವಾರ ಭೇಟಿ ನೀಡಿದರು

ಈ ವೇಳೆ ಕಂಡಕ್ಟರ್- ಡ್ರೈವರ್‌ಗಳ ಜತೆ ತಲೈವಾ ಮಾತುಕತೆ ನಡೆಸಿದರು. ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರು ಬೆಂಗಳೂರಿಗೆ ಯಾವಾಗಲು ಮಾರು ವೇಷದಲ್ಲೇ ಬರುತ್ತಾರೆ. ಈಗಲೂ ಮಾರು ವೇಷದಲ್ಲೇ ಬಂದ ತಲೈವಾ ಡಿಪೋಗೆ ವವಿಸಿಟ್‌ ಮಾಡುವಾಗ ಮಾತ್ರ ಅದನ್ನು ಬದಿಗೆ ಸರಿಸಿ ಬಂದರು.

ಹೌದು! ಸಾಕಷ್ಟು ವರ್ಷಗಳ ಬಳಿಕ ರಜನಿಕಾಂತ್ ತನಗೆ ಮತ್ತು ತನ್ನ ಕುಟುಂಬವನ್ನು ಸಾಕಲು ಶಕ್ತಿ ನೀಡುತ್ತಿದ್ದ ಸಂಸ್ಥೆಯ ಒಡನಾಟವನ್ನು ಮರೆಯದೆ ಬಂದಿರುವುದು ನಮಗೂ ಭಾರಿ ಸಂತಸವಾಗುತ್ತಿದೆ ಎಂದು ನೌಕರರು ತಮ್ಮ ಮಾತನ ಮೂಲಕ ವಿಜಯಪಥದೊಂದಿಗೆ ಖುಷಿ ಹಂಚಿಕೊಂಡರು.

ಹತ್ತಾರು ವರ್ಷಗಳ ಕಲಾ ಬೆಂಗಳೂರಿನಲ್ಲೇ ನೆಲೆಸಿದ್ದ ತಲೈವಾ ಅವರಿಗೆ ಬೆಂಗಳೂರು ಅದರಲ್ಲೂ ಜಯನಗರದ ಟಿ.ಬ್ಲಾಕ್‌ನ ಬಿಎಂಟಿಸಿ ಡಿಪೋನ ನಂಟ್ಟು ಬಿಡಿಸಲಾಗದ ಬಂಧನದ ಗಂಟಾಗಿದೆ ಎಂದರೆ ಸುಳ್ಳಾಗಲಾರದು.

ಚಿತ್ರರಂಗಕ್ಕೆ ಬರುವ ಮುನ್ನ ಜಯನಗರದ ಡಿಪೋದಲ್ಲಿ ಕಂಡೆಕ್ಟರ್ ಆಗಿ ತಲೈವಾ ಕಾರ್ಯ ನಿರ್ವಹಿಸಿದ್ದರು. ಇಂದು ಸರ್ಪ್ರೈಸ್ ವಿಸಿಟ್ ಮಾಡುವ ಮೂಲಕ ಕಂಡೆಕ್ಟರ್- ಡ್ರೈವರ್‌ಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಸುಮಾರು ಹತ್ತು ನಿಮಿಷಗಳ ಕಾಲ ನಟ ನೌಕರರೊಂದಿಗೆ ಮಾತುಕತೆ ನಡೆಸಿದ್ದಾರೆ. ರಜನಿಕಾಂತ್ ಅವರೊಂದಿಗೆ ಕಳೆದ ಕ್ಷಣವನ್ನು ನೌಕರರು ತಮ್ಮ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಖುಷಿಪಡುತ್ತಿದ್ದಾರೆ.

ಇನ್ನು ಡಿಪೋಗೆ ಭೇಟಿ ನೀಡಿ ಹಳೆಯ ನೆನಪನ್ನು ನಟ ಸ್ಮರಿಸಿದ್ದರು. ವೈಟ್ & ವೈಟ್ ಧಿರಿಸಿನಲ್ಲಿ ತಲೈವಾ ಮಿಂಚಿದರು. ರಜನಿಕಾಂತ್ ಅವರನ್ನು ನೋಡಿ ಖುಷಿಯಲ್ಲಿ ಸಿಬ್ಬಂದಿಗಳು ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ತಲೈವಾ ಭೇಟಿಯಿಂದ ಡಿಪೋನಾ ಸಿಬ್ಬಂದಿಯಲ್ಲಿ ಸಂಭ್ರಮ ಮನೆ ಮಾಡಿತ್ತು.

ಹಲವು ಕಾರ್ಯಕ್ರಮದಲ್ಲಿ ತಾವು ಈ ಹಿಂದೆ ಕಂಡೆಕ್ಟರ್‌ಆಗಿ ಕಾರ್ಯ ನಿರ್ವಹಿಸಿದ್ದರ ಬಗ್ಗೆ ನಟ ಮಾತನಾಡಿದ್ದಾರೆ. ಈಗಲೂ ಮಾತನಾಡುತ್ತಿರುತ್ತಾರೆ. ನಾನು ರೈಟ್ ರೈಟ್ ಅಂತಾ ಟಿಕೆಟ್ ಕೊಟ್ಟ ನೆನಪನ್ನು ಎಂದಿಗೂ ನಾನು ಮರೆಯುವುದಿಲ್ಲ ಎಂದು ತಲೈವಾ ಹೇಳುವ ಮೂಲಕ ಅಂದಿನ ದಿನಗಳನ್ನು ಮೆಲುಕುಹಾಕಿದರು.

Leave a Reply

error: Content is protected !!
LATEST
ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ನೆರೆ ಭೀತಿಯಿಂದ ಬೆಂಗಳೂರಿಗರ ರಕ್ಷಿಸಿ: ಡಿಸಿಎಂಗೆ ಎಎಪಿ ರಾಜ್ಯಾಧ್ಯಕ್ಷ ಆಗ್ರಹ ಮಧ್ಯಮ ವರ್ಗದ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ BBMP-ಡೆಂಗ್ಯೂ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ : ಸುರಳ್ಕರ್ ವಿಕಾಸ್ ಕಿಶೋರ್ ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ 18 ರಿಂದ 45 ವರ್ಷದವರಿಂದ ಅರ್ಜಿ ಆಹ್ವಾನ ಪ್ರತಿಷ್ಠಿತ ಶಾಲೆಗಳಿಗೆ ಸೇರ ಬಯಸುವ ಮಕ್ಕಳಿಂದ ಅರ್ಜಿ ಆಹ್ವಾನ: ಷರತ್ತು ಅನ್ವಯ ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ KSRTC: ₹8.76 ಲಕ್ಷ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶ... BMTC ಚಾಲಕರಿಗೆ ಕೂಡಲೇ ವೇತನ ಪಾವತಿಸಿ: ಎಎಪಿಯ ಜಗದೀಶ್ ವಿ. ಸದಂ ಆಗ್ರಹ ಬಸವನಹಳ್ಳಿ: ನಿವೃತ್ತ ಸಹಾಯಕ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಿಕ್ಕಮಾಯಿಗೌಡರ ಪತ್ನಿ ಸಿದ್ದಮ್ಮ ನಿಧನ KSRTC ನೌಕರರ 2024ರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಬಿಡುಗಡೆಗೆ ಜೂನ್‌ 6ರಬಳಿಕ ನಿರ್ಧಾರ: ರಾಮಲಿಂಗಾರೆಡ್ಡಿ