ಬೆಂಗಳೂರು: 1932 ರಲ್ಲೇ ಇತಿಹಾಸ ತಜ್ಞ ಡಾ.ಪಿ.ಬಿ. ದೇಸಾಯಿ ಅವರು ’ಮಿತಾಕ್ಷರ’ ಖ್ಯಾತಿಯ ವಿಜ್ಞಾನೇಶ್ವರರು ಕರ್ನಾಟಕದವರು ವಿಶೇಷವಾಗಿ ಗುಲಬರ್ಗಾ( ಈಗಿನ ಕಲಬುರಗಿ) ಜಿಲ್ಲೆಯ ಶಹಾಬಾದ್ ಬಳಿಯ ಮರತೂರು ಗ್ರಾಮದವರು ಎಂದು ಹಾಗೂ ಶಾಸನ ತಜ್ಞ ಮೈಸೂರಿನ ಸೀತಾರಾಮ ಜಾಗೀರದಾರರು, 64 ಸಾಲುಗಳ ಶಾಸನದ ಪೂರ್ತಿ ಪಾಠ ಓದಿ, ಅದರ ತಾರೀಖು 1123 ಜನವರಿ 6 ಎಂದು ಭಾಷಾಂತರಿಸಿ ಪ್ರಕಟಿಸಿದ್ದರು ಆದರೂ ನಮಗಿನ್ನೂ ಜಾಣ-ಕಿವುಡು.
ಕಲ್ಯಾಣ ಚಾಲುಕ್ಯ ಚಕ್ರವರ್ತಿ 6ನೇ ವಿಕ್ಷಮಾದಿತ್ಯನ ಆಸ್ಥಾನದಲ್ಲಿದ್ದ ವಿಜ್ಞಾನೇಶ್ವರರು ಹಿಂದೂ ಕಾನೂನಿಗೆ ಆಧಾರವಾದ ಮಿತಾಕ್ಷರ ಗ್ರಂಥವನ್ನು (1076-1126 ನಡುವೆ) ಬರೆದರು. ಬ್ರಿಟಿಷ್ ಆಡಳಿತ ವ್ಯವಸ್ಥೆಗೆ ಇಡೀ ಭಾರತಕ್ಕೆ ಅನ್ವಯಿಸಬಹುದಾದ ಒಂದು ಕಾನೂನು ಸಂಹಿತೆಯ ಅಗತ್ಯವಿತ್ತು. ಬಂಗಾಳ ಮತ್ತು ಅಸ್ಸಾಂಗಳನ್ನು ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳೂ ಈ ‘ಮಿತಾಕ್ಷರಾ’ದ ಹಿಂದೂ ಲಾ ಅಧಿಕೃತತೆಯನ್ನು ಒಪ್ಪಿಕೊಂಡವು.
ಆಸ್ತಿಯ ಹಕ್ಕುಗಳು, ದತ್ತಕ ಪದ್ಧತಿ, ಸ್ಥಿರ ಆಸ್ತಿಗಳ ಹಂಚಿಕೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಹಿಂದೂ ನ್ಯಾಯಶಾಸ್ತ್ರದ ನಿಲುವುಗಳನ್ನು ತೆಗೆದುಕೊಳ್ಳುವುದಕ್ಕೆ ತಜ್ಞರು ಈ ಪುಸ್ತಕದ ಮೊರೆಹೋಗುತ್ತಾರೆ. 90 ಬೇರೆ ಬೇರೆ ಧರ್ಮಗ್ರಂಥ, ಉಪನಿಷತ್ತು, ಧರ್ಮಸೂತ್ರಗಳನ್ನು ಅಧ್ಯಯನ ಮಾಡಿ ಬರೆದ ಗ್ರಂಥದ ಉಲ್ಲೇಖಗಳಿಲ್ಲದೇ ಭಾರತೀಯ ನ್ಯಾಯ ಪದ್ಧತಿ ಪೂರ್ಣಗೊಳ್ಳದು ಎಂಬಷ್ಟು ಪ್ರಭಾವ ವಿತಾಕ್ಷರದ್ದಾಗಿದೆ. ಮಧ್ಯಯುಗದಲ್ಲಿ ಮಿತಾಕ್ಷರವೇ ಸಂವಿಧಾನವಾಗಿತ್ತು ಎಂದರೆ ಅತಿಶಯೋಕ್ತಿಯಲ್ಲ. ವಿಜ್ಞಾನೇಶ್ವರರ ಪರಿಚಯ ನೀಡುವ ಎರಡು ಶಾಸನವು ಕಾಶಿಯ ವಿಶ್ವನಾಥ ದೇವಾಲಯ ಬಳಿ ದೊರೆತಿವೆ.
