ಬೆಂಗಳೂರು: ನಿರಂತರವಾಗಿ ಕಾವೇರಿ ವಿಚಾರದಲ್ಲಿ ಹೋರಾಟ ಮಾಡಿದರೂ, ನಮಗೆ ಸರಿಯಾದ ನ್ಯಾಯ ಸಿಕ್ಕಿಲ್ಲ. ನಮ್ಮ ಜಲಾಶಯಗಳಿಗೆ ಬಂದಂತಹ ನೀರನ್ನು ಏಕಾಏಕಿ ಬಿಟ್ಟು, ನಮ್ಮನ್ನು ಖಾಲಿ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ನಾವು ಆ ಭಾಗದ ರೈತರಾಗಿ ಅದೇ ನೀರನ್ನು ನಂಬಿಕೊಂಡಿರುವ ಜನ. ನಮ್ಮ ಮೇಲೆ ಚಪ್ಪಡಿ ಎಳೆಯುವ ಕೆಲಸವನ್ನು ಈ ಸರ್ಕಾರದವರು ಮಾಡಿದ್ದಾರೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ರೈತಪರ ಸಂಘಟನೆಗಳು, ಕನ್ನಡ ಪರ ಹೋರಾಟ ಸಂಘಗಳು, ನಾಡಿನ ನೀರಾವರಿ ತಜ್ಞರು, ಸಾಹಿತಿಗಳು ಹಾಗೂ ಚಿಂತಕರನ್ನೊಳಗೊಂಡ ‘ನಮ್ಮ ಜಲ ನಮ್ಮದು – ಬನ್ನಿ ಮಾತಾಡೋಣ’ ವಿಶೇಷ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದರು.
ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗುವಂತಹ ವಿಚಾರ ಬಹಳಾ ಮುಖ್ಯವಾದದ್ದು. ಏಕೆಂದರೆ ಇಂದು ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಅವರು ಮೇಕೆದಾಟು ಯೋಜನೆ ಅನುಷ್ಟಾನಕ್ಕೆ ಪಾದಯಾತ್ರೆ ಮಾಡಿದವರು. ಆದರೆ, ಈಗ ಅಧಿಕಾರಕ್ಕೆ ಬಂದ ಬಳಿಕ ಯೋಜನೆಗೆ ಯಾವುದೇ ಹಣ ಮೀಸಲಿಟ್ಟಿಲ್ಲ. ಇಲ್ಲಿ ಎಂತಹ ರಾಜಕರಣ ಮಾಡುತ್ತಿದ್ದಾರೆ ಎಂದು ಜನರಲ್ಲಿ ಜಾಗೃತ್ತಿ ಮೂಡಿಸಬೇಕು ಎಂದು ಕರ್ನಾಟಕದ ಸರ್ವ ಸಂಘ ಸಭೆ ನಡೆಸಲು ಯೋಚನೆ ಮಾಡಿ ಈ ದುಂಡು ಮೇಜಿನ ಸಭೆ ಸೇರಲಾಗಿದೆ ಎಂದರು.
ನೀರು ಪೋಲಾಗುವುದನ್ನು ತಪ್ಪಿಸಬೇಕು: “ಹೊಗೇನಿಕಲ್ ಸುಪ್ರೀಂ ಕೋರ್ಟ್ 2007ರ ತೀರ್ಪು ಬಂದನಂತರ ಏನು ಹೆಚ್ಚುವರಿ ನೀರು 178 ಟಿಎಂಸಿ ತಮಿಳುನಾಡಿಗೆ ಕೊಟ್ಟು ಉಳಿದ್ದನ್ನು ಬಳಸಿಕೊಳ್ಳಬಹುದು ಎಂಬ ಅಭಿಪ್ರಾಯ ಬಂದಿದೆ. ಅದರ ಪ್ರಕಾರ ಹೊಗೆನಿಕಲ್ ಫಾಲ್ಸ್‌ನಲ್ಲಿ 25 ಟಿಎಂಸಿ ನೀರು ಬಳಸಿಕೊಳ್ಳುವುದಕ್ಕೆ ತಮಿಳುನಾಡು ಸರ್ಕಾರ ಈಗಾಗಗಲೇ ಕಾರ್ಯಯೋಜನೆ ಜಾರಿಗೆ ತಂದಿದೆ. ಹೀಗಿರುವಾಗ ನಾವೇಕೆ ಮೇಕೆದಾಟು ಅಣೇಕಟ್ಟು ನಿರ್ಮಾಣ ಮಾಡಬಾರದು. ಸುಮಾರು 50-60 ಟಿಎಂಸಿ ನೀರು ಪೋಲಾಗುವುದನ್ನು ಏಕೆ ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ ಎಂಬುದು ನಮ್ಮ ಆತಂಕ ಎಂದು ಹೇಳಿದರು.
