CrimeNEWSನಮ್ಮಜಿಲ್ಲೆ

KKRTC- ನಿರ್ವಾಹಕನ ಮೇಲೆ ತನಿಖಾಧಿಕಾರಿಗಳಿಂದಲೇ ಹಲ್ಲೆ – ಆಸ್ಪತ್ರೆ ಸೇರಿದ ಕಂಡಕ್ಟರ್‌

ಕ್ಯಾಸ್‌ ಚೆಕ್‌ ವೇಳೆ ಗಲಾಟೆ - ಹಣ ಪಡೆಯುವುದನ್ನು ಮರೆತುಹೋಗಿದ್ದೆ ಎಂದ ಪ್ರಯಾಣಿಕ

ತನಿಖಾಧಿಕಾರಿಗಳಿಂದ ಹಲ್ಲೆಗೊಳಗಾದ ನಿರ್ವಾಹಕ ಮೋತಿಲಾಲ್‌.
ವಿಜಯಪಥ ಸಮಗ್ರ ಸುದ್ದಿ

ಸಿಂಧನೂರು: ಸಾರಿಗೆ ಬಸ್‌ ತನಿಖಾಧಿಕಾರಿಗಳು ನಿರ್ವಾಹಕನ ಬಳಿ ಟಿಕೆಟ್‌ಗಳ ವಿತರಣೆಗಿಂತ ಹೆಚ್ಚಿನ ಹಣ ಇತ್ತು ಎಂಬ ವಿಷಯದಲ್ಲಿ ಗಲಾಟೆಮಾಡಿದ್ದು ಅಲ್ಲದೆ ನಿರ್ವಾಹಕನ ಮೇಲೆ ಹಲ್ಲೆ ಮಾಡಿದ್ದರಿಂದ ಆತ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸಿಂಧನೂರಿನ ಬಸ್‌ ನಿಲ್ದಾಣದಲ್ಲಿ ನಡೆದಿದೆ.

ಸಿಂಧನೂರು ಬಸ್‌ ನಿಲ್ದಾಣದಲ್ಲಿ ಕಳೆದ ರಾತ್ರಿ (ಡಿ.3) 8.30ರ ಸುಮಾರಿನಲ್ಲಿ ಬಸ್‌ ಟಿಕೆಟ್‌ ಚೆಕ್‌ ಮಾಡಲು ಬಸ್‌ ಹತ್ತಿದ್ದ ಸಾರಿಗೆ ತನಿಖಾಧಿಕಾರಿಗಳು ಎಲ್ಲ ಪ್ರಯಾಣಿಕರಿಗೂ ಟಿಕೆಟ್‌ ವಿತರಣೆ ಮಾಡಲಾಗಿದ್ದು ಓಕೆ ಆಯಿತು. ಬಳಿಕ ಕ್ಯಾಸ್‌ ಚೆಕ್‌ (ಸಿಸಿ) ಮಾಡುವಾಗ ನಿರ್ವಾಹಕನ ಬಳಿ 322 ರೂಪಾಯಿ ಹೆಚ್ಚಾಗಿದ್ದು, ಇದು ಹೇಗೆ ಬಂತು ಎಂದು ಕೇಳಿದ್ದಾರೆ, ಈ ವೇಳೆ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದು ಅವರಿಗೆ ಇಲ್ಲೆ ನಿಮ್ಮ ಮುಂದೆಯೇ ತಲುಪಿಸುತ್ತೇನೆ ಇರಿ ಸರ್‌ ಎಂದು ಹೇಳಿದ್ದಾರೆ.

ಟಿಕೆಟ್‌ ವಿತರಿಸಿ ಚೆಂಜ್‌ ಬರೆದಿರುವುದು.

ಆದರೆ ನಿಮ್ಮ ಮಾತಿನ ಮೇಲೆ ನಂಬಿಕೆ ಇಲ್ಲ ಎಂದು ವಾಗ್ವಾದಕ್ಕೆ ಇಳಿದ ತನಿಖಾಧಿಕಾರಿಗಳಾದ ಪಟೇಲ್ ಮತ್ತು ಭಜಂತ್ರಿ ಎಂಬುವರು ಮಾತಿಗೆ ಮಾತು ಬೆಳೆಸಿ ಚಿಟ್ಟಿಗೆದ್ದು ನಿರ್ವಾಹಕ ಮೋತಿಲಾಲ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇನ್ನು ತನಿಖಾಧಿಕಾರಿಗಳು ಮಾಡಿದ ಹಲ್ಲೆಯಿಂದ ಗಾಯಗೊಂಡ ನಿರ್ವಾಹಕ ಮೋತಿಲಾಲ್ ಅವರನ್ನು ಮಸ್ಕಿ ಸರ್ಕಾರಿ ಆಸ್ಪತ್ರೆ ದಾಖಲಿಸಲಾಗಿದೆ. ಆಸ್ಪತ್ರೆಯ ವೈದ್ಯರು ಚಿಕಿತ್ಸೆಗೂ ಮುನ್ನ ಸಂಬಂಧಿಸಿದ ಪೊಲೀಸ್‌ ಠಾಣೆಗೆ ವಿಷಯ ತಿಳಿಸಿದ್ದಾರೆ.

