NEWSನಮ್ಮಜಿಲ್ಲೆಬೆಂಗಳೂರು

ಆಸ್ತಿ ತೆರಿಗೆ ಪಾವತಿಸದ 7 ಆಸ್ತಿಗಳ ಹರಾಜು ಹಾಕಿದ ಜಿಬಿಎ: ಮುನೀಶ್ ಮೌದ್ಗಿಲ್

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಆಸ್ತಿ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಆಸ್ತಿಗಳ ಹರಾಜು ಮಾರಾಟ ಮಾಡಲಾಗುತ್ತಿದೆ ಎಂದು ಜಿಬಿಎ ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.

ಸುಮಾರು 7,000 ಆಸ್ತಿಗಳಿಂದ ₹437 ಕೋಟಿ ರೂಪಾಯಿಗಳಷ್ಟು ಆಸ್ತಿ ತೆರಿಗೆ ಬಾಕಿ ಉಳಿದಿದೆ. ಪಾವತಿಸದ ತೆರಿಗೆಗಾಗಿ ಬೇಡಿಕೆ ನೋಟಿಸ್‌ಗಳನ್ನು ಜಾರಿ ಮಾಡಲಾಗಿತ್ತು. ಆದರೂ ಪಾವತಿ ಮಾಡಿಲ್ಲ ಎಂದು ಇಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

SMS, IVRS ಕರೆಗಳು ಹಾಗೂ ಸ್ಥಳೀಯ ಮಟ್ಟದಲ್ಲಿ ಫಾಲೋ ಅಪ್ ಮಾಡಿದರೂ ಪಾವತಿ ಆಗಲಿಲ್ಲ. ಆಸ್ತಿಗಳ ಜಪ್ತಿ ಆದೇಶಗಳನ್ನು ಹೊರಡಿಸಲಾಯಿತು. ಆದಾಗ್ಯೂ ಪಾವತಿಸಲಿಲ್ಲ.

ಜಪ್ತಿ ಆದೇಶ ಹೊರಡಿಸಿದ ಬಳಿಕವೂ 60 ದಿನಗಳಿಗಿಂತ ಹೆಚ್ಚು ಅವಧಿ ಕಳೆದರೂ ಪಾವತಿ ಆಗದ ಕಾರಣ, ಕೊನೆಯ ಕ್ರಮವಾಗಿ ಹಾಗೂ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024 ಅನ್ವಯ, ಆಸ್ತಿಗಳನ್ನು ಹರಾಜಿಗೆ ಇಡಲಾಗಿದೆ ಎಂದು ತಿಳಿಸಿದರು.

ಇನ್ನು ಹರಾಜು ನಡೆಯುವ ಮೊದಲು ಬಾಕಿದಾರರು ತಮ್ಮ ಬಾಕಿ ತೆರಿಗೆಯನ್ನು ಪಾವತಿಸುವ ಅವಕಾಶವಿದ್ದು, ಪಾವತಿ ಮಾಡಿದಲ್ಲಿ ಹರಾಜು ರದ್ದುಪಡಿಸಲಾಗುತ್ತದೆ. ಆದರೆ ಹಲವರು ಇನ್ನೂ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಬಾಕಿ ಇರುವ ಪ್ರಕರಣಗಳಿಂದ ಪ್ರಾರಂಭಿಸಿ, ವಲಯಗಳ ಜಂಟಿ ಆಯುಕ್ತರು ಇಂದು (ಫೆ.21) ಹರಾಜು ಪ್ರಕ್ರಿಯೆ ನಡೆಸಿದ್ದಾರೆ ಎಂದರು.

ಇಂದಿನ ಹರಾಜಿನಲ್ಲಿ ಆಸ್ತಿ ತೆರಿಗೆ ಬಾಕಿ ವಸೂಲಿಗಾಗಿ ಆಸ್ತಿಗಳು ಮಾರಾಟವಾಗಿರುವ ವಿವರ:
1. ಉತ್ತರ ನಗರ ಪಾಲಿಕೆಯಲ್ಲಿ – 2
2. ಪೂರ್ವ ನಗರ ಪಾಲಿಕೆಯಲ್ಲಿ – 5
ಹರಾಜು ಮಾರಾಟ ಪ್ರಕ್ರಿಯೆ ನಿಯಮಿತವಾಗಿ ಮುಂದುವರಿಯಲಿದೆ. ಹರಾಜು ನೋಟಿಸ್ ಪಡೆದಿರುವ ಎಲ್ಲ ಬಾಕಿದಾರರು ತಮ್ಮ ಬಾಕಿ ತೆರಿಗೆಯನ್ನು ತಕ್ಷಣ ಪಾವತಿಸಲು ವಿನಂತಿಸಲಾಗಿದೆ.

Megha
the authorMegha

Leave a Reply

error: Content is protected !!
Latest news
ನಡದು ಹೋಗುತ್ತಿರುವ ನಮ್ಮ ನೌಕರರಿಗೆ ಕೃತಜ್ಞತೆ ಸಲ್ಲಿಸಿ: ಸಾರಿಗೆ ನೌಕರ ಮನವಿ ಸಾರಿಗೆ ನೌಕರರ 2ನೇ ದಿನದ ಪಾದಯಾತ್ರೆ: 30 ಕಿಮೀ ನಡಿಗೆ ಯಶಸ್ವಿ- ಹಿರಿಯೂರಿನಲ್ಲಿ ವಾಸ್ತವ್ಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ- ಯಾವ ಜಿಲ್ಲೆಗೆ ಯಾವ ಸ್ಥಾನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ: ಶೇ.84ರಷ್ಟು ವಿದ್ಯಾರ್ಥಿಗಳು ಪಾಸ್‌ ಮೊದಲ ದಿನದ ಸಾರಿಗೆ ನೌಕರರ ಪಾದಯಾತ್ರೆ ಯಶಸ್ವಿ, ನಾಳೆ ಬೆಳಗ್ಗೆ 6 ಗಂಟೆಯಿಂದ ಮುಂದುವರಿಕೆ KSRTC: ಇಂದು ಸಾರಿಗೆ ಸಚಿವರ ಭೇಟಿಯಾದ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು KSRTC: ಸಾರಿಗೆ ನೌಕರರ ಪಾದಯಾತ್ರೆ ಯಶಸ್ವಿಗಾಗಿ ಬೇರೆ ಸಂಘಟನೆಗಳೂ ಸಾಥ್‌! ಆಟೋ ಗ್ಯಾಸ್ ಕೊರತೆ - ವದಂತಿಗಳಿಗೆ ಕಿವಿಗೊಡಬೇಡಿ - ಸಾರ್ವಜನಿಕರಿಗೆ ಕರೆ ಚಿತ್ರದುರ್ಗ: ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಾರಿಗೆ ನೌಕರರ ಪಾದಯಾತ್ರೆ ಆರಂಭ ಮುಳ್ಳಯ್ಯನಗಿರಿಗೆ ಪ್ರವಾಸಕ್ಕೆ ಬಂದಿದ್ದ 16 ವರ್ಷದ ವಿದ್ಯಾರ್ಥಿನಿ ನಾಪತ್ತೆ