ಕಿಲಾ: ಮದುವೆಯಾದ 20 ದಿನಗಳ ನಂತರ ಪತ್ನಿಯನ್ನು ಆಕೆ ಪ್ರೀತಿಸುತ್ತಿದ್ದ ಪ್ರಿಯಕರನಿಗೇ ಕೊಟ್ಟು ಪತಿಯೇ ಮದುವೆ ಮಾಡಿರುವ ವಿಚಿತ್ರ ಘಟನೆಯೊಂದು ಝಾರ್ಖಂಡ್‌ನ ಪಲಮು ಜಿಲ್ಲೆಯ ಕಿಲಾ ಗ್ರಾಮದಲ್ಲಿ ನಡೆದಿದೆ.
ಮೇ 10ರಂದು ಕಿಲಾ ಗ್ರಾಮದ ಸನೋಜ್ ಕುಮಾರ್, ಪ್ರಿಯಾಂಕಾ ಎಂಬಾಕೆಯ ಜತೆ ಮದುವೆಯಾಗಿದ್ದ. ಆದರೆ ಪ್ರಿಯಾಂಕಾ ಅದೇ ಗ್ರಾಮದ ಜೀತೆಂದ್ರ ಎಂಬಾತನನ್ನು ಪ್ರೀತಿಸುತ್ತಿದ್ದಳು. ಹಾಗಾಗಿ ಮದುವೆಯ ನಂತರವೂ ಆಕೆ ಅವನ ಜತೆ ಫೋನ್ನಲ್ಲಿ ಮಾತನಾಡುತ್ತಿದ್ದಳು.
ಈ ನಡುವೆ ಪ್ರಿಯಾಂಕಾ ತನ್ನ ಪ್ರಿಯಕರನೊಂದಿಗೆ ಓಡಿಹೋಗಲು ಸಿದ್ಧತೆ ನಡೆಸಿದ್ದು, ಗ್ರಾಮಸ್ಥರು ಆಕೆಯನ್ನು ಹಿಡಿದು ಕುಟುಂಬಸ್ಥರಿಗೆ ಒಪ್ಪಿಸಿದ್ದರು. ವಿಷಯ ತಿಳಿದ ಪತಿ ಸನೋಜ್, ಮಾನಾಟು ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಪ್ರಿಯಾಂಕಾ ಹಾಗೂ ಜಿತೇಂದ್ರನ ಜೊತೆ ವಿವಾಹ ಮಾಡಿಸಿದ್ದಾನೆ.
ಈ ಮೂಲಕ ಪ್ರೀತಿಸಿದ ಜೋಡಿಗಳನ್ನು ಒಂದು ಮಾಡುವ ಮೂಲಕ ತನ್ನ ಸಂಸಾರ ಬೀದಿಗೆ ಬರುವುದಕ್ಕೆ ಇತಿಶ್ರೀ ಹಾಡಿದ್ದಾನೆ. ಇನ್ನು ಪತಿಯ ನಡೆಯಿಂದ ಪ್ರಜ್ಞಾವಂತರು ಮುಂದೆ ಆಗುತ್ತಿದ್ದ ಆನಾಹುತನವನ್ನು ಅರಿತ ಪತಿ ಒಳ್ಳೆಯ ಕೆಲಸ ಮಾಡಿದ್ದಾನೆ ಎಂದು ಶ್ಲಾಘಿಸಿದ್ದಾರೆ.