ನಾನೆ ಮರೆತು ಬಸ್‌ ಇಳಿದಿದ್ದೆ ಎಂದ ಪ್ರಯಾಣಿಕ: ನಿನ್ನೆ ರಾತ್ರಿ 8:30 ಗಂಟೆ ಸುಮಾರಿಗೆ ಕರ್ತವ್ಯ ಮುಗಿಸುವ ಸಂದರ್ಭದಲ್ಲಿ ತನಿಖಾಧಿಕಾರಿಗಳು ಸಿಸಿ ಮಾಡುವಾಗ ನಿರ್ವಾಹಕರ ಬಳಿ 322 ರೂ. ಹೆಚ್ಚು ಹಣ ಕಂಡುಬಂದಿದೆ. ಈ ಬಗ್ಗೆ ತನಿಖಾಧಿಕಾರಿಗಳು ವಿಚಾರಿಸಿದಾಗ ನಾನು ಪ್ರಯಾಣಿಕರ ಚೀಟಿ ಮೇಲೆ ಬರೆದು ಕೊಟ್ಟಿದ್ದೇನೆ. ಯಾರ ಬಳಿ ಎಂದು ಗೊತ್ತಾಗುತ್ತಿಲ್ಲ. ಸ್ವಲ್ಪ ಸಮಯ ಕೊಡಿ ಯಾರ ಹಣ ಎಂದು ನಿಮ್ಮ ಸಮ್ಮುಖದಲ್ಲಿ ಚೀಟಿ ಸಮೇತ ಕೊಡುತ್ತೇನೆಂದು ವಿನಂತಿಸಿದ್ದಾರೆ ನಿರ್ವಾಹಕ.

ಚೆಂಜ್‌ ಪಡೆಯುವುದನ್ನು ಮರೆತುಹೋಗಿದ್ದ ಪ್ರಯಾಣಿಕ.

ವೇಳೆ ನಿರ್ವಾಹಕ ಮತ್ತು ತನಿಖಾಧಿಕಾರಿಗಳ ಮಧ್ಯೆ ವಾಗ್ವಾದ ನಡೆದ ಪರಿಣಾಮ ತಾರಕಕ್ಕೇರಿ ಕೈ ಕೈ ಮಿಲಾಯಿಸುವ ಹಂತ ಮುಟ್ಟಿದೆ ಪರಿಣಾಮ ನಿರ್ವಾಹಕರ ಮೇಲೆ ಹಲ್ಲೆ ಮಾಡಿದ್ದು ಅದರಿಂದ ತೀವ್ರ ಎದೆ ನೋವು ಕಾಣಿಸಿಕೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಮೋತಿಲಾಲ್ ಅವರು ಆಸ್ಪತ್ರೆಗೆ ದಾಖಲಾದ ವಿಷಯ ತಿಳಿಯುತ್ತಿದ್ದಂತೆ ಇತ್ತ ತನಿಖಾಧಿಕಾರಿಗಳೇ ಮೋತಿಲಾಲ್ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಆದರೆ ಇನ್ನು ಆಸ್ಪತ್ರೆಯಲ್ಲೇ ಇರುವ ಕಾರಣ ಮೋತಿಲಾಲ್ ದೂರು ನೀಡಿಲ್ಲ ಎಂದು ತಿಳಿದು ಬಂದಿದೆ.

ಈ ನಡುವೆ ನಿರ್ವಾಹಕ ಇಬ್ಬರು ಪ್ರಯಾಣಿಕರು ಸೇರಿ 68 ರೂ. ಟಿಕೆಟ್‌ ವಿತರಿಸಿ 500 ರೂಪಾಯಿ ಪಡೆದು ಚೆಂಜ್‌ ಕೊಡಬೇಕಿದ್ದ 432ರೂಪಾಯಿಯನ್ನು ಟಿಕೆಟ್‌ ಹಿಂದೆ ಬರೆದುಕೊಟ್ಟಿದ್ದಾರೆ. ಆದರೆ ಪ್ರಯಾಣಿಕರು ತಮ್ಮ ನಿಲ್ದಾಣದಲ್ಲಿ ಬಸ್‌ ಇಳಿದು ಹೋಗುವಾಗ ಹಣ ಪಡೆಯುವುದನ್ನು ಮರೆತಿದ್ದಾರೆ ಅಲ್ಲದೆ ಮತ್ತೆ ಹಿಂದಿರುಗಿ ಬಂದು ತಮ್ಮ 432 ರೂಪಾಯಿ ಬಾಕಿ ಹಣವನ್ನು ಪಡೆದುಕೊಂಡು ಹೀಗಿದ್ದಾರೆ.

