NEWSನಮ್ಮರಾಜ್ಯಲೇಖನಗಳು

ಸಾರಿಗೆ ನೌಕರರು ನಾಡಿನೊಳಗಿನ ಸೈನಿಕರು: ಹಬ್ಬದಲ್ಲೂ ಕರ್ತವ್ಯ ನಿರತರಿಗೆ ಸಲಾಮ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಾಡಿನೆಲ್ಲೆಡೆ ದೀಪಾವಳಿ ಸಂಭ್ರಮ. ಬೆಳಕಿನ ಹಬ್ಬವನ್ನು ಕರುನಾಡು ಸಡಗರದಿಂದ ಸ್ವಾಗತಿಸಿ ಖುಷಿಪಡುತ್ತಿದೆ. ಈ ನಡುವೆಯೂ ರಾಜ್ಯದ ಸಾರಿಗೆ ನೌಕರರು ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ದೇಶದ ಸೈನಿಕರು ಹೇಗೆ ಗಡಿಯಲ್ಲಿ ತಮ್ಮ ಕರ್ತವ್ಯ ನಿಷ್ಠೆ ಮೆರೆಯುತ್ತಿದ್ದಾರೋ ಹಾಗೆಯೇ ನಾಡಿನ ಒಳಗೆ ಸಾರಿಗೆ ನೌಕರರು ಕೂಡ ಕರ್ತವ್ಯದಲ್ಲಿ ಮಗ್ನರಾಗಿದ್ದಾರೆ.

ಹೌದು! ಯಾವುದೇ ಹಬ್ಬವಾದರೂ ನಾರಿಯರಿಗೆ ಅದರ ಸಂಭ್ರಮ ಸ್ವಲ್ಪ ಜಾಸ್ತಿನೇ. ಆದರೆ, ಸಾರಿಗೆ ನಿಗಮಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ನೌಕರರು ತಮ್ಮ ಕರ್ತವ್ಯದಲ್ಲೇ ಈ ಬೆಳಕಿನ ಹಬ್ಬದ ಸಂಭ್ರಮ ಕಾಣುತ್ತಿದ್ದಾರೆ. ಇಂದು ಕೂಡ ಕರ್ತವ್ಯಕ್ಕೆ ಹಾಜರಾಗಿ ನಾಡಿನ ಜನರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗುವಲ್ಲಿ ನಿತರಾಗಿದ್ದಾರೆ.

ಇಲ್ಲಿ ಮಹಿಳಾ ಸಿಬ್ಬಂದಿ ಮಾತ್ರ ಕರ್ತವ್ಯ ನಿಷ್ಠೆ ಮೆರೆಯುತ್ತಿದ್ದಾರೆ ಎಂದರೆ ನಿಜಕ್ಕೂ ತಪ್ಪಾಗುತ್ತದೆ. ಮುಂಜಾನೆ 4 ಗಂಟೆಗೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಮುಂಜಾವು 5 ಗಂಟೆಗೆ ಡಿಪೋಗಳಲ್ಲಿ ಹಾಜರಾಗಿ ತಮ್ಮ ಕಾಯಕಕ್ಕೆ ಸೈನಿಕರಂತೆ ಪುರುಷ ಸಿಬ್ಬಂದಿಯೂ ಸಜ್ಜಾಗಿ ತೆರಳಿದ್ದಾರೆ.

ಈ ಎಲ್ಲವನ್ನು ನೋಡಿದರೆ, ಪ್ರತಿಯೊಬ್ಬರ ಮನೆಯಲ್ಲೂ ಹಬ್ಬದ ಸಂಭ್ರಮ. ಆದರೆ, ಮನೆಯಲ್ಲಿ ನಡೆಯುತ್ತಿರುವ ಈ ಬೆಳಕಿನ ಹಬ್ಬದ ಸಡಗರದಲ್ಲಿ ಕುಟುಂಬದವರ ಜತೆ ಇದ್ದು ಸಂಭ್ರಮಿಸಲು ಈ ನೌಕರರಿಗೆ ಸಾಧ್ಯವಾಗುತ್ತಿಲ್ಲ. ಆದರೂ ತಮ್ಮ ಕರ್ತವ್ಯ ನಿಷ್ಠೆ ಮೂಲಕವೇ ಸಂಭ್ರಮ, ಸಡಗರ ಪಡುತ್ತಿರುವುದು ಇದು ನಾಡಿನ ಜನರು ಖುಷಿ ಪಡಬೇಕಾದ ವಿಷಯ.

