ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹುಚ್ಚು (ಆ್ಯಂಟಿ ರೇಬಿಸ್) ಪ್ರಾಣಿಯಿಂದ ಕಚ್ಚಿಸಿಕೊಂಡ ನೌಕರನು ಚಿಕಿತ್ಸೆ ಪಡೆಯಲು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಬೇಕು ಎಂದು 2016ರರಲ್ಲೇ ಅಂದಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಾಜೇಂದರ್ ಕುಮಾರ ಕಟಾರಿಯಾ ಅವರು ಆದೇಶ ಹೊರಡಿಸಿದ್ದಾರೆ.
ಈ ಕುರಿತು 27-05-1975ರಲ್ಲಿ ಸ್ಪಷ್ಟ ನಿರ್ದೇಶನವಿದೆ. ಮುಂದುವರಿದಂತೆ, ಹುಚ್ಚುಪ್ರಾಣಿ ಕಡಿದ ಚುಚ್ಚುಮದ್ದಿನ ಚಿಕಿತ್ಸಾ ಪದ್ಧತಿಯು ಬದಲಾವಣೆಗೊಂಡಿದ್ದು, ನಿರ್ದಿಷ್ಟ ಅಂತರಗಳಲ್ಲಿ ಒಟ್ಟು 0.3.7.28ನೇ ದಿವಸದ ಚುಚ್ಚುಮದ್ದು ನೀಡುವ ಪದ್ಧತಿಯನ್ನು ಅನುಸರಿಸಲಾಗುತ್ತಿರುವುದಾಗಿ ತಿಳಿಸಿ ಕರ್ನಾಟಕ ಸರ್ಕಾರವು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ಅನುಬಂಧ-ಬಿ ಯಲ್ಲಿನ ನಿಯಮ-5 ನ್ನು ತಿದ್ದುಪಡಿ ಮಾಡಿ ಈ ಆದೇಶದ ದಿನಾಂಕದಿಂದ ಜಾರಿಗೆ ಬರುವಂತೆ ಆದೇಶಿಸಿದೆ.
ಹುಚ್ಚುಪ್ರಾಣಿ ಕಡಿದ ಸರ್ಕಾರಿ ನೌಕರನಿಗೆ ಚುಚ್ಚುಮದ್ದು ಪಡೆಯಬಹುದಾದ ವಾಸ್ತವ ದಿನಗಳಿಗೆ ಮಾತ್ರ ಮತ್ತು ಹುಚ್ಚುಪ್ರಾಣಿ ಕಡಿತದ ಪರಿಣಾಮವಾಗಿ ನಿರಂತರ ಚಿಕಿತ್ಸೆಯ ಅಗತ್ಯತೆಯ ಬಗ್ಗೆ ವೈದ್ಯರು ದೃಢೀಕರಿಸಿ ನೀಡುವ ವೈದ್ಯಕೀಯ ಪ್ರಮಾಣ ಪತ್ರ ಆಧಾರದ ಮೇರೆಗೆ ಗರಿಷ್ಠ 14 ದಿನಗಳಿಗೆ ಸೀಮಿತಗೊಳಿಸಿ ಸಾಂದರ್ಭಿಕ ರಜೆಯನ್ನು ಕೊಡಬಹುದು.
ಇಂಥ ರಜೆಯ ಹೊರತಾಗಿ ಇನ್ನೂ ಹೆಚ್ಚಿನ ರಜೆ ಬೇಕಾಗಿರುವಲ್ಲಿ ಅದನ್ನು ಗಳಿಕೆ ರಜೆ ಅಥವಾ ಹಕ್ಕಿನ ರಜೆ ಅಥವಾ ಅರ್ಧ ವೇತನ ರಜೆಯಾಗಿ ಪರಿಗಣಿಸಬೇಕು ಎಂದು ಮೇ 23 – 2016ರಂದೆ ಎಂಡಿ ಆದೇಶ ಹೊರಡಿಸಿದ್ದಾರೆ.
ಆದುದರಿಂದ. ಈ ಆದೇಶದಂತೆ ನಿಗಮದ ಅಧಿಕಾರಿ/ ನೌಕರರಿಗೂ (ತರಬೇತಿಯಲ್ಲಿರುವವರನ್ನು ಒಳಗೊಂಡಂತೆ) ಸಹ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವುದು. ಉಳಿದಂತೆ 27-05-1975ರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ಸುತ್ತೋಲೆಯು ತಕ್ಷಣದಿಂದ ಜಾರಿಗೆ ಬರುತ್ತದೆ ಎಂದು ತಿಳಿಸಿದ್ದಾರೆ.
ಆದರೆ, ಇತ್ತೀಚೆಗೆ ನಿಗಮಗಳ ಕೆಲ ಅಧಿಕಾರಿಗಳು ಇದನ್ನು ಪಾಲಿಸದೆ ಇಂಥ ಸಂದರ್ಭದಲ್ಲಿ ನೌಕರರಿಗೆ ರಜೆ ಕೊಡದೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಹೀಗಾಗಿ ಇನ್ನಾದರೂ ಅಧಿಕಾರಿಗಳು 2016ರಲ್ಲೇ ಜಾರಿಗೆ ಬಂದಿರುವ ಈ ಆದೇಶವನ್ನು ಪಾಲಿಸಬೇಕು ಎಂದು ನೊಂದ ನೌಕರರು ಆಗ್ರಹಕಫರ್ವಕವಾಗಿ ಮನವಿ ಮಾಡಿದ್ದಾರೆ.