NEWSದೇಶ-ವಿದೇಶನಮ್ಮರಾಜ್ಯರಾಜಕೀಯ

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಸ್ವತಂತ್ರ ಸ್ಪರ್ಧೆ: ಊಹಾಪೋಹಳಿಗೆ ತೆರೆ ಎಳೆದ ಮಾಜಿ ಪ್ರಧಾನಿ ದೇವೇಗೌಡ್ರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ನಾವು ಯಾವುದೇ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ನಮ್ಮ ಪಕ್ಷ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ ಎಂದು ಹೇಳುವ ಮೂಲಕ ಬಿಜೆಪಿ-ಜೆಡಿಎಸ್​ ಮೈತ್ರಿ ಕುರಿತಾದ ಊಹಾಪೋಹಳಿಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್​ ವರಿಷ್ಠ ಎಚ್​.ಡಿ. ದೇವೇಗೌಡ ತೆರೆ ಎಳೆದ್ದಾರೆ.

ಮಂಗಳವಾರ ಪಕ್ಷ ಜೆ.ಪಿ.ಭವನದ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೊಮ್ಮಾಯಿಯವರ ಸರ್ಕಾರದಲ್ಲಿ ಸಮಿತಿ ಮಾಡಿದರು. ಟಿ.ಬಿ.ಜಯಚಂದ್ರ ಅವರು ನೈಸ್ ಸಂಸ್ಥೆಯ ಬಗ್ಗೆ ಕೊಟ್ಟಿರುವ ಆ ಸದನ ಸಮಿತಿಯ ವರದಿಯನ್ನು ಜಾರಿಗೊಳಿಸುವ ಬಗ್ಗೆ ಸಿದ್ದರಾಮಯ್ಯ ಅವರು ಇಲ್ಲಿಯವರೆಗೂ ತೀರ್ಮಾನವನ್ನೇ ಕೈಗೊಂಡಿಲ್ಲ. ಹೆಚ್ಚುವರಿ ಭೂಮಿಯನ್ನು ವಶಕ್ಕೆ ಪಡೆಯಬೇಕೆಂದು ಹೇಳಿದರು.

ಇನ್ನು 11,660 ಎಕರೆ ವಶಕ್ಕೆ ಪಡೆಯುವಂತೆ ವರದಿ ನೀಡಿದ್ದಾರೆ. ಇದು ಯಾರ ಭೂಮಿ? ಇದರಲ್ಲಿ ಬರುವ ಹಣವನ್ನು ನಿಮ್ಮ ಗ್ಯಾರಂಟಿಗಳಿಗೆ ಬಳಸಿಕೊಳ್ಳಿ, ಕೋಟ್ಯಂತರ ರೂಪಾಯಿ ಇದರಲ್ಲಿ ಬರುತ್ತೆ ಎಂದು ಸಲಹೆ ನೀಡಿದರು.

ಅಧಿಕಾರ ಶಾಶ್ವತ ಅಲ್ಲ: ಪತ್ರಕರ್ತರಿಗೆ ಎಥಿಕ್ಸ್ ಬಗ್ಗೆ ಸಿದ್ದರಾಮಯ್ಯ ಹೇಳ್ತಾರೆ, ಆದರೆ ಅವರು ತಮ್ಮ ಎಥಿಕ್ಸ್ ಏನು ಎಂದು ತೋರಿಸಬೇಕು. ನಿಮಗೆ ಬೇಕಾದಾಗ ಕಮಲದ ಜತೆಗೆ ಹೊಂದಾಣಿಕೆ ಮಾಡಿಕೊಳ್ಳಬಹುದು. ಆದರೆ, ನಾವು ಮಾಡಿಕೊಂಡರೆ ಸೆಕ್ಯುಲರ್​ ಬಗ್ಗೆ ಮಾತನಾಡುತ್ತೀರಾ? ಸಿದ್ದರಾಮಯ್ಯನವರೇ ಅಧಿಕಾರ ಶಾಶ್ವತ ಅಲ್ಲ. ಆದರೆ ನಿಮ್ಮ ಮಾತು ಹೃದಯದ ಅಂತರಾಳದಿಂದ ಬರಬೇಕು ಎಂದು ಹೇಳಿದರು.