ಹೆನ್ರಿ ಥಾಮಸ್ ಕೋಲ್ ಬ್ರೂಕ್, ಈ ಪುಸ್ತಕವನ್ನು ಕ್ರಿ.ಶ.1810 ರಷ್ಟು ಹಿಂದೆಯೇ ಇಂಗ್ಲಿಷಿಗೆ ಅನುವಾದ ಮಾಡಿದರು. ಭಾರತದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಬೇಕಾದರೂ ಮಿತಾಕ್ಷರವು ಅತ್ಯುತ್ತಮ ಆಧಾರವಾಗಿದ್ದಿತು’ ಎಂದು ‘ಹಿಸ್ಟರಿ ಆಫ್ ಹಿಂದು ಧರ್ಮಶಾಸ್ತ್ರ’ ಎಂಬ ಕೃತಿಯಲ್ಲಿ ಮಹಾ ಮಹೋಪಾಧ್ಯಾಯ ಪಿ.ವಿ.ಕಾಣೆ ಅಭಿಪ್ರಾಯಪಡುತ್ತಾರೆ.
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ರಾಮಾ ಜೋಯಿಸ್ ಅವರು ಮರತೂರಿನಲ್ಲಿ ವಿಜ್ಞಾನೇಶ್ವರ ಸೌಹಾರ್ದ ಸಹಕಾರಿ (ನಿಯಮಿತ) ಸಂಘ ಸ್ಥಾಪಿಸಿ, ವಿಜ್ಞಾನೇಶ್ವರರ ಹೆಸರಲ್ಲಿ (2002)ಒಂದು ಸ್ಮಾರಕ ನಿರ್ಮಿಸಿದ್ದಾರೆ. ಗುಲಬರ್ಗಾ ವಿ.ವಿ. ಸಹ ಸಹಕರಿಸಿ, ಕಾನೂನು ವಿಭಾಗದ ಮೇಲ್ವಿಚಾರಣೆಯಲ್ಲಿ ಸಂಶೋಧನೆಗೆ ಅನುವು ಮಾಡಿಕೊಟ್ಟಿತು. ಈ ಕೇಂದ್ರಕ್ಕೆ ಅಖಿಲ ಭಾರತ ಮನ್ನಣೆಯೂ ದೊರೆತಿದೆ.
ಆದರೂ… ವಿಜ್ಞಾನೇಶ್ವರರ ಮರತೂರು ನಿರ್ಲಕ್ಷ್ಯ: ಮರತೂರಿನಲ್ಲಿ ಹತ್ತು ಹಲವು ದೇವಾಲಯಗಳಿವೆ. ಸುಮಾರು 800 ವರ್ಷಗಳ ಇತಿಹಾಸದ ಹತ್ತು ಹಲವು ಅಸ್ತಿತ್ವಗಳು ಕಣ್ಣ ಮುಂದಿವೆ. ಚಾಲುಕ್ಯ ಶೈಲಿಯ ಕಾಶಿ ವಿಶ್ವನಾಥ ಹಾಗೂ ಶಂಕರಲಿಂಗನ ದೇವಾಲಯವಿದೆ. ಹಿಂಭಾಗ ಪುರಾತನ ಪುಷ್ಕರಣಿ ಇದೆ. ತ್ರಿಕೂಟಾಚಲ ರಚನೆಯ ಈಶ್ವರ ದೇವಾಲಯ, ಇಲ್ಲೊಂದು ಕೋಟೆಯೂ ಇದೆ.
