NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರ ತುಟ್ಟಿಭತ್ಯೆ ಹಿಂಬಾಕಿ, 2022-23ನೇ ಸಾಲಿನ ಸಮವಸ್ತ್ರ ಬದಲು ನಗದು ಜುಲೈ ವೇತನದಲ್ಲಿ ಪಾವತಿಸಿ: ಎಂಡಿ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ತುಟ್ಟಿಭತ್ಯೆ ಹಿಂಬಾಕಿ ಹಾಗೂ 2022-23 ನೇ ಸಾಲಿನ ಸಮವಸ್ತ್ರದ ಬದಲು ನಗದನ್ನು ಜುಲೈ ವೇತನದಲ್ಲಿ ಪಾವತಿಸಲು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್‌ ಪಾಷ ಆದೇಶ ಹೊರಡಿಸಿದ್ದಾರೆ.

ಈ ಸಂಬಂಧ ಇಂದು ಆದೇಶ ಹೊರಡಿಸಿರುವ ಅವರು, 01.01.2024 ರಿಂದ ಹೆಚ್ಚಳವಾದ ಶೇ 3.75 ತುಟ್ಟಿಭತ್ಯೆಯನ್ನು ಮಾರ್ಚ್‌-2024 ರ ಮಾಹೆಯಿಂದ ಅನುಷ್ಠಾನಗೊಳಿಸಿ ಪಾವತಿಸಲಾಗಿತ್ತು.

ಆ ಬಳಿಕ ಜನವರಿ-2024 ಹಾಗೂ ಫೆಬ್ರವರಿ-2024 ಮಾಹೆಯ 02 ತಿಂಗಳ ತುಟ್ಟಿಭತ್ಯೆ ಹಿಂಬಾಕಿ ಪಾವತಿಯನ್ನು ಹಾಗೂ 2022-23 ನೇ ಸಾಲಿನ ಸಮವಸ್ತ್ರದ ಬದಲು ನಗದು ಪಾವತಿಯನ್ನು ಮುಂದಿನ ಆದೇಶದವರೆಗೆ ಕಾಯ್ದಿರಿಸಲಾಗಿತ್ತು.

ಹೀಗಾಗಿ ಸಿಬ್ಬಂದಿಗಳ ಹಿತದೃಷ್ಟಿಯಿಂದ ನಿಗಮದ ಅಧಿಕಾರಿ/ ಸಿಬ್ಬಂದಿಗಳಿಗೆ ಜನವರಿ-2024 ಹಾಗೂ ಫೆಬ್ರವರಿ-2024 ಮಾಹೆಯ 02 ತಿಂಗಳ ತುಟ್ಟಿಭತ್ಯೆ ಹಿಂಬಾಕಿ ಮೊತ್ತವನ್ನು ಹಾಗೂ 2022-23 ನೇ ಸಾಲಿನ ಸಮವಸ್ತ್ರದ ನಗದು ಮೊತ್ತವನ್ನು ಜುಲೈ-2025 ರ ಮಾಹೆಯ ವೇತನದೊಂದಿಗೆ ಸೇರಿಸಿ ಪಾವತಿಸಲು ಆದೇಶ ಮಾಡಿದ್ದಾರೆ.

ಇದಿಷ್ಟೇ ಅಲ್ಲದೆ ಈ ಅವಧಿಯಲ್ಲಿ ಸೇವಾ ವಿಮುಕ್ತಿ ಹೊಂದಿದವರಿಗೆ ಲಭ್ಯವಿರುವ ತುಟ್ಟಿಭತ್ಯೆ ಹಿಂಬಾಕಿ ಹಾಗೂ ಸಮವಸ್ತ್ರದ ಮೊತ್ತವನ್ನು (ಸಂಸ್ಥೆಗೆ ಬರಬೇಕಾದ ಬಾಕಿ ಮೊತ್ತ ಇದ್ದಲ್ಲಿ ಕಡಿತ ಮಾಡಿಕೊಂಡು) ಧನಾದೇಶಗಳ ಮೂಲಕ 18.08.2025 ರಂದು ಪಾವತಿಸುವಂತೆಯೂ ಆದೇಶ ಹೊರಡಿಸಿದ್ದಾರೆ.

Megha
the authorMegha

Leave a Reply

error: Content is protected !!