ಇನ್ನು ನೀತಿವಂತರು ಮತ್ತು ಸತ್ಯವಂತರು ನೀವು ಮಾತ್ರ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂದು ಟೀಕಿಸಿದ ಎಚ್​ಡಿಡಿ, ರಾಜ್ಯದಲ್ಲಿ ಮೊದಲಿಗೆ ಕಾಂಗ್ರೆಸ್ಸೇತರ ಸರ್ಕಾರ ಬಂದಿದ್ದು 1983 ರಲ್ಲಿ. ಆಗ ಜನತಾ ಪಾರ್ಟಿ ಸರ್ಕಾರ ಬಂದಿತ್ತು. 18 ಬಿಜೆಪಿ, 8 ಕಮ್ಯುನಿಸ್ಟ್ ಹಾಗೂ 10 ಪಕ್ಷೇತರರು ಇದ್ದರು. ಆಗ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿಲ್ವಾ? ಸಿದ್ದರಾಮಯ್ಯನವರು ಕಾವಲು ಸಮಿತಿಯ ಅಧ್ಯಕ್ಷರಾಗಿರಲಿಲ್ವಾ ಎಂದು ಪ್ರಶ್ನಿಸಿದರು.

ಬಿಜೆಪಿಯ ಬೆಂಬಲದೊಂದಿಗೆ ರಚನೆಯಾದ ದಿವಂಗತ ರಾಮಕೃಷ್ಣ ಹೆಗ್ಗಡೆಯವರ ಸರ್ಕಾರದಲ್ಲಿ ನಾನು ಲೋಕೋಪಯೋಗಿ ಸಚಿವನಾಗಿದ್ದೆ ಮತ್ತು ಸಿದ್ದರಾಮಯ್ಯ ಅವರು ಕಾವಲು ಸಮಿತಿ ಅಧ್ಯಕ್ಷರಾಗಿದ್ದರು. ಹಾಗಾಗಿ ರಾಜಕಾರಣದದಲ್ಲಿ ಯಾವಾಗ ಏನೇನಾಗಿದೆ ಎಂದು ಜಿ.ಟಿ.ದೇವೆಗೌಡ ಹೇಳಿದ್ದಾರೆ. 1983ರಿಂದ ಇಂದಿನವರೆಗೂ ಜೆಡಿಎಸ್‌ ಅಸ್ತಿತ್ವದಲ್ಲಿದೆ. ನಾನು ಸಿಎಂ ಆದೆ, ಪ್ರಧಾನಿ ಕೂಡ ಆದೆ. ಕುಮಾರಸ್ವಾಮಿ ಅವರು ಕೂಡ ಸಿಎಂ ಆದರು. ಯಾರಾದ್ರು ನಾಳೆ ಬೆಳಗ್ಗೆ ಈ ಪಕ್ಷವನ್ನು ಅಳಿಸಿ ಹಾಕ್ತೀವಿ ಎಂದು ತಿಳಿದಿದ್ರೆ ಅದು ಅವರ ಭ್ರಮೆ ಎಂದು ಗೌಡ್ರು ಗುಡುಗಿದರು.

ಸ್ವತಂತ್ರವಾಗಿ ಸ್ಪರ್ಧೆ: ಮೈತ್ರಿಯ ಬಗ್ಗೆ ನಿಮಗೆ ಅನುಮಾನ ಬರುತ್ತೆ ನಿಜ, ನಾನು ಅದನ್ನು ನಿಮಗೆ ಬಿಡ್ತಿನಿ. ಹೆಗ್ಗಡೆಯವರು ಬಿಜೆಪಿಯ ಜತೆ ಸೇರಿ ಸಿಎಂ ಆಗಿಲ್ವೆ? ಕುಮಾರಸ್ವಾಮಿಯವರ ಬಗ್ಗೆ ಮಾತ್ರ ಏಕೆ ಮಾತನಾಡುತ್ತಾರೆ. ಜೆಡಿಎಸ್‌ ಮುಳುಗಿ ಹೋಗುತ್ತೆ ಎಂದು ಹೇಳ್ತಾರೆ. ಲೋಕಸಭೆ ಚುನಾವಣೆಯಲ್ಲಿ ನಾವು 5 ಗೆಲ್ತಿವೋ? ಅಥವಾ 6 ಗೆಲ್ತಿವೋ ಗೊತ್ತಿಲ್ಲ. ಆದರೆ, ನಾವು ಸ್ವತಂತ್ರವಾಗಿ ಹೋರಾಟ ಮಾಡುತ್ತೇವೆ. ಚುನಾವಣೆ ಬಳಿಕ ತೀರ್ಮಾನ ಮಾಡ್ತೀವಿ ಎಂದು ಗುದ್ದು ಕೊಟ್ಟರು.

