NEWSನಮ್ಮಜಿಲ್ಲೆನಮ್ಮರಾಜ್ಯ

ಮೈಸೂರು ದಸರಾ ವೇಳೆ ದುಪ್ಪಟ್ಟು ಆದಾಯ ಗಳಿಸಿ ಕೆಎಸ್‌ಆರ್‌ಟಿಸಿ: ಜನರು ಖುಷ್‌.. ಆದರೆ ನೌಕರರು..!!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಮೈಸೂರು ದಸರಾ ಆಚರಣೆಯೊಂದಿಗೆ 15 ದಿನಗಳ ರಜೆಯನ್ನು ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳ ಜನತೆ ಖುಷಿ ಖುಷಿಯಿಂಸ ಅನುಭವಿಸಿದ್ದು, ರಜೆಯಲ್ಲಿ ಅರಮನೆಗಳ ನಗರಿ ಮೈಸೂರು ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಹೆಚ್ಚಾಗಿಯೇ ಭೇಟಿ ನೀಡುವ ಮೂಲಕ ಅ ಸುಂದರ ಕ್ಷಣಗಳನ್ನು ಸವಿದಿದ್ದಾರೆ.

ರಾಜ್ಯದ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ಹೆಚ್ಚು ಮಂದಿ ಭೇಟಿ ನೀಡಿ ರಜೆಯನ್ನು ಮಜವ ಅನುಭವಿಸಿದ್ದಾರೆ. ಮಕ್ಕಳಿಗೆ ರಜೆ ಇದ್ದಿದ್ದರಿಂದ ಅವರನ್ನು ಸಂತೋಸವಾಗಿಡಲು ಮೈಸೂರು, ಶಿವಮೊಗ್ಗ, ಧರ್ಮಸ್ಥಳ, ಹಂಪೆ, ಹಳೆಬೀಡು, ಸೋಮನಾಥಪುರ ಸೇರಿದಂತೆ ರಾಜ್ಯದ ನಾನಾ ತಾಣಗಳತ್ತ ಪೋಷಕರು ಹೋಗಿ ಬಂದಿದ್ದು, ಪ್ರವಾಸಿ ತಾಣಗಳು ಹಾಗೂ ಕೆಎಸ್‌ಆರ್‌ಟಿಸಿಗೆ ಉತ್ತಮ ಆದಾಯವೂ ಬಂದಿದೆ.

ರಾಜ್ಯದಲ್ಲಿ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೇನು ಬರವಿಲ್ಲ. ಹೀಗಾಗಿ ಬರಗಾಲದಲ್ಲೂ ಪ್ರವಾಸಿ ತಾಣಗಳಿಗೆ ರಜೆ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರು, ಭಕ್ತರು ಹರಿದು ಬರುತ್ತಿರುವುದು ಸಾಮಾನ್ಯವಾಗಿದೆ. ಇನ್ನು ದಸರೆ ರಜೆಯಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗಿತ್ತು ಎಂಬುದು ವಿಶೇಷ. ಇನ್ನು ಹೇಳಿ, ಕೇಳಿ ಶಕ್ತಿ ಯೋಜನೆ ಜಾರಿಯಾದ ಮೇಲಂತೂ ಕೆಎಸ್‌ಆರ್‌ಟಿಸಿಯಲ್ಲಿ ಮಹಿಳಾ ಪ್ರಯಾಣಿಕರೇ ಹೆಚ್ಚಾಗಿ ಪ್ರಯಾಣಿಸುತ್ತಿದ್ದಾರೆ. ದಸರೆ ರಜೆಯಲ್ಲಿ ಪ್ರಯಾಣಿಸಿರುವ ಒಟ್ಟಾರೆ ಪ್ರಯಾಣಿಕರ ಪೈಕಿ ಶೇ.58ರಷ್ಟು ಮಹಿಳೆಯರು ಎಂಬುದು ರಾಜ್ಯ ಸರ್ಕಾರಕ್ಕೂ ಗೊತ್ತಿದೆ.

