NEWSನಮ್ಮಜಿಲ್ಲೆವಿಡಿಯೋಸಂಸ್ಕೃತಿ

ಜೇವರ್ಗಿ: ಕನ್ನಡ ರಾಜ್ಯೋತ್ಸವದಲ್ಲಿ ನಂಗಾನಾಚ್ – ಕನ್ನಡ ಅಭಿಮಾನಿಗಳು ಕಿಡಿ

ವಿಜಯಪಥ ಸಮಗ್ರ ಸುದ್ದಿ

ಜೆವರ್ಗಿ: ತಾಲೂಕಿನ ಮಂದೇವಾಲದಲ್ಲಿ ಕರವೇ (ಪ್ರವೀಣ ಶೆಟ್ಟಿ ಬಣ) ತಾಲೂಕು ಫಟಕದಿಂದ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ನಂಗಾನಾಚ್ ನೋಡಿ ಕನ್ನಡ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ.

ಭಾನುವಾರ (ನ.12)  ಸಂಜೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಈ ರೀತಿ ಹುಡುಗಿಯರನ್ನು ಕರೆದುಕೊಂಡು ಬಂದು ಡಾನ್ಸ್‌ ಮಾಡಿಸಿದ್ದಾರೆ.  ಇದು ನಮ್ಮ  ನಾಡಿನ ಸಂಸ್ಕೃತಿಯೇ ಎಂದು ಕನ್ನಡಪರ ಹೋರಾಟಗಾರ ಜೇವರ್ಗಿಯ ಶಿವಲಿಂಗ ಹಳ್ಳಿ ಪ್ರಶ್ನಿಸಿದ್ದಾರೆ.

ಇನ್ನು ಅಕ್ರಮ ಚಟುವಟಿಕೆಗಳಲ್ಲಿ ಪಾಲ್ಗೊಂಡ ರೌಡಿ ಶೀಟರ್‌ಗಳ ಕೈಗೆ  ಕನ್ನಡ ಕೆಲಸವನ್ನು ಕೊಟ್ಟರೆ ಹಿಂಗೆ ಆಗೋದು. ನಾಡು ನುಡಿ ನೆಲ ಜಲಕ್ಕಾಗಿ ಹೋರಾಟ ಮಾಡುವ ಪ್ರವೀಣ ಶೆಟ್ಟಿಯವರೆ ಇದು ನಿಮಗೆ ಸರಿ ಕಾಣುತ್ತಿದೆಯೇ ಎಂದು ಕೇಳಿದ್ದಾರೆ.

ಹೀಗೆ ಮಾಡುವುದೇನಾ ನಿಮ್ಮ ಕನ್ನಡ ರಾಜ್ಯೋತ್ಸವ ಆಚರಣೆಗೆ ಕೊಡುವ ಮನ್ನಣೆ? ಇದೇನಾ ನೀವು ನಿಮ್ಮ ಯುವಕರಿಗೆ ಕಲಿಸಿಕೊಟ್ಟ ಸಂಸ್ಕೃತಿ ಎಂದು ಪ್ರಶ್ನಿಸುವ ಅವರು, ನಾನೊಬ್ಬ ಪ್ರಾಮಾಣಿಕ ಕನ್ನಡದ ಹೋರಾಟಗಾರ ಅನ್ನೋದಕ್ಕೆ ನಾಚಿಕೆ ಆಗತ್ತಿದೆ ಎಂದು ಕಿಡಿಕಾರಿದ್ದಾರೆ.

ನಿಜವಾದ ಹೋರಾಟಗಾರರು ಮಾಡುವ ಕೆಲಸ ಇದಲ್ಲ. ಇದು ಹೊಟ್ಟೆಪಾಡಿಗಾಗಿ ಮಾಡಿಸುತ್ತಿವುದು. ಈ ರೀತಿ ನಂಗಾನಾಚ್‌ ಮಾಡಸಿ ಕನ್ನಡದ ಹೆಸರಿಗೆ ಮಸಿ ಬಳಿಯುವ ಕೆಲಸಾ ಆಗಬಾರದು ಎಂದು ಹೇಳಿದ್ದಾರೆ.

Leave a Reply

error: Content is protected !!
LATEST
KSRTC ಬಸ್‌ - ಕಾರು ನಡುವೆ ಅಪಘಾತ: ಕಾರಿನಲ್ಲಿದ್ದ ನಾಲ್ವರು ಸೇರಿ ಹಲವರಿಗೆ ಗಾಯ NWKRTC: ಕರ್ತವ್ಯ ನಿರತರಾಗಿದ್ದಾಗಲೇ ಚಾಲಕರಿಗೆ ಹೃದಯಘಾತ - ವಿಜಯಪುರ ಬಸ್‌ ನಿಲ್ದಾಣದಲ್ಲೇ ಕುಸಿದು ಬಿದ್ದು ನಿಧನ ಕನ್ನಡ ಮಾಧ್ಯಮ ಶಾಲೆಗಳ ವೈಫಲ್ಯ, ಕೇಂದ್ರದ ಹಿಂದಿ ಹೇರಿಕೆಯಿಂದ ನಾಶವಾಗುತ್ತಿದೆ ಕನ್ನಡ : ರಮೇಶ್‌ ಬೆಳ್ಳಮ್ಕೊಂಡ KSRTC: 2024ರ ವೇತನ ಪರಿಷ್ಕರಣೆ ಸುಳಿವು ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ KKRTC ವಿಜಯಪುರ: ತಪ್ಪು ಮಾಡಿ ಅಮಾನತಾದ ಡಿಸಿ ಪರ ನಿಂತರೆ ನಿಗಮದ ಅಧಿಕಾರಿಗಳು!!? ಪಿರಿಯಾಪಟ್ಟಣ: ಲಂಚ ಸ್ವೀಕಾರ- ರೆಡ್ ಹ್ಯಾಂಡಾಗಿ ಲೋಕಾ ಬಲೆಗೆ ಬಿದ್ದ ಗುಮಾಸ್ತ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ನೆರೆ ಭೀತಿಯಿಂದ ಬೆಂಗಳೂರಿಗರ ರಕ್ಷಿಸಿ: ಡಿಸಿಎಂಗೆ ಎಎಪಿ ರಾಜ್ಯಾಧ್ಯಕ್ಷ ಆಗ್ರಹ ಮಧ್ಯಮ ವರ್ಗದ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ BBMP-ಡೆಂಗ್ಯೂ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ : ಸುರಳ್ಕರ್ ವಿಕಾಸ್ ಕಿಶೋರ್ ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ 18 ರಿಂದ 45 ವರ್ಷದವರಿಂದ ಅರ್ಜಿ ಆಹ್ವಾನ