NEWS

KSRTC: ಪುರುಷ ನೌಕರರಿಗೂ ಶಿಶುಪಾಲನಾ ರಜೆ ಸೌಲಭ್ಯ ಜಾರಿ- ಎಂಡಿ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುರುಷ ನೌಕರರಿಗೂ  ಶಿಶುಪಾಲನಾ ರಜೆ ಸೌಲಭ್ಯವನ್ನು ಮಂಜೂರು ಮಾಡುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಇಂದು ಆದೇಶ ಹೊರಡಿಸಿದ್ದಾರೆ.

ಒಂಟಿ ಪೋಷಕರಾಗಿರುವ ನಿಗಮದ ಪುರುಷ ನೌಕರರಿಗೆ ಶಿಶುಪಾಲನಾ ರಜೆ ಸೌಲಭ್ಯವನ್ನು ಮಂಜೂರು ಮಾಡುವ ಸಂಬಂಧ ಜ.2-2025ರ ಗುರುವಾರ ಆದೇಶ ಹೊರಡಿಸುವ ಮೂಲಕ ಎಂಡಿ ಅನ್ಬುಕುಮಾರ್ಅವರು ಸಂಸ್ಥೆಯಲ್ಲಿ ಕರ್ತವ್ಯ ನಿರತ ಒಂಟಿ ಪೋಷಕರಿಗೆ ಸಿಹಿ ಸುದ್ದಿ ನೀಡಿದ್ದಾರೆ.

ರಾಜ್ಯ ಸರ್ಕಾರವು ಒಂಟಿ ಪೋಷಕರಾಗಿರುವ (Single male parent) ಅವಿವಾಹಿತ/ ವಿವಾಹ- ವಿಚ್ಛೇದಿತ / ವಿಧುರ ಪುರುಷ ರಾಜ್ಯ ಸರ್ಕಾರಿ ನೌಕರರಿಗೆ ಮಕ್ಕಳ ಆರೈಕೆಗಾಗಿ ಅವರ ಇಡೀ ಸೇವಾವಧಿಯಲ್ಲಿ ಗರಿಷ್ಠ 6 ತಿಂಗಳ ಅವಧಿಗೆ ಅಂದರೆ 180 ದಿನಗಳಿಗೆ ಮೀರದಂತೆ ಸರ್ಕಾರದ ಆದೇಶ ಸಂಖ್ಯೆ: ಆಇ 4(ಇ) ಸೇನಿಸೇ 2021  ದಿನಾಂಕ 21.06.2021 ವಿಧಿಸಲಾದ ಷರತ್ತುಇಗಳನ್ನು ಸಂದರ್ಭಾನುಸಾರ ಅನ್ವಯಿಸಿಕೊಂಡು ಶಿಶುಪಾಲನಾ ರಜೆ ಮಂಜೂರು ಮಾಡುವ ಸೌಲಭ್ಯವನ್ನು ಸರ್ಕಾರದ ಆದೇಶ ಸಂಖ್ಯೆ: ಆಇ 3 (ಇ) ಸೇನಿಸೇ 2023, ದಿನಾಂಕ:09.06.2023 ರನ್ವಯ ಜಾರಿಗೆ ಬರುವಂತೆ ವಿಸ್ತರಿಸಿದೆ.

ಅದರಂತೆ. KSRTC ನಿಗಮದಲ್ಲಿ ಒಂಟಿ ಪೋಷಕರಾಗಿರುವ (Single male parent) ಅವಿವಾಹಿತ/ ವಿವಾಹ-ವಿಚ್ಛೇದಿತ /ವಿಧುರ ಪುರುಷ ನೌಕರರಿಗೆ ಮಕ್ಕಳ ಆರೈಕೆಗಾಗಿ ಅವರ ಇಡೀ ಸೇವಾವಧಿಯಲ್ಲಿ ಗರಿಷ್ಠ 6 ತಿಂಗಳ ಅವಧಿಗೆ ಅಂದರೆ 180 ದಿನಗಳಿಗೆ ಮೀರದಂತೆ ಸುತ್ತೋಲೆ ಸಂಖ್ಯೆ: 1696. ದಿನಾಂಕ:18.01.2022 ರ ಷರತ್ತು ಮತ್ತು ನಿಬಂಧನೆಗಳನ್ವಯ ಶಿಶುಪಾಲನಾ ರಜೆ ಮಂಜೂರು ಮಾಡಲು ನಿಗಮದ ನಿರ್ದೇಶಕ ಮಂಡಳಿ ಠರಾವು ಸಂಖ್ಯೆ: 10453, ದಿನಾಂಕ:13.11.2024 ರನ್ವಯ ಒಪ್ಪಿಗೆ ನೀಡಿದೆ.

