Search By Date & Category

NEWSನಮ್ಮರಾಜ್ಯರಾಜಕೀಯ

ಕೆಕೆಆರ್‌ಟಿಸಿ: ಬೀದರ್‌ ಪತ್ತಿನ ಸಹಕಾರ ಸಂಘದ ಉಪಚುನಾವಣೆ – ಭಾರಿ ಅಂತರದಲ್ಲಿ ಕೂಟದ ಅಭ್ಯರ್ಥಿ ಗೆಲುವು

ವಿಜಯಪಥ ಸಮಗ್ರ ಸುದ್ದಿ

ಬೀದರ್: ಸಾರಿಗೆ ನೌಕರರ ಪತ್ತಿನ ಸಹಕಾರ ಸಂಘದ ಎರಡು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಬೀದರ್‌ ವಿಭಾಗದ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.

ಭಾನುವಾರ ಪತ್ತಿನ ಸಹಕಾರ ಸಂಘದ ಎರಡು ಸ್ಥಾನಗಳಿಗೆ ಉಪಚುನಾವಣೆ ನಡೆದಿದ್ದು ಅದರಲ್ಲಿ ಹೆಚ್ಚು ಅಂತರದಿಂದ ಕೂಟದ ಅಭ್ಯರ್ಥಿಗಳು ಸಾಯಿನಾಥ್ ಗೌಡ ಪಾಟೀಲ್ 71 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದಾರೆ.

ಒಟ್ಟು 360 ಮತಗಳು ಚಲಾವಣೆಯಾಗಿದ್ದು ಅದರಲ್ಲಿ 71 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರೆ, ಮತ್ತೊಬ್ಬ ಕೂಟದ ಅಭ್ಯರ್ಥಿ ಸಂಜು ಕುಮಾರ್ ದುಮ್ಮನ್ಸೂರ್ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಕೂಟದ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿದ್ದು, ಹೀಗಾಗಿ ಕ್ರಿಯಾ ಸಮಿತಿಯ ಏಳು ಸಂಘಟನೆಗಳ ಮುಖಂಡರು ಕಳೆದ ಒಂದು ವಾರದಿಂದ ಅಲ್ಲೇ ವಾಸ್ತವ್ಯ ಹೂಡಿ ತಮ್ಮ ಅಭ್ಯರ್ಥಿಗಳ ಪರ ಮತ ಪ್ರಚಾರ ಮಾಡಿದರು. ಆದರೂ ಸೋಲಿನ ಮೂಲಕ ಭಾರಿ ಮುಖಭಂಗ ಅನುಭವಿಸಿದ್ದಾರೆ.

ಇನ್ನು ಕೂಟದ ಅಭ್ಯರ್ಥಿಗಳ ಗೆಲುವಿಗೆ ಕಾರಣರಾದ ಸಮಸ್ತ ಬೀದರ್ ವಿಭಾಗದ ಆತ್ಮೀಯ ಮತದಾರ ನೌಕರ ಬಂಧುಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಕೂಟದ ಪದಾಧಿಕಾರಿಗಳು ಗೆಲುವಿನ ಸಂತಸ ಹಂಚಿಕೊಂಡಿದ್ದಾರೆ.

Leave a Reply

error: Content is protected !!