ಮರತೂರಿನಲ್ಲಿ ಚಾಲಕ್ಯರು 300 ದೇವಾಲಯಗಳು ಹಾಗೂ 300 ಬಾವಿಗಳಿದ್ದವು ಎಂದು ಇತಿಹಾಸ ಅರಚಿಕೊಳ್ಳುತ್ತದೆ. ಆದರೆ, ಬೆರಳೆಣಿಕೆಯಷ್ಟು ಸಿಗುವ ದೇವಾಲಯಗಳನ್ನು ಮುಳ್ಳು ಜಾಲಿ ಕಂಟಿಗಳು ಆವರಿಸಿಕೊಂಡಿವೆ. ಗರ್ಭಗುಡಿಗಳು ನಾಯಿಗಳ ಆವಾಸ ಸ್ಥಳಗಳಾಗಿವೆ. ಜನರಿಗೆ ಜೂಜು-ಮೋಜಿನ ತಾಣಗಳಾಗಿವೆ. ಕೆಲವು ದೇವಾಲಯಗಳ ಪ್ರಾಂಗಣಗಳು ದನಕರುಗಳ ಕೊಟ್ಟಿಗೆಗಳಾಗಿವೆ. ದ್ವಾರಪಾಲಕ ಶಿಲ್ಪಗಳು ಬೋರಲು ಬಿದ್ದಿವೆ. ಮುಳ್ಳು-ಕಂಟಿ ಆವರಿಸಿರುವ ಕೋಟೆಯ ಪ್ರವೇಶಕ್ಕೆ ದಾರಿ ಹುಡುಕಬೇಕು. ಬಹುತೇಕ ದೇವಾಲಯಗಳು ಜೀರ್ಣಾವಸ್ಥೆಯಲ್ಲಿವೆ.
ವಿಜ್ಞಾನೇಶ್ವರ ಸೌಹಾರ್ದ ಸಹಕಾರಿ ನಿಯಮಿತ ನಂತರವಾದರೂ ಈ ಎಲ್ಲ ಸ್ಮಾರಕಗಳ ಸಂರಕ್ಷಣೆ-ಅಭಿವೃದ್ಧಿ ಯಾಗುವ ನಿರೀಕ್ಷೆ ಇತ್ತು. ಸರ್ಕಾರವು ಸಹ ಅರೆ ಕಾಸಿನ ಮಜ್ಜಿಗೆಯಷ್ಟು ಧನ ಸಹಾಯ ನೀಡಿ ಕೈತೊಳೆದುಕೊಂಡಿದೆ. ಮರತೂರಿಗೆ ರೈಲು ನಿಲ್ದಾಣವಿದೆ. ಗುಲಬರ್ಗಾದಿಂದ ಹೆಚ್ಚೆಂದರೆ 18 ಕಿ.ಮೀ. ದೂರವಿರುವ ಊರೇ ಐತಿಹಾಸಿಕ ದೃಷ್ಟಿಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ವಾಸ್ತವ ಹೀಗಿರುವಾಗ, ರಾಷ್ಟ್ರಕೂಟರು, ಚಾಲುಕ್ಯರು, ಕಳಚೂರಿಗಳು, ವಾರಂಗಲ್ ಕಾಕತೀಯರು, ದ್ವಾರಸಮುದ್ರದ ಹೊಯ್ಸಳರು, ಬಹಮನಿ… ಹೀಗೆ ಸಾಲು ಸಾಲು ರಾಜವಂಶರಾಳಿದ ನಾಡು ಎಂದು ಬೀಗಲು ನಮಗೆ ಯಾವ ಹಕ್ಕಿದೆ ಎಂಬುದೇ ಪ್ರಶ್ನೆ.
Related

You Might Also Like
ಸರ್ಕಾರಿ ಬಸ್ ಗಾಜು ಒಡೆದು, ಚಾಲನಾ ಸಿಬ್ಬಂದಿ ಮೇಲೆ ಬೈಕ್ ಸವಾರನಿಂದ ಹಲ್ಲೆ
ಹುಬ್ಬಳ್ಳಿ: ಗದುಗಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸನ್ನು ನಗರದ ಗದಗ ರಸ್ತೆ ಬಳಿ ಬೈಕ್ ಸವಾರನೊಬ್ಬ ಅಡ್ಡಗಟ್ಟಿ ಬಸ್ ಗಾಜು ಒಡೆದು ಹಾಕಿರುವುದಲ್ಲದೆ ಚಾಲಕ ಹಾಗೂ...
ಕೊಟ್ಟ ಚಿನ್ನಾಭರಣ- ನಗದನ್ನು ವಾಪಸ್ ಕೊಡಿಸಿ ಎಂದರೆ 2 ಲಕ್ಷ ಲಂಚಕೊಡಿ ಎಂದ ಪೊಲೀಸರು: ಲೋಕಾಯುಕ್ತ ಖೆಡ್ಡಕ್ಕೆ ಬಿದ್ದರು
ಬೆಂಗಳೂರು: ಕೊಟ್ಟಿರುವ ಆಭರಣ ಮತ್ತು ನಗದನ್ನು ವಾಪಸ್ ಕೊಡಿಸಿ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ನಮಗೆ 2 ಲಕ್ಷ ರೂ. ಲಂಚ ಕೊಟ್ಟರೆ ವಾಪಸ್...