ಹೀಗಾಗಿ ಯಾವುದೇ ಸಂದರ್ಭದಲ್ಲಿ ಶಿಶುಪಾಲನಾ ರಜೆಯನ್ನು ಪಡೆದ ಅವಧಿಯಲ್ಲಿ ಸಂಬಂಧಿತ ಪುರುಷ ನೌಕರರು ವಿವಾಹ ಮಾಡಿಕೊಂಡಲ್ಲಿ ಆ ದಿನಾಂಕದಿಂದ ಶಿಶುಪಾಲನಾ ರಜೆಯು ತಾನಾಗಿಯೇ ರದ್ದುಗೊಳ್ಳುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಇನ್ನು ಸಾರಿಗೆ ನಿಗಮದ ಸಂಬಂಧಪಟ್ಟವರೆಲ್ಲರೂ ಈ ಆದೇಶವನ್ನು ಮನದಟ್ಟು ಮಾಡಿಕೊಂಡು ಅದರಂತೆ ಕ್ರಮ ಕೈಗೊಳ್ಳತಕ್ಕದ್ದು, ಜತೆಗೆ ಈ ಸುತ್ತೋಲೆಯು ತಕ್ಷಣದಿಂದ ಜಾರಿಗೆ ಬರುತ್ತದೆ ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

Deva
the authorDeva

Leave a Reply

error: Content is protected !!
Latest news
KSRTC ಬಸ್-ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ- ಬಳಿಕ ಗಲಾಟೆ ಚಾಲಕ, ಕಂಡಕ್ಟರ್‌ ಮೇಲೆ ಹಲ್ಲೆ ಮಾಡಿದ ಲಾರಿ ಚಾಲಕ ಸ್ವಪಕ್ಷೀಯ ಸಚಿವರೇ ಸರ್ಕಾರಿ ಜಮೀನು ನುಂಗಿದ್ದಾರೆ: ಶಾಸಕ ರಮೇಶ್ ಬಂಡಿಸಿದ್ದೇಗೌಡ ಟ್ರಂಪ್‌ ಕದನ ವಿರಾಮ ಘೋಷಣೆ ಬೆನ್ನಲ್ಲೇ ಇಳಿಕೆಯಾಗಿದ್ದ ಕಚ್ಚಾ ತೈಲ ಬೆಲೆ ಮತ್ತೆ ಏರಿಕೆ GBA ಉತ್ತರ- ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಗುತ್ತಿಗೆದಾರರಿಗೆ ದಂಡ: ಆಯುಕ್ತ P.S.ಕುಮಾರ್ ಎಚ್ಚರಿಕೆ ನೌಕರರಿಗೆ ಗುಡ್‌ ನ್ಯೂಸ್: ಏ.1ರಿಂದ ಬದಲಾಗಲಿದೆ ನಿಮ್ಮ ಸಂಬಳ, ಲಾಭ ಹೆಚ್ಚು! ಬೆಲೆ ಕಳೆದುಕೊಂಡ ಕೆಂಪು ಸುಂದರಿ: ಸಂಕಷ್ಟಕ್ಕೆ ಸಿಲುಕಿದ ಬೆಳೆಗಾರ ರೈತರು ಸರ್ಕಾರಿ ಕೆಲಸ ಕೊಡಿಸುವುದಾಗಿ ನೂರಾರು ಅಮಾಯಕರ ನಂಬಿಸಿ 25 ಕೋಟಿ ರೂ. ಸ್ವಾಹ: ದಂಪತಿ ಬಂಧನ, ಹಲವರಿಗೆ ಗಾಳ ! ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಬಸ್‌ ಡಿಕ್ಕಿ : ನಾಲ್ವರು ಮೃತ- ಹಲವರಿಗೆ ಗಾಯ KSRTC: ಟಿಕೆಟ್‌ ತೋರಿಸದಿದ್ದಕ್ಕೆ ತನಿಖಾ ಅಧಿಕಾರಿಯಿಂದ ವೃದ್ಧನ ಮೇಲೆ ಹಲ್ಲೆ ಆರೋಪ- ಅಧಿಕಾರಿ ವಿರುದ್ಧ FIR ದಾಖಲು ಲಾರಿ -ಟಿ.ಟಿ.ವಾಹನ ನಡುವೆ ಭೀಕರ ಅಪಘಾತ: ಕಾಶಿ ತೀರ್ಥಯಾತ್ರೆಗೆ ಹೊರಟಿದ್ದ ಮೂವರು ಮೃತ, 12 ಮಂದಿಗೆ ಗಾಯ