ಇನ್ನು ಮನಮೋಹನ್ ಸಿಂಗ್ 3 ಸ್ಥಾನ ಕಡಿಮೆ ಇದೆ ಬೆಂಬಲ ಕೊಡಿ ಎಂದು ಕೇಳಿದ್ದರು. ಆಗ ನಾವು ಬೆಂಬಲ ಕೊಟ್ಟೆದ್ದೆವು. ಅಂದು ಯಾವುದಾದ್ರೂ ಷರತ್ತು ಹಾಕಿದ್ವ? ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ ಏನು ಪರಿಸ್ಥಿತಿ ಬರುತ್ತದೋ, ನೋಡಿಕೊಂಡು ನಾವು ತೀರ್ಮಾನ ಮಾಡ್ತೀವಿ. ನಾವು ಯಾವುದೇ ಪಕ್ಷದ ಜತೆ ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಳ್ಳಲ್ಲ. ಬದಲಾಗಿ ಸ್ವತಂತ್ರವಾಗಿ ಸ್ಪರ್ಧೆ ಮಾಡ್ತೀವಿ. ಎಲ್ಲಿ ಅಭ್ಯರ್ಥಿಯನ್ನು ಕಣಕ್ಕೀಳಿಸುವ ಶಕ್ತಿ ಇದೆಯೋ ಅಲ್ಲಿ ಇಳಿಸುತ್ತೇವೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಸಿ.ಟಿ ರವಿ: ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಸಿ.ಟಿ ರವಿ, ವಿಪಕ್ಷದ ನಾಯಕ ಯತ್ನಾಳ್ ಅಂತಾ ಬಹುತೇಕ ತೀರ್ಮಾನ ಆಗಿದೆ ಎಂದು ಎಚ್‌.ಡಿ.ದೇವೇಗೌಡರು ಇದೇ ವೇಳೆ ಹೇಳಿದರು. ರಾಜ್ಯ ಬಿಜೆಪಿಯಲ್ಲಿ ವಿಪಕ್ಷದ ನಾಯಕ ಯತ್ನಾಳ್ ಅಂತಾ ಬಹುತೇಕ ತೀರ್ಮಾನ ಆಗಿದೆ. ಹೀಗಾಗಿ ಬಿಜೆಪಿ ಜತೆ ನಮ್ಮ ಜಂಟಿ ಹೋರಾಟ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಅಧಿಕೃತ ವಿಪಕ್ಷ ಬಿಜೆಪಿಯೇ ಆಗಿದೆ. ನಮ್ಮದು ಅನಧಿಕೃತ ವಿಪಕ್ಷ. ಕುಮಾರಸ್ವಾಮಿ ಅವರು ಬಿಜೆಪಿ ಜತೆ ಹೋಗಿಲ್ಲ. ವಿರೋಧಿ ವಿಚಾರ ಬಂದಾಗ ಹೋರಾಟ ನಡೆಯುತ್ತೆ. ಕಾಂಗ್ರೆಸ್ ಇದ್ದಾಗಲೂ ನಡೆದಿದೆ, ಬಿಜೆಪಿ ಇದ್ದಾಗಲೂ ನಡೆಯುತ್ತಿದೆ. ಕಾಂಗ್ರೆಸ್ ವಿಪಕ್ಷ ಇದ್ದಾಗಲೂ ಒಟ್ಟಿಗೆ ವಿರೋಧ ಮಾಡಿದ್ದೇವೆ. ಇದರಲ್ಲಿ ಹೊಂದಾಣಿಕೆ ಅನ್ನೋ ವಿಚಾರ ಬಳಸೋದು ಬೇಡ ಎಂದು ದೇವೇಗೌಡರು ಸ್ಪಷ್ಟಪಡಿಸಿದ್ದಾರೆ.

