CrimeNEWSನಮ್ಮರಾಜ್ಯವಿಡಿಯೋ

KKRTC: ಪ್ರತ್ಯೇಕ ಸ್ಥಳಗಳಲ್ಲಿ ಶಹಾಪುರ ಘಟಕದ ಬಸ್‌ಗಳ ಟಯರ್‌ಗಳು ಬರ್ಸ್ಟ್‌- ಒಬ್ಬರ ಕಾಲು ಕಟ್‌, ನಾಲ್ವರಿಗೆ ತೀವ್ರಗಾಯ

ವಿಜಯಪಥ ಸಮಗ್ರ ಸುದ್ದಿ
  • ಮಲ್ಲ ಬಳಿ ಟಯರ್‌ ಬರ್ಸ್ಟ್‌ ಒಬ್ಬರ ಕಾಲು ಕಟ್‌, ಇಬ್ಬರಿಗೆ ಗಾಯ
  • ಗೋಗಿ ಬಳಿ ಮತ್ತೊಂದು ಬಸ್‌ನ ಟಯರ್‌ ಬರ್ಸ್ಟ್‌ ಇಬ್ಬರು ಮಕ್ಕಳಿಗೆ ಗಾಯ ಆಸ್ಪತ್ರೆಗೆ ದಾಖಲು
  • ಒಂದೇ ಘಟಕದ ಅದೂ ಅದೇ ಮಾರ್ಗದ ಬಸ್‌ಗಳ ಟಯರ್‌ಗಳು ಬರ್ಸ್ಟ್‌- ಅವಘಡಗಳಿಗೆ ಯಾರು ಹೊಣೆ

ಯಾದಗಿರಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಶಹಾಪುರ ಘಟದ ಬಸ್‌ಗಳ ಟಯರ್‌ಗಳು ಸಿಡಿದು ಒಬ್ಬ ಪ್ರಯಾಣಿಕರ ಕಾಲು ಕಟ್ಟಾಗಿ ನಾಲ್ವರಿಗೆ ತೀವ್ರಗಾಯಳಾಗಿರುವ ಘಟನೆ ಪ್ರತ್ಯೇಕ ಸ್ಥಳದಲ್ಲಿ ಸೋಮವಾರ ಮತ್ತು ಮಂಗಳವಾರ ಒಂದೇ ಮಾರ್ಗದ ಬಸ್‌ನಲ್ಲಿ ನಡೆದಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗದ ಬಸ್‌ಗಳಲ್ಲಿ ಸವೆದು ಹೋದ ಟಯರ್‌ಗಳನ್ನು ಅಳವಡಿಸಿ ಪ್ರಯಾಣಿಕರ ಪ್ರಾಣದ ಜತೆ ಆಟವಾಡುತ್ತಿದ್ದಾರೆ ಎಂಬ ಸುದ್ದಿ ಮಾಸುವ ಮುನ್ನವೇ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶಹಾಪುರ ಘಟಕದ ಬಸ್‌ಗಳಲ್ಲೂ ಅದೇ ಮಾದರಿಯ ಘಟನೆ ನಡೆದಿರುವುದು ಪ್ರಯಾಣಿಕರನ್ನು ಬೆಚ್ಚಿ ಬೀಳಿಸಿದೆ.

ಶಾಹಾಪುರ-ಕೆಂಬಾವಿ (0809) ಮಾರ್ಗದಲ್ಲಿ ಸೋಮವಾರ ಚಲ್ಲಿಸುತ್ತಿದ್ದ ಬಸ್‌ನ ಸವೆದು ಹೋಗಿರುವ ಟಯರ್‌ ಮಲ್ಲ ಬಳಿ ಮಾರ್ಗಮಧ್ಯೆ ಬರ್ಸ್ಟ್‌ಆಗಿದೆ. ಈ ವೇಳೆ ಚಕ್ರದ ಸೀಟ್‌ನಲ್ಲಿ ಕುಳಿತಿದ್ದ ವೃದ್ಧ ಪ್ರಯಾಣಿಕರೊಬ್ಬರ ಕಾಲು ಕಟ್ಟಾಗಿದೆ. ಅಲ್ಲದೆ ಮತ್ತಿಬ್ಬರು ಪ್ರಯಾಣಕರಿಗೆ ತೀವ್ರ ಗಾಯವಾಗಿದ್ದು, ಅವರಿಗೆ ರಕ್ತಸ್ರಾವವಾಗುತ್ತಿತ್ತು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ, ಈ ಸಂಬಂಧ ಯಾವುದೇ ದೂರು ದಾಖಲಾಗಿರುವ ಬಗ್ಗೆ ಮಾಹಿತಿ ಇಲ್ಲ.

