ಜೇವರ್ಗಿ: ಕನ್ನಡ ರಾಜ್ಯೋತ್ಸವದಲ್ಲಿ ನಂಗಾನಾಚ್ – ಕನ್ನಡ ಅಭಿಮಾನಿಗಳು ಕಿಡಿ
ಜೆವರ್ಗಿ: ತಾಲೂಕಿನ ಮಂದೇವಾಲದಲ್ಲಿ ಕರವೇ (ಪ್ರವೀಣ ಶೆಟ್ಟಿ ಬಣ) ತಾಲೂಕು ಫಟಕದಿಂದ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ನಂಗಾನಾಚ್ ನೋಡಿ ಕನ್ನಡ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ.
ಭಾನುವಾರ (ನ.12) ಸಂಜೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಈ ರೀತಿ ಹುಡುಗಿಯರನ್ನು ಕರೆದುಕೊಂಡು ಬಂದು ಡಾನ್ಸ್ ಮಾಡಿಸಿದ್ದಾರೆ. ಇದು ನಮ್ಮ ನಾಡಿನ ಸಂಸ್ಕೃತಿಯೇ ಎಂದು ಕನ್ನಡಪರ ಹೋರಾಟಗಾರ ಜೇವರ್ಗಿಯ ಶಿವಲಿಂಗ ಹಳ್ಳಿ ಪ್ರಶ್ನಿಸಿದ್ದಾರೆ.
ಇನ್ನು ಅಕ್ರಮ ಚಟುವಟಿಕೆಗಳಲ್ಲಿ ಪಾಲ್ಗೊಂಡ ರೌಡಿ ಶೀಟರ್‌ಗಳ ಕೈಗೆ ಕನ್ನಡ ಕೆಲಸವನ್ನು ಕೊಟ್ಟರೆ ಹಿಂಗೆ ಆಗೋದು. ನಾಡು ನುಡಿ ನೆಲ ಜಲಕ್ಕಾಗಿ ಹೋರಾಟ ಮಾಡುವ ಪ್ರವೀಣ ಶೆಟ್ಟಿಯವರೆ ಇದು ನಿಮಗೆ ಸರಿ ಕಾಣುತ್ತಿದೆಯೇ ಎಂದು ಕೇಳಿದ್ದಾರೆ.
ಹೀಗೆ ಮಾಡುವುದೇನಾ ನಿಮ್ಮ ಕನ್ನಡ ರಾಜ್ಯೋತ್ಸವ ಆಚರಣೆಗೆ ಕೊಡುವ ಮನ್ನಣೆ? ಇದೇನಾ ನೀವು ನಿಮ್ಮ ಯುವಕರಿಗೆ ಕಲಿಸಿಕೊಟ್ಟ ಸಂಸ್ಕೃತಿ ಎಂದು ಪ್ರಶ್ನಿಸುವ ಅವರು, ನಾನೊಬ್ಬ ಪ್ರಾಮಾಣಿಕ ಕನ್ನಡದ ಹೋರಾಟಗಾರ ಅನ್ನೋದಕ್ಕೆ ನಾಚಿಕೆ ಆಗತ್ತಿದೆ ಎಂದು ಕಿಡಿಕಾರಿದ್ದಾರೆ.
ನಿಜವಾದ ಹೋರಾಟಗಾರರು ಮಾಡುವ ಕೆಲಸ ಇದಲ್ಲ. ಇದು ಹೊಟ್ಟೆಪಾಡಿಗಾಗಿ ಮಾಡಿಸುತ್ತಿವುದು. ಈ ರೀತಿ ನಂಗಾನಾಚ್ ಮಾಡಸಿ ಕನ್ನಡದ ಹೆಸರಿಗೆ ಮಸಿ ಬಳಿಯುವ ಕೆಲಸಾ ಆಗಬಾರದು ಎಂದು ಹೇಳಿದ್ದಾರೆ.