CrimeNEWSನಮ್ಮಜಿಲ್ಲೆ

KSRTC ನೌಕರರ ಮೇಲೆ ಕೋಲಾರ ಡಿಸಿ, ಡಿಟಿಒ ದರ್ಪ – ಇತ್ತ ಸ್ಕ್ರ್ಯಾಪ್‌ ಬಸ್‌ಗಳ ರಸ್ತೆಗಿಳಿಸಿ ಜನರ ಪ್ರಾಣದೊಂದಿಗೂ ಚೆಲ್ಲಾಟ

ವಿಜಯಪಥ ಸಮಗ್ರ ಸುದ್ದಿ
  • ಕೋಲಾರ: ಮೂರೂವರೆ ವರ್ಷಗಳಿಂದಲೂ ಚಾಲನಾ ಸಿಬ್ಬಂದಿಗಳಿಗೆ ಓಟಿಯನ್ನೇ ಕೊಟ್ಟಿಲ್ಲ – ಸತ್ಯ ಒಪ್ಪಿಕೊಂಡ ಡಿಸಿ

ಕೋಲಾರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಕೋಲಾರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲನಾ ಸಿಬ್ಬಂದಿಗೆ ಕಳೆದ ಮೂರೂವರೆ ವರ್ಷದಿಂದಲೂ ಓಟಿಯನ್ನೇ ಕೊಟ್ಟಿಲ್ಲ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಬಸವರಾಜು ತಿಳಿಸಿದ್ದಾರೆ.

ಸಂಸ್ಥೆಯ ಕೋಲಾರ ವಿಭಾಗದ ಹಾಲಿ ಶ್ರೀನಿವಾಸಪುರ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಿರ್ವಾಹಕರೊಬ್ಬರಿಗೆ ಡ್ಯೂಟಿ ಕೊಡದೆ ಕಳೆದ ಎರಡು ತಿಂಗಳಿನಿಂದ ಅಲೆಸುತ್ತಿರುವುದರಿಂದ ನೊಂದ ನಿರ್ವಾಹಕರ ಕುಟುಂಬದವರು ಈ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಬಸವರಾಜು ಅವರನ್ನು ಭೇಟಿ ಮಾಡಿದಾಗ ಅವರೆ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಅಂದರೆ, ಚಾಲನಾ ಸಿಬ್ಬಂದಿಯಿಂದ ಹಲಲು ರಾತ್ರಿ ಎನ್ನದೆ ಪ್ರತಿದಿನ 14-15 ಗಂಟೆಗಳ ಕಾಲ ದುಡಿಸಿಕೊಳ್ಳುತ್ತಿದ್ದರೂ ಅವರಿಗೆ ಕಾನೂನಾತ್ಮಕವಾಗಿ ಸಿಗಬೇಕಿರುವ ವೇತನ, ಓಟಿ ಸೇರಿದಂತೆ ಇತರೆ ಭತ್ಯೆಗಳನ್ನು ಕೊಡದೆ ಅಲೆಸಲಾಗುತ್ತಿದೆ ಎಂಬ ಸತ್ಯವನ್ನು ಡಿಸಿ ಬಸವರಾಜು ಅವರೇ ಒಪ್ಪಿಕೊಂಡಿದ್ದಾರೆ.