ಭೀಕರ ಅಪಘಾತ: ಲಾರಿಗೆ ಸರ್ಕಾರಿ ಬಸ್ ಡಿಕ್ಕಿ -ಮೂವರ ಸಾವು, 7ಮಂದಿಗೆ ಗಂಭೀರಗಾಯ
ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ...
KSRTC: ಯಾವುದೇ ಕಾರಣಕ್ಕೂ ನೌಕರರ ವಾರದ ರಜೆ ರದ್ದುಪಡಿಸಬಾರದು- ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಆದೇಶ
ವಾರದ ರಜೆ ರದ್ದು ಪಡಿಸಿದರೆ ಅಂಥ ಅಧಿಕಾರಿಯ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಅಧಿಕಾರಿ ನೌಕರರಿಗೆ ಇದೆ ಬೆಂಗಳೂರು: ನೌಕರರಿಗೆ ವಾರದ ರಜೆಯನ್ನು ನಿಗದಿತ ದಿನದಂದು ನೀಡಬೇಕು...
ಚಂದ್ರಶೇಖರನಾಥ ಶ್ರೀಗಳ ಪೂರ್ವಾಶ್ರಮದ ಹೆಸರು ಕೆ.ಟಿ.ಗೋವಿಂದೇಗೌಡ
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ 80 ವರ್ಷದ ಶ್ರೀ ಚಂದ್ರಶೇಖರನಾಥ ಸ್ವಾಮಿಗಳು ಇಂದು ರಾತ್ರಿ 12.01 ರ ಸಮಯದಲ್ಲಿ ಇಹಲೋಕ ತ್ಯಜಿಸುವ ಮೂಲಕ ಶ್ರೀ ಕೃಷ್ಣನ...
ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ: ದೇವಕಿ ಸುತನ ವೇಷದಲ್ಲಿ ಮಿಂಚಿದ ಲಿಟಲ್ ಲಿಶಾನ್
ಬೆಂಗಳೂರು: ರಾಜ್ಯಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಅದ್ದೂರಿಯಾಗಿ ಆಚರಿಸುತ್ತಿದ್ದು, ಪುಟಾಣಿಗಳು ಶ್ರೀಕೃಷ್ಣ - ರಾಧೆ ವೇಷ ಧರಿಸಿ ಮಿಂಚುತ್ತಿದ್ದಾರೆ. ಈ ಪೈಕಿ ಮಕ್ಕಳ ಚಂದದ ಫೋಟೋಗಳನ್ನು...
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ನಿಧನ
ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರು ಇಂದು ತಡರಾತ್ರಿ ನಿಧನಹೊಂದಿದ್ದಾರೆ. ಕೆಂಗೇರಿ ಸಮೀಪ ಶ್ರೀಮಠ ಸ್ಥಾಪನೆ ಮಾಡಿ ಶಿಕ್ಷಣ, ಆಧ್ಯಾತ್ಮಿಕ...
EPS ಪಿಂಚಣಿದಾರರಿಗೆ ಕನಿಷ್ಠ ಪಿಂಚಣಿ ಜಾರಿಗೆ ಸಂಸತ್ತಿನಲ್ಲಿ ಒತ್ತಾಯಿಸಲು ಆಗ್ರಹಿಸಿ ಸಂಸದರ ಮನೆ ಮುಂದೆ ಧರಣಿಗೆ ನಿರ್ಧಾರ
ಮೈಸೂರು: ಇಪಿಎಸ್ ನಿವೃತ್ತ ನೌಕರರಿಗೆ ಕನಿಷ್ಠ ಪಿಂಚಣಿ 7500 ರೂ.+ ಇತರೆ ಸೌಲಭ್ಯಗಳನ್ನು ಜಾರಿ ಮಾಡುವ ಸಂಬಂಧ ಲೋಕಸಭೆ ಅಧಿವೇಶನದಲ್ಲಿ ಗಮನ ಸೆಳೆಯುವಂತೆ ಮೈಸೂರು ಹಾಗೂ ಚಾಮರಾಜನಗರ...
ರೇಣುಕಾಸ್ವಾಮಿ ಕೊಲೆ ಪ್ರಕರಣ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್: ಮತ್ತೆ ಜೈಲಿಗೆ ನಟ ದರ್ಶನ್ ಅಂಡ್ ಟೀಂ
ನ್ಯೂಡೆಲ್ಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಜಾಮೀನು...