ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ (KSRTC) ಚಾಲನಾ ಸಿಬ್ಬಂದಿಗಳು (ಚಾಲಕ, ನಿರ್ವಾಹಕರು) ಎಂದರೆ ಅವರು ನಿಮ್ಮ ಪಾಲಿನ ದೇವರೆಂದರೂ ತಪ್ಪಾಗಲಾರದು. ಅಂತ ದೇವರನ್ನು ಪ್ರಯಾಣಿಕ ದೇವರಾದ ನೀವು ದುರಹಂಕಾರದಿಂದ ಅಮ್ಮನ್…, ಅಕ್ಕನ್… ಅಂತ ಅವಾಚ್ಯ ಶಬ್ದಗಳಿಂದ ಬೈಯ್ಯೋದು ಎಷ್ಟರ ಮಟ್ಟಿಗೆ ಸರಿ ಎಂದು ಹೇಳಿ?
ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಬದಿಗೊತ್ತಿ ಮುಂಜಾನೆ 4ಗಂಟೆಗೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಸರಿಯಾಗಿ ಒಂದು ಲೋಟ ಕಾಫಿಯನ್ನು ಕುಡಿಯದೇ ನಿಮ್ಮ ಸೇವೆಗೆ ಹಾಜರಾಗುವ ಇಂಥ ದೇವರುಗಳನ್ನು ನೀವು ಸೌಜನ್ಯದಿಂದ ನಡೆಸಿಕೊಳ್ಳದೆ. ಅವರನ್ನು ಶತ್ರುಗಳಂತೆ ಕಾಣುವುದು ಸರಿಯೇ ಎಂದು ಪತ್ರಕರ್ತರಾದ ಶಿಲ್ಪ ಆರ್.ಗೌಡ ತಮ್ಮ ಸಮಾಜಿಕ ಜಾಲತಾಣದಲ್ಲಿ ಸ್ವಲ್ಪ ಕಾರವಾಗಿಯೇ ಜಾಡಿಸಿದ್ದಾರೆ.
ಕಂಡಕ್ಟರ್‌ಗಳಿಗೆ ವೇತನ ನೀಡುತ್ತಿರುವುದು ಪ್ರಯಾಣಿಕರಿಗೆ ಟಿಕೆಟ್ ವಿತರಿಸಿ ಸುರಕ್ಷಿತ ಪ್ರಯಾಣ ಮಾಡಿಸಲು ಅಂತ. ಆದರೆ, ದುರಹಂಕಾರದಿಂದ ಪ್ರಯಾಣಿಕರಾದ ನೀವು ಅಮ್ಮನ್… ಅಕ್ಕನ್ ಅಂತ ಅವಾಚ್ಯ ಶಬ್ದಗಳನ್ನು ಅವರ ಮೇಲೆ ಬಳಸಿ ಬೈಯ್ಯೋದಕ್ಕಲ್ಲ. ಬಸ್ ಹತ್ತಿದ ತಕ್ಷಣ ಸೌಜನ್ಯದಿಂದ ನಡೆದುಕೊಳ್ಳೋದನ್ನು ಕಲಿಯಿರಿ, ನಿಮ್ಮ ಮನೆಯ ಗುಲಾಮರಂತು ಅಲ್ಲವೇ ಅಲ್ಲ ಚಾಲನಾ ಸಿಬ್ಬಂದಿ ಎಂದು ದುರಹಂಕಾರದಿಂದ ನಡೆದುಕೊಳ್ಳುವವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನು ನಾನು ಇತ್ತೀಚೆಗೆ ಹಲವಾರು ಬಾರಿ ಬಸ್ಸಿನಲ್ಲೇ ಪ್ರಯಾಣ ಮಾಡುತ್ತಿದ್ದೇನೆ ಕಾರಣ ನನ್ನ ಸ್ನೇಹಿತರೊಬ್ಬರು ಬೈಕ್, ಕಾರಿನಲ್ಲಿ ಓಡಾಡುವ ನಿಮಗೆ ನಮ್ಮ ಪರಿಸ್ಥಿತಿ ಏನು ಗೊತ್ತು ನೀವೊಂದು ಬಾರಿ ಬಸ್ಸಿನಲ್ಲಿ ಪ್ರಯಾಣ ಮಾಡಿ ಗೊತ್ತಾಗುತ್ತೆ ಎಂದು ನೊಂದು ಹೇಳಿದ್ದರು.
ಸರಿ ಎಂದು ಅವರ ನೋವಿನ ನುಡಿಯ ಹಿಂದಿರುವ ಸಮಸ್ಯೆ ಮತ್ತು ಸತ್ಯ ಏನು ಎಂದು ತಿಳಿದುಕೊಳ್ಳುವುದಕ್ಕಾಗಿ ಬಸ್‌ನಲ್ಲಿ ಪ್ರಯಾಣ ಮಾಡಿದ್ದೀನಿ, ಈಗಲೂ ಮಾಡ್ತಾ ಇದ್ದೀನಿ… ನನ್ನ ಸ್ನೇಹಿತರ ಸಮಸ್ಯೆಗಿಂತ ಪ್ರಯಾಣಿಕರಿಂದ ಚಾಲಕ ನಿರ್ವಾಹಕರಿಗಾಗುತ್ತಿರುವ ತೊಂದರೆಗಳೇ ಜಾಸ್ತಿ… ಎಂಬುವುದು ಈಗ ಅರ್ಥವಾಯಿತು.
ಬಸ್ಸಿಗೆ ಹತ್ತಿದ ಪ್ರಯಾಣಿಕರನ್ನು ಮುಂದಕ್ಕೆ ಹೋಗಿ ಎಂದರೆ ಜಗಳ, ಬೇಗ ಇಳಿಯಿರಿ ಎಂದರೆ ಜಗಳ, ಸ್ವಲ್ಪ ಜಾಗ ಬಿಡಿ ಮುಂದೆ ಟಿಕೆಟ್ ಕೊಡಬೇಕು ಎಂದು ಮನವಿ ಮಾಡಿದರೂ ಜಗಳ. ಇದನ್ನೆಲ್ಲಾ ನಾನೇ ಖುದ್ದಾಗಿ ಗಮನಿಸಿದೆ. ಇನ್ನು ಸ್ವಲ್ಪ ಮುಂದೆ ಹೋಗಿ ನೋಡೋದಾದರೆ ಕ್ಷುಲ್ಲಕ ಕಾರಣಕ್ಕೆ ನಿರ್ವಾಹಕರಿಗೆ ಅಮ್ಮನ್ ಅಕ್ಕನ್ ನಿಮ್ ಅವ್ವನ್ ಎಂಬ ಹೀನಾಯ ಪದಗಳನ್ನು ಬಳಸಿ ಸಾರ್ವಜನಿಕರ ಮುಂದೆ ನಿಂದಿಸುವುದು…
ಬಹುಶಃ ಈ ಪದಗಳ ಬಳಕೆ ತಾಯಿ, ಅಕ್ಕ-ತಂಗಿ, ಹೆಂಡತಿ ಇವರ ಮಧ್ಯೆ ವ್ಯತ್ಯಾಸವೇ ತಿಳಿಯದ ಮೂರ್ಖರ ಬಾಯಲ್ಲಿ ಬರುವ ಪದಗಳು. ಇನ್ನು ಮುಂದಕ್ಕೆ ಹೋಗಿ ಹೇಳಬೇಕಾದರೆ ಈಗಿನ ವಿದ್ಯಾರ್ಥಿಗಳ ಬಾಯಲ್ಲಿ ಎಂತಹ ಸುಸಂಸ್ಕೃತ ಪದಗಳು ಬರುತ್ತವೆ ಎಂದರೆ ಇವರು ದುಪ್ಪಟ್ಟು ಹಣ ಕೊಟ್ಟು ಶಾಲಾ-ಕಾಲೇಜುಗಳಿಗೆ ಕಲಿಯುವುದಕ್ಕೆ ಹೋಗುತ್ತಿರುವುದು ಈ ಪದಗಳನ್ನೇ ಅನಿಸುತ್ತೆ.