ಎರಡನೇಯದಾಗಿ ಅಂದು ಸುಪ್ರೀಂ ಕೋರ್ಟ್ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ನಿಯೋಜಿಸದ ಪ್ರಮಾಣ ಬಹಳಾ ಕಡಿಮೆ. ಅದನ್ನು ಹೆಚ್ಚುವರಿ ಮಾಡಬೇಕು. 15 ವರ್ಷಗಳಲ್ಲಿ ಬೆಂಗಳೂರಿನ ಜನಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ನಗರ ಭಾಗಕ್ಕೆ ಕುಡಿಯುವ ನೀರಿನ ಸಲುವಾಗಿ 30 ಟಿಎಂಸಿ ನೀರನ್ನು ಕೊಡಲು ಆದೇಶ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಮರು ಪರಿಶೀಲನೆ ಅರ್ಜಿಯನ್ನು ರಾಜ್ಯ ಸರ್ಕಾರ ಯಾಕೆ ಹಾಕ್ಬಾರ್ದು? ಈ ಅಂಶಗಳನ್ನು ಸರ್ಕಾರದ ಗಮನಕ್ಕೆ ತರುವ ಅಗತ್ಯವಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು. ಸಮಿತಿಯ ನಿರ್ದೇಶನದಂತೆ ಎಂದ್ಹೇಳಿ ನಾಡಿನ ರೈತರ ಬಲಿಕೊಟ್ಟ ಸರ್ಕಾರ: ಮುಖ್ಯಮಂತ್ರಿ ಚಂದ್ರು ಕಿಡಿ
ಸಭೆಯ ತೆಗೆದುಕೊಂಡ ನಿರ್ಧಾರಗಳೇನು?: 1. ರಾಜ್ಯದ ಕಾವೇರಿ ಜಲಾಶಯದಲ್ಲಿ ಈಗಾಗಲೇ ತಮಿಳುನಾಡಿಗೆ ನೀರು ಹರಿಸಿ ರೈತರಿಗೆ ದ್ರೋಹ ಬಗೆದಿರುವ ಸರ್ಕಾರದ ವರ್ತನೆಯನ್ನು ಈ ಸಭೆ ಸಂಪೂರ್ಣವಾಗಿ ಖಂಡಿಸುತ್ತದೆ.
2. ಕಾವೇರಿ ನೀರಿನ ನಿರ್ವಹಣಾ ಮಂಡಳಿ ಆದೇಶಿಸಿರುವ 5000 ಕ್ಯೂ ಸೆಕ್ಸ್ ನೀರನ್ನು ಯಾವುದೇ ಕಾರಣಕ್ಕೂ ಬಿಡಬಾರದು. 3. ಕದ್ದು ಮುಚ್ಚಿ ನೀರು ಬಿಡಲು ಹೊರಟರೆ ರಸ್ತೆಗಿಳಿದು ಪ್ರತಿಭಟನೆ ನಡೆಸಲು ಸಮಿತಿ ತೀರ್ಮಾನಿಸಿ ರೈತರಿಗೆ ಕರೆ ನೀಡಿದೆ.
- ಮೇಕೆದಾಟು ಜಲಾಶಯ ನಿರ್ಮಾಣ ಕೂಡಲೆ ಕೈಗೆತ್ತಿಕೊಳ್ಳುವುದು. 5. ಸಮುದ್ರಕ್ಕೆ ಹೆಚ್ಚುವರಿ ನೀರನ್ನು ಸಂಗ್ರಹಿಸಿಕೊಂಡು ಸಂಕಷ್ಟ ಸಮಯದಲ್ಲಿ ಕುಡಿಯುವ ನೀರಿಗೆ ಬಳಸಲು ಒತ್ತಾಯುಸುತ್ತಿದೆ. 6. ಬೆಂಗಳೂರಿಗೆ ಸುಪ್ರೀಂ ಕೋರ್ಟ್ ನಿಗದಿ ಮಾಡಿರುವ ಕುಡಿಯುವ ನೀರಿನ ಪ್ರಮಾಣವನ್ನು ಜನಸಂಖ್ಯೆ ಏರಿಕೆಯಾಗಿರುವ ಕಾರಣ 30 ಟಿಎಂಸಿ ನಿಗದಿ ಪಡಿಸಲು ಸರ್ವೋತ್ತಮ ನ್ಯಾಯಾಲಯಕ್ಕೆ ಬೇಡಿಕೆ, ಒತ್ತಾಯ.
-
ಮಳೆ ಕಡಿಮೆ ಬಂದ ವರ್ಷ ನೀರು ಬಿಡುವ ಪ್ರಮಾಣ ಸಂಕಷ್ಟ ಸೂತ್ರ ಕೇಂದ್ರ ಸರ್ಕಾರ ತಕ್ಷಣವೇ ಜಾರಿ ಮಾಡಬೇಕು. 8. ಕಾವೇರಿ ಪ್ರಾಧಿಕಾರ ಸ್ವಾಯತ್ತತೆ ಪ್ರಾಧಿಕಾರವನ್ನು ರಚಿಸಬೇಕು. ಅದರ ಮುಖೇನ ತೀರ್ಮಾನವಾಗಬೇಕೆಂಬ ಈ 8 ತಿರ್ಮಾನಗಳನ್ನು ತೆಗೆದುಕೊಂಡು ಸಭೆಯಲ್ಲಿ ಅಂಗೀಕರಿಸಲಾಯಿತು.
ದುಂಡು ಮೇಜಿನ ಸಭೆಯಲ್ಲಿ ಮುಖ್ಯಮಂತ್ರಿ ಚಂದ್ರು, ಪೃಥ್ವಿ ರೆಡ್ಡಿ, ತಿಮ್ಮೇಗೌಡ (ನಿವೃತ್ತ ಎಂಡಿ ಕಾವೇರಿ ಜಲನಿಗಮ), ಸಿ. ಚಂದ್ರಶೇಖರ್ (ಕಾವೇರಿ ಇತಿಹಾಸ ವಾದ ವಿವಾದಗಳ ಲೇಖಕರು), ಕಪ್ಪಣ್ಣ ( ನಾಟಕ ರಂಗ ), ಕ್ಯಾ. ರಾಜಾರಾವ್ (ಜಲ ಸಂರಕ್ಷಣಕಾರರು), ಆಂಜನೇಯ ರೆಡ್ಡಿ ( ಶಾಶ್ವತ ನೀರಾವರಿ ಹೋರಾಟ ಸಮಿತಿ), ಸುನಂದ ಜಯರಾಮ (ರೈತ ಹೋರಾಟಗಾರರು), ಪ್ರಕಾಶ್ ಕಮ್ಮರಡಿ ( ಕೃಷಿ ಬೆಲೆ ಆಯೋಗದ ಅಧ್ಯಕ್ಷರು), ಪ್ರವೀಣ ಶೆಟ್ಟಿ (ಕರವೇ), ಕುಮಾರಸ್ವಾಮಿ ( ಜಯ ಕರ್ನಾಟಕ ಜನಪ್ರ ವೇದಿಕೆ ) ರಾಮಚಂದ್ರಪ್ಪ ( ಜಯ ಕರ್ನಾಟಕ ಸಂಘಟನೆ ), ರಫಾಯಿಲ್ ರಾಜ್ ( ಕನ್ನಡ ಕ್ರೈಸ್ತರ ಒಕ್ಕೂಟ ) ವ.ಚ. ಚನ್ನೇಗೌಡ ( ಕರ್ನಾಟಕ ವಿಕಾಸ ಸಂಘ ) ಮಂಜುನಾಥ್ (ಕನ್ನಡ ಸೇನೆ ), ಡಾ ಜಗದೀಶ್ ಗೌಡ ಕರವೇ, ಎಂ ಬಸವರಾಜ್ ಪಡುಕೋಣೆ, ಡಾ. ಬಿ ವಿ ರಾಜಾರಾಮ್ ರಾ. ನಂ. ಚಂದ್ರಶೇಖರ, ಬಿ ನಾರಾಯಣ್ (ಸಮಾಜವಾದಿ ಪಕ್ಷ ) ಇತರರು ಪಾಲ್ಗೊಂಡಿದ್ದರು.