ಕಾರಣ, ಒಂದು ಗಂಟೆ ಬಸ್‌ಗಳು ತಡವಾದರೆ ನೂರಾರು ಮಂದಿ ತಾವು ತಲುಪಬೇಕಾದ ಸ್ಥಳವನ್ನು ತಲುಪುತ್ತೇವೋ ಇಲ್ಲವೋ ಎಂಬ ಚಿಂತೆಯಲ್ಲಿ ಒದ್ದಾಡುತ್ತಿರುತ್ತಾರೆ. ಅಂಥ ಜನರಿಗೆ ಸಂಜೀವಿನಿಯಂತೆ ಧಾವಿಸುವ ಸಾರಿಗೆ ಸಿಬ್ಬಂದಿ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಅವರ ಸ್ಥಳಕ್ಕೆ ತಲುಪಿಸುತ್ತಾರೆ. ಈ ರೀತಿ ಸೇವೆ ಮಾಡುವ ಇವರು ನಿಜವಾಗಲು ಸಾರ್ವಜನಿಕ ಸೇವಕರಲ್ಲಿ ಮೊದಲ ಪಂಕ್ತಿಯಲ್ಲಿ ನಿಲ್ಲುತ್ತಾರೆ ಎಂದರೆ ತಪ್ಪಾಗಲಾರದು.

ಇನ್ನು ಇಂಥ ಸಾರಿಗೆ ನೌಕರರನ್ನು ನಾಡಿನ ಜನರು ಗೌರವದಿಂದ ಕಾಣಬೇಕು. ಇದಕ್ಕೂ ಮಿಗಿಲಾಗಿ ರಾಜ್ಯ ಸರ್ಕಾರ ಈ ನೌಕರರಿಗೆ ಸಿಗಬೇಕಿರುವ ಎಲ್ಲ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಮೀನಮೇಷ ಎಣಿಸಬಾರದು. ಆದರೆ, ಕಳೆದ ಬಿಜೆಪಿ ಸರ್ಕಾರ ಈ ನೌಕರರನ್ನು ಭಾರೀ ತುಚ್ಯವಾಗಿ ನಡೆಸಿಕೊಂಡಿದ್ದು ಮಾತ್ರ ಖೇದಕರ ಸಂಗತಿ.

ಬಿಜೆಪಿಗರಂತೆ ಕಾಂಗ್ರೆಸ್‌ ಸರ್ಕಾರ ನಡೆಸಿಕೊಳ್ಳದೆ ಸಾರಿಗೆ ಸಿಬ್ಬಂದಿಗೆ ನ್ಯಾಯಯುತವಾಗಿ ಸಿಗಬೇಕಿರುವ ಸೌಲಭ್ಯಗಳನ್ನು ಕೊಡುವಲ್ಲಿ ಹಿಂದೇಡು ಹಾಕಬಾರದು. ಜತೆಗೆ 2020 ಜನವರಿಯಿಂದ-2023ರ ಫೆಬ್ರವರಿ ನಡುವೆ ನಿವೃತ್ತರಾಗಿರುವ ನೌಕರರಿಗೆ ದೊರಕಬೇಕಿರುವ ಸೌಲಭ್ಯಗಳನ್ನು ನೀಡಬೇಕಿದೆ. ಇದನ್ನು ತಡಮಾಡದೆ ರಾಜ್ಯ ಸರ್ಕಾರ ಕೊಡಬೇಕು.

