ರಾಮನಗರ: ಕಾವೇರಿ ನೀರು ಬಿಡುಗಡೆಗೆ ಆದೇಶ ಹೊರಡಿಸಿರುವ ಬಗ್ಗೆ ಕಾವೇರಿ ಮೇಕೆದಾಟು ಚಿಂತನ ಮಂಥನ ಸಭೆಯನ್ನು ನಾಳೆ ಸೆ.13ರಂದು ರಾಮನಗರದಲ್ಲಿ ಆಯೋಜಿಸಲಾಗಿದೆ ಎಂದು ಸಂಚಾಲನ ಸಮಿತಿಯ ಕುರುಬೂರು ಶಾಂತಕುಮಾರ್, ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.
ಕಾವೇರಿ ಜಲಾಶಯದಲ್ಲಿ ಹಿಂದಿನ ಎರಡು ವರ್ಷಗಳು 500ಕ್ಕೂ ಹೆಚ್ಚು ಟಿಎಂಸಿ ನೀರು ತಮಿಳುನಾಡಿಗೆ ಹರಿದು ಸಮುದ್ರ ಸೇರಿದೆ. ಹೆಚ್ಚುವರಿ ನೀರನ್ನ ಮೇಕೆದಾಟು ಅಣೆಕಟ್ಟೆ ನಿರ್ಮಿಸಿ ಉಳಿಸಿಕೊಂಡಿದ್ದರೆ ಕಾವೇರಿ ಅಚ್ಚುಕಟ್ಟು ಭಾಗದ ರೈತರು ಈ ವರ್ಷ ಸಂಕಷ್ಟಪಡುವ ಪರಿಸ್ಥಿತಿ ಬರುತ್ತಲಿಲ್ಲ ಎಂದು ಹೇಳಿದ್ದಾರೆ.
ಇನ್ನು ಇಂದಿನ ಮಳೆ ಪ್ರಮಾಣ ಕಡಿಮೆ, ಬರ ಸನ್ನಿವೇಶದಲ್ಲಿ ಈಗಾಗಲೇ ರಾಜ್ಯ ಸರ್ಕಾರ ಜಲಾಶಯಗಳ ಹೆಚ್ಚು ನೀರನ್ನು ತಮಿಳುನಾಡಿಗೆ ಹರಿಸಿ ಕರ್ನಾಟಕದ ರೈತರನ್ನ ಬಲಿ ಕೊಟ್ಟಿದೆ ಮತ್ತೆ ನೀರು ಕೊಡುವಂತೆ ಕಾವೇರಿ ಪ್ರಾಧಿಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ಆದೇಶವನ್ನು ಧಿಕ್ಕರಿಸಬೇಕು ರಾಜ್ಯದ ಜನರನ್ನ ರಕ್ಷಿಸಬೇಕು ಎಂದು ಆಗ್ರಹಿಸಲಾಗುವುದು.
ರಾಜ್ಯದ ನೆಲ ಜಲ ಭಾಷೆ ವಿಚಾರ ಬಂದಾಗ ರಾಜ್ಯದ ಎಂಪಿಗಳು ಮೌನ ತಾಳುತ್ತಿದ್ದಾರೆ ಇದು ಸರಿಯಾದ ಬೆಳವಣಿಗೆ ಅಲ್ಲ. ಈ ವಿಚಾರಗಳ ಬಗ್ಗೆ ಪಕ್ಷಾತೀತವಾಗಿ ರಾಜ್ಯಾದ್ಯಂತ ಸಂಘಟಿತ ಹೋರಾಟ ನಡೆಸಲು ಕೇಂದ್ರ, ರಾಜ್ಯ ಸರ್ಕಾರದ ಗಮನ ಸೆಳೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕಾರ್ಯ ಆರಂಭ ಮಾಡಿದೆ.
ಇದರ ಎರಡನೇ ಸಭೆ ರಾಮನಗರದಲ್ಲಿ ನಾಳೆ ಸೆ.13ರಂದು ಬೆಳಗ್ಗೆ 11 ಗಂಟೆಗೆ ಎಪಿಎಂಸಿ ಸಭಾಂಗಣದಲ್ಲಿ ನಡೆಯಲಿದೆ ರಾಜ್ಯದ ಹಿತಶಕ್ತಿ ದೃಷ್ಟಿಯಿಂದ ಕಾವೇರಿ ಪ್ರಾಧಿಕಾರದ ಆದೇಶದ ಬಗ್ಗೆ ವಿಮರ್ಶೆ ಮುಂದಿನ ಹೋರಾಟದ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.