ಕಳೆದ ತಿಂಗಳು ಅ.22ರಿಂದ 28ರವರೆಗೆ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಸೇರಿದಂತೆ ಬಿಎಂಟಿಯ ಬಸ್‌ಗಳಲ್ಲಿ ಒಟ್ಟು ಕೋಟಿ ಕೋಟಿ ಜನರು ಪ್ರಯಾಣಿಸಿದ್ದಾರೆ. ಅದರಲ್ಲಿ ಕೆಎಸ್‌ಆರ್‌ಟಸಿ ಬಸ್‌ಗಳಲ್ಲಿ ಅತೀ ಹೆಚ್ಚು ಮಂದಿ ಸಂಚರಿಸುವ ಮೂಲಕ ರಜೆಯನ್ನು ಅನುಭವಿಸಿದ್ದಾರೆ.

ಮಲೆ ಮಹದೇಶ್ವರ ಬೆಟ್ಟಕ್ಕೇ 2 ಲಕ್ಷ ಮಂದಿ ಭಕ್ತರು: ಇದಲ್ಲದೇ ಚಾಮರಾಜನಗರ ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ದಸರೆ ರಜೆ ಸಂದರ್ಭದಲ್ಲಿ ಅಂದಾಜು 2 ಲಕ್ಷ ಮಂದಿ ಭಕ್ತರು ಭೇಟಿ ನೀಡಿ ಮಾದಪ್ಪನ ದರ್ಶನ ಪಡೆದಿದ್ದಾರೆ. ಧರ್ಮಸ್ಥಳಕ್ಕೂ ಇದೇ ರೀತಿ ಭೇಟಿ ನೀಡಿದ್ದಾರೆ. ಇದನ್ನು ಮೀರಿ ಚಾಮುಂಡಿ ಬೆಟ್ಟ ಹಾಗೂ ಮೈಸೂರಿಗೆ ಭೇಟಿನೀಡಿದ್ದು, ವಿಶೇಷ. ಅದರಲ್ಲೀ ಈ ಪೈಕಿ ಶೇ.60ರಷ್ಟು ಮಹಿಳಾ ಭಕ್ತರೇ ಈ ಸಂದರ್ಭದಲ್ಲಿ ಭೇಟಿ ನೀಡಿದ್ದರು ಎಂಬುದು ಮತ್ತೊಂದು ಅಚ್ಚರಿಯ ವಿಶೇಷ.

ಆದರೆ, ಈ ಎಲ್ಲ ಸುಂದರ ಕ್ಷಣಗಳು ಹಾಗೂ ದಿನಗಳು ಇನ್ನೂ ನೌಕರರ ಪಾಲಿಗೆ ಇಲ್ಲವಾಗಿವೆ. ಜನರಿಯಿಂದ ಕೊಡಬೇಕಿರುವ ಡಿಎ ಆಗಸ್ಟ್‌ನಲ್ಲಿ ಸೇರಿಸಿದ್ದಾರೆ. ಆದರೆ, ಹಿಂಬಾಕಿಯನ್ನು ಇನ್ನೂ ನೀಡಿಲ್ಲ. ಇನ್ನು ಜುಲೈನಲ್ಲಿ ಆಗಿರುವ 3.75 ಡಿಎ ಹೆಚ್ಚಳದ ಬಗ್ಗೆ ಸರ್ಕಾರವಾಗಲಿ ಆಡಳಿತ ಮಂಡಳಿಯಾಗಲಿ ಇನ್ನು ಚಕಾರವೆತ್ತಿಲ್ಲ.

ಇದರ ನಡುವೆ 2020ರ ಅಗ್ರಿಮೆಂಟ್‌ನಲ್ಲಿ ಆಗಿರುವ ಶೆ.15ರಷ್ಟು ವೇತನ ಹೆಚ್ಚಳದ ಹಿಂಬಾಕಿಯನ್ನು ಈವರೆಗೂ ಕೊಟ್ಟಿಲ್ಲ. ಇದರಿಂದ ನಿವೃತ್ತ ನೌಕರರು ಕೂಡ ಯಾವಾಗ ಅರಿಯರ್ಸ್‌ ಬರುವುದೋ ಎಂದು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಆದರೆ, ಈ ಬಗ್ಗೆ ಈವರೆಗೂ ಕೂಡ ಯಾವುದೇ ನಿರ್ಧಾರವನ್ನು ಸಾರಿಗೆ ನಿಗಮಗ ಮಂಡಳಿಗಳ ಆಡಳಿತ ತೆಗೆದುಕೊಳ್ಳದೆ ನೌಕರರನ್ನು ಸಂಕಷ್ಟಕ್ಕೆ ದೂಡಿವೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