ಒಂದು ವೇಳೆ ತಡ ಮಾಡಿದರೆ ಈಗಾಗಲೇ 60 ವರ್ಷ ಪೂರೈಸಿರುವ ಜೀವಗಳು ನೀವು ತಡವಾಗಿ ಕೊಡುವ ಸೌಲಭ್ಯಗಳನ್ನು ಅನುಭವಿಸುವುದಕ್ಕೆ ಸಾಧ್ಯವಾಗುವುದಿಲ್ಲವೇನೋ. ಅದಕ್ಕೆ ಆ ಹಿರಿಯ ಜೀವಗಳು ಬದುಕಿರುವಾಗಲೇ ಅವರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ತಲುಪಿಸುವತ್ತ ಸರ್ಕಾರ ಮುಂದಾಗಬೇಕಿದೆ.

ಇನ್ನು ಈ ಹಬ್ಬ ಹರಿದಿನಗಳಲ್ಲೂ ತಮ್ಮ ಕರ್ತವ್ಯ ನಿಷ್ಠೆ ಮೆರೆಯುವ ಈ ಸಾರಿಗೆ ನೌಕರರು ನಾಡಿನ ಒಳಗಿನ ಸೈನಿಕರಾಗಿದ್ದು, ಹಬ್ಬದಲ್ಲೂ ಕರ್ತವ್ಯ ನಿರತ ಈ ಸಿಬ್ಬಂದಿಗೆ ಒಂದು ಸಲಾಮ್‌ ಅಲ್ಲ ಅಲ್ಲ ಕೋಟಿ ಕೋಟಿ ಸಲಾಮ್‌. ಎಲ್ಲ ಸಿಬ್ಬಂದಿಯೂ ಇನ್ನಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡುವುದಕ್ಕೆ ಈ ಬೆಳಕಿನ ಹಬ್ಬ ಇನ್ನಷ್ಟು ಶಕ್ತಿ ನೀಡಲಿ.

Leave a Reply

error: Content is protected !!
LATEST
ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ನೆರೆ ಭೀತಿಯಿಂದ ಬೆಂಗಳೂರಿಗರ ರಕ್ಷಿಸಿ: ಡಿಸಿಎಂಗೆ ಎಎಪಿ ರಾಜ್ಯಾಧ್ಯಕ್ಷ ಆಗ್ರಹ ಮಧ್ಯಮ ವರ್ಗದ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ BBMP-ಡೆಂಗ್ಯೂ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ : ಸುರಳ್ಕರ್ ವಿಕಾಸ್ ಕಿಶೋರ್ ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ 18 ರಿಂದ 45 ವರ್ಷದವರಿಂದ ಅರ್ಜಿ ಆಹ್ವಾನ ಪ್ರತಿಷ್ಠಿತ ಶಾಲೆಗಳಿಗೆ ಸೇರ ಬಯಸುವ ಮಕ್ಕಳಿಂದ ಅರ್ಜಿ ಆಹ್ವಾನ: ಷರತ್ತು ಅನ್ವಯ ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ KSRTC: ₹8.76 ಲಕ್ಷ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶ... BMTC ಚಾಲಕರಿಗೆ ಕೂಡಲೇ ವೇತನ ಪಾವತಿಸಿ: ಎಎಪಿಯ ಜಗದೀಶ್ ವಿ. ಸದಂ ಆಗ್ರಹ ಬಸವನಹಳ್ಳಿ: ನಿವೃತ್ತ ಸಹಾಯಕ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಿಕ್ಕಮಾಯಿಗೌಡರ ಪತ್ನಿ ಸಿದ್ದಮ್ಮ ನಿಧನ KSRTC ನೌಕರರ 2024ರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಬಿಡುಗಡೆಗೆ ಜೂನ್‌ 6ರಬಳಿಕ ನಿರ್ಧಾರ: ರಾಮಲಿಂಗಾರೆಡ್ಡಿ