ತಿ.ನರಸೀಪುರ: ಜನರಲ್ಲಿ ಆಧ್ಯಾತ್ಮಿಕ ಸಂಚಲನ ಸೃಷ್ಟಿ ಮಾಡಿ ಧಾರ್ಮಿಕ ಜಾಗೃತಿ ಉಂಟು ಮಾಡಿದ ಶ್ರೀ ಗುರುಮಲ್ಲೇಶ್ವರ ಮಹಾ ಸ್ವಾಮಿಗಳ ಮಠದ ಟ್ರಸ್ಟ್ ವತಿಯಿಂದ ನಿರ್ಮಿಸಿರುವ ಎಸ್.ವಿ.ಎಸ್.ಸಭಾ ಭವನ ಅರ್ಥಪೂರ್ಣ ಎಂದು ಸುಸ್ತೂರು ವೀರ ಸಿಂಹಾಸನ ಮಹಾ ಸಂಸ್ಥಾನ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದ್ದಾರೆ.
ತಾಲೂಕಿನ ನಿಲಸೋಗೆ ಗ್ರಾಮದಲ್ಲಿ ಶ್ರೀ ವೀರತ್ತಸ್ವಾಮಿಗಳ ಸೇವಾ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ನಿರ್ಮಾಣವಾಗಿರುವ ಎಸ್.ವಿ.ಎಸ್ ಸಭಾ ಭವನದ ಲೋಕಾರ್ಪಣೆ ಹಾಗೂ ಶ್ರೀ ಗುರು ಮಲ್ಲೇಶ್ವರ ಬಿಕ್ಷದ ದಾಸೋಹ ಮಠಾಧಿಪತಿಗಳ (24 ನಾಂದಿ ಗಣಾಧೀಶ್ವರರ) ಶಿವ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
12 ನೇ ಶತಮಾನದಲ್ಲೇ ಗುರು ಮಲ್ಲೇಶ್ವರರು ಭಗವಂತ ಮತ್ತು ಭಕ್ತರ ನಡುವೆ ನೇರ ಸಂಬಂಧ ಇರಬೇಕು, ಭಗವಂತನನ್ನ ತಾನೇ ಪೂಜೆ ಮಾಡಿ ಪ್ರಾರ್ಥನೆ ಮಾಡಬೇಕು ಇದನ್ನು ಬಿಟ್ಟು ಮಧ್ಯದಲ್ಲಿ ಮೂರನೇ ವ್ಯಕ್ತಿ ಇರಬಾರದು ಎಂದು ಹೇಳಿದ್ದ ಮಾತು ವಾಸ್ತವವಾಗಿದ್ದರು ಸಹ ಹರ ಗುರುಗಳ ಮೂಲಕ ಭಕ್ತಿ ಮಾರ್ಗದಲ್ಲಿ ಸಾಗುವುದು ತಪ್ಪಲ್ಲ ಎಂದರು.
ಮುನುಷ್ಯ ಸಂಸ್ಕಾರ, ಆಚಾರ ಸನ್ಮಾರ್ಗದಲ್ಲಿ ನೆಡಯಬೇಕು ಎಂದು ಸುಮಾರು 12 ನೇ ಶತಮಾನದ ಕ್ರಾಂತಿ 900 ವರ್ಷ ಕಳೆದರು ಇಂದಿಗೂ ಜೀವಂತವಾಗಿದೆ ಅಂದರೆ ನಮ್ಮ ಆಚಾರ ವಿಚಾರ ಸಂಸ್ಕೃತಿ ಸಂಸ್ಕಾರ, ಬಸವಣ್ಣ ನವರು ಹಾಕಿಕೊಟ್ಟ ಸಮಾನತೆಯ ದಾರಿ ಕಾರಣ ಎಂದರು.
ಭಗವಂತನ ಸ್ಮರಣೆ ಮಾಡಿದರೆ ಮುನುಷ್ಯ ಆಧ್ಯಾತ್ಮಿಕ ಸಾಧನೆ ಮಾಡಬಹುದು. ಆಧ್ಯಾತ್ಮಿಕತೆ ಮತ್ತು ನೈತಿಕ ಮೌಲ್ಯಗಳು ಜೀವನಕ್ಕೆ ಹೊಸ ರೂಪ ನೀಡಲಿದೆ ಹಾಗೂ ಕರ್ತವ್ಯಗಳನ್ನು ನಿರ್ವಹಿಸಲು ಮಾನಸಿಕ ಶಕ್ತಿಯನ್ನು ಸಾಧಿಸಲು ಅನುವು ಮಾಡಿ ಕೊಡುತ್ತದೆ ಹಾಗಾಗಿ ಪ್ರತಿಯೊಬ್ಬರೂ ಯೋಗ, ಧ್ಯಾನ, ಆಧ್ಯಾತ್ಮಿಕ ಮತ್ತು ನೈತಿಕ ಮೌಲ್ಯಗಳು ಶಿಕ್ಷ ಣದ ಭಾಗವಾಗಿ ರೊಢಿಸಿಕೊಳ್ಳಬೇಕು ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಎಸ್. ವಿ.ಎಸ್ ಸಭಾ ಭವನವನ್ನು ಉದ್ಘಾಟಿಸಿದರು.
ಕನಕಪುರ ದೇಗುಲ ಮಠದ ಕಿರಿಯ ಶ್ರೀಗಳಾದ ಶ್ರೀ ಚನ್ನಬಸವ ಸ್ವಾಮೀಜಿ, ಮದ್ವಾಟಾಳು ಸೂರ್ಯ ಸಿಂಹಾಸನ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮುಡುಕುನ ಪುರ ಮಠಾಧ್ಯಕ್ಷರಾದ ಶ್ರೀ ಷಡಕ್ಷರ ದೇಶ ಕೇಂದ್ರ ಸ್ವಾಮೀಜಿ, ಚಕ್ರಬಾವಿ ಜಂಗಮ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ.
ವೀರಪ್ಪ ಒಡೆಯರಹುಂಡಿ ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಕುರುಬೂರು ಪಟ್ಟದ ಮಠದ ಶ್ರೀ ಮಲ್ಲಿನಾಥ ಶಿವಾಚಾರ್ಯ ಸ್ವಾಮೀಜಿ, ಮುಡುಕುತೊರೆ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಜಿ, ಮೇದಿನಿ ಮಠದ ಶ್ರೀ ಶಿವಲಿಂಗ ಸ್ವಾಮೀಜಿ.
ಹಣಕೊಳ ಮಠದ ಶ್ರೀ ಚಿದ್ಗನ ಶಿವಾಚಾರ್ಯ ಸ್ವಾಮಿಜಿ, ಕುಂದೂರು ಮಠದ ಶ್ರೀ ನಂಜುಂಡ ಸ್ವಾಮೀಜಿ, ಬೀಚನಹಳ್ಳಿ ಪುರ ಶ್ರೀ ನಾಗೇಂದ್ರ ಸ್ವಾಮೀಜಿ, ನೆರಗ್ಯಾನಹಳ್ಳಿ ಮಠದ ಶ್ರೀ ಇಮ್ಮಡಿ ಶಿವಕುಮಾರ ಸ್ವಾಮೀಜಿ, ಚಿದರಹಳ್ಳಿ ಗವಿಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಅಂಗ್ರಾಪುರ ಮಠದ ಶ್ರೀ ಬಸವಲಿಂಗ ದೇಶ ಕೇಂದ್ರ ಸ್ವಾಮೀಜಿ, ರಾಗಿ ಬೊಮ್ಮನಹಳ್ಳಿ ಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ.
ಅಲ್ಲರೆ ಮಠದ ಶ್ರೀ ಬಸವಣ್ಣ ಸ್ವಾಮೀಜಿ, ಶ್ರೀ ಮಾದೇವಸ್ವಾಮಿಜಿ, ಹಿರಿಯೂರು ಮಠದ ಶ್ರೀ ಮಹಾಂತ ಸ್ವಾಮೀಜಿ, ಬಿಳಿಗೆರೆ ಹುಂಡಿ ಮಠದ ಶ್ರೀ ಗುರು ಸ್ವಾಮೀಜಿ, ಹೊಸವರಹುಂಡಿ ಮಠದ ಶ್ರೀ ರಾಜಶೇಖರ ಸ್ವಾಮೀಜಿ, ಸೇತುವೆ ಮಠದ ಶ್ರೀ ಸಹಜಾನಂದ ಸ್ವಾಮೀಜಿ, ನಿಲ್ಲಿಸೋಗೆ ಮಠದ ಶ್ರೀ ಮಲ್ಲಪ್ಪ ಸ್ವಾಮೀಜಿ.
ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಎಸ್ಎಂಆರ್ ಪ್ರಕಾಶ್, ಬಸವ ಕೇಂದ್ರದ ಅಧ್ಯಕ್ಷ ಹಲವಾರು ಪರಮೇಶ್ ಪಟೇಲ್, ಗೌಡ್ರ ಶ್ರೀಕಂಠ ಸ್ವಾಮಿ, ಶೇಖರಪ್ಪ, ವಕೀಲ ಜ್ಞಾನೇಂದ್ರ ಮೂರ್ತಿ, ಪ್ರಸಾದ್ ನಿರೂಪಣೆ ಶಿಕ್ಷಕಿ ಜ್ಯೋತಿ ಪರಮೇಶ್ ಸೇರಿದಂತೆ ಮತ್ತಿತರರು ಇದ್ದರು.