ಇನ್ನು ನಿಮ್ಮ ಅಪ್ಪನನ್ನು (ತಂದೆ) ಡ್ಯೂಟಿ ಮಾಡುವುದಕ್ಕೆ ಕಳುಹಿಸು ಆತ ಕಾನೂನು ಹೋರಾಟ ಬೇಕಾದರೆ ಮಾಡಲಿ ಆದರೆ ಡ್ಯೂಟಿ ಬಿಟ್ಟು ಮಾಡುವುದು ಸರಿಯಲ್ಲ ಎಂದು ನಿರ್ವಾಹಕನ ಪುತ್ರನಿಗೆ ಸಲಹೆ ನೀಡಿರುವ ಇವರು ನಿರ್ವಾಹಕ ಡ್ಯೂಟಿಗೆ ಬಂದರೆ ಆತನಿಗೆ ಡ್ಯೂಟಿ ಕೊಡುತ್ತಿಲ್ಲ. ಇನ್ನು ನಿರ್ವಾಹಕರು 20 ವರ್ಷದಿಂದಲೂ ಸಂಸ್ಥೆಯಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದು, ಅವರ ಸೇವೆಯನ್ನು ಮೆಚ್ಚಿ ಸಂಸ್ಥೆಯಿಂದ ಗೌರವ ಸನ್ಮಾನಗಳನ್ನು ಕೂಡ ಮಾಡಲಾಗಿದೆ.

ಅಲ್ಲದೆ ಈ ನಿರ್ವಾಹಕರು ಹೋಗುವ ರೂಟ್‌ನಲ್ಲಿ ಆದಾಯವನ್ನು ಹೆಚ್ಚಿಸಿ ಸಂಸ್ಥೆಗೆ ಲಾಭ ಮಾಡಿಕೊಡುವ ನಿಟ್ಟಿನಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಡಿಸಿ ಮತ್ತು ಡಿಟಿಒಗೆ ಇವರು ಸಂಸ್ಥೆಗೆ ಆದಾಯ ತಂದುಕೊಡುವುದು ಬೇಕಿಲ್ಲ. ಬದಲಿಗೆ ಇವರ ಜೇಬು ತುಂಬಿಸುವ ಕೆಲಸ ಮಾಡಬೇಕು ಅಷ್ಟೆ ಎಂಬ ನಿಟ್ಟಿನಲ್ಲಿ ನಡೆದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಈ ಬಗ್ಗೆ ಆ ನಿರ್ವಾಹಕರು ನೊಂದ ಚಾಲಕ, ನಿರ್ವಾಹಕರ ಪರ ಧ್ವನಿ ಎತ್ತಿ ನಮಗೆ ಬರಬೇಕಿರುವ ಓಟಿಯನ್ನು ಮುಂಜೂರು ಮಾಡಿ ಎಂದು ಕೇಳಿದ್ದಕ್ಕೆ ಅವರ ರೂಟ್‌ಅನ್ನೇ ಬೇರೆ ಘಟಕಕ್ಕೆ ವರ್ಗಾವಣೆ ಮಾಡಿದ್ದಾರೆ. ಸರಿ ನಮ್ಮ ರೂಟ್‌ ವರ್ಗಾವಣೆ ಮಾಡಿರುವ ಘಟಕದಲ್ಲೇ ನಮಗೆ ಡ್ಯೂಟಿ ಮಾಡಲು ಅವಕಾಶ ಮಾಡಿಕೊಡಿ ಎಂದು ಕೇಳಿದರೆ ದರ್ಪ ಮೆರೆಯುತ್ತಿದ್ದಾರೆ.

ಅಂದರೆ ನಾನು ವಿಭಾಗೀಯ ನಿಯಂತ್ರಣಾಧಿಕಾರಿ ನಾನು ವಿಭಾಗೀಯ ಸಂಚಲನಾಧಿಕಾರಿ ಎಂಬ ದರ್ಪವನ್ನು ಡಿಸಿ ಬಸವರಾಜು ಮತ್ತು ಡಿಟಿಒ ಎಂ.ಬಿ.ಜೈಶಾಂತಕುಮಾರ್‌ ಇಬ್ಬರು ತೋರುವ ಮೂಲಕ ಗುಬ್ಬಿಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಎಂಬಂತೆ ನಿಷ್ಠಾವಂತ ನೌಕರರ ವಿರುದ್ಧ ಕ್ರಮ ಜರುಗಿಸುತ್ತಿದ್ದಾರೆ.

ಇದಿಷ್ಟೇ ಅಲ್ಲ ಈ ಅಧಿಕಾರಿಗಳು 7 ಲಕ್ಷ ಓಡಿರುವ ಬಸ್‌ಗಳನ್ನು ಸ್ಕ್ರ್ಯಾಪ್‌ ಮಾಡಬೇಕು ಎಂಬ ನಿಯಮವನ್ನು ಮೀರಿ 13 -15 ಲಕ್ಷ ಓಡಿರುವ ಬಸ್‌ಗಳನ್ನೇ ಮತ್ತೆ ಮತ್ತೆ ಓಡಿಸುವುದಕ್ಕೆ ಚಾಲಕರಿಗೆ ತಾಕೀತು ಮಾಡುವ ಮೂಲಕ ಚಾಲನಾ ಸಿಬ್ಬಂದಿಯ ಪ್ರಾಣದ ಜತೆಗೆ ಪ್ರಯಾಣಿಕರ ಜೀವದೊಂದಿಗೂ ಚೆಲ್ಲಾಟವಾಡುತ್ತಿದ್ದಾರೆ. ಪರಿಣಾಮ ಬುಧವಾರ ತಡರಾತ್ರಿ ಬ್ರೇಕ್‌ ಬೀಳದೆ ನಿಂತಿದ್ದ ಲಾರಿಗೆ 13 ಲಕ್ಷ ಓಡಿರುವ ಬಸ್‌ ಡಿಕ್ಕಿಹೊಡೆದು ಚಾಲಕ ಮತ್ತು ನಿರ್ವಾಹಕರು ಸೇರಿ ಪ್ರಯಾಣಿಕರು ಸಾವು ಬದುಕಿನ ನಡುವೆ ಹೋರಾಡುವಂತಾಗಿದೆ.

ಇದಕ್ಕೆಲ್ಲ ಈ ಅಧಿಕಾರಿಗಳೇ ಕಾರಣ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವ ಮೂಲಕ ಇವರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ನೋಂದ ಕೋಲಾರ ವಿಭಾಗದ ಚಾಲನಾ ಸಿಬ್ಬಂದಿ ಸಂಬಂಧಪಟ್ಟ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಾರಿಗೆ ಸಚಿವರನ್ನು ಒತ್ತಾಯಿಸಿದ್ದಾರೆ.

ಅಲ್ಲದೆ ಈ ರೀತಿಯ ಹಲವು ಅವಘಡಗಳು ಈಗಾಗಲೇ ಸಂಭವಿಸಿದ್ದು, ಇದಕ್ಕೆ ಈ ಮೇಲಧಿಕಾರಿಗಳೇ ನೇರ ಕಾರಣರಾಗಿದ್ದಾರೆ. ಹೀಗಾಗಿ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕೋಲಾರ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿಗಳಿಗೂ ದೂರು ನೀಡಿದ್ದಾರೆ. ಆದರೆ, ಇನ್ನು ಕೂಡ ಪೊಲೀಸ್‌ ವರಿಷ್ಠಾಧಿಕಾರಿಗಳು ಈ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಇದು ಕೂಡ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ.

ಇನ್ನು ಕೆಎಸ್‌ಆರ್‌ಟಿಸಿ ಕೋಲಾರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಮತ್ತು ಡಿಟಿಒ ಅವರು ನೌಕರರು ಮತ್ತು ಪ್ರಯಾಣಿಕರ ಜೀವದೊಂದಿದೆ ಚೆಲ್ಲಾಟವಾಡುತ್ತಿದ್ದು ಈ ಬಗ್ಗೆ ಮೇಲಧಿಕಾರಿಗಳು ಎಚ್ಚೆತ್ತುಕೊಂಡು ಇವರ ಇರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ನಾವೇ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ವಿಭಾಗದ ನೊಂದ ನೌಕರರು ಎಚ್ಚರಿಕೆ ನೀಡಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