ಇನ್ನು ಇಂದು ಮಂಗಳವಾರ ಕೂಡ ಇದೇ 0809 ಮಾರ್ಗದ ಮತ್ತೊಂದು ಬಸ್‌ ಟಯರ್‌ ಗೋಗಿ ಬಳಿ ಬರ್ಸ್ಟ್‌ಆಗಿದ್ದು ಈ ವೇಳೆ ಚಕ್ರದ ಸೀಟ್‌ನಲ್ಲಿ ಕುಳಿತಿದ್ದ ಇಬ್ಬರು ಮಕ್ಕಳಿಗೆ ತೀವ್ರಗಾಯವಾಗಿದ್ದು ಅವರನ್ನು ಕೂಡಲೇ ಚಾಲಕ ರಮೇಶ್‌ ಅವರು ಗೋಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ರೀತಿ ಸವೆದು ಹೋದ ಟಯರ್‌ಗಳನ್ನು ಬಸ್‌ಗಳಿಗೆ ಅಳವಡಿಸಿ ಕಳುಹಿಸುತ್ತಿರುವುದರಿಂದ ಇಂಥ ಘಟನೆಗಳು ಸಂಭವಿಸುತ್ತಿವೆ. ಇದು ಸಾಮಾನ್ಯ ಎಂದುಕೊಳ್ಳುವುದಕ್ಕೂ ಸಾಧ್ಯವಿಲ್ಲ. ಕಾರಣ ಸವೆದಿರುವ ಟಯರ್‌ಗಳನ್ನು ಅಳವಡಿಸಿದರೆ ಅವುಗಳಿಂದ ಮಾರ್ಗಮಧ್ಯೆ ಅನಾಹುತ ನಡೆಯುವುದು ಪಕ್ಕ ಎಂಬ ಬಗ್ಗೆ ಘಟಕದ ಡಿಎಂ ಮತ್ತು ಡಿಎಂಇಗೂ ಗೊತ್ತಿರುತ್ತದೆ.

ಆದರೂ, ಈ ರೀತಿಯ ಟಯರ್‌ಗಳನ್ನು ಅಳವಡಿಸಿ ಮಾರ್ಗಚರಣೆಗೆ ಕಳುಹಿಸುತ್ತಾರೆ. ಈ ವೇಳೆ ಇಂಥ ಅನಾಹುತ ಸಂಭವಿಸಿದರೆ ಆ ಅನಾಹುತಕ್ಕೆ ಚಾಲಕನೆ ಕಾರಣ ಎಂದು ನೇರವಾಗಿ ಹೊಣೆ ಮಾಡಿ ಚಾಲಕರಿಂದ ದಂಡವನ್ನು ವಸೂಲಿ ಮಾಡುತ್ತಾರೆ.

ಅಲ್ಲದೆ ಅವಘಡದಿಂದ ಗಾಯಗೊಂಡ ಪ್ರಯಾಣಿಕರು ಪೊಲೀಸ್‌ ಕೇಸ್‌ ದಾಖಲಿಸದಂತೆ ನೋಡಿಕೊಳ್ಳಬೇಕು ಎಂದರೆ ಚಾಲಕರ ಕೈಯಿಂದ ಆ ಗಾಯಗೊಂಡ ಪ್ರಯಾಣಿಕರಿಗೆ ಸಾವಿರಾರು ರೂಪಾಯಿ ಹಣ ಕಟ್ಟಿಸುತ್ತಾರೆ ಈ ಅಧಿಕಾರಿಗಳು. ಇಂಥ ಭಂಡ ಅಧಿಕಾರಿಗಳಿಂದ ನಿತ್ಯ ಚಾಲಕರು ಒಂದಿಲ್ಲೊಂದು ಸಮಸ್ಯೆಗೆ ಸಿಲುಕಿ ನಿರಾಳತೆಯಿಂದ ಕೆಲಸ ಮಾಡುವುದನ್ನೆ ಕಳೆದುಕೊಂಡಿದ್ದಾರೆ.

ಇನ್ನು ಇದೇ ಶಹಾಪುರ ಘಟಕದಲ್ಲಿ ಇತ್ತೀಚೆಗೆ ಇದೇ ರೀತಿಯ ಘಟನೆ ನಡೆದಿದ್ದು, ಆ ವೇಳೆ ಪ್ರಯಾಣಿಕ ಮಹಿಳೆಯೊಬ್ಬರು ಗಾಯಗೊಂಡಿದ್ದರು. ಅವರು ಪೊಲೀಸ್‌ ಕೇಸ್‌ ದಾಖಲಿಸದಂತೆ ನೋಡಿಕೊಳ್ಳಬೇಕಾದರೆ ಅವರಿಗೆ 20 ಸಾವಿರ ರೂಪಾಯಿಯನ್ನು ನೀನು ಕೊಡಬೇಕು ಎಂದು ಚಾಲಕನಿಂದ ಆ ಮಹಿಳಾ ಪ್ರಯಾಣಿರಿಗೆ ಹಣ ಕೊಡಿಸಿದ್ದಾರೆ.

ಸರಿ 20 ಸಾವಿರ ರೂಪಾಯಿ ಹೋದರೆ ಹೋಯಿತು ಬಿಡಿ ಎಂದು ನೆಮ್ಮದಿಯಿಂದ ಕೆಲಸ ಮಾಡೋಣ ಎಂದುಕೊಂಡ ಚಾಲಕನಿಗೆ ಇತ್ತ ಇದೇ ಡಿಪೋ ವ್ಯವಸ್ಥಾಪಕರು ಬಸ್‌ನ ಟಯರ್‌ ಬರ್ಸ್ಟ್‌ ಆಗಿರುವುದಕ್ಕೆ ಕಾರಣ ಕೇಳಿ ಮೆಮೋ ನೀಡಿದ್ದಾರೆ. ಅಂದರೆ ಒಬ್ಬ ಘಟಕ ವ್ಯವಸ್ಥಾಪಕನಿಗೆ ಗೊತ್ತಿಲ್ಲವೇ? ಬಸ್‌ನ ಟಯರ್‌ ಯಾವ ಸ್ಥಿತಿಯಲ್ಲಿ ಇತ್ತು ಎಂಬುವುದು. ಆದರೂ ಚಾಲಕರನ್ನು ಮಾನಸಿಕವಾಗಿ ಹಿಂಸಿಸುವ ನಿಟ್ಟಿನಲ್ಲಿ ಈ ರೀತಿ ಮೆಮೋ ಕೊಡುತ್ತಾರೆ. ಬಳಿಕ ಅಮಾನತು ಮಾಡುತ್ತಾರೆ!!

ಇನ್ನು ಡಿಎಂಇ ಅಂತ ಘಟಕದಲ್ಲಿ ಇರುವ ಅಧಿಕಾರಿ ಏನು ಗೆಣಸು ಕೆತ್ತುತ್ತಿರುತ್ತಾರ ತಿಂಗಳಿಗೆ ಸರಿ ಸುಮಾರು 1 ಕೋಟಿ ರೂಪಾಯಿಗೂ ಅಧಿಕ ಖರ್ಚುಮಾಡಿ ಬಿಡಿಭಾಗಗಳನ್ನು ಖರೀದಿಸುತ್ತಿರುವ ಇರುವ ಸವೆದು ಹೋದ ಭಾಗಗಳನ್ನು ಏಕೆ ಬದಲಿಸುವುದಿಲ್ಲ. ಇದನ್ನು ಗಮನಿಸಿದರೆ ಈ ಡಿಎಂಇಗಳು ಮತ್ತು ಡಿಪೋ ವುವಸ್ಥಾಪಕರು ಸೇರಿಕೊಂಡು ಈ ಹಣವನ್ನು ತಮ್ಮ ಜೇಬಿಗೆ ಇಳಿಸಿಕೊಂಡು ಲೆಕ್ಕ ತೋರಿಸುತ್ತಾರೆ ಎಂಬ ಅನುಮಾನ ಕಾಡದೆ ಇರದು.

ಈ ರೀತಿ ಸವೆದು ಹೋದ ಟಯರ್‌ಗಳನ್ನೇ ಹಾಕಿ ಬಸ್‌ಗಳಲ್ಲಿ ಅನಾಹುತಕ್ಕೆ ಕಾರಣರಾಗುತ್ತಿರುವ ಈ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು. ಅದನ್ನು ಬಿಟ್ಟು ಅಮಾಯಕ ಚಾಕಲರನ್ನು ಗುರಿಮಾಡಿ ಅವರಿಗೆ ಆಗುತ್ತಿರುವ ಶಿಕ್ಷೆಯನ್ನು ತಪ್ಪಿಸಲು ನಮ್ಮ ಎಂಡಿ ಸರ್‌ ಕ್ರಮ ಕೈಗೊಳ್ಳಬೇಕು ಎಂದು ಹೆಸರೇಳಲಿಚ್ಛಿಸದ ನೌಕರರು ಮನವಿ ಮಾಡಿದ್ದಾರೆ.

ಇನ್ನು ಸಾರಿಗೆ ನಾಲ್ಕೂ ನಿಗಮಗಳಲ್ಲೂ ಇಂಥ ಘಟನೆಗಳು ನಡೆಯುತ್ತಿರುತ್ತವೆ ಆದರೂ ಈವರೆಗೂ ಯಾವುದೇ ಅಧಿಕಾರಿಗೂ ಈ ಪ್ರಕರಣದಲ್ಲಿ ಶೀಕ್ಷೆಯಾಗಿಲ್ಲ. ಕಾರನ ಅದನ್ನು ಈವರೆಗೂ ಚಾಲಕರನ್ನೇ ಹೊಣೆ ಮಾಡಿ ಅವರ ಮೇಲೆ ಕೇಸ್‌ ಹಾಕಿಸಿ ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಈ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಇದನ್ನು ಕೇಳಬೇಕಾದ ಸಂಘಟನೆಗಳ ಮುಖಂಡರು ಎಲ್ಲಿದ್ದಾರೋ ಗೊತ್ತಿಲ್ಲ.

ಎಲ್ಲಿ ಕೆಲಸ ಹೋಗಿ ಬಿಡುತ್ತದೋ ಎಂಬ ಭಯದಲ್ಲಿ ಯಾವುದೇ ಚಾಲಕರು ಈ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ. ಬದಲಿಗೆ ಅಧಿಕಾರಿಗಳು ಹಾಕುವ ದಂಡ ಮೆಮೋವನ್ನು ಪಡೆದು ಶಿಕ್ಷೆ ಅನುಭವಿಸುತ್ತಿದ್ದಾರೆ. ಇನ್ನಾದರೂ ಈ ಬಗ್ಗೆ ಸಂಬಂಧ ನಾಲ್ಕೂ ನಿಗಮಗಳ ಎಂಡಿಗಳು ಸೂಕ್ತ ವಿಚಾರಣೆ ನಡೆಸಿ ತಪ್ಪು ಮಾಡಿದ ಅಧಿಕಾರಿಗಳನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.

Leave a Reply

error: Content is protected !!
LATEST
KSRTC ಬಸ್‌ - ಕಾರು ನಡುವೆ ಅಪಘಾತ: ಕಾರಿನಲ್ಲಿದ್ದ ನಾಲ್ವರು ಸೇರಿ ಹಲವರಿಗೆ ಗಾಯ NWKRTC: ಕರ್ತವ್ಯ ನಿರತರಾಗಿದ್ದಾಗಲೇ ಚಾಲಕರಿಗೆ ಹೃದಯಘಾತ - ವಿಜಯಪುರ ಬಸ್‌ ನಿಲ್ದಾಣದಲ್ಲೇ ಕುಸಿದು ಬಿದ್ದು ನಿಧನ ಕನ್ನಡ ಮಾಧ್ಯಮ ಶಾಲೆಗಳ ವೈಫಲ್ಯ, ಕೇಂದ್ರದ ಹಿಂದಿ ಹೇರಿಕೆಯಿಂದ ನಾಶವಾಗುತ್ತಿದೆ ಕನ್ನಡ : ರಮೇಶ್‌ ಬೆಳ್ಳಮ್ಕೊಂಡ KSRTC: 2024ರ ವೇತನ ಪರಿಷ್ಕರಣೆ ಸುಳಿವು ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ KKRTC ವಿಜಯಪುರ: ತಪ್ಪು ಮಾಡಿ ಅಮಾನತಾದ ಡಿಸಿ ಪರ ನಿಂತರೆ ನಿಗಮದ ಅಧಿಕಾರಿಗಳು!!? ಪಿರಿಯಾಪಟ್ಟಣ: ಲಂಚ ಸ್ವೀಕಾರ- ರೆಡ್ ಹ್ಯಾಂಡಾಗಿ ಲೋಕಾ ಬಲೆಗೆ ಬಿದ್ದ ಗುಮಾಸ್ತ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ನೆರೆ ಭೀತಿಯಿಂದ ಬೆಂಗಳೂರಿಗರ ರಕ್ಷಿಸಿ: ಡಿಸಿಎಂಗೆ ಎಎಪಿ ರಾಜ್ಯಾಧ್ಯಕ್ಷ ಆಗ್ರಹ ಮಧ್ಯಮ ವರ್ಗದ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ BBMP-ಡೆಂಗ್ಯೂ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ : ಸುರಳ್ಕರ್ ವಿಕಾಸ್ ಕಿಶೋರ್ ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ 18 ರಿಂದ 45 ವರ್ಷದವರಿಂದ ಅರ್ಜಿ ಆಹ್ವಾನ