ಅಷ್ಟರಲ್ಲೆ ತನಿಖಾಧಿಕಾರಿಗಳು ನಿರ್ವಾಹಕ ಪ್ರಯಾಣಿಕರಿಗೆ ಮೋಸ ಮಾಡಿದ್ದಾನೆ ಎಂದು ಗಲಾಟೆ ಮಾಡಿ ಹಲ್ಲೆ ಮಾಡಿದ್ದಾರೆ. ಆದರೆ ನಾನೇ ಹಣ ಪಡೆಯುವುದನ್ನು ಮರೆತಿದ್ದೆ ಎಂದು ಪ್ರಯಾಣಿಕ ವಿಜಯಪಥಕ್ಕೆ ತಿಳಿಸಿದ್ದು ಅಲ್ಲದೆ ಟಿಕೆಟ್‌ ಕೂಡ ನಿರ್ವಾಹಕರಿಗೆ ಹಿಂದಿರುಗಿಸಿರುವುದಾಗಿ ತಿಳಿಸಿದ್ದಾರೆ.

ಇನ್ನು ಈ ಸಂಬಂಧ ನಿರ್ವಾಹನದು ಯಾವುದೇ ತಪ್ಪಿಲ್ಲ ಇದನ್ನು ನಾನು ಎಲ್ಲಿ ಬೇಕಾದರು ಹೇಳುತ್ತೇನೆ ಎಂದು ಪ್ರಯಾಣಿಕ ವಿಜಯಪಥಕ್ಕೆ ತಿಳಿಸಿದ್ದು ಅವರ ಫೋಟೋವನ್ನು ಸಹ ಕಳುಹಿಸಿಕೊಟ್ಟಿದ್ದಾರೆ.

Leave a Reply

error: Content is protected !!
LATEST
ಭ್ರಷ್ಟಾಚಾರ, ಕಮಿಷನ್‌ ದಂಧೆ ನಿಲ್ಲಿಸಿದರೆ ಗ್ಯಾರಂಟಿ ಯೋಜನೆಗಳಿಗೂ ಕೊಟ್ಟು ಹಣ ಉಳಿಯುತ್ತದೆ : ಎಎಪಿ ಜೂ.24ರಂದು ಶಿವಮೊಗ್ಗದಲ್ಲಿ ರಾಷ್ಟ್ರ, ರಾಜ್ಯ ರೈತ ಮುಖಂಡರ ಸಮಾವೇಶ: ಕುರುಬೂರ್ ಶಾಂತಕುಮಾರ್ ಸಂತ್ರಸ್ತೆ ಅಪರಹರಣ ಪ್ರಕರಣ: ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ಮಂಜೂರು KSRTCಯಿಂದ 300ಕ್ಕೂ ಹೆಚ್ಚು ಹೊಸ ಮಾರ್ಗಗಳಲ್ಲಿ ಬಸ್‌ ಓಡಾಟ: ಸಚಿವ ರಾಮಲಿಂಗಾರೆಡ್ಡಿ BMTC: 50ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್​​ಗಳ ಚಾಲಕರಿಗೆ ಗೇಟ್‌ಪಾಸ್‌ ಅತ್ಯಾಚಾರ ಆರೋಪಿ ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣನ ಎಸ್‌ಐಟಿ ಕಸ್ಟಡಿ ಅಂತ್ಯ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ವಿರೋಧಿಸಿ ನಾಳೆ ರಾಜ್ಯಾದ್ಯಂತ ಎಎಪಿ ಪ್ರತಿಭಟನೆ ನಟ ದರ್ಶನ್‌ ಸ್ಥಿತಿಗೆ ಮರುಗಿ ಅಭಿಮಾನಿ ಅನ್ನನೀರು ಬಿಟ್ಟು ಆತ್ಮಹತ್ಯೆಗೆ ಶರಣು? KSRTC ‘ಅಶ್ವಮೇಧ’ಗಳಿಂದ ಸಂಸ್ಥೆಗೆ ಶೇ.10ಕ್ಕೂ ಹೆಚ್ಚು ಲಾಭ : ಸಚಿವ ರಾಮಲಿಂಗಾರೆಡ್ಡಿ ಅತೀ ಶೀಘ್ರದಲ್ಲೇ NWKRTC ಒಡಲು ಸೇರಲಿವೆ 350 ಹೊಸ ಎಲೆಕ್ಟ್ರಿಕ್​ ಬಸ್‌ಗಳು