ತಂದೆ ತಾಯಿ ವಯಸ್ಸಿನವರಿಗೂ ಅಮ್ಮನ್, ಅಕ್ಕನ್, ನಿನ್ ಅವ್ವನ್ ಅಂತಾವೇ ಎಂದರೆ ಕಾಮ ತುರಿಕೆ ಜಾಸ್ತೀ ಆದಾಗ ತನ್ನ ತಾ*ಯನ್ನೇ ಬಿಟ್ಟಿಲ್ಲವೇನೋ ಎನಿಸುತ್ತಿದೆ…
ಇನ್ನು ಈ ಎಲ್ಲ ವಿಷಯಗಳನ್ನು ನರ ಸತ್ತ ಸಂಸ್ಥೆಯ ಕೆಲ ಉನ್ನತ ಅಧಿಕಾರಿಗಳ ಗಮನಕ್ಕೆ ತರುವುದೇನೆಂದರೆ ಸಾರ್ವಜನಿಕರು ದೂರು ನೀಡಿದ ತಕ್ಷಣವೇ ಚಾಲಕ, ನಿರ್ವಾಹಕರ ವಿರುದ್ಧ ಕ್ರಮ ಕೈಗೊಂಡು ನಿಮ್ಮ ತಾಕತ್ತನ್ನು ಪ್ರದರ್ಶಿಸುವ ಮೊದಲು ಚಾಲಕ, ನಿರ್ವಾಹಕರ ಮೇಲಾಗುತ್ತಿರುವ ದೌರ್ಜನ್ಯ ದಬ್ಬಾಳಿಕೆಯ ಬಗ್ಗೆ ಗಮನ ಕೊಡಿ…
ದೂರು ಬಂದ ತಕ್ಷಣ ಕ್ರಮ ಕೈಗೊಳ್ಳುವ ಮೊದಲು ತನಿಖೆ ನಡೆಸಿ ಸರಿ ತಪ್ಪು ತಿಳಿದುಕೊಳ್ಳಿ ನಿಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ನೌಕರರಿಗೆ ನಿಮ್ಮಿಂದಲೇ ರಕ್ಷಣೆ ಇಲ್ಲ ಎಂದ ಮೇಲೆ ಮತ್ತ್ಯಾರಿಗೆ ರಕ್ಷಣೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಇನ್ನು ಚಾಲಕ, ನಿರ್ವಾಹಕರೇ ನಿಮಗೆ ಅವಾಚ್ಯ ಶಬ್ದಗಳನ್ನು ಬಳಸಿದರೆ ಅದನ್ನು ವಿಡಿಯೋ ಮಾಡಿ ನನಗೆ ಕಳಿಸಿ ತಾಯಿ- ಹೆಂಡತಿಯ ಮಧ್ಯೆ ಇರುವ ಸಂಬಂಧದ ವ್ಯತ್ಯಾಸವನ್ನು ತಿಳಿಸೋಣ ಎಂದು ಶಿಲ್ಪ ಆರ್. ಗೌಡ ಧೈರ್ಯ ತುಂಬಿದ್ದಾರೆ.
ನಿಜವಾಗಲು ಈ ರೀತಿ ಪತ್ರಕರ್ತರು ನೊಂದ ನೌಕರರ ಪರ ನಿಂತರೆ ಸಮಾಜಕ್ಕೆ ಒಂದೊಳ್ಳೆ ಸಂದೇಶವನ್ನು ಕೊಡಬಹುದು ಎಂಬುವುದು ನಮ್ಮ ಅಭಿಪ್ರಾಯ. ಹೀಗಾಗಿ ಇಂಥ ಪತ್ರಕರ್ತರ ಸಂಖ್ಯೆ ಏರುಗತಿಯಲ್ಲೇ ಸಾಗಲಿ ಎಂಬುವುದು ವಿಜಯಪಥ ಆಶಯ ಕೂಡ.