ಆ ಗುಂಪು ಯಾರೆಂದು ನಿಮಗೂ ಗೊತ್ತು: 26 ವಿಪಕ್ಷ ಸಭೆ ಸೇರಿದ್ರು, ದೇವೆಗೌಡರನ್ನು ಕರೆದ್ರೆ ನಾವು ಬರುವುದಿಲ್ಲ ಎಂದು ಒಂದು ಗುಂಪು ಧಮಕಿ ಹಾಕಿದರು. ಅದಕ್ಕಾಗಿ ನನ್ನನ್ನು ಕರೆಯಲಿಲ್ಲ. ನಿತೀಶ್ ಕುಮಾರ್ ನನ್ನ ಸ್ನೇಹಿತ, ಶರದ್ ಪವಾರ್ ಇಲ್ಲಿ ಬಂದು ಹೋದರು. ಆ ಗುಂಪು ಯಾರೆಂದು ನಿಮಗೂ ಗೊತ್ತು. ಇದನ್ನು ಜಾಸ್ತಿ ಎಳೆಯಬೇಡಿ ಎನ್ನುವ ಮೂಲಕ ಪರೋಕ್ಷವಾಗಿ ಹೆಸರೇಳದೆ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

Leave a Reply

error: Content is protected !!
LATEST
KSRTC ಬಸ್‌ - ಕಾರು ನಡುವೆ ಅಪಘಾತ: ಕಾರಿನಲ್ಲಿದ್ದ ನಾಲ್ವರು ಸೇರಿ ಹಲವರಿಗೆ ಗಾಯ NWKRTC: ಕರ್ತವ್ಯ ನಿರತರಾಗಿದ್ದಾಗಲೇ ಚಾಲಕರಿಗೆ ಹೃದಯಘಾತ - ವಿಜಯಪುರ ಬಸ್‌ ನಿಲ್ದಾಣದಲ್ಲೇ ಕುಸಿದು ಬಿದ್ದು ನಿಧನ ಕನ್ನಡ ಮಾಧ್ಯಮ ಶಾಲೆಗಳ ವೈಫಲ್ಯ, ಕೇಂದ್ರದ ಹಿಂದಿ ಹೇರಿಕೆಯಿಂದ ನಾಶವಾಗುತ್ತಿದೆ ಕನ್ನಡ : ರಮೇಶ್‌ ಬೆಳ್ಳಮ್ಕೊಂಡ KSRTC: 2024ರ ವೇತನ ಪರಿಷ್ಕರಣೆ ಸುಳಿವು ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ KKRTC ವಿಜಯಪುರ: ತಪ್ಪು ಮಾಡಿ ಅಮಾನತಾದ ಡಿಸಿ ಪರ ನಿಂತರೆ ನಿಗಮದ ಅಧಿಕಾರಿಗಳು!!? ಪಿರಿಯಾಪಟ್ಟಣ: ಲಂಚ ಸ್ವೀಕಾರ- ರೆಡ್ ಹ್ಯಾಂಡಾಗಿ ಲೋಕಾ ಬಲೆಗೆ ಬಿದ್ದ ಗುಮಾಸ್ತ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ನೆರೆ ಭೀತಿಯಿಂದ ಬೆಂಗಳೂರಿಗರ ರಕ್ಷಿಸಿ: ಡಿಸಿಎಂಗೆ ಎಎಪಿ ರಾಜ್ಯಾಧ್ಯಕ್ಷ ಆಗ್ರಹ ಮಧ್ಯಮ ವರ್ಗದ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ BBMP-ಡೆಂಗ್ಯೂ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ : ಸುರಳ್ಕರ್ ವಿಕಾಸ್ ಕಿಶೋರ್ ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ 18 ರಿಂದ 45 ವರ್ಷದವರಿಂದ ಅರ್ಜಿ ಆಹ್ವಾನ