KKRTC: ಸಂಸ್ಥೆಯ ವಾಹನ ದುರ್ಬಳಕೆ ಮಾಡಿಕೊಂಡ ಅಧಿಕಾರಿಯ ಪತ್ನಿ- ವಜಾ ಮಾಡಿದ್ದು ಮಾತ್ರ ಸಾಮಾನ್ಯ ನೌಕರನ!!

ವಿಜಯಪುರ: ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ನಿಕಟಪೂರ್ವ ವಿಭಾಗೀಯ ಸಾರಿಗೆ ಅಧಿಕಾರಿ ಹಾಗೂ ಪದೇಪದೆ ನಿಗಮದ ಕಾನೂನುಗಳನ್ನು ಗಾಳಿಗೆ ತೂರಿ ಇಲಾಖಾ ವಾಹನಗಳನ್ನು ದುರ್ಬಳಕೆ ಮಾಡಿಕೊಳ್ಳುವ ದೇವಾನಂದ ಬಿರಾದಾರ ಅವರ ಪತ್ನಿ 2021 ರಲ್ಲಿ ಇಲಾಖಾ ವಾಹನ ಸಂಖ್ಯೆ KA 32 F 2238 ವನ್ನು ಗುಡಿ ಗುಂಡಾರಗಳನ್ನು ಸುತ್ತಲೂ ಬಳಸಿಕೊಂಡಿದ್ದರು.
ಅವರು ಇಲಾಖಾ ವಾಹನವನ್ನು ದುರ್ಬಳಕೆ ಮಾಡುತ್ತಿರುವ ವಿಡಿಯೋ ಇಲಾಖಾ ವಾಹನ ಅಧಿಕಾರಿಗಳಿಗಿಂತ ಅವರ ಫ್ಯಾಮಿಲಿಯವರು ಜಾಸ್ತಿ ಬಳಕೆ ಮಾಡುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು.
ಅದಕ್ಕೆ ಸಂಸ್ಥೆಯ ನೌಕರ ಎಂ.ಎನ್. ಇಳಕಲ್ (ಈಗ ಮಾಜಿ ಕಿರಿಯ ಸಹಾಯಕ ವಿಜಯಪುರ ವಿಭಾಗ) ಅವರ ಡೂಪ್ಲಿಕೇಟ್ ID ಸೃಷ್ಟಿಸಿ ಆ ಮುಖಾಂತರ ಮೇಡಂ ಇದು ವಿಜಯಪುರ ವಿಭಾಗದಲ್ಲಿ ಕಾಮನ್ ಇದಕ್ಕಿಂತ ಹೆಚ್ಚು ಭ್ರಷ್ಟಾಚಾರ ವಿಭಾಗದಲ್ಲಿ ನಡೆಯುತ್ತಿದೆ ಆನೆ ನಡೆದಿದ್ದೆ ದಾರಿ ಎಂದು ಕಾಮೆಂಟ್ ಹಾಕಿದ್ದರು ಎಂದು ಆರೋಪಿಸಿ ವಜಾ ಮಾಡಲಾಗಿದೆ.
ಇನ್ನು ಈ ಕಾಮೆಂಟ್ ಹಾಕಿದ್ದಕ್ಕೆ ವಿಜಯಪುರ ವಿಭಾಗದ ಭ್ರಷ್ಟ, ನೌಕರರ ವಿರೋಧಿ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಅವರು ಎಂ.ಎನ್. ಇಳಕಲ್ ಅವರನ್ನು ಅಧಿಕಾರಿಗಳ ಬಗ್ಗೆ ಹಾಗೂ ಸಂಸ್ಥೆಯ ಬಗ್ಗೆ ಇಲ್ಲ ಸಲ್ಲದ ಕಾಮೆಂಟ್ ಮಾಡಿರುತ್ತೀರಿ ಎಂದು ಅಮಾನತು ಮಾಡಿದ್ದರು.
ಅಲ್ಲದೆ ನಿಮ್ಮ ಫೇಸ್ಬುಕ್ ID ಹ್ಯಾಕ್ ಆಗಿದ್ದು ಗೊತ್ತಿದ್ದರೂ ಸಹ ನೀವು CEN ಪೊಲೀಸ್ ಸ್ಟೇಷನ್ ವಿಜಯಪುರದಲ್ಲಿ ದೂರು ದಾಖಲು ಮಾಡಲು ವಿಫಲರಾಗಿರುತ್ತೀರಿ ಎಂದು 2022ರಲ್ಲಿ ನಿಬಂಧನೆ 23ರಲ್ಲಿ ಆಪಾದನಾ ಪತ್ರ ನೀಡಿದ್ದರು. ನಿಬಂಧನೆ 23ರಲ್ಲಿ ಜಾರಿ ಮಾಡಿರುವ ಆಪಾದನಾ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದರು. ನಿಮ್ಮ ಫೇಸ್ಬುಕ್ ID ಹ್ಯಾಕ್ ಆಗಿದ್ದು ಅಂತಾ. ಇವರ ಫೇಸ್ಬುಕ್ ID ಹ್ಯಾಕ್ ಆಗಿದ್ದರೆ ಇವರು ಕಾಮೆಂಟ್ ಮಾಡಲಿಕ್ಕೆ ಹೇಗೆ ಸಾಧ್ಯ? ಹಾಗಾದರೆ ಇವರನ್ನು ದುರುದ್ದೇಶ ಪೂರ್ವಕವಾಗಿ ಅಮಾನತು ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಹಾಗೂ ಅಮಾನತು ಮಾಡಿರುವುದು ಕಾನೂನು ಬಾಹಿರವಾಗಿದೆ ಅಲ್ಲವೇ?
ಇನ್ನು ಈ ಪ್ರಕರಣದಲ್ಲಿ ಇಲಾಖಾ ವಿಚಾರಣೆ ನಡೆದು ವಿಚಾರಣಾಧಿಕಾರಿಗಳು ಭಾಗಶಃ ಎಂದು ವಿಚಾರಣಾ ಫಲಿತಾಂಶ ವರದಿ ನೀಡಿದ್ದಾರೆ. ಆ ವರದಿಯ ಆಧಾರದ ಮೇಲೆ ನೀತಿ ಸಂಹಿತೆ ಉಲ್ಲಘನೆ ಪ್ರಕಾರಣದಲ್ಲಿ ನಿವೃತ್ತಿ ಆಗುವುದಕ್ಕಿಂತ ಮುಂಚೆ 13 ದಿನ ಮೊದಲು ಅಮಾನತಾದ ಜೆ.ಎಂ.ಫೈಜ್ (ಆಗಿನ ವಿಭಾಗೀಯ ನಿಯಂತ್ರಣಾಧಿಕಾರಿ) ಅವರು ಎಂ.ಎನ್. ಇಳಕಲ್ ಅವರನ್ನು ವ್ಯಯಕ್ತಿಯ ದ್ವೇಷದಿಂದ ವಜಾ ಮಾಡಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿತ್ತು.
ಇಳಕಲ್ ಅವರು ಮಾಡದ ತಪ್ಪಿಗೆ ಕಾನೂನು ಬಾಹಿರವಾಗಿ ಅವರನ್ನು ವಜಾ ಮಾಡಿರುವುದು ತಪ್ಪಲ್ಲವೇ?. ಈ ವಿಷಯದಲ್ಲಿ ಎಂ.ಎನ್.ಇಳಕಲ್ ಅವರ ವಜಾ ಪ್ರಕರಣ ಸದ್ಯ ಕಾರ್ಮಿಕ ನ್ಯಾಯಾಲದಲ್ಲಿ ನಡೆಯುತ್ತಿದ್ದು ಇಲ್ಲಿ ನನಗೆ ನ್ಯಾಯ ಸಿಗುವ ಭರವಸೆ ಇದೆ ಎಂದು ಇಳಕಲ್ ಹೇಳುತ್ತಿದ್ದಾರೆ.
Related

You Might Also Like
ಕಾವೇರಿ ನದಿಗೆ 31,550 ಕ್ಯೂಸೆಕ್ ನೀರು ಬಿಡುಗಡೆ- ನದಿ ತಟದ ಜನರಿಗೆ ಸೂಚನೆ
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ವರುಣನ ಆರ್ಭಟ ಹೆಚ್ಚಾಗಿದ್ದು ಈ ಹಿನ್ನೆಲೆ ಹಳೇ ಮೈಸೂರು ಭಾಗದ ಜೀವನಾಡಿ ಕೆಆರ್ಎಸ್ ಡ್ಯಾಂಗೆ ಒಳಹರಿವು ಹೆಚ್ಚಾಗುತ್ತಿದೆ. ಹೀಗಾಗಿ ನದಿ...
BMTC: ಬ್ರೇಕ್ ಫೇಲಾಗಿ ಕಂದಕಕ್ಕೆ ನುಗ್ಗಿದ ಬಸ್- ಅದೃಷ್ಟವಶಾತ್ ಪ್ರಯಾಣಿಕರು ಸೇಫ್
ಆನೇಕಲ್: ಬ್ರೇಕ್ ಫೇಲಾಗಿ ರಸ್ತೆ ಬದಿಯ ಕಂದಕಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ ನುಗ್ಗಿರುವ ಘಟನೆ ಬೆಂಗಳೂರು ಹೊರವಲಯ ಜಿಗಣಿ ಸಮೀಪದ ಹರಪ್ಪನಹಳ್ಳಿ ಬಳಿ...
ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಸಿಗುತ್ತಿದೆ ಮುಕ್ತಿ
ಬೆಂಗಳೂರು: ರಾಜ್ಯ ರಾಜಧಾನಿಯ ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಮುಕ್ತಿ ಸಿಗುತ್ತಿದೆ. ಹೌದು! ಬಹುನಿರೀಕ್ಷಿತ ಹೆಬ್ಬಾಳ ವಿಸ್ತರಿತ ಮೇಲ್ಸೇತುವೆ ಉದ್ಘಾಟನೆ ಆಗುತ್ತಿದೆ. ಇಂದು...
ಸರ್ಕಾರಿ ಬಸ್ ಗಾಜು ಒಡೆದು, ಚಾಲನಾ ಸಿಬ್ಬಂದಿ ಮೇಲೆ ಬೈಕ್ ಸವಾರನಿಂದ ಹಲ್ಲೆ
ಹುಬ್ಬಳ್ಳಿ: ಗದುಗಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸನ್ನು ನಗರದ ಗದಗ ರಸ್ತೆ ಬಳಿ ಬೈಕ್ ಸವಾರನೊಬ್ಬ ಅಡ್ಡಗಟ್ಟಿ ಬಸ್ ಗಾಜು ಒಡೆದು ಹಾಕಿರುವುದಲ್ಲದೆ ಚಾಲಕ ಹಾಗೂ...
ಕೊಟ್ಟ ಚಿನ್ನಾಭರಣ- ನಗದನ್ನು ವಾಪಸ್ ಕೊಡಿಸಿ ಎಂದರೆ 2 ಲಕ್ಷ ಲಂಚಕೊಡಿ ಎಂದ ಪೊಲೀಸರು: ಲೋಕಾಯುಕ್ತ ಖೆಡ್ಡಕ್ಕೆ ಬಿದ್ದರು
ಬೆಂಗಳೂರು: ಕೊಟ್ಟಿರುವ ಆಭರಣ ಮತ್ತು ನಗದನ್ನು ವಾಪಸ್ ಕೊಡಿಸಿ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ನಮಗೆ 2 ಲಕ್ಷ ರೂ. ಲಂಚ ಕೊಟ್ಟರೆ ವಾಪಸ್...
ಭೀಕರ ಅಪಘಾತ: ಲಾರಿಗೆ ಸರ್ಕಾರಿ ಬಸ್ ಡಿಕ್ಕಿ -ಮೂವರ ಸಾವು, 7ಮಂದಿಗೆ ಗಂಭೀರಗಾಯ
ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ...
KSRTC: ಯಾವುದೇ ಕಾರಣಕ್ಕೂ ನೌಕರರ ವಾರದ ರಜೆ ರದ್ದುಪಡಿಸಬಾರದು- ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಆದೇಶ
ವಾರದ ರಜೆ ರದ್ದು ಪಡಿಸಿದರೆ ಅಂಥ ಅಧಿಕಾರಿಯ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಅಧಿಕಾರಿ ನೌಕರರಿಗೆ ಇದೆ ಬೆಂಗಳೂರು: ನೌಕರರಿಗೆ ವಾರದ ರಜೆಯನ್ನು ನಿಗದಿತ ದಿನದಂದು ನೀಡಬೇಕು...
ಚಂದ್ರಶೇಖರನಾಥ ಶ್ರೀಗಳ ಪೂರ್ವಾಶ್ರಮದ ಹೆಸರು ಕೆ.ಟಿ.ಗೋವಿಂದೇಗೌಡ
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ 80 ವರ್ಷದ ಶ್ರೀ ಚಂದ್ರಶೇಖರನಾಥ ಸ್ವಾಮಿಗಳು ಇಂದು ರಾತ್ರಿ 12.01 ರ ಸಮಯದಲ್ಲಿ ಇಹಲೋಕ ತ್ಯಜಿಸುವ ಮೂಲಕ ಶ್ರೀ ಕೃಷ್ಣನ...
ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ: ದೇವಕಿ ಸುತನ ವೇಷದಲ್ಲಿ ಮಿಂಚಿದ ಲಿಟಲ್ ಲಿಶಾನ್
ಬೆಂಗಳೂರು: ರಾಜ್ಯಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಅದ್ದೂರಿಯಾಗಿ ಆಚರಿಸುತ್ತಿದ್ದು, ಪುಟಾಣಿಗಳು ಶ್ರೀಕೃಷ್ಣ - ರಾಧೆ ವೇಷ ಧರಿಸಿ ಮಿಂಚುತ್ತಿದ್ದಾರೆ. ಈ ಪೈಕಿ ಮಕ್ಕಳ ಚಂದದ ಫೋಟೋಗಳನ್ನು...