ವಿಷಯ : ವೈದ್ಯಕೀಯ ಅಸಮರ್ಥತೆಯಿಂದ ಬಳಲುತ್ತಿದ್ದು ನನಗೆ ಸುಮಾರು ನಾಲ್ಕು ವರ್ಷದಿಂದ ನನ್ನ ಎಡಭಾಗದ ಕಣ್ಣಿನ ಸಮಸ್ಯೆ ಉಂಟಾಗಿ ಮಂಜು ಮಂಜಾಗಿ ಕಾಣತೊಡಗಿತ್ತು. ಸುಮಾರು ನಾಲ್ಕರಿಂದ ಐದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು ನನ್ನ ಈ ಕಣ್ಣಿನ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ನಮ್ಮ ಸಾರಿಗೆ ಉನ್ನತ ಕೇಂದ್ರ ಕಚೇರಿ ಅಧಿಕಾರಿಗಳಿಗೆ ಸುಮಾರು ಎರಡು ತಿಂಗಳಿಂದ ಮನವಿ ಮಾಡಿಕೊಂಡರು ಸಹ ನನಗೆ ಕರ್ತವ್ಯ ನೀಡದೆ ಮೀಟಿಂಗ್ ಆಗಿಲ್ಲ ಇವತ್ತು ಬಾ ನಾಳೆ ಬಾ ಅಂತ ಹೇಳಿ ಕಳಿಸ್ತಿದ್ದಾರೆ.
ನಾನು ಮನವಿ ಕೊಡಲು ಹೋದರೆ ಸ್ವೀಕರಿಸುತ್ತಿಲ್ಲ ಆದ್ದರಿಂದ ನಾನು ಏನು ಮಾಡಬೇಕು ಎಂಬುದು ನನಗೆ ತಿಳಿತಾ ಇಲ್ಲ. ಘಟಕ ವ್ಯವಸ್ಥಾಪಕರಿಗೆ ಹಲವಾರು ಬಾರಿ ಮನವಿ ಮಾಡಿಕೊಂಡರು ಅವರ ಉತ್ತರ ಒಂದೇ ಮೇಲಧಿಕಾರಿಗಳು ಆರ್ಡರ್ ಕೊಟ್ಟರೆ ಮಾತ್ರ ಕರ್ತವ್ಯ ನೀಡುತ್ತೇನೆ ಎಂಬುವುದು.
ಮೇಲಧಿಕಾರಿಗಳನ್ನು ಕೇಳಿದರೆ ಅವರು ಡಿಪೋದಿಂದ ಡಿಎಂ ಅವರಿಂದ ಯಾವುದೇ ಸೂಚನೆ ಬಂದಿಲ್ಲ ಆದ್ದರಿಂದ ಕರ್ತವ್ಯ ನೀಡುವವರೆಗೂ ಕಾಯಿರಿ ಇಲ್ಲ ಅಂದ್ರೆ ನಿಮ್ಮ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳುತ್ತಿದ್ದಾರೆ. ಅದಕ್ಕೆ ನನಗಂತೂ ಈ ಸಮಸ್ಯೆ ಯಾವ ರೀತಿ ಬಗೆಹರಿಸಿಕೊಳ್ಳಬೇಕೆಂಬುದು ತಿಳಿಯುತ್ತಿಲ್ಲ.
ಇನ್ನಾದರೂ ನನಗೆ ಕರ್ತ್ಯತ್ಯ ನೀಡಬೇಕು. ಕೆಲಸವಿಲ್ಲದೆ ಸಂಬಳ ಬಾರದೆ ಬೆಂಗಳೂರು ಮಹಾನಗರದಂತ ಕಾಂಕ್ರೀಟ್ ಕಾಡಿನಲ್ಲಿ ಮನೆ ಬಾಡಿಗೆ ಮಕ್ಕಳ ಸ್ಕೂಲ್ ಫೀಸ್ ಕಟ್ಟಲಾಗದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ದಯವಿಟ್ಟು ವೈದ್ಯಕೀಯ ಅಸಮರ್ಥತೆಯಿಂದ ಬಳಲುತ್ತಿರುವ ನನಗೆ ಯಾವುದಾದರೂ ಕರ್ತವ್ಯ ನಿರ್ವಹಿಸಲು ಅನುಮತಿ ಮಾಡಿಕೊಡಿ ಇದು ನನ್ನ ವಿನಂತಿ.
l ಅಮರಪ್ಪ ಮಲ್ಲಪ್ಪ ಬಂಜವಾಡಗಿ
ಘಟಕ -10, ಬಿಎಂಟಿಸಿ, ಈಶಾನ್ಯ ವಲಯ