ರಾಯಚೂರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಚಲಾಯಿಸುತ್ತಿದ್ದಾಗ ಚಾಲಕನಿಗೆ ಹೃದಯಾಘಾತವಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಈ ವೇಳೆ ಬಸ್ ಪಲ್ಟಿಯಾಗಿ ಹಲವು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಜಿಲ್ಲೆಯ ಚಿಕ್ಕಹೆಸರೂರು ಗ್ರಾಮದ ಬಳಿ ನಡೆದಿದೆ.
ಕೆಕೆಆರ್‌ಟಿಸಿ ರಾಜಚೂರು ವಿಭಾಗದ ಲಿಂಗಸೂಗುರ ಘಟಕದ ಚಾಲಕ ಶ್ರೀನಿವಾಸ್ ನಾರಾಯಣ ಗೌಡ (52) ಮೃತರು. ಸೋಮವಾರ ಸಂಜೆ ಬಸ್ ರಾಯಚೂರು-ಲಿಂಗಸೂಗುರ ಮಾರ್ಗವಾಗಿ ಬೆಳಗಾವಿಗೆ ಸಂಚರಿಸುತ್ತಿದ್ದ ವೇಳೆ ಮಾರ್ಗಮಧ್ಯದಲ್ಲಿ ಚಾಲಕನಿಗೆ ಹೃದಯಾಘಾತವಾಗಿದೆ. ಚಾಲಕ ಅಸ್ವಸ್ಥಗೊಂಡ ಕಾರಣ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿದೆ.
ಅವಘಡದಲ್ಲಿ ನಿರ್ವಾಹಕ ಸೇರಿದಂತೆ 14ಪ್ರಯಾಣಿಕರು ಗಾಯಗೊಂಡಿದ್ದಾರೆ. ಓರ್ವ ಮಹಿಳೆಗೆ ಗಂಭೀರ ಗಾಯವಾಗಿದ್ದು, ಲಿಂಗಸೂಗೂರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ: 31 ಪ್ರಯಾಣಿಕರನ್ನು ಹೊತ್ತು ರಾಜಹಂಸ ಬಸ್ ರಾಯಚೂರಿನಿಂದ ಬೆಳಗಾವಿ ಕಡೆ ಸಂಚರಿಸುತ್ತಿತ್ತು. ಇದಕ್ಕಿದ್ದಂತೆ ಬಸ್ ಚಾಲಕನಿಗೆ ಹೃದಯಾಘಾತವಾಗಿದೆ. ತೀವ್ರ ಹೃದಯಾಘಾತದಿಂದ ಬಳಲಿದ ಚಾಲಕ ಬಸ್ ನಿಯಂತ್ರಣಕ್ಕೆ ತರಲು ಯತ್ನಿಸಿದ್ದಾನೆ. ಆದರೆ ಅಷ್ಟರಲ್ಲೇ ಚಾಲಕನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಪರಿಣಾಮ ಬಸ್ ಅಪಘಾತಕ್ಕೀಡಾಗಿದೆ. ಇದರಿಂದ ಬಸ್ ಪ್ರಯಾಣಿಕರ ಪೈಕಿ 14 ಮಂದಿಗೆ ಗಾಯಗಳಾಗಿವೆ. ಗಾಯಗೊಂಡ ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ 51 ವರ್ಷದ ಬಸ್ ಚಾಲಕ ಶ್ರೀನಿವಾಸ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರಾಯಚೂರಿನಿಂದ ಸರಿಸುಮಾರು 90 ಕಿಲೋಮೀಟರ್ ಬಸ್ ಪ್ರಯಾಣಿಸಿದೆ. ಈ ವೇಳೆ ಈ ದುರ್ಗಟನೆ ನಡೆದಿದೆ. ಬಸ್ ಚಾಲಕ ತೀವ್ರ ಹೃದಯಾಘಾತ ಸಂಭವಿಸಿದೆ. ವೇಗವಾಗಿ ಚಲಿಸುತ್ತಿದ್ದ ಬಸ್ ನಿಯಂತ್ರಿಸಲು ಯತ್ನಿಸಿದ್ದಾರೆ. ಬಸ್ ಚಾಲನಕ ಪ್ರಯತ್ನದಿಂದ ಬಸ್ ವೇಗ ಕಡಿತಗೊಂಡಿದೆ. ಆದರೆ ಬಸ್ ನಿಲ್ಲಿಸುವ ಮೊದಲೇ ಚಾಲಕ ಅಸ್ವಸ್ಥಗೊಂಡಿದ್ದಾರೆ. ಹೀಗಾಗಿ ಬಸ್ ಅಪಘಾತಕ್ಕೀಡಾಗಿದೆ.
ಆಗಸ್ಟ್ 23ರ ತಡ ರಾತ್ರಿ ರಾಯಚೂರಿನಿಂದ ಬೆಳಗಾವಿಗೆ ಬಸ್ ಪ್ರಯಾಣ ಬೆಳೆಸಿತ್ತು. 31 ಪ್ರಯಾಣಿಕರನ್ನು ಹೊತ್ತು ಸಾಗಿದ ಬಸ್ ಚಿಕ್ಕಹೆಸರೂರು ಬಳಿ ಬರುತ್ತಿದ್ದಂತೆ ಚಾಲಕ ಶ್ರೀನಿವಾಸ್‌ಗೆ ಹೃದಯಾಘಾತವಾಗಿದೆ. ಇದರಿಂದ ಬಸ್ ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ಹೊಲಕ್ಕೆ ಪಲ್ಟಿಯಾಗಿದೆ. 31 ಪ್ರಯಾಣಿಕರ ಪೈಕಿ 14 ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಘಟನೆ ಕುರಿತು ರಾಜಹಂಸ ಬಸ್ ನಿರ್ವಾಹಕ ಗೋವಿಂದ್‌